ಐಷಾರಾಮಿ ಆಡಿ ಕ್ಯೂ7 ಕಾರು ಖರೀದಿಸಿದ ನಟ ರಿಷಬ್ ಶೆಟ್ಟಿ

ಕನ್ನಡ ಚಿತ್ರರಂಗದ ಡಿಫರೆಂಟ್ ಡೈರೆಕ್ಟರ್ ಕಮ್ ನಟ ರಿಷಬ್ ಶೆಟ್ಟಿ ಹೊಸ ಐಷಾರಾಮಿ ಆಡಿ ಕ್ಯೂ7 ಕಾರನ್ನು ಖರೀದಿಸಿದ್ದಾರೆ. ಈ ಆಡಿ ಕ್ಯೂ7 ಎಸ್‍ಯುವಿ ಮಾದರಿಯು ಸೆಲೆಬ್ರಿಟಿಗಳಲ್ಲಿ ಸಾಕಷ್ಟು ಜನಪ್ರಿಯ ಆಯ್ಕೆಯಾಗಿದೆ.

Recommended Video

Mahindra Scorpio-N Kannada Review | 3 ನೇ ಸಾಲಿನ ಆಸನ, ಆಫ್-ರೋಡ್, ಡೀಸೆಲ್ ಎಂಜಿನ್, ಟೆರೆನ್ ರೆಸ್ಪಾನ್ಸ್

ಐಷಾರಾಮಿ ಆಡಿ ಕ್ಯೂ7 ಕಾರನ್ನು ವಿತರಣೆ ಪಡೆಯುವ ಚಿತ್ರಗಳನ್ನು ನಟ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಐಷಾರಾಮಿ ಆಡಿ ಕ್ಯೂ7 ಕಾರು ಖರೀದಿಸಿದ ನಟ ರಿಷಬ್ ಶೆಟ್ಟಿ

ಚಿತ್ರದಲ್ಲಿ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಹಾಗೂ ಇಬ್ಬರು ಮಕ್ಕಳನ್ನು ನೋಡಬಹುದು. ಪ್ರಗತಿ ಶೆಟ್ಟಿ ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ರಕ್ಷಿತ್ ಶೆಟ್ಟಿ ನಟನೆಯ 'ಕಿರಿಕ್ ಪಾರ್ಟಿ' ಸಿನಿಮಾಕ್ಕೆ ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದರು. ಇದರ ಯಶಸ್ಸಿನಲ್ಲಿ ತೇಲುತ್ತಿದ್ದಾಗ ಪ್ರಗತಿ ಶೆಟ್ಟಿಯ ಪರಿಚಯ ಆಗಿ ನಂತರ ಪ್ರೀತಿಯಾಗಿ 2017ರಲ್ಲಿ ಕುಟುಂಬದ ಸಾಕ್ಷಿಯಾಗಿ ಮದುವೆಯಾಗಿದ್ದರು.

ಐಷಾರಾಮಿ ಆಡಿ ಕ್ಯೂ7 ಕಾರು ಖರೀದಿಸಿದ ನಟ ರಿಷಬ್ ಶೆಟ್ಟಿ

ಸ್ಟಾರ್​​ ನಿರ್ದೇಶಕ ಹಾಗೂ ನಟ ರಿಷಬ್​ ಶೆಟ್ಟಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ನಟನೆಯ ಗರುಡ ಗಮನ ವೃಷಭ ವಾಹನ ಸೂಪರ್ ಹಿಟ್ ಆಗಿದೆ. 'ಹರಿಕಥೆ ಅಲ್ಲ ಗಿರಿಕಥೆ' , 'ಬೆಲ್ ಬಾಟಂ 2', 'ಮಹಾನೀಯರೆ ಮಹಿಳೆಯರೇ', 'ಆಂಟಗೋನಿ ಶೆಟ್ಟಿ', 'ಕಾಂತರ' ಸಿನಿಮಾಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ರಿಷಬ್​ ಶೆಟ್ಟಿಯವರು ಈ ವರ್ಷ ಫುಲ್​ ಬ್ಯುಸಿಯಾಗಿದ್ದಾರೆ.

ಐಷಾರಾಮಿ ಆಡಿ ಕ್ಯೂ7 ಕಾರು ಖರೀದಿಸಿದ ನಟ ರಿಷಬ್ ಶೆಟ್ಟಿ

ಈ ಆಡಿ ಕ್ಯೂ7 ಎಸ್‍ಯುವಿಯು ಸೆಲೆಬ್ರಿಟಿಗಳಲ್ಲಿ ಸಾಕಷ್ಟು ಜನಪ್ರಿಯ ಆಯ್ಕೆಯಾಗಿದ್ದು, ಸಂಜಯ್ ಕಪೂರ್ ಅವರ ಮಗಳು ಶನಯಾ ಕಪೂರ್ ಹಾಗೂ ನಟಿ ತೇಜಸ್ವಿ ಪ್ರಕಾಶ್ ಇತ್ತೀಚೆಗೆ ಕ್ಯೂ7 ಅನ್ನು ಖರೀದಿಸಿದ್ದರು. ಆಡಿ ಕ್ಯೂ7 ಎಸ್‍ಯುವಿ ಇತರ ಸೆಲೆಬ್ರಿಟಿಗಳು ಸಂಜಯ್ ದತ್, ಯಾಮಿ ಗೌತಮ್, ಶ್ರುತಿ ಹಾಸನ್, ರಾಕೇಶ್ ಬಾಪಟ್ ಮತ್ತು ಕೃತಿ ಸನೋನ್ ಆಗಿದೆ.ಈ ಐಷಾರಾಮಿ ಎಸ್‍ಯುವಿಯ ಆರಂಭಿಕ ಆನ್ ರೋಡ್ ಬೆಲೆಯು ರೂ.1.05 ಕೋಟಿಯಾಗಿದೆ.

ಐಷಾರಾಮಿ ಆಡಿ ಕ್ಯೂ7 ಕಾರು ಖರೀದಿಸಿದ ನಟ ರಿಷಬ್ ಶೆಟ್ಟಿ

ನಟ ರಿಷಬ್ ಶೆಟ್ಟಿ ಖರೀದಿಸಿದ ಆಡಿ ಕ್ಯೂ7 ಕಾರಿನ ಬಗ್ಗೆ ಹೇಳುವುದಾದರೆ, ಆಡಿ ಕ್ಯೂ7 ಅನ್ನು ಪ್ರೀಮಿಯಂ ಪ್ಲಸ್ ಮತ್ತು ಟೆಕ್ನಾಲಜಿ ಸೇರಿದಂತೆ ಎರಡು ರೂಪಾಂತರಗಳಲ್ಲಿ ನೀಡಲಾಗುತ್ತದೆ. ಇದು ಸಂಪೂರ್ಣವಾಗಿ ನಾಕ್ಡ್ ಡೌನ್ (CKD) ಯುನಿಟ್ ಆಗಿ ಭಾರತಕ್ಕೆ ಬರುತ್ತದೆ ಮತ್ತು ಇದನ್ನು ಔರಂಗಾಬಾದ್‌ನಲ್ಲಿರುವ ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸ್ಥಾವರದಲ್ಲಿ ತಯಾರಿಸಲಾಗುವುದು.

ಐಷಾರಾಮಿ ಆಡಿ ಕ್ಯೂ7 ಕಾರು ಖರೀದಿಸಿದ ನಟ ರಿಷಬ್ ಶೆಟ್ಟಿ

ಈ ಎರಡು ರೂಪಾಂತರಗಳಲ್ಲಿ ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಒಳಗೊಂಡಿರುತ್ತದೆ. ಈ ನವೀಕರಿಸಿದ ಆಡಿ ಕ್ಯೂ7 ಎಸ್‍ಯುವಿಯಲ್ಲಿ 3.0-ಲೀಟರ್, ಟ್ವಿನ್-ಟರ್ಬೋಚಾರ್ಜ್ಡ್, ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 335 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಐಷಾರಾಮಿ ಆಡಿ ಕ್ಯೂ7 ಕಾರು ಖರೀದಿಸಿದ ನಟ ರಿಷಬ್ ಶೆಟ್ಟಿ

ಈ ಎಂಜಿನ್ ನೊಂದಿಗೆ 8-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಹೊಸ ಕ್ಯೂ5 ನಂತೆ ಕ್ಯೂ7 ಕೂಡ ಮೈಲ್ಡ್ -ಹೈಬ್ರಿಡ್ ಸಿಸ್ಟಂ ಅನ್ನು ಪಡೆಯುತ್ತದೆ, ಇದು 48-ವೋಲ್ಟ್ ಎಲೆಕ್ಟ್ರಿಕ್ ಮೋಟಾರು, ಲಿಥಿಯಂ-ಐಯಾನ್ ಬ್ಯಾಟರಿ ಮತ್ತು ಬೆಲ್ಟ್ ಆಲ್ಟರ್ನೇಟರ್ ಸ್ಟಾರ್ಟರ್ (BAS) ಅನ್ನು ಒಳಗೊಂಡಿರುತ್ತದೆ. ಹೊಸ ಆಡಿ ಕ್ಯೂ7 ಫೇಸ್‌ಲಿಫ್ಟ್ ಎಸ್‍ಯುವಿಯು 250 ಕಿಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ,

ಐಷಾರಾಮಿ ಆಡಿ ಕ್ಯೂ7 ಕಾರು ಖರೀದಿಸಿದ ನಟ ರಿಷಬ್ ಶೆಟ್ಟಿ

ಬ್ರ್ಯಾಂಡ್‌ನ ಕ್ವಾಟ್ರೊ ಆಲ್-ವೀಲ್-ಡ್ರೈವ್ ಸಿಸ್ಟಂ ಸಹ ಈ ಎಸ್‍ಯುವಿಯಲ್ಲಿ ನೀಡಿದೆ. ಈ ಹೊಸ ಆಡಿ ಕ್ಯೂ7 ಫೇಸ್‌ಲಿಫ್ಟ್‌ನ ಎಂಟ್ರಿ ಲೆವೆಲ್ ಪ್ರೀಮಿಯಂ ಪ್ಲಸ್ ರೂಪಾಂತರವು 19-ಇಂಚಿನ ಅಲಾಯ್ ವ್ಹೀಲ್ ಗಳು, ಎಂಟು ಏರ್‌ಬ್ಯಾಗ್‌ಗಳು, ಪನರೋಮಿಕ್ ಸನ್‌ರೂಫ್, ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಅಡಾಪ್ಟಿವ್ ಏರ್ ಸಸ್ಪೆನ್ಷನ್, ಆಂಬಿಯೆಂಟ್ ಲೈಟಿಂಗ್ ಮತ್ತು ಎಲೆಕ್ಟ್ರಿಕಲಿ-ಹೊಂದಾಣಿಕೆ ಸ್ಟೀರಿಂಗ್ ವ್ಹೀಲ್ ಅನ್ನು ಒಳಗೊಂಡಿದೆ.

ಐಷಾರಾಮಿ ಆಡಿ ಕ್ಯೂ7 ಕಾರು ಖರೀದಿಸಿದ ನಟ ರಿಷಬ್ ಶೆಟ್ಟಿ

ಇದರೊಂದಿಗೆ ಈ ಎಸ್‍ಯುವಿಯಲ್ಲಿ ನಾಲ್ಕು- ಮುಂಭಾಗದ ಸೀಟುಗಳಿಗೆ ಲಂಬೂರ್ ಸಂಪೂರ್ಟ್, ಪಾರ್ಕಿಂಗ್ ಅಸಿಸ್ಟ್ ಜೊತೆಗೆ ಕ್ರೂಸ್ ಕಂಟ್ರೋಲ್, ಫ್ಹೋರ್ ಜೋನ್ ಕಂಟ್ರೋಲ್, ಪವರ್-ಹೊಂದಾಣಿಕೆ ಮುಂಭಾಗದ ಸೀಟುಗಳು ಮತ್ತು ಡ್ರೈವರ್ ಸೀಟ್‌ಗಾಗಿ ಮೆಮೊರಿ ಫಂಕ್ಷನ್, ವರ್ಚುವಲ್ ಕಾಕ್‌ಪಿಟ್ ಮತ್ತು ಲೇನ್ ಡಿಪರ್ಚರ್ ಎಕ್ಸಿಟ್ ಅನ್ನು ಹೊಂದಿದೆ.

ಐಷಾರಾಮಿ ಆಡಿ ಕ್ಯೂ7 ಕಾರು ಖರೀದಿಸಿದ ನಟ ರಿಷಬ್ ಶೆಟ್ಟಿ

ಇನ್ನು ಡ್ಯುಯಲ್-ಸ್ಕ್ರೀನ್ ಎಂಎಂಐ ಪ್ಲಸ್, ಆಡಿ ಡ್ರೈವ್ ಆಯ್ಕೆ, ಆಡಿ ಸೌಂಡ್ ಸಿಸ್ಟಮ್, ವೈರ್‌ಲೆಸ್ ಚಾರ್ಜಿಂಗ್‌ನೊಂದಿಗೆ ಆಡಿ ಫೋನ್ ಬಾಕ್ಸ್ ಮತ್ತು ಆಡಿ ಸ್ಮಾರ್ಟ್‌ಫೋನ್ ಇಂಟರ್ಫೇಸ್ ಹೊಂದಿದೆ. ಈ ವೈಶಿಷ್ಟ್ಯಗಳ ಜೊತೆಗೆ, ಆಡಿ ಕ್ಯೂ7 ಫೇಸ್‌ಲಿಫ್ಟ್ ಟೆಕ್ನಾಲಜಿ ರೂಪಾಂತರವು ಅಡಾಪ್ಟಿವ್ ವಿಂಡ್‌ಶೀಲ್ಡ್ ವೈಪರ್‌ಗಳನ್ನು ಪಡೆಯುತ್ತದೆ, ಇನ್ನು ಸೆನ್ಸರ್-ಕಂಟ್ರೋಲ್ಡ್ ಲಗೇಜ್ ಕಂಪಾರ್ಟ್‌ಮೆಂಟ್ ರೀಲಿಸ್ ಕಂಫರ್ಟ್ ಕೀ, ಹಿಂಭಾಗದಲ್ಲಿ ಚಾರ್ಜಿಂಗ್ ಫಂಕ್ಷನ್ ನೊಂದಿಗೆ USB ಪೋರ್ಟ್‌ಗಳು, ಆಡಿ ಪಾರ್ಕ್ ಅಸಿಸ್ಟ್ ಜೊತೆಗೆ 3D ಸರೌಂಡ್ ಕ್ಯಾಮೆರಾಗಳು, 730W ಬ್ಯಾಂಗ್ ಮತ್ತು ಒಲುಫ್‌ಸೆನ್ ಮೂಲದ ಸರೌಂಡ್ ಸೌಂಡ್ ಸಿಸ್ಟಮ್, ಮತ್ತು ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳನ್ನು ಅನ್ನು ಹೊಂದಿದೆ.

ಐಷಾರಾಮಿ ಆಡಿ ಕ್ಯೂ7 ಕಾರು ಖರೀದಿಸಿದ ನಟ ರಿಷಬ್ ಶೆಟ್ಟಿ

ಈ ಹೊಸ ಎಸ್‍ಯುವಿಯಲ್ಲಿ ದೊಡ್ಡದಾದ, ಸಿಂಗಲ್ ಫ್ರೇಮ್ ಗ್ರಿಲ್ ಅನ್ನು ಹೊಂದಿದ್ದು, ನೇರವಾದ ಸ್ಲ್ಯಾಟ್‌ಗಳು, ಸ್ಪೋರ್ಟಿಯರ್ ಬಂಪರ್ ಎರಡು ಭಾಗಗಳ ಸೈಡ್ ಏರ್ ಇನ್‌ಲೆಟ್‌ಗಳು, ದಪ್ಪ ಕ್ಲಾಡಿಂಗ್ ಮತ್ತು ಎಲ್-ಆಕಾರದ ಏರ್ ಸ್ಪ್ಲಿಟರ್ ಅನ್ನು ಹೊಂದಿದೆ. ಈ ಆಡಿ ಲೇಸರ್ ಲೈಟ್ ನೊಂದಿಗೆ HD ಮ್ಯಾಟ್ರಿಕ್ಸ್ ಎಲ್ಇಡಿ ಒಂದು ಆಯ್ಕೆಯಾಗಿ ಬರುತ್ತದೆ. ಅದರ ಕೆಲವು ಇತರೆ ವಿನ್ಯಾಸಗಳು ಹೊಸದಾಗಿ ವಿನ್ಯಾಸಗೊಳಿಸಲಾದ 19-ಇಂಚಿನ ಅಲಾಯ್ ವ್ಹೀಲ್ ನೊಂದಿಗೆ ಕ್ರೋಮ್ ಸ್ಟ್ರಿಪ್ ಮೂಲಕ ಕನೆಕ್ಟ್ ಆಗಿರುವ ಹೊಸ ಟೈಲ್‌ಲ್ಯಾಂಪ್‌ಗಳು ಮತ್ತು ನವೀಕರಿಸಿದ ರೇರ್ ಬಂಪರ್ ಅನ್ನು ಹೊಂದಿದೆ.

ಐಷಾರಾಮಿ ಆಡಿ ಕ್ಯೂ7 ಕಾರು ಖರೀದಿಸಿದ ನಟ ರಿಷಬ್ ಶೆಟ್ಟಿ

ಈ ಎಸ್‍ಯುವಿ ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಮಾದರಿಯು 11 ಎಂಎಂ ಹೆಚ್ಚುವರಿ ಸ್ಥಳಾವಕಾಶದೊಂದಿಗೆ 5063 ಎಂಎಂ ಉದ್ದ ಹೊಂದಿದೆ. ಇದು 1970 ಎಂಎಂ ಅಗಲ ಮತ್ತು 1741 ಎಂಎಂ ಎತ್ತರವನ್ನು ಹೊಂದಿದೆ. ಕ್ಯಾಬಿನ್ ಒಳಗೂ ಆಡಿ ಕಂಪನಿಯು ಸಮಗ್ರವಾಗಿ ನವೀಕರಣಗಳನ್ನು ಪರಿಚಯಿಸಿದೆ. ಇದು ಪಿಯಾನೋ ಬ್ಲಾಕ್, ಕ್ರೋಮ್ ಮತ್ತು ಬ್ರಷ್ಡ್ ಅಲ್ಯೂಮಿನಿಯಂ ಹೈಲೈಟ್‌ಗಳ ಜೊತೆಗೆ ಸಾಕಷ್ಟು ಸುಧಾರಿಸಿದೆ.

ಐಷಾರಾಮಿ ಆಡಿ ಕ್ಯೂ7 ಕಾರು ಖರೀದಿಸಿದ ನಟ ರಿಷಬ್ ಶೆಟ್ಟಿ

ಆಡಿ ಕ್ಯೂ7 ಎಸ್‍ಯುವಿ ಮಾದರಿಯು ಸಿನಿಮಾ ಸೆಲೆಬ್ರಿಟಿಗಳ ಮೆಚ್ಚಿನ ಆಯ್ಕೆಗಳಲ್ಲಿ ಒಂದಾಗಿದೆ, ನಟ ರಿಷಬ್ ಶೆಟ್ಟಿ ಅವರು ಕೂಡ ಈ ಮಾದರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಹೊಸ ಆಡಿ ಕ್ಯೂ7 ಫೇಸ್‌ಲಿಫ್ಟ್‌ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಎಂಡಬ್ಕ್ಯು ಎಕ್ಸ್5, ಮರ್ಸಿಡಿಸ್ ಬೆಂಝ್ ಜಿಎಲ್ಇ, ವೊಲ್ವೊ ಎಕ್ಸ್‌ಸಿ90 ಮತ್ತು ಲ್ಯಾಂಡ್ ರೋವರ್ ಡಿಸ್ಕವರಿ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Article Published On: Saturday, July 2, 2022, 12:40 [IST]
English summary
Sandalwood director and actor rishab shetty buys new audi q7 suv details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+