Tata: ಜೀವ ಉಳಿಸಿದ 'ಟಾಟಾ ಆಲ್ಟ್ರೋಜ್' ಧನ್ಯವಾದ ಹೇಳಲು ಮಾಲೀಕ ಮಾಡಿದ್ದೇನು?
ಹೆದ್ದಾರಿ ಅಥವಾ ರಸ್ತೆಗಳಲ್ಲಿ ಜಾನುವಾರು, ಪ್ರಾಣಿಗಳು ಇದ್ದಕ್ಕಿದಂತೆ ಪ್ರವೇಶಿಸಿ ಬಿಡುತ್ತೇವೆ. ಅವುಗಳನ್ನು ತಪ್ಪಿಸಲು ಹೋಗುವ ವಾಹನಗಳು ಅಪಘಾತಕ್ಕೆ ತುತ್ತಾಗುತ್ತವೆ. ಅಂತಹ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತದೆ. ಸದ್ಯ, ಅದೇ ರೀತಿಯಲ್ಲಿ ಇಲ್ಲೊಂದು ಕಡೆ ಜರುಗಿದೆ. ಆ ಬಗ್ಗೆ ಸಂಪೂರ್ಣ ವಿವರವನ್ನು ತಿಳಿಯೋಣ.
ಈ ಅಪಘಾತ ಎಲ್ಲಿ ನಡೆದಿದೆ ಎಂಬುದರ ಕುರಿತು ಖಚಿತ ಮಾಹಿತಿಯಿಲ್ಲ. ಯೂಟ್ಯೂಬ್ ವಾಹಿನಿಯೊಂದರಲ್ಲಿ ವಿಡಿಯೋವನ್ನು ಶೇರ್ ಮಾಡಲಾಗಿದೆ. ರಸ್ತೆಯ ಮೇಲೆ ಅಚಾನಕ್ ಆಗಿ ನಾಯಿಯೊಂದು ಬರುತ್ತದೆ. ಅದನ್ನು ತಪ್ಪಿಸಲು ಟಾಟಾ ಆಲ್ಟ್ರೋಜ್ ಕಾರಿನ ಚಾಲಕ ಅತಿವೇಗದಲ್ಲಿದ್ದರೂ ಬ್ರೇಕ್ ಹಾಕುತ್ತಾರೆ. ಇದರಿಂದಾಗಿ, ಹಿಂದೆ ಬರುತ್ತಿದ್ದ ಟಾಟಾ ಹೆಕ್ಸಾದೊಂದಿಗೆ ಡಿಕ್ಕಿಯಾಗಿದೆ. ಘಟನೆ ಬಗ್ಗೆ ಆಲ್ಟ್ರೋಜ್ ಮಾಲೀಕ ಬಾಲಾಜಿ ಅವರೇ ಅಂದು ಏನು ನಡೆಯಿತು ಎಂದು ವಿವರಿಸಿದ್ದಾರೆ.

ಟಾಟಾ ಆಲ್ಟ್ರೋಜ್ (Tata Altroz) ಕಾರನ್ನು ಬಾಲಾಜಿ ಅವರು ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಖರೀದಿಸಿದ್ದರು. ಈ ಕಾರನ್ನು ಅವರು, ಗಂಟೆಗೆ 90 ಕಿಮೀ ವೇಗದಲ್ಲಿ ಓಡಿಸುತ್ತಿದ್ದಾಗ ಇದ್ದಕ್ಕಿದ್ದಂತೆ ನಾಯಿಯೊಂದು ಎದುರಿಗೆ ಬಂದಿದ್ದು, ಅದನ್ನು ಉಳಿಸಲು ಬ್ರೇಕ್ ಹಾಕಿದ್ದಾರೆ. ಆಗ ಹಿಂದೆಯೂ ವೇಗವಾಗಿ ಬರುತ್ತಿದ್ದ ಟಾಟಾ ಹೆಕ್ಸಾ, ಆಲ್ಟ್ರೋಜ್ ಕಾರಿಗೆ ಡಿಕ್ಕಿಯಾಗಿದೆ.
ಪರಿಣಾಮ ಟಾಟಾ ಆಲ್ಟ್ರೊಜ್ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ. ಆದರೆ, ಬಾಲಾಜಿ ಅವರಿಗೆ ಈ ಕಾರಿನ ನಿರ್ಮಾಣ ಗುಣಮಟ್ಟ ಸಖತ್ ಖುಷಿ ತಂದಿದ್ದು, ತನಗೆ ಒಂದೇ ಒಂದು ಗಾಯವಾಗಿಲ್ಲವೆಂದು ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಯೂಟ್ಯೂಬ್ ವಾಹಿನಿಯ ವಿಡಿಯೋದಲ್ಲಿ ಹೇಳಲಾಗಿದೆ. ಹಿಂದಿನ ಸೀಟಿನಲ್ಲಿ ಪ್ರಯಾಣಿಕರಿದ್ದರೆ ಅವರಿಗೆ ಸಣ್ಣ-ಪುಟ್ಟ ಗಾಯಗಳಾಗುತ್ತಿತ್ತು ಎಂದಿದ್ದಾರೆ. ಈಗ ಹೊಸ ಆಲ್ಟ್ರೊಜ್ ಖರೀದಿಸಿದ್ದೇನೆ. ವಿಮೆ ಹಣ ಬರಲು 3.5 ತಿಂಗಳು ತೆಗೆದುಕೊಂಡಿತು ಎಂದು ಹೇಳಿದ್ದಾರೆ.

ಟಾಟಾ ಆಲ್ಟ್ರೋಜ್ ಹ್ಯಾಚ್‌ಬ್ಯಾಕ್ ಆಗಿದ್ದರೂ ಗ್ಲೋಬಲ್ NCAPಯಿಂದ ಕ್ರ್ಯಾಶ್ ಟೆಸ್ಟ್‌ನಲ್ಲಿ 5 - ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. ವಯಸ್ಕರ ರಕ್ಷಣೆ ವಿಭಾಗದಲ್ಲಿ 17 ಅಂಕಗಳಿಗೆ 16.13 ಅಂಕ ಪಡೆದು, 3 ಸ್ಟಾರ್ ರೇಟಿಂಗ್ ಗಳಿಸಿದೆ. ಆದರೆ, ಮಕ್ಕಳ ರಕ್ಷಣೆಯಲ್ಲಿ 49 ಅಂಕಗಳಿಗೆ 29 ಅಂಕ ಗಳಿಸಿ, ಕೇವಲ 3 - ಸ್ಟಾರ್ ರೇಟಿಂಗ್ ಮಾತ್ರ ಹೊಂದಲು ಸಾಧ್ಯವಾಗಿದೆ.
ಜನಪ್ರಿಯ ಟಾಟಾ ಆಲ್ಟ್ರೋಜ್ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಇದರ ವಿವಿಧ ಮಾದರಿಗಳು ಡ್ಯುಯಲ್ ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್) ISOFIX ಪಾಯಿಂಟ್ಸ್, ರೇರ್ ಪಾರ್ಕಿಂಗ್ ಸೆನ್ಸಾರ್ಸ್ ಸೇರಿದಂತೆ ಹತ್ತು ಹಲವು ಸೇಫ್ಟಿ ಫೀಚರ್ಸ್ ಒಳಗೊಂಡಿವೆ.
ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಟಾಟಾ ಆಲ್ಟ್ರೋಜ್ ರೂ.6.60 ಲಕ್ಷದಿಂದ ರೂ.10.74 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಲಭ್ಯವಿದ್ದು, ಪೆಟ್ರೋಲ್, ಸಿಎನ್‌ಜಿ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಜೊತೆಗೆ 5 - ಸ್ವೀಡ್ ಮ್ಯಾನುವಲ್, 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ಗ್ರಾಹಕರಿಗೆ ಸಿಗುತ್ತದೆ.
ಹೊಸ ಟಾಟಾ ಆಲ್ಟ್ರೋಜ್, ರೂಪಾಂತರಗಳಿಗೆ ಅನುಗುಣವಾಗಿ 18.5 kmpl ರಿಂದ 26.2 km/kg ಮೈಲೇಜ್ ನೀಡುತ್ತದೆ. 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಬಿಯೆಂಟ್ ಲೈಟಿಂಗ್, ಕ್ರೂಸ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಹುಂಡೈ ಐ20, ಮಾರುತಿ ಸುಜುಕಿ ಬಲೆನೊ, ಟೊಯೊಟಾ ಗ್ಲಾನ್ಜಾ ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications