ವಿಶ್ವದ ಅತ್ಯಂತ ವೇಗದ ಕಾರು ಖರೀದಿಸಿದ ಸಚಿನ್ ತೆಂಡೂಲ್ಕರ್: ಇದರ ಬೆಲೆಗೆ ಏನಿಲ್ಲ ಅಂದ್ರು 40 ಕಾರು ಬರುತ್ತವೆ..!
ಭಾರತದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರಿಗೆ ಕ್ರಿಕೆಟ್ ಮೇಲೆ ಪ್ರೀತಿ ಹೇಗೋ, ಕಾರುಗಳೆಂದರೂ ಹಾಗೆಯೇ ಅಚ್ಚುಮೆಚ್ಚು. ಅವರ ಮುಂಬೈ ನಿವಾಸದಲ್ಲಿ ಐಷಾರಾಮಿ ಪೋರ್ಷೆ ಸೇರಿದಂತೆ ದುಬಾರಿ ಬೆಲೆಯ ಕಾರುಗಳ ದೊಡ್ಡ ಸಂಗ್ರಹವಿದೆ. ಇತ್ತೀಚಿನ ವರದಿ ಪ್ರಕಾರ, ಅವರು 'ಲಂಬೋರ್ಗಿನಿ ಉರಸ್ ಎಸ್' ಎಸ್‌ಯುವಿ ಖರೀದಿಸಿದ್ದಾರೆ.
ನೂತನ ಲಂಬೋರ್ಗಿನಿ ಉರಸ್ ಎಸ್ ದರದ ಕುರಿತಂತೆ ಮೊದಲಿಗೆ ತಿಳಿಯೋಣ. ಸಾಮಾನ್ಯ ಆಡು ಭಾಷೆಯಲ್ಲಿ ಹೇಳಿಬೇಕಾದರೆ ಈ ಎಸ್‌ಯುವಿ ಬೆಲೆಗೆ 40 ಕಾರುಗಳನ್ನು ಕೊಂಡುಕೊಳ್ಳಬಹುದು. ಸಚಿನ್ ಹೊಸ ಲಂಬೋರ್ಗಿನಿ ಕಾರಿನ ಬೆಲೆ ಸರಿ ಸುಮಾರು ರೂ.4.18 ಕೋಟಿ. ಕಳೆದ ತಿಂಗಳು ಭಾರತದ ಮಾರುಕಟ್ಟೆಯಲ್ಲಿ 'ಉರಸ್ ಎಸ್' ಕಾರನ್ನು ಲಂಬೋರ್ಗಿನಿ ಕಂಪನಿ ಅದ್ದೂರಿಯಾಗಿ ಲಾಂಚ್ ಮಾಡಿತ್ತು.

ಹೊಸ ಲಂಬೋರ್ಗಿನಿ ಉರಸ್ ಎಸ್ ಪಡೆದಿರುವ 4.0 ಲೀಟರ್ ಟ್ವಿನ್ ಟರ್ಬೋಚಾರ್ಜ್ಡ್ V8 ಪೆಟ್ರೋಲ್ ಎಂಜಿನ್, 66 hp ಪವರ್ ಹಾಗೂ 850 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 8 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ದೊರೆಯುತ್ತದೆ. ಕೇವಲ 3.5 ಸೆಕೆಂಡುಗಳಲ್ಲಿ 0-100 kmph ವೇಗವನ್ನು ಪಡೆಯಲಿದೆ. 305 kmph ಟಾಪ್ ಸ್ವೀಡ್ ಹೊಂದಿದೆ.
ಈ ಲಂಬೋರ್ಗಿನಿ ಉರಸ್ ಎಸ್ ಪ್ರಪಂಚದ ಅತ್ಯಂತ ವೇಗದ ಎಸ್‌ಯುವಿ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಇದು ಸಾಮಾನ್ಯ ರಸ್ತೆಯಾಗಿರಲಿ ಅಥವಾ ಆಫ್ ರೋಡ್ ಆಗಿರಲಿ ಯಾವುದೇ ಅಡೆ - ತಡೆ ಇಲ್ಲದೆ ಸುಲಭವಾಗಿ ಚಲಿಸುತ್ತದೆ. ಅದಕ್ಕೆ ತಕ್ಕಂತೆಯೇ ಡ್ರೈವಿಂಗ್ ಮೋಡ್ ಅನ್ನು ಪಡೆದಿದೆ.

ಲಂಬೋರ್ಗಿನಿ ಉರಸ್ ಎಸ್ ಎಸ್‌ಯುವಿ ಸಬಿಯಾ, ನೆವ್ವೆ ಮತ್ತು ಟೆರ್ರಾ (ಸ್ಯಾಂಡ್, ಸ್ನೋ ಮತ್ತು ಮಡ್) ಮೂರು ಆಫ್ ರೋಡ್ ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದ್ದು, ಹೆಚ್ಚುವರಿಯಾಗಿ ಸ್ಟ್ರಾಡಾ, ಸ್ಪೋರ್ಟ್ ಮತ್ತು ಕೊರ್ಸಾ (ಸ್ಟ್ರೀಟ್, ಸ್ಪೋರ್ಟ್ ಮತ್ತು ಟ್ರ್ಯಾಕ್) ಮೋಡ್‌ಗಳನ್ನು ಪಡೆದಿದೆ. ಜೊತೆಗೆ AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದ್ದು, ಹಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ.
ಸಚಿನ್ ತೆಂಡೂಲ್ಕರ್ ಬಳಿ ಮತ್ತೆ ಯಾವೆಲ್ಲ ಐಷಾರಾಮಿ ಕಾರುಗಳಿವೆ ಎಂಬುದನ್ನು ನೋಡವುದಾದರೆ, ಪೋರ್ಷೆ 911 ಟರ್ಬೊ ಎಸ್, ಪೋರ್ಷೆ ಕಯೆನ್ನೆ ಟರ್ಬೊ, ಬಿಎಂಡಬ್ಲ್ಯೂ ಐ8 ಸೇರಿದಂತೆ ದುಬಾರಿ ಬೆಲೆಯ ಕಾರುಗಳ ಸಂಗ್ರಹವೇ ಇದೆ. ಅದರಲ್ಲೂ ಈಗ ಖರೀದಿಸಿರುವ 'ಲಂಬೋರ್ಗಿನಿ ಉರಸ್ ಎಸ್' ಎಸ್‌ಯುವಿಯ ಈ ಮಾದರಿ, ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಬಳಿಯು ಇಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ.
ಇನ್ನು, ಟೀಮ್ ಇಂಡಿಯಾ ಆಟಗಾರ ರೋಹಿತ್ ಶರ್ಮಾ ಕೂಡ ಲಂಬೋರ್ಗಿನಿ ಉರಸ್ ಮಾಲೀಕರಾಗಿದ್ದು, ಇವರ ಬಳಿಯಿರುವ ಕಾರು, ಕೇವಲ 3.5 ಸೆಕೆಂಡುಗಳಲ್ಲಿ 0 ಯಿಂದ 60 mph ವೇಗವನ್ನು ಪಡೆಯಲಿದ್ದು, 190 mph ಟಾಪ್ ಸ್ವೀಡ್ ಹೊಂದಿದೆ. ವಿರಾಟ್ ಕೊಹ್ಲಿ ಸಹ ತಾನೇನು ಕಮ್ಮಿ ಇಲ್ಲವೆಂಬಂತೆ 2018ರಲ್ಲಿಯೇ ಐಷಾರಾಮಿ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರನ್ನು ಖರೀದಿಸಿದ್ದರು. ಇದರ ಬೆಲೆ ಸರಿ ಸುಮಾರು ರೂ.4 ಕೋಟಿ ಇದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.


Click it and Unblock the Notifications