ಭೂತಾಯಿಯ ದಿನ; ಪರಿಸರ ಸಂರಕ್ಷಣೆಗೆ ಪಣತೊಡಿರಿ
ಇಂದು ಭೂ ಮಾತೆಯ ದಿನ. ವರ್ಷಂಪ್ರತಿ ಎಪ್ರಿಲ್ 22ರಂದು 'ವಿಶ್ವ ಭೂದಿನ' (ವರ್ಲ್ಡ್ ಅರ್ಥ್ ಡೇ) ಆಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಭೂತಾಯಿಯ ರಕ್ಷಣೆಗಾಗಿ ಪಣತೊಡಿರಿ ಎಂದು ನಮ್ಮೆಲ್ಲರ ಓದುಗರನ್ನು ಡ್ರೈವ್ ಸ್ಪಾರ್ಕ್ ವಿನಂತಿಸಿಕೊಳ್ಳುತ್ತಿದೆ.
ಭೂಮಿಯ ನೈಸರ್ಗಿಕ ಪರಿಸರ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಮೆಚ್ಚುಗೆ ಹೆಚ್ಚಿಸುವ ಕೆಲಸ ಕಾರ್ಯಗಳನ್ನು ವಿಶ್ವಸಂಸ್ಥೆಯಿಂದ ಹಮ್ಮಿಕೊಳ್ಳಲಾಗುತ್ತದೆ. ಭೂದಿನವನ್ನು ವಿಶ್ವದ್ಯಾಂತ ಎಲ್ಲ ರಾಷ್ಟ್ರಗಳು ಸಂಘಟಿತವಾಗಿ ಆಚರಿಸಿಕೊಳ್ಳುತ್ತಿದೆ. ವರ್ಷಂಪ್ರತಿ 175ಕ್ಕೂ ಹೆಚ್ಚು ದೇಶಗಳ ನೂರು ಕೋಟಿಗೂ ಅಧಿಕ ಜನರು ಇದನ್ನು ಆಚರಿಸುತ್ತಾರೆ. ಆ ಮೂಲಕ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ಭೂಮಿದಿನ ಕಲ್ಪನೆಯನ್ನು ಹುಟ್ಟು ಹಾಕಿದವರು ಅಮೆರಿಕದ ಸೆನೆಟರ್ ಆಗಿದ್ದ ನೆಲ್ಸನ್ ಗೆಲಾರ್ಡ್. 1970ರಲ್ಲಿ ಮೊದಲ ಬಾರಿಗೆ ಭೂಮಿ ದಿನವನ್ನು ಆಚರಿಸಲಾಯಿತು.

ಇದರಂತೆ ಜಾಗಿತಕ ತಾಪಮಾನ ವೈಪರೀತ್ಯವನ್ನು ತಡೆಗಟ್ಟಲು ದೇಶದೆಲ್ಲೆಡೆ ಹಸಿರು ಕ್ರಾಂತಿಗೆ ಪ್ರೋತ್ಸಾಹನೆ ನೀಡಲಾಗುತ್ತಿದೆ. ನೀವು ಕೂಡಾ ಒಂದು ಗಿಡ ನೆಟ್ಟಾದರೂ ಭೂ ತಾಯಿಯ ರಕ್ಷಣೆಗಾಗಿ ಪಣತೊಡಿರಿ.

ಕಾರಿನಿಂದ ಹೊರಸೂಸುವ ಕಾರ್ಬನ್ ಹೊಗೆ ಪರಿಸರ ಮಾಲಿನ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಪ್ರಸ್ತುತ ಕಾರು ಬ್ರಾಂಡ್‌ಗಳು ಕಡಿಮೆ ಎಮಿಷನ್ ಹೊರಸೂಸುವ ಕಾರುಗಳ ಸೃಷ್ಟಿಗೆ ಗಮನ ಕೊಡುತ್ತಿದ್ದರೂ ಭಾರತದಂತಹ ಸಂಪ್ರದಾಯಿಕ ರಾಷ್ಟ್ರಗಳಲ್ಲಿ ಇದರ ಬಳಕೆಯು ಕಡಿಮೆಯಾಗಿದೆ. ಹಾಗಾಗಿ ಯುವ ಚಾಲಕರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸುವುದು ಅತಿ ಅಗತ್ಯವಾಗಿದೆ. ಅಂತೆಯೇ ಎಲೆಕ್ಟ್ರಿಕ್ ಕಾರು ಬಳಕೆಯ ಮಹತ್ವದ ಬಗ್ಗೆಯೂ ವಿವರಿಸಬೇಕಾಗುತ್ತದೆ.

ಎಲ್ಲೆಡೆ ತಲೆಯೆತ್ತಿರುವ ಕಾಂಕ್ರೀಟ್ ಕಟ್ಟಡ ಹಾಗೂ ಮರಗಳನ್ನು ಹೊಡೆದುರುಳಿಸುವುದರಿಂದ ಮಳೆ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ. ಮುಂದಿನ ಪೀಳೆಗೆಯ ದೃಷ್ಟಿಕೋನದಲ್ಲಿ ಇವೆಲ್ಲಕ್ಕೂ ಕಡಿವಾಣ ಹಾಕಬೇಕಾಗಿರುವುದು ಅತಿ ಅಗತ್ಯವಾಗಿದೆ.

ವಾಯು ಮಾಲಿನ್ಯ ಸೇರಿದಂತೆ ಶಬ್ದ ಮಾಲಿನ್ಯ ಕೂಡಾ ಪರಿಸರಕ್ಕೆ ಆಟೋ ಜಗತ್ತಿನಿಂದ ಆಗುತ್ತಿರುವ ಪ್ರಮುಖ ವಿಪತ್ತಾಗಿದೆ. ಹಾಗಾಗಿ ಅನವಶ್ಯಕ ಹಾರ್ನ್ ಬಳಕೆಯನ್ನು ಕಡಿಮೆ ಮಾಡಬೇಕು.

ಒಟ್ಟಿನಲ್ಲಿ ಆರೋಗ್ಯಕರ ಜಗತ್ತಿನ ಏಳಿಗೆಗಾಗಿ ಗಿಡ ಮರಗಳನ್ನು ನೆಟ್ಟು ಬೆಳೆಸಿರಿ. 'ಗ್ರೊ ಗ್ರೀನ್' ಎಂಬುದೇ ನಿಮ್ಮ ಸಂಕಲ್ಪವಾಗಿರಲಿ. ಇದೀಗ ಅರ್ಥ್ ಡೇ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...


Click it and Unblock the Notifications








