ಆಮ್‌ಸ್ಟರ್‌ಡ್ಯಾಮ್‌ನಲ್ಲಿ ವಿಶ್ವದ ಅತಿ ದೊಡ್ಡ ಕಡಲ ಹಬ್ಬ
ಹಾಲೆಂಡ್‌ನ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ಐದು ವರ್ಷಕ್ಕೊಮ್ಮೆ ನಡೆಯುವ ಜಗತ್ತಿನ ಅತಿ ಎತ್ತರದ ಹಡಗುಗಳ ಹಬ್ಬ ಈಗಾಗಲೇ ಶುರುವಾಗಿದೆ. ಇದು ವಿಶ್ವದ ಅತಿ ದೊಡ್ಡ ಕಡಲ ಹಬ್ಬ ಎಂಬ ಪಟ್ಟವನ್ನು ಕಟ್ಟಿಕೊಂಡಿದೆ. ಅಲ್ಲದೆ ಈ ಬಾರಿಯ ಹಬ್ಬವು ಆಗಸ್ಟ್ 19ರಿಂದ 23ರ ವರೆಗೆ ಐದು ದಿನಗಳ ಪರ್ಯಂತ ನಡೆಯಲಿದೆ.
ಇದರಂತೆ ಜಗತ್ತಿನೆಲ್ಲ ಜನಪ್ರಿಯ ಹಡಗುಗಳು ಪೂರ್ವ ಕರಾವಳಿ ಬಂದರಿನಲ್ಲಿರುವ ಆಮ್‌ಸ್ಟರ್‌ಡ್ಯಾಮ್ ಬಂದರಿನಲ್ಲಿ ಟಿಕಾಣಿ ಹೂಡಿವೆ. ಈ ಮನೋಹರ ಹಡಗು ಹಬ್ಬದ ಆಚರಣೆಯ ಹಿಂದೆ ಹಿನ್ನೆಲೆಯಿದೆ. ಅದನ್ನು ತಿಳಿದುಕೊಳ್ಳಲು ಚಿತ್ರಪುಟದತ್ತ ಮುಂದುವರಿಯಿರಿ...

ಆಮ್‌ಸ್ಟರ್‌ಡ್ಯಾಮ್ 700ನೇ ವರ್ಷಾಚರಣೆಯ ಭಾಗವಾಗಿ ಹಡಗುಗಳ ಹಬ್ಬವನ್ನು ಮೊದಲ ಬಾರಿಗೆ 1975ನೇ ಇಸವಿಯಲ್ಲಿ ಆಯೋಜಿಸಲಾಗಿತ್ತು. ಮೊದಲ ಆಮ್‌ಸ್ಟರ್‌ಡ್ಯಾಮ್ ಹಡಗುಗಳ ಹಬ್ಬವು 'ಸೈಲ್ ಆಮ್‌ಸ್ಟರ್‌ಡ್ಯಾಮ್ 700' ಎಂದೇ ಪ್ರಖ್ಯಾತಿ ಗಿಟ್ಟಿಸಿಕೊಂಡಿತ್ತು.

ಮೊದಲ ಆಮ್‌ಸ್ಟರ್‌ಡ್ಯಾಮ್ ಹಡಗುಗಳ ಹಬ್ಬದ ಯಶಸ್ವಿಯ ನಂತರ ಸ್ಟಿಚ್‌ಸ್ಟಿಂಗ್ ಸೈಲ್ ಆಮ್‌ಸ್ಟರ್‌ಡ್ಯಾಮ್ (ಎಸ್ಎಸ್‌ಎ) ಸಂಘಟನೆಯು ಅಸ್ತಿತ್ವಕ್ಕೆ ಬಂದಿತ್ತು. ಈಗ ಜಗತ್ತಿನಲ್ಲೇ ಮುಂಚೂಣಿಯ ಕಡಲ ಹಬ್ಬವಾಗಿ ಮಾರ್ಪಾಟ್ಟಿದೆ.

ಪಂಚವಾರ್ಷಿಕವಾಗಿ ಆಯೋಜನೆಯಾಗುವ ಹಡಗುಗಳ ಹಬ್ಬದಲ್ಲಿ ವಿಶ್ವದ್ಯಂತದ ಸಾವಿರಾರು ಹಡಗುಗಳು ಭಾಗವಹಿಸುತ್ತಿದೆ. ಅಲ್ಲದೆ ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರಿಗೆ ರಸದೌತಣವನ್ನು ನೀಡುತ್ತಿದೆ.

ಚಿಕ್ಕ ಚಿಕ್ಕ ಬೋಟ್‌ಗಳಿಂದ ಹಿಡಿದು ಅತಿ ದೊಡ್ಡ ಹಡಗುಗಳನ್ನು ಇಲ್ಲಿ ನಾವಿಕರು ಸಾಲಾಗಿ ಮುನ್ನಡೆಸಲಿದ್ದಾರೆ. ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರಿಗೆ ಏಕಕಾಲದಲ್ಲಿ ಎಲ್ಲ ಆಕಾರದ ಬೋಟ್ ಗಳ ರಮ್ಯ ದರ್ಶನವಾಗಲಿದೆ.

ಉತ್ತರ ಸಮುದ್ರ ಕಾಲುವೆಯಲ್ಲಿನ ಹಡಗುಗಳ ಸಂಚಾರವು ಈಗ ಜಗತ್ತಿನ ಅತಿ ವಿಶಿಷ್ಟ ಹಬ್ಬಗಳಲ್ಲಿ ಗುರುತಿಸಿಕೊಂಡಿದೆ. ಇದು ಡಚ್ಚರ ಪ್ರಾಚೀನ ಸುವರ್ಣ ಯುಗದ ಸಂಕೇತವೂ ಆಗಿದೆ.

ರಾತ್ರಿಯಲ್ಲಿ ವಿದ್ಯುತ್ ದೀಪಲಂಕಾರದೊಂದಿಗೆ ಆಕಾಶದಲ್ಲಿ ವರ್ಣಮಯ ಸಿಡಿಮದ್ದಿನ ಪ್ರದರ್ಶನವು ಮತ್ತಷ್ಟು ರೋಚಕತೆಗೆ ಸಾಕ್ಷಿಯಾಗಿದೆ.

ಆಧುನಿಕ ಜೊತೆಗೆ ಹಳೆಯ ಬೋಟ್ ಗಳನ್ನು ನೋಡುವ ಅವಕಾಶ ಪ್ರೇಕ್ಷಕರಿಗೆ ದೊರಕಲಿದೆ. ಇದು ಜಗತ್ತಿನ ಅತಿ ದೊಡ್ಡ ಉಚಿತ ಕಡಲ ಹಬ್ಬ ಎಂಬ ಪಟ್ಟವನ್ನು ಕಟ್ಟಿಕೊಂಡಿದೆ.

ನಿಮ್ಮ ಮಾಹಿತಿಗಾಗಿ 2010ರಲ್ಲಿ ನಡೆದ ಸೈಲ್ ಆಮ್‌ಸ್ಟರ್‌ಡ್ಯಾಮ್ ಹಡಗು ಹಬ್ಬದಲ್ಲಿ 1.7 ದಶಲಕ್ಷ ಪ್ರೇಕ್ಷಕರು ಭೇಟಿ ಕೊಟ್ಟಿರುವುದು ದಾಖಲೆಯಾಗಿತ್ತು. ಈ ಬಾರಿ ಇದನ್ನು ಮೀರಿಸುವ ವಿಶ್ವಾಸವನ್ನು ಆಯೋಜಕರು ಹೊಂದಿದ್ದಾರೆ.


Click it and Unblock the Notifications








