Monsoon Suggestiaons: ದ್ವಿಚಕ್ರ ವಾಹನ ಸವಾರರೇ ಮಳೆಗಾಲದಲ್ಲಿ ಇವುಗಳ ಬಗ್ಗೆ ಗಮನವಿರಲಿ
ಇವತ್ತಿನ ದಿನಮಾನದಲ್ಲಿ ಪ್ರತಿಯೊಬ್ಬರಿಗೂ ದ್ವಿಚಕ್ರ ವಾಹನಗಳು ಜೀವನಾಧಾರವಾಗಿದೆ. ಒಂದಲ್ಲ ಒಂದು ಕೆಲಸಗಳಿಗೆ ಇವುಗಳನ್ನು ಬಳಕೆ ಮಾಡುತ್ತಲೇ ಇರುತ್ತಾರೆ. ಇನ್ನೇನು ಮಳೆಗಾಲ ಆರಂಭವಾಗಿದ್ದು, ಅಪಘಾತಗಳ ಸಂಖ್ಯೆ ಹೆಚ್ಚಾಗಲಿವೆ. ವಾಹನ ಸವಾರರು ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದ್ದು, ಇಲ್ಲಿ ಕೆಲವೊಂದು ಉಪಯುಕ್ತ ಸಲಹೆಗಳನ್ನು ನೀಡಲಾಗಿದೆ.
ನಿಧಾನವಾಗಿ ಚಲಿಸಿ: ವಿವಿಧ ವಾಹನಗಳ ಆಯಿಲ್ ರಸ್ತೆಯಲ್ಲಿ ಬಿದ್ದು, ಬಿಸಿಲಿಗೆ ಗಟ್ಟಿಯಾಗಿರುತ್ತದೆ. ಮಳೆಗಾಲದಲ್ಲಿ ಅದು ಕೊಂಚ ದ್ರವ ರೂಪಕ್ಕೆ ಬಂದು ಚದುರುತ್ತದೆ. ಇಂತಹ ವೇಳೆ ನೀವು ಅಲ್ಲಿ ವೇಗವಾಗಿ ಹೋಗಬೇಕಾದರೆ, ಕೊಂಚ ಬ್ರೇಕ್ ಹಾಕಿದರೂ ಸ್ಕಿಡ್ ಆಗಿ ಬೀಳಬಹುದು. ಇದು ಅಪಘಾತಕ್ಕೂ ದಾರಿ ಮಾಡಿಕೊಡಬಹುದು. ಆದ್ದರಿಂದ ನಿಧಾನವಾಗಿ ವಾಹನ ಚಲಾಯಿಸುವುದು ಒಳ್ಳೆಯದು.

ಬೇರೆ ವಾಹನಗಳೊಂದಿಗೆ ಅಂತರ ಕಾಪಾಡಿಕೊಳ್ಳಿ: ಮಳೆ ಬರುವಾಗ ಅಥವಾ ನಿಂತ ಮೇಲೆ ಪಕ್ಕದಲ್ಲಿ ಚಲಿಸುವ ವಾಹನಗಳೊಂದಿಗೆ ನಿಮ್ಮ ಸುರಕ್ಷತೆಯ ದೃಷ್ಟಿಯಿಂದ ಅಂತರವನ್ನು ಕಾಯ್ದುಕೊಳ್ಳಿ. ರಸ್ತೆಯು ಒದ್ದೆಯಾದಾಗ ಬ್ರೇಕ್ ಹಾಕಿದ್ರೆ, ನಿಮ್ಮ ವಾಹನ ಇದಕ್ಕಿದಂತೆ ಸ್ಕಿಡ್ ಆಗಿ ಇತರೆ ವಾಹನಗಳೊಂದಿಗೆ ಅಪಘಾತವಾಗಬಹುದು. ಅದಕ್ಕಾಗಿ ಅಂತರವನ್ನು ಕಾಪಾಡಿಕೊಂಡು ವಾಹನವನ್ನು ಚಲಾಯಿಸುವುದೇ ಉತ್ತಮವಾದ ದಾರಿಯಾಗಿದೆ.
ಗೋಚರತೆ: ಜೋರು ಮಳೆ ಬರುವಾಗ ಒಂದು ರೀತಿಯಲ್ಲಿ ಕತ್ತಲ ವಾತಾವರಣ ಇರುತ್ತದೆ. ಆಗ ರಸ್ತೆಯ ಗೋಚರತೆ (visible) ತುಂಬಾ ಕಡಿಮೆಯಾಗುತ್ತದೆ. ಆ ಸಂದರ್ಭ ಸ್ವಲ್ಪ ಯಾಮಾರಿದ್ರು ಅಪಾಯ ಕಟ್ಟಿಟ್ಟಬುತ್ತಿ. ಮಳೆಯಾಗುವ ವೇಳೆ ಹೆಡ್‌ಲೈಟ್ಸ್, ಟೈಲ್‌ಲೈಟ್ಸ್ ಹಾಗೂ ಇಂಡಿಕೇಟರ್ ಬಳಸಿಕೊಂಡು ಇತರೆ ವಾಹನ ಸವಾರರಿಗೆ ನೀವು ರೋಡ್ ನಲ್ಲಿ ಹೋಗುತ್ತಿರುವುದಾಗಿ ಖಚಿತಪಡಿಸಿ. ಜೊತೆಗೆ ಡಾರ್ಕ್ ಕಲರ್ ಬಟ್ಟೆಯನ್ನು ಧರಿಸಿರಿ. ಹೆಲ್ಮೆಟ್ ಸ್ವಚ್ಛವಾಗಿಡಿ.
ಗುಂಡಿಗಳ ಬಗ್ಗೆ ಎಚ್ಚರವಿರಲಿ: ವಿವಿಧ ಕಾರಣಗಳಿಗೆ ರಸ್ತೆಯಲ್ಲಿ ಗುಂಡಿಗಳಾಗಿರುತ್ತವೆ. ಮಳೆಬಂದಾಗ ಅವುಗಳು ಕಾಣುವುದಿಲ್ಲ. ದಿನನಿತ್ಯ ಅದೇ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದರೆ, ಅವುಗಳ ಬಗ್ಗೆ ಸುಲಭವಾಗಿ ಅರಿವಿರುತ್ತದೆ. ಆದರೆ, ಕೆಲವೊಮ್ಮೆ ಬೇರೆ ರಸ್ತೆಗಳಲ್ಲಿ ಹೋಗಬೇಕಾದರೆ, ಅದರ ಪರಿಚಯ ಇರುವುದಿಲ್ಲ. ಜೊತೆಗೆ ಎಲ್ಲಿ ಗುಂಡಿಗಳಾಗಿವೆ ಎಂಬುದು ತಿಳಿಯುವುದಿಲ್ಲ. ಒಂದೊಮ್ಮೆ ಈ ವೇಳೆ ವೇಗವಾಗಿ ಹೋದರೆ ಗುಂಡಿಯಲ್ಲಿ ಬೀಳಬಹುದು.
ಮರಗಳ ಕೆಳಗೆ ಬೈಕ್, ಸ್ಕೂಟರ್ ನಿಲ್ಲಿಸಬೇಡಿ: ಬೇಸಿಗೆಯಲ್ಲಿ ಬಿಸಿಲಿನಿಂದ ರಕ್ಷಣೆ ಪಡೆಯಲು ಬಹುತೇಕರು ಮರಗಳ ಅಡಿ ವಾಹನವನ್ನು ನಿಲ್ಲಿಸಿರುತ್ತಾರೆ. ಆದರೆ, ಮಳೆಗಾಲದಲ್ಲಿ ಅಲ್ಲಿ ವಾಹನಗಳನ್ನು ಎಂದಿಗೂ ನಿಲ್ಲಿಸಬೇಡಿ. ಮರಗಳು ಹಳೆಯದಾಗಿದ್ದರೆ, ಅದರ ಬೇರು ಸಡಿಲವಾಗಿರುತ್ತದೆ. ಅವು ನಿಮ್ಮ ವಾಹನಗಳ ಮೇಲೆ ಬೀಳಬಹುದು. ಜೊತೆಗೆ ವಿದ್ಯುತ್ ಕಂಬಳ ಅಡಿಯು ದ್ವಿಚಕ್ರ ವಾಹನಗಳನ್ನು ನಿಲ್ಲಿಸಬೇಡಿ.
ಒಟ್ಟಾರೆ, ಇವತ್ತಿನ ದಿನಮಾನದಲ್ಲಿ ದ್ವಿಚಕ್ರ ವಾಹನಗಳು ಜೀವನದ ಅವಿಭಾಗ್ಯ ಅಂಗವಾಗಿದ್ದು, ಮಳೆಗಾಲದಲ್ಲಿ ಗುಂಡಿಗಳ ಬಗ್ಗೆ ಎಚ್ಚರವಹಿಸಿ, ನಿಧಾನವಾಗಿ ವಾಹನ ಚಲಾಯಿಸಿ, ಬೇರೆ ವಾಹನಗಳೊಂದಿಗೆ ಅಂತರ ಕಾಪಾಡಿಕೊಳ್ಳುವ ಮೂಲಕ ದೊಡ್ಡ ಮಟ್ಟದ ಅಪಾಯವನ್ನು ತಪ್ಪಿಸಬಹುದಾಗಿದೆ. ಏನೇ ಆಗಲಿ ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ. ಸಂಚಾರಿ ನಿಯಮಗಳನ್ನು ಪಾಲಿಸಿಕೊಂಡ ಸುರಕ್ಷತೆಯಿಂದ ವಾಹನ ಚಲಾಯಿಸಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.


Click it and Unblock the Notifications