ಸೇಲ್ಸ್ ಮ್ಯಾನ್ ಎಡವಟ್ಟು; ಶೋ ರೂಂ ಒಳನುಗ್ಗಿದ ಕಾರು
ಇದಕ್ಕೆ ಹೇಳುವುದು ಡೀಲರ್ ಶಿಪ್ ನಲ್ಲಿ ಕೆಲಸ ಮಾಡುವವರು ಕನಿಷ್ಠ ಪಕ್ಷ ಡ್ರೈವಿಂಗ್ ಕರಗತ ಮಾಡಿಕೊಳ್ಳಬೇಕು. ಹೊಸತಾಗಿ ಸೇಲ್ಸ್ ಮ್ಯಾನ್ ನೇಮಕ ಮಾಡುವಾಗ ಡೀಲರ್ ಅಧಿಕೃತರು ಈ ಬಗ್ಗೆ ಎಚ್ಚರ ವಹಿಸಬೇಕು.
Also Read: ಆಯ ತಪ್ಪಿದರೆ ಅಪಾಯ ತಪ್ಪಿದ್ದಲ್ಲ
ಇಲ್ಲವಾದ್ದಲ್ಲಿ ಇದರ ಭವಿಷ್ಯತ್ ಪರಿಣಾಮವನ್ನು ಎದುರಿಸಲು ಸದಾ ಸಿದ್ಧರಿರಬೇಕು. ಏಕೆಂದರೆ ಇಲ್ಲಿ ಎದುರಾಗುವ ನಷ್ಟ ಅಷ್ಟಿಷ್ಟಲ್ಲ. ಹೊಚ್ಚ ಹೊಸ ಕಾರುಗಳೇ ಪುಡಿಪುಡಿಯಾಗಲಿದೆ ಎಂಬುದನ್ನು ನೀವು ಅರಿತುಕೊಳ್ಳಬೇಕು.

ಇಂತಹದೊಂದು ಘಟನೆ ಉತ್ತರ ಕರೊಲಿನಾದಲ್ಲಿರುವ ಷೆವರ್ಲೆ ಡೀಲರ್ ಶಿಪ್ ನಿಂದ ವರದಿಯಾಗಿದೆ.

ಆಗಷ್ಟೇ ಶೋ ರೂಂ ಪ್ರವೇಶಿಸಿದ್ದ 95380 ಮಿಲಿಯನ್ ಅಮೆರಿಕನ್ ಡಾಲರ್ ಬೆಲೆ ಬಾಳುವ ಷೆವರ್ಲೆ ಕಾರ್ವೆಟ್ ಕಾರು ಸೇಲ್ಸ್ ಮ್ಯಾನ್ ಮಾಡಿರುವ ಎಡವಟ್ಟಿನಿಂದ ಹಾನಿಯಾಗಿದೆ.

ಇಲ್ಲಿ ಬರಿ ಕಾರು ಮಾತ್ರವಲ್ಲ ಹಾನಿಗೊಂಡಿರುವುದು. ಡ್ರೈವಿಂಗ್ ಸೀಟಿನಲ್ಲಿ ಕುಳಿತುಕೊಂಡಿದ್ದ ಆತ ಕ್ಲಚ್ ಯಾವುದು, ಬ್ರೇಕ್ ಯಾವುದು ಅಥವಾ ಆಕ್ಸಿಲೇಟರ್ ಯಾವುದು ಎಂಬುದನ್ನು ತಿಳಿಯದೇ ನೇರವಾಗಿ ಡೀಲರ್ ಶಿಪ್ ಒಳಗಡೆ ಕಾರು ನುಗ್ಗಿಯಿಸಿಯೇ ಬಿಟ್ಟಿದ್ದಾನೆ.

ವರದಿಗಳ ಪ್ರಕಾರ ಸೇಲ್ಸ್ ಮ್ಯಾನ್ ಮಾಡಿರುವ ಎಡವಟ್ಟಿಗೆ ಡೀಲರ್ ಮುಂಭಾಗದಲ್ಲಿರುವ ಗಾಜು ಪುಡಿ ಪುಡಿಯಾಗಿದೆ. ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಷೆವರ್ಲೆ ಕಾರಿನ ಮುಂಭಾಗದಲ್ಲಿ ಹಾನಿಯಾಗಿದ್ದು, ಎಂಜಿನ್ ತಾಂತ್ರಿಕ ಘಟಕಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂಬುದು ತಿಳಿದು ಬಂದಿದೆ.

ಹಾಗಾಗಿ ಇನ್ನು ಮುಂದೆಯಾದರೂ ಹೊಚ್ಚ ಹೊಸ ಕಾರನ್ನು ನಿಭಾಯಿಸುವಾಗ ಡೀಲರ್ ಗಳು ಅನುಭವಸ್ಥ ಚಾಲಕರಿಗೆ ಮಾತ್ರ ಆದ್ಯತೆ ಕೊಡಿ ಎಂಬುದು ನಮ್ಮ ಸಲಹೆಯಾಗಿದೆ.

ಮಲೇಷ್ಯಾ ಬೈಕ್ ಅವಘಡ ಬೆಂಗಳೂರಿಗೆ ಲಿಂಕ್; ವಾಟ್ಸಪ್‌ನಲ್ಲಿ ತಪ್ಪು ಸಂದೇಶ ಸಮಗ್ರ ಸುದ್ದಿ ಓದಲು ಕ್ಲಿಕ್ಕಿಸಿ


Click it and Unblock the Notifications








