ನಾನು ಇಷ್ಟ ಪಟ್ಟು ಖರೀದಿಸಿರುವ ಬಿಎಂಡಬ್ಲ್ಯೂ ಕಾರನ್ನು ಮಾರ್ತೀನಿ ಎಂದ ಕಿಚ್ಚ ಸುದೀಪ್

ಬೆಂಗಳೂರಿನ ಮೂಲದ 'ವಿ ರೆಸ್ಪೆಕ್ಟ್‌ ಫಾರ್ಮರ್ಸ್‌ ಟ್ರಸ್ಟ್‌' ಸಂಸ್ಥೆಯ ನಿಧಿಗೆ ದೇಣಿಗೆ ನೀಡುವ ಸಲುವಾಗಿ ತನ್ನ ದುಬಾರಿ ಕಾರುನ್ನು ಮಾರಾಟ ಮಾಡುತ್ತೇನೆ ಎಂದು ಧಕ್ಷಿಣ ಭಾರತದ ಖ್ಯಾತ ಚಿತ್ರನಟ ಸುದೀಪ್ ಅವರು ಘೋಷಿಸಿದ್ದಾರೆ.

By Girish

ಬೆಂಗಳೂರಿನ ಮೂಲದ 'ವಿ ರೆಸ್ಪೆಕ್ಟ್‌ ಫಾರ್ಮರ್ಸ್‌ ಟ್ರಸ್ಟ್‌' ಸಂಸ್ಥೆಯ ನಿಧಿಗೆ ದೇಣಿಗೆ ನೀಡುವ ಸಲುವಾಗಿ ತನ್ನ ದುಬಾರಿ ಕಾರುನ್ನು ಮಾರಾಟ ಮಾಡುತ್ತೇನೆ ಎಂದು ಧಕ್ಷಿಣ ಭಾರತದ ಖ್ಯಾತ ಚಿತ್ರನಟ ಸುದೀಪ್ ಅವರು ಘೋಷಿಸಿದ್ದಾರೆ.

ಹೌದು, ಕನ್ನಡ ಚಿತ್ರರಂಗದ ಸಾಕಷ್ಟು ನಟರು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದನ್ನು ನಾವು ಈಗಾಗಲೇ ನೋಡಿದ್ದೇವೆ. ಸ್ಟಾರ್ ನಟರೂ ಕೂಡ ಒಂದಿಲ್ಲೊಂದು ರೀತಿಯಲ್ಲಿ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾ ಬಂದಿರುವುದನ್ನು ನಾವು ಕಾಣಬಹುದಾಗಿದೆ.

ಈ ಪಟ್ಟಿಯಲ್ಲಿ ಕರ್ನಾಟಕದ ಯುವ ಜನರ ನೆಚ್ಚಿನ ನಟ ಸುದೀಪ್ ಅವರು ಸಹ ಇದ್ದಾರೆ ಎಂಬುದು ಖುಷಿಯ ವಿಚಾರವಾಗಿದೆ. ಮೊದಲಿನಿಂದಲೂ ಸಹ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾ ಬಂದಿರುವ ಕಿಚ್ಚ ಸುದೀಪ ಅವರು ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

ರೈತರ ತ್ಯಾಗ ಮತ್ತು ಸಮಾಜ ಕುರಿತಾಗಿ ಜಾಗೃತಿ ಮೂಡಿಸುವ 'ರೈತ ಸ್ನೇಹಿ ಯೋಜನೆಯ' ಲೋಗೊ ಲೋಕಾರ್ಪಣೆ ಹಾಗೂ ಸಾರ್ಥಕ ನೇಗಿಲ ಯೋಗಿಗಳಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಸುದೀಪ್‌ ಹಾಜರಾಗಿದ್ದರು.

Recommended Video

Three Women Wearing Sarees Ride A Yamaha R15 In Hyderabad; Video Goes Viral

ಈ ಸಮಯದಲ್ಲಿ, ರೈತರ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಳ್ಳುವ ವೇಳೆ, "ತುಂಬಾ ವರ್ಷ ಚಿತ್ರರಂಗದಲ್ಲಿ ದುಡಿದಿದ್ದೇನೆ. ಆದರೆ, ಕಡಿಮೆ ಸಂಪಾದನೆ ಮಾಡಿದ್ದೇನೆ. ಮನೆಯಲ್ಲಿರುವ ಮೂರ್ನಾಲ್ಕು ಕಾರುಗಳಲ್ಲಿ ಒಂದನ್ನು ಮಾರಿ ಅದರಲ್ಲಿ ಬಂದ ಹಣವನ್ನು ಈ ಟ್ರಸ್ಟ್‌ಗೆ ನೀಡುತ್ತೇನೆ" ಎಂದು ತಿಳಿಸುವ ಮೂಲಕ ತಮಗೂ ರೈತರ ಬಗ್ಗೆ ಕಾಳಜಿ ಇದೆ ಎಂದು ತೋರಿಸಿದ್ದಾರೆ.

ಇದೇ ಸಂದರ್ಭದಲ್ಲಿ, ಭಾಷಣ ಮಾಡಲು ಹಾಗೂ ಸನ್ಮಾನ ಸ್ವೀಕರಿಸಲು ನಿರಾಕರಿಸಿದ ಅಭಿನಯ ಚಕ್ರವರ್ತಿ ಸುದೀಪ್ "ನಾನು ಭಾಷಣ ಮಾಡಲು ರಾಜಕೀಯ ವ್ಯಕ್ತಿ ಅಲ್ಲ ನಾನು ರಾಜಕೀಯಕ್ಕೆ ಬರುವುದಿಲ್ಲ" ಎಂದಿದ್ದಾರೆ.

ಯಾವ ಕಾರು ?

ಕಿಚ್ಚ ಸುದೀಪ್ ತಮ್ಮ ಬಳಿ ಇರುವ ಮತ್ತು ತಾವು ಇಷ್ಟ ಪಟ್ಟು ಖರೀದಿಸಿರುವ KA 05 MJ 101 ಬಿಎಂಡಬ್ಲ್ಯೂ ಕಾರನ್ನು ಮಾರಲು ನಿರ್ಧರಿಸಿದ್ದಾರೆ. ಇತರೆ ಎಕ್ಸ್5, ಎಂ50ಡಿ ಐಷಾರಾಮಿ ಕಾರು ಆವೃತ್ತಿಗಳಿಂತ ವಿಭಿನ್ನತೆ ಮತ್ತು ಉನ್ನತ ಮಟ್ಟದ ತಂತ್ರಜ್ಞಾನವನ್ನು ವ್ಯವಸ್ಥೆಯನ್ನು ಎಕ್ಸ್ 6 ಕಾರು ಪಡೆದುಕೊಂಡಿದೆ.

ಈ ಕಾರು ಸದ್ಯ ರೂ.78.9 ಲಕ್ಷ ಎಕ್ಸ್ ಶೋರೂಂ ಬೆಲೆ ಪಡೆದುಕೊಂಡಿದೆ. ಈ ಎಕ್ಸ್6 ಕಾರು ಡೀಸೆಲ್ ಚಾಲಿತ ಎಕ್ಸ್ ಡ್ರೈವ್ 40 ಡಿ ಮತ್ತು ಪೆಟ್ರೋಲ್ ಚಾಲಿತ ಎಕ್ಸ್ ಡ್ರೈವ್ 50 ಐ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ.

2013ರ ಬಿಎಂಡಬ್ಲ್ಯೂ ಎಕ್ಸ್ 6 ಕಾರು, ಆಲ್ಪೈನ್ ವೈಟ್, ಬ್ಲಾಕ್ ಸ್ಫಫಿರೇ, ಡೀಪ್ ಬ್ಲೂ ಸೀ, ಮಾರಕೆಶ್ ಬ್ರೌನ್, ಮಿಡ್ನೈಟ್ ಬ್ಲೂ, ಸ್ಪೇಸ್ ಗ್ರೇ, ಓರಿಯನ್ ಸಿಲ್ವರ್, ಟೈಟಾನಿಯಂ ಸಿಲ್ವರ್ ಮತ್ತು ವರ್ಮಿಲಿಯನ್ ರೆಡ್ ಎಂಬ ಒಂಬತ್ತು ಹೊಸ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಸುದೀಪ್ ವರ್ಮಿಲಿಯನ್ ರೆಡ್ ಬಣ್ಣದ ಕಾರನ್ನು ಕೊಂಡಿದ್ದಾರೆ. ಇನ್ನು ಸುದೀಪ ಅವರ ಈ ಕಾರ್ಯಕ್ಕೆ ಎಲ್ಲರಿಂದಲೂ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ.

ಸೋಶಿಯಲ್ ಮೀಡಿಯಾಗಳಾದ ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಕಿಚ್ಚನ ಕಳಕಳಿಗೆ ತಲೆದೂಗುತ್ತಿದ್ದಾರೆ. ಒಟ್ಟಾರೆಯಾಗಿ ಯಶ್ ಸೇರಿದಂತೆ ಸ್ಯಾಂಡಲ್‌ವುಡ್ ಸ್ಟಾರ್ ನಟರು ಸ್ವಯಂ ಪ್ರೇರಣೆಯಿಂದ ರೈತರಿಗೆ ಯಾವುದೋ ಒಂದು ರೀತಿಯಲ್ಲಿ ನೆರವಾಗುತ್ತಿರೋದು ಸಂತಸ ತರುವ ವಿಚಾರ.

More from DriveSpark

Article Published On: Thursday, December 14, 2017, 12:29 [IST]
English summary
Kannada film actor Sudeep on Wednesday announced that he will sell one of his expensive cars for welfare of farmers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+