ಅಪ್ಪನಿಗೆ ಕಾರು ಉಡುಗೊರೆಯಾಗಿ ನೀಡಿದ ಸರ್ಫರಾಜ್ ಖಾನ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಮೆಂಟ್‌ನ ಎಂಟನೇ ಆವೃತ್ತಿಯ ವೇಳೆ ಸಾಕಷ್ಟು ಸುದ್ದಿ ಮಾಡಿರುವ ಉದಯೋನ್ಮುಖ ಯುವ ಆಟಗಾರ ಸರ್ಫರಾಜ್ ಖಾನ್, ಅಪ್ಪನಿಗೆ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ಐಪಿಎಲ್ ಟೂರ್ನಿಗೂ ಮುಂಚಿತವಾಗಿ ನಡೆದ ಹರಾಜಿನಲ್ಲಿ ಬರೋಬ್ಬರಿ 50 ಲಕ್ಷ ರು.ಗಳಿಗೆ 17ರ ಹರೆಯದ ಸರ್ಫರಾಜ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಖರೀದಿಸಿತ್ತು. ಈ ಬಗ್ಗೆ ವಿವರಿಸಿರುವ ಸ್ವತ: ಸರ್ಫರಾಜ್ ಅವರೇ ರೆನೊ ಡಸ್ಟರ್ ಕಾರು ಖರೀದಿಸಲಿರುವ ಕಾರಣದ ಬಗ್ಗೆಯೂ ವಿವರಣೆಯನ್ನು ಕೊಟ್ಟಿದ್ದಾರೆ.

2010ರಲ್ಲಿ ನಡೆದ ಅಪಘಾತವೊಂದರಲ್ಲಿ ಸರ್ಫರಾಜ್ ತಂದೆ ನೌಶಾದ್ ಗಂಭೀರ ಗಾಯ ಮಾಡಿಕೊಂಡಿದ್ದರು. ಹಾಗಾಗಿ ಇನ್ನು ಮುಂದಕ್ಕೆ ಅಪ್ಪನ ಸುರಕ್ಷಿತ ಪಯಣಕ್ಕಾಗಿ ಐಪಿಎಲ್ ನಲ್ಲಿ ಲಭ್ಯವಾಗಿರುವ ದುಡ್ಡನ್ನು ಬಳಕೆ ಮಾಡಲು ನಿರ್ಧರಿಸಿದ್ದಾರೆ.

ಆಗಲೇ ನನ್ನಲ್ಲಿ ಭಯವುಂಟಾಗಿತ್ತು. ಯಾವಾಗ ಹಣ ಸಂಪಾದಿಸುತ್ತೇನೆಯೋ ಅಂದೇ ಅಪ್ಪನಿಗೊಂದು ಕಾರು ಖರೀದಿಸಬೇಕೆಂಬ ಕನಸು ನನ್ನದಾಗಿತ್ತು ಎಂದು ವಿವರಿಸಿದ್ದಾರೆ. 2014ರ ಅಂಡರ್-19 ವಿಶ್ವಕಪ್ ತಂಡದ ಸದಸ್ಯರೂ ಆಗಿದ್ದ ಸರ್ಫರಾಜ್ ಈಗಗಾಲೇ ಮುಂಬೈ ಪರ ರಣಜಿಯಲ್ಲಿ ಪಾದಾರ್ಪಣೆ ಮಾಡಿದ್ದಾರೆ.

ಸರ್ಫರಾಜ್ ಅಪ್ಪ ಕೂಡಾ ಕ್ರಿಕೆಟ್ ಕೋಚ್ ಆಗಿದ್ದು, ಇದುವರೆಗೆ ತಮ್ಮ ಮಕ್ಕಳಿಬ್ಬರನ್ನು ಬೈಕ್ ನಲ್ಲಿ ಕುಳ್ಳಿರಿಸಿ ಕ್ರಿಕೆಟ್ ಅಭ್ಯಾಸಿಸಲು ಮೈದಾನಕ್ಕೆ ತೆರಳಲುತ್ತಿದ್ದರು. ಇದು ಅಪಾಯ ಎಂದು ಗೊತ್ತಿದ್ದರೂ ನಮ್ಮಲ್ಲಿ ಬೇರೆ ಉಪಾಯವೇ ಇರಲಿಲ್ಲ ಎಂದು ಸರ್ಫಾರಜ್ ವಿವರಿಸುತ್ತಾರೆ.

ಇನ್ನು ರೆನೊ ಡಸ್ಟರ್ ಬಗ್ಗೆ ಮಾತನಾಡುವುದಾದ್ದಲ್ಲಿ ಭಾರತೀಯ ವಾಹನೋದ್ಯಮದಲ್ಲಿ ಹೊಸ ಚೈತನ್ಯವನ್ನೇ ಸೃಷ್ಟಿಸಿತ್ತು. ಇದು ಯುವ ಮನಸ್ಕರ ಜೊತೆಗೆ ಎಲ್ಲ ವಿಭಾಗದ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು.

ಕ್ರೀಡಾ ಬಳಕೆಯ ವಾಹನಗಳ ವಿಭಾಗದಲ್ಲಿ ರೆನೊ ಈಗಲೂ ಸಾಮಾನ್ಯ ಉತ್ತಮ ಮಾರಾಟವನ್ನು ಕಾಯ್ದುಕೊಂಡಿದೆ. ಇದರ ಬೆಂಗಳೂರು ಎಕ್ಸ್ ಶೋ ರೂಂ ಬೆಲೆ 8.32 ಲಕ್ಷ ರು.ಗಳಿಂದ ಆರಂಭವಾಗಿ ಟಾಪ್ ಎಂಡ್ ವೆರಿಯಂಟ್ 13.67 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

ದೇಶದಲ್ಲಿ ರೆನೊ ಡಸ್ಟರ್ ಪೆಟ್ರೋಲ ಹಾಗೂ ಡೀಸೆಲ್ ಸೇರಿದಂತೆ 12 ವೆರಿಯಂಟ್ ಗಳಲ್ಲಿ ಲಭ್ಯವಿದೆ. ಇದರ ಪೆಟ್ರೋಲ್ ಎಂಜಿನ್ 1598 ಸಿಸಿ 4 ಸಿಲಿಂಡರ್ ಇನ್ ಲೈನ್ ಹಾಗೂ ಡೀಸೆಲ್ ಎಂಜಿನ್ 1461 ಸಿಸಿ 4 ಸಿಲಿಂಡರ್ ಇನ್ ಲೈನ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಇವೆರಡು ಫೈವ್ ಹಾಗೂ ಸಿಕ್ಸ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುತ್ತದೆ.

ರೆನೊ ಡಸ್ಟರ್ ಬೆಂಗಳೂರು ಆನ್ ರೋಡ್ ಬೆಲೆ


Click it and Unblock the Notifications








