ಸಲ್ಮಾನ್‌ ಖಾನ್‌ ಅಭಿನಯದ ಈ ಹೀರೋ ಹೋಂಡಾ ಜಾಹೀರಾತು ಎಂದಿಗೂ ಮರೆಯಲಾಗದು ಬಿಡಿ!

ಒಂದು ಕಾಲದಲ್ಲಿ ಹೀರೋ ಹೋಂಡಾ ಎಂಬ ಹೆಸರು ಭಾರತೀಯರ ಮನ ಪುಳಕಗೊಳ್ಳುತ್ತಿತ್ತು ಎಂದರೆ ತಪ್ಪಾಗಲಾರದು. ಹೀರೋ ಮತ್ತು ಹೋಂಡಾ ಕಂಪನಿಗಳು ಬೇರೆ ಬೇರೆ ಆಗುವುದಕ್ಕೂ ಮೊದಲು ಭಾರತೀಯರಿಗೆ ಹೀರೋ ಹೋಂಡಾ ಕಂಪನಿಗಳು ನೀಡಿದ ಬೈಕ್‌ಗಳು ಒಂದೆರಡಲ್ಲ. ಮಧ್ಯಮ ವರ್ಗದ ಜನರ ನೆಚ್ಚಿನ ಮೋಟಾರ್‌ಸೈಕಲ್‌ ಬ್ರಾಂಡ್‌ ಆಗಿತ್ತು.

ಹೀರೋ ಹೋಂಡಾ ಕಂಪನಿ ಭಾರತೀಯರಿಗೆ ಪರಿಚಯಿಸಿದ ಬೈಕ್‌ಗಳಲ್ಲಿ ಹೀರೋ ಹೋಂಡಾ CD100 (Hero Honda CD100) ಒಂದು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬೈಕ್‌ನ ಟಿವಿ ಕಮರ್ಷಿಯಲ್‌ ಒಂದು ವೈರಲ್‌ ಆಗುತ್ತಿದೆ. ಇದಕ್ಕೆ ಪ್ರಮುಖ ಕಾರಣಗಳು ಎರಡು. ಒಂದು ಹೀರೋ ಹೋಂಡಾ CD 100, ಮತ್ತು ಇನ್ನೊಂದು ಈ ಟಿವಿ ಕಮರ್ಷಿಯಲ್‌ನಲ್ಲಿರುವುದು ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್ ಖಾನ್‌ ಎಂಬುದು.

Honda CD100 TV Ad i

ಮಾಹಿತಿಗಳ ಪ್ರಕಾರ ಈ ಟಿವಿ ಕಮರ್ಷಿಯಲ್‌ ಸುಮಾರು 1985 ರಲ್ಲಿ ಬಿಡುಗಡೆಯಾಗಿದ್ದು, ಇದನ್ನು ನೋಡುತ್ತಿದ್ದರೆ ಹಿಂದಿನ ಕಾಲದ ದಿನಗಳು ನೆನಪಾಗುವುದಂತೂ ಖಂಡಿತಾ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಯ್ಯೂಟ್ಯೂಬರ್‌ ಒಬ್ಬರು ತಮ್ಮ ಚಾನಲ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು, ವಿಡಿಯೋ ಕೆಳಗೆ ಭಾರೀ ಮೊತ್ತದಲ್ಲಿ ಕಾಮೆಂಟ್‌ಗಳು ಹರಿದಾಡುತ್ತಿದೆ.

ಈ ಬೈಕ್‌ನ ಟಿವಿ ಜಾಹೀರಾತು ಮೂರು ಹಂತದಲ್ಲಿ ಅಪ್‌ಲೋಡ್‌ ಆಗಿದ್ದು, ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್ ವಿವಿಧ ಬೈಕ್‌ಗಳಲ್ಲಿ ಕಾಣಸಿಕೊಂಡಿದ್ದಾರೆ. ವಿಡಿಯೋದಲ್ಲಿ ಇರುವ ಲೊಕೇಷನ್‌ ಪ್ರಕಾರ ದೆಹಲಿಯ ಸುತ್ತಮುತ್ತವೇ ಈ ಜಾಹಿರಾತು ಶೂಟ್‌ ಆಗಿರಬಹುದು ಎಂಬ ಮಾಹಿತಿಗಳಿದೆ. ಈ ಜಾಹೀರಾತಿನ ಮುಖ್ಯ ಅಜೆಂಡಾ ಈ ಬೈಕ್‌ನ ಮೈಲೇಜ್‌.

Honda CD100 TV Ad i

ಹೌದು, ಆಗಿನ ಕಾಲದಲ್ಲಿ ಅತಿ ಹೆಚ್ಚು ಮೈಲೇಜ್‌ ನೀಡುತ್ತಿದ್ದ ಬೈಕ್‌ಗಳಲ್ಲಿ ಇದು ಮುಂಚೂಣಿಯಲ್ಲಿತ್ತು. ಹಾಗಾಗಿಯೇ ಈ ಬೈಕ್ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗಿ ಹೀರೋ ಹೋಂಡಾ ಕಂಪನಿಗೆ ಒಂದು ದೊಡ್ಡದಾದ ಮಾರುಕಟ್ಟೆಯನ್ನು ಒದಗಿಸುವಲ್ಲಿ ಸಫಲಾವಾಯಿತು ಎನ್ನಬಹುದು. ಇನ್ನು ಈ ಬೈಕ್‌ನ ಮಿನಿಮಲಿಸ್ಟಿಕ್‌ ವಿನ್ಯಾಸ ಮತ್ತು ಹೆಚ್ಚಿನ ಕ್ಷಮತೆ ಇದರ ಖ್ಯಾತಿಗೆ ಮತ್ತಷ್ಟು ನೀರೆರೆಯಿತು.

ಇನ್ನು ಈ ಟಿವಿ ಕಮರ್ಷಿಯಲ್‌ನಲ್ಲಿ ಬೈಕ್‌ ಅನ್ನು ದೆಹಲಿಯಲ್ಲಿರುವ ರಾಷ್ಟ್ರಪತಿ ಭವನ್ ಕಡೆಗೆ ಓಡಿಸುತ್ತಿರುವುದನ್ನು ಕಾಣಬಹುದಾಗಿದೆ. ಇದೇ ಕಾರಣದಿಂದ ಈ ಹಿಂದೆ ಹೇಳಿದ್ದು, ಈ ಜಾಹಿರಾತು ದೆಹಲಿ ಸುತ್ತ ಮುತ್ತ ಶೂಟ್‌ ಆಗಿರಬಹುದು ಎಂದು. ಇನ್ನು ಈ ಹೀರೋ ಹೋಂಡಾ CD 100 ಬೈಕ್‌ನ ಕುರಿತಾಗಿ ಈಗಿನ ತಲೆಮಾರಿನವರಿಗೆ ಹೆಚ್ಚಿನ ಮಾಹಿತಿ ಇರುವುದು ವಿರಳ. ಹಾಗಾಗಿ ಇದರ ಒಂದು ಕಿರು ನೋಟವನ್ನು ನೋಡೋಣ.

Honda CD100 TV Ad i

ಈ ಹೀರೋ ಹೋಂಡಾ CD 100 ಬೈಕ್‌ನ ಕುರಿತಾಗಿ ಹೇಳುವುದಾದರೆ ಭಾರತೀಯ ಮಾರುಕಟ್ಟೆಯ ಮೋಟೋರ್‌ ಸೈಕಲ್‌ ಕ್ಷೇತ್ರದ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದಂತಹ ಬೈಕ್‌ ಇದು. ಇದರ ಮೈಲೇಜ್‌ ನಿಂದ ಇದು ಭಾರತೀಯರ ನಡುವೆ ಬಹು ಜನಪ್ರಿಯವಾಗಿತ್ತು. ಆಗಿನ ಕಾಲದ ರಸ್ತೆ, ಹವಾಮಾನ ಇದೆಲ್ಲವನ್ನೂ ಮೀರಿ ಈ ಬೈಕ್ ಪ್ರತಿ ಲೀಟರ್‌ಗೆ ಸುಮಾರು 80+ ಕಿಮೀ ಮೈಲೇಜ್ ನೀಡುತ್ತಿತ್ತು ಎಂದರೆ ಇದರ ಕ್ಷಮತೆಯನ್ನು ನಾವು ಮೆಚ್ಚಿಕೊಳ್ಳಲೇ ಬೇಕು.

ಇನ್ನು ಈ ಬೈಕ್‌ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್‌ ಆದ ಸಂಧರ್ಭದಲ್ಲಿ ಇದು ಅತೀ ಕಡಿಮೆ ಬೆಲೆಯ ಬೈಕ್‌ ಆಗಿತ್ತು. ತನ್ನ ಎದುರಾಳಿಗಳನ್ನು ಮಟ್ಟ ಹಾಕುವಲ್ಲಿ ಹೀರೋ ಹೋಂಡಾ ನಡೆಸಿದ ಮೊದಲ ಮಾಸ್ಟರ್ ಪ್ಲಾನ್‌ ಇದೇ ಎಂದರೆ ತಪ್ಪಾಗಲಾರದು. ಆಗಿನ ಕಾಲದಲ್ಲಿ ದುಬಾರಿ ರಾಯಲ್‌ ಎನ್‌ಫೀಲ್ಡ್, ರಾಜ್‌ದೂತ್‌ನಂತಹ ಬೈಕ್‌ ಅನ್ನು ಕೊಳ್ಳಲು ಸಾಧ್ಯವಾಗದೇ ಇದ್ದವರಿಗೆ ಇದೊಂದು ಪ್ರಮುಖ ಆಯ್ಕೆಯಾಯಿತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

Article Published On: Wednesday, November 15, 2023, 12:35 [IST]
English summary
Salman khan starrer this hero honda cd100 tv ad is evergreen
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+