ಶಾಸಕರ ಸ್ಟಿಕ್ಕರ್ ಹೊಂದಿದ್ದ ಕಾರಿಗೆ ದಂಡ ವಿಧಿಸಿದ ಪೊಲೀಸರು..!

ಕರೋನಾ ವೈರಸ್ ಹರಡದಂತೆ ತಡೆಯಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರಲ್ಲಿ ದೇಶಾದ್ಯಂತ ಜಾರಿಗೊಳಿಸಲಾಗಿರುವ ಲಾಕ್ ಡೌನ್ ಸಹ ಸೇರಿದೆ. ದೇಶದ ಬಹುತೇಕ ಎಲ್ಲಾ ರಾಜ್ಯಗಳು ತಮ್ಮ ಗಡಿಗಳನ್ನು ಮುಚ್ಚಿವೆ. ಕರೋನಾ ವೈರಸ್ ಸೋಂಕಿನ ಪ್ರಮಾಣ ಹೆಚ್ಚಿರುವ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಶಾಸಕರ ಸ್ಟಿಕ್ಕರ್ ಹೊಂದಿದ್ದ ಕಾರಿಗೆ ದಂಡ ವಿಧಿಸಿದ ಪೊಲೀಸರು..!

ಲಾಕ್ ಡೌನ್ ನಿಂದಾಗಿ ರಸ್ತೆಗಳು ನಿರ್ಜನವಾಗಿವೆ. ಜನರು ಹೊರಬಾರದಂತೆ ನಿರ್ಬಂಧ ವಿಧಿಸಲಾಗಿದೆ. ಇದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಕಠಿಣ ತಪಾಸಣೆ ನಡೆಸುತ್ತಿದ್ದಾರೆ. ಹಲವೆಡೆ ತಪಾಸಣೆಗಳನ್ನು ನಡೆಸಲಾಗುತ್ತಿದೆ. ಜನರು ತಮ್ಮ ಅಗತ್ಯ ವಸ್ತುಗಳ ಖರೀದಿಗೆ ಹೊರತುಪಡಿಸಿ ಹೊರಬರಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಸಕರ ಸ್ಟಿಕ್ಕರ್ ಹೊಂದಿದ್ದ ಕಾರಿಗೆ ದಂಡ ವಿಧಿಸಿದ ಪೊಲೀಸರು..!

ಹೆಚ್ಚಿನ ಸಂಖ್ಯೆಯ ಜನರು ಮನೆಯಲ್ಲಿಯೇ ಇದ್ದರೆ, ಕೆಲವು ಕಿಡಿಗೇಡಿಗಳು ಮಾತ್ರ ಬೀದಿ ಬೀದಿ ಸುತ್ತುತ್ತಿದ್ದಾರೆ. ಕೆಲವರು ಪೊಲೀಸರಿಗೆ ಮೋಸಮಾಡಿ ಓಡಾಡುತ್ತಿರುವ ಘಟನೆಗಳು ವರದಿಯಾಗಿವೆ.

ಶಾಸಕರ ಸ್ಟಿಕ್ಕರ್ ಹೊಂದಿದ್ದ ಕಾರಿಗೆ ದಂಡ ವಿಧಿಸಿದ ಪೊಲೀಸರು..!

ಇದೇ ರೀತಿಯ ಮತ್ತೊಂದು ಘಟನೆ ಉತ್ತರ ಭಾರತದಲ್ಲಿ ನಡೆದಿದೆ. ಈ ಘಟನೆಯಲ್ಲಿ, ಬಿಳಿ ಬಣ್ಣದ ಟೊಯೊಟಾ ಫಾರ್ಚೂನರ್ ಕಾರಿನ ಮೇಲೆ ಶಾಸಕರ ಸ್ಟಿಕ್ಕರ್ ಬಳಸಲಾಗಿತ್ತು. ಈ ಕಾರಿನಲ್ಲಿ ಇಬ್ಬರು ಯುವಕರು ಪ್ರಯಾಣಿಸುತ್ತಿದ್ದರು. ಪೊಲೀಸರ ಕಣ್ಣಿಗೆ ಮಣ್ಣೆರಚಲು ಕಾರಿನ ಮೇಲೆ ಈ ಸ್ಟಿಕ್ಕರ್ ಅಂಟಿಸಲಾಗಿತ್ತೆಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಶಾಸಕರ ಸ್ಟಿಕ್ಕರ್ ಹೊಂದಿದ್ದ ಕಾರಿಗೆ ದಂಡ ವಿಧಿಸಿದ ಪೊಲೀಸರು..!

ಈ ಯುವಕರು ತಮ್ಮನ್ನು ಶಾಸಕರ ಸಂಬಂಧಿಕರೆಂದು ಹೇಳಿಕೊಂಡಿದ್ದಾರೆ. ಹೊರಗೆ ಓಡಾಡಲು ತಮಗೆ ವಿಶೇಷ ಪಾಸ್ ನೀಡಲಾಗಿದೆ ಎಂದು ಹೇಳಿದ್ದಾರೆ. ಆದರೆ ಆ ಯುವಕರು ಶಾಸಕರ ಹೆಸರನ್ನು ಹೇಳಿಲ್ಲ. ಪೊಲೀಸರ ಕೆಲವು ಪ್ರಶ್ನೆಗಳಿಗೆ ಆ ಯುವಕರು ತಬ್ಬಿಬ್ಬಾಗಿದ್ದಾರೆ.

ಶಾಸಕರ ಸ್ಟಿಕ್ಕರ್ ಹೊಂದಿದ್ದ ಕಾರಿಗೆ ದಂಡ ವಿಧಿಸಿದ ಪೊಲೀಸರು..!

ಪೊಲೀಸರು ಆ ಯುವಕರಿಗೆ ರೂ.10,500 ದಂಡ ವಿಧಿಸಿದ್ದಾರೆ. ಈ ಘಟನೆ ದೆಹಲಿಯ ಪಕ್ಕದಲ್ಲಿರುವ ಹರಿಯಾಣ ರಾಜ್ಯದಲ್ಲಿ ನಡೆದಿದೆ. ಗುರುಗ್ರಾಮದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಈ ಯುವಕರನ್ನು ತಪಾಸಣೆಗೆ ಒಳಪಡಿಸಲಾಗಿದೆ.

ಶಾಸಕರ ಸ್ಟಿಕ್ಕರ್ ಹೊಂದಿದ್ದ ಕಾರಿಗೆ ದಂಡ ವಿಧಿಸಿದ ಪೊಲೀಸರು..!

ಕರೋನಾ ವೈರಸ್‌ ಬರದಂತೆ ತಡೆಯುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ. ಈ ಮಹಾಮಾರಿ ವೈರಸ್ ಒಬ್ಬರಿಗೆ ಇನ್ನೊಬ್ಬರಿಗೆ ಸುಲಭವಾಗಿ ಹರಡುತ್ತದೆ. ಈ ಕಾರಣಕ್ಕೆ ಜನರಿಗೆ ತಮ್ಮನ್ನು ತಾವು ಪ್ರತ್ಯೇಕವಾಗಿರುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮನವಿ ಮಾಡಿಕೊಳ್ಳುತ್ತಿವೆ.

ಶಾಸಕರ ಸ್ಟಿಕ್ಕರ್ ಹೊಂದಿದ್ದ ಕಾರಿಗೆ ದಂಡ ವಿಧಿಸಿದ ಪೊಲೀಸರು..!

ಆದರೆ ಕೆಲವರು ರಜಾ ನೀಡಲಾಗಿದೆ ಎಂಬಂತೆ ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದಾರೆ. ಇದರಿಂದ ಅವರಿಗೆ ಮಾತ್ರವಲ್ಲದೇ ಅವರ ಅವಲಂಬಿತರೂ ಸಹ ಕರೋನಾ ವೈರಸ್ ಸೋಂಕಿಗೆ ಒಳಗಾಗಲಿದ್ದಾರೆ.

ಶಾಸಕರ ಸ್ಟಿಕ್ಕರ್ ಹೊಂದಿದ್ದ ಕಾರಿಗೆ ದಂಡ ವಿಧಿಸಿದ ಪೊಲೀಸರು..!

ಈ ಕಾರಣಕ್ಕೆ ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲು ಆರಂಭಿಸಿದ್ದಾರೆ. ದಂಡ ವಿಧಿಸುವಂತಹ ಹಾಗೂ ವಾಹನ ವಶಕ್ಕೆ ಪಡೆಯುವಂತಹ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಚಿತ್ರ ಮೂಲ: ಅಮರ್ ಉಜಲಾ

Most Read Articles

Kannada
English summary
Sarurpur police station cops busted Toyota Fortuner with MLA sticker. Read in Kannada.
Story first published: Friday, April 3, 2020, 17:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X