ದುಬಾರಿ ಬಿಎಂಡಬ್ಲ್ಯು ಕಾರು ಖರೀದಿಸಿದ ರಕ್ಷಕ್ ಬುಲೆಟ್: ಇಷ್ಟೊಂದು ದುಡ್ಡು ಎಲ್ಲಿಂದ ಎಂದ ನೆಟ್ಟಿಗರು!
ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುವ ಖಯಾಲಿಯನ್ನು ಹೊಂದಿರುವ ವ್ಯಕ್ತಿ ರಕ್ಷಕ್ ಬುಲೆಟ್. ಒಂದಿಲ್ಲೊಂದು ಸ್ಟೇಟ್‌ಮೆಂಟ್‌ಗಳಿಂದ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗುವುದರ ಜೊತೆಗೆ ಸಾಕಷ್ಟು ಹೇಟರ್ಸ್‌ಗಳನ್ನು ಸಹ ರಕ್ಷಕ್ ಬುಲೆಟ್ ಹೊಂದಿದ್ದಾರೆ ಎಂದರೆ ಅದು ತಪ್ಪಾಗಲಾರದು. ಆದರೆ ರಕ್ಷಕ್ ಬುಲೆಟ್ ಮಾತ್ರ ಇದ್ಯಾವುದಕ್ಕೂ ಲೆಕ್ಕಿಸದೆ ಹೊಸ ರೀತಿಯಲ್ಲಿ ಇದೀಗ ಸುದ್ದಿಯಾಗಿದ್ದಾರೆ.
ಹೌದು, ರಕ್ಷಕ್ ಬುಲೆಟ್ ಇತ್ತೀಚೆಗೆ ಹಾಕಿದ ಇನ್ಸ್ಟಾಗ್ರಾಂ ಸ್ಟೋರಿ ಎಲ್ಲರ ಗಮನ ಸೆಳೆದಿದೆ. ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ದುಬಾರಿ ಕಾರಿನ ಫೋಟೋವೊಂದನ್ನು ಪೋಸ್ಟ್ ಮಾಡಿದ್ದು ಇದೀಗ ಎಲ್ಲರ ಬಾಯಲ್ಲೂ ಮಾತಿನ ವಿಷಯವಾಗಿದೆ. ಮಾಹಿತಿಗಳ ಪ್ರಕಾರ ರಕ್ಷಕ್ ಬುಲೆಟ್ ದುಬಾರಿ ಬಿಎಂಡಬ್ಲ್ಯೂ ಕಾರನ್ನು ಖರೀದಿಸಿದ್ದಾರೆ ಎಂದು ತಿಳಿದು ಬಂದಿದೆ. ರಕ್ಷಕ್ ಬುಲೆಟ್ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಕಾರಿನ ಫೋಟೋವನ್ನು ಹಾಕಿ ನ್ಯೂ ಮೆಂಬರ್, ವೆಲ್‌ಕಂ ಹೋಮ್ ಎಂದು ಬರೆದುಕೊಂಡಿದ್ದಾರೆ.

ಇನ್ನು ಈ ಕೂಡಲೇ ಹಲವರು ರಕ್ಷಕ್ ಬುಲೆಟ್‌ಗೆ (Rakshak Bullet BMW) ಈ ದುಬಾರಿ ಕಾರು ಕೊಳ್ಳಲು ಹಣ ಎಲ್ಲಿಂದ ಬಂತು ಎಂದು ಅವರ ಆದಾಯದ ಮೂಲವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ರಕ್ಷಕ್ ಬುಲೆಟ್ ಅಭಿನಯಿಸಿದ್ದು ಕೇವಲ ಒಂದೇ ಚಿತ್ರದಲ್ಲಿ. ಹೀಗಿರುವಾಗ ಹಲವಾರು ಲಕ್ಷ ಬೆಲೆಬಾಳುವ ಬಿಎಂಡಬ್ಲ್ಯು ಕಾರನ್ನು ಕೊಳ್ಳಲು ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸುತ್ತಿದ್ದು, ರಕ್ಷಕ್ ಬುಲೆಟ್ ಮಾತ್ರ ಕ್ಯಾರೇ ಎನ್ನುತ್ತಿಲ್ಲ.
ಇದಕ್ಕೂ ಮಂಚೆ ಮಹೀಂದ್ರಾ ಥಾರ್ ಖರೀದಿಸಿಯೂ ಸುದ್ದಿಯಾಗಿದ್ದರು. ಸ್ಯಾಂಡಲ್‌ವುಡ್ ನಟ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್ (Rakshak Bullet) ಸಹ, ಅಪ್ಪನಂತೆ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವತ್ತ ಹೊರಟಿದ್ದಾರೆ. ಗುರುಶಿಷ್ಯರು ಸಿನಿಮಾದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಕ್ಷಕ್, ಬಿಗ್‌ಬಾಸ್‌ಗೂ ಹೋಗಿ ಬಂದಿದ್ದರು. ಈ ಮೊದಲು ಅಕ್ಕನ ಮದುವೆ ಸಮಯದಲ್ಲಿ ಹೊಸ ಮಹೀಂದ್ರಾ ಥಾರ್ (Mahindra Thar) ಖರೀದಿಸಿದ್ದ ರಕ್ಷಕ್, ಈಗ ಐಷಾರಾಮಿ ಕಾರ್ ಮನೆಗೆ ತಂದಿದ್ದಾರೆ.

ರಕ್ಷಕ್ ಬುಲೆಟ್ ಅವರ ಮಹೀದ್ರಾ ಥಾರ್ ಬಗ್ಗೆ ನೊಡುವುದಾದರೆ, 3-ಡೋರ್ ಮಹೀಂದ್ರಾ ಥಾರ್ ರೂ.10.98 ಲಕ್ಷದಿಂದ ರೂ.16.94 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದು 3 ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ, 1.5 - ಲೀಟರ್ ಡೀಸೆಲ್, 2.2 - ಲೀಟರ್ ಡೀಸೆಲ್ ಹಾಗೂ 2.0 - ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್. ಜೊತೆಗೆ 6 - ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.
2024ರಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಮಹೀಂದ್ರಾ ಥಾರ್ 5-ಡೋರ್, ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ದೊರೆಯುವ 3-ಡೋರ್ ಥಾರ್ ಎಸ್‌ಯುವಿಯಂತೆ 2.0 ಲೀಟರ್ ಪೆಟ್ರೋಲ್, 2.2 - ಲೀಟರ್ ಡೀಸೆಲ್ ಎಂಜಿನ್ ಪಡೆದಿರುವ ನೀರಿಕ್ಷೆಯಿದೆ. ಜೊತೆಗೆ ಪರಿಷ್ಕೃತ ಬಂಪರ್ ಹಾಗೂ ಹೊಸ ಬಣ್ಣದ ಆಯ್ಕೆಯನ್ನು ಸಿಗಬಹುದು ಎಂದು ಅಂದಾಜಿಸಲಾಗಿದೆ.

ಹೊಸ ಥಾರ್‌ನಲ್ಲಿ ಈಗಿರುವ ಥಾರ್‌ನಲ್ಲಿ ಇರುವಂತೆ ನಾಲ್ಕು ಜನ ಕುಳಿತುಕೊಳ್ಳುವ ವ್ಯವಸ್ಥದಯ ಬದಲು ಐದು ಜನ ವಿಶಾಲವಾಗಿ ಕುಳಿತುಕೊಳ್ಳಲು ಸಾಧ್ಯವಾಗುವ ರೀತಿಯಲ್ಲಿ ಬರಲಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದ್ದು, ಒಂದೊಮ್ಮೆ ಇದರಲ್ಲಿ ಪ್ರಯಾಣಿಕರಿಗೆ ಮೂರನೇ ಸಾಲು ಸಹ ಲಭ್ಯವಾಗಬಹುದು ಎಂಬ ಶಂಕೆಗಳು ವ್ಯಕ್ತವಾಗುತ್ತಿದೆ. ಹೀಗಾದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಥಾರ್ ಭಾರೀ ಸದ್ದು ಮಾಡಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications