ಮತ್ತೆ ಪುನರಾರಂಭಗೊಳ್ಳಲಿದೆ ನಿರ್ವಹಣೆಯ ಕಾರಣಕ್ಕೆ ಸ್ಥಗಿತಗೊಂಡಿದ್ದ ಸೀಪ್ಲೇನ್ ಸೇವೆ

ಸ್ಪೈಸ್ ಜೆಟ್ ಕಂಪನಿಯು ಅಕ್ಟೋಬರ್ ತಿಂಗಳಿನಲ್ಲಿ ಸೀಪ್ಲೇನ್ ಸೇವೆಯನ್ನು ಆರಂಭಿಸಿತು. ನಿರ್ವಹಣೆಯ ಸಲುವಾಗಿ ಈ ವಿಮಾನದ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈ ಸೀಪ್ಲೇನ್ ಸೇವೆಯು ಡಿಸೆಂಬರ್ 27ರಿಂದ ಮತ್ತೆ ಆರಂಭವಾಗಲಿದೆ.

ಮತ್ತೆ ಪುನರಾರಂಭಗೊಳ್ಳಲಿದೆ ನಿರ್ವಹಣೆಯ ಕಾರಣಕ್ಕೆ ಸ್ಥಗಿತಗೊಂಡಿದ್ದ ಸೀಪ್ಲೇನ್ ಸೇವೆ

ಸೀಪ್ಲೇನ್ ಬುಕ್ಕಿಂಗ್'ಗಳು ಡಿಸೆಂಬರ್ 20ರಿಂದ ಆರಂಭವಾಗಲಿದೆ. ಸೀಪ್ಲೇನ್ ದಿನಕ್ಕೆ ಎರಡು ಬಾರಿ ಹಾರಾಟ ನಡೆಸಲಿದೆ. ಈ ಸೀಪ್ಲೇನ್ ಕಳೆದ ತಿಂಗಳು ರಿವರ್ ಫ್ರಂಟ್ ನಿಂದ ಸ್ಟಾಚ್ಯೂ ಆಫ್ ಯೂನಿಟಿವರೆಗೆ ಹಾರಾಟ ನಡೆಸಿತ್ತು. ಸೀಪ್ಲೇನ್ ಸೇವೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಈ ವಿಮಾನವನ್ನು ಸ್ಪೈಸ್ ಷಟಲ್ ಆಫ್ ಫ್ಲೈಟ್ ಸರ್ವಿಸ್ ಸ್ಪೈಸ್ ಜೆಟ್ ನಿರ್ವಹಿಸುತ್ತದೆ. ಇದಕ್ಕಾಗಿ 15 ಸೀಟುಗಳ ಟ್ವಿನ್ ಒಟರ್ 300 ವಿಮಾನವನ್ನು ಬಳಸಲಾಗುತ್ತದೆ.

ಮತ್ತೆ ಪುನರಾರಂಭಗೊಳ್ಳಲಿದೆ ನಿರ್ವಹಣೆಯ ಕಾರಣಕ್ಕೆ ಸ್ಥಗಿತಗೊಂಡಿದ್ದ ಸೀಪ್ಲೇನ್ ಸೇವೆ

ಈ ವಿಮಾನದ ನಿರ್ವಹಣೆಗೆ ಅಗತ್ಯವಿರುವ ಡ್ರೈ ಹಾಗೂ ವೆಟ್ ಡಾಕ್'ಗಳನ್ನು ಅಹಮದಾಬಾದ್‌ನಲ್ಲಿ ನಿರ್ಮಿಸಲಾಗುತ್ತಿದೆ. ವಿಮಾನವು ಸದ್ಯಕ್ಕೆ ಮಾಲ್ಡೀವ್ಸ್‌ನಲ್ಲಿದೆ. ವಿಮಾನವು ವಾಪಸ್ ಆದ ನಂತರ ಡಿಸೆಂಬರ್ ಕಾರ್ಯಾಚರಣೆ ಆರಂಭವಾಗಲಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮತ್ತೆ ಪುನರಾರಂಭಗೊಳ್ಳಲಿದೆ ನಿರ್ವಹಣೆಯ ಕಾರಣಕ್ಕೆ ಸ್ಥಗಿತಗೊಂಡಿದ್ದ ಸೀಪ್ಲೇನ್ ಸೇವೆ

ನಿರ್ಮಾಣ ಹಂತದಲ್ಲಿರುವ ಅಹಮದಾಬಾದ್ ಸೌಲಭ್ಯವು ಶೀಘ್ರದಲ್ಲೇ ಆರಂಭವಾಗಲಿದೆ. ನಿರ್ವಹಣೆ ಜಾರಿಯಲ್ಲಿರುವ ಕಾರಣಕ್ಕೆ ಕಂಪನಿಯು ನವೆಂಬರ್ 27ರಿಂದ ಬುಕ್ಕಿಂಗ್'ಗಳನ್ನು ಸ್ಥಗಿತಗೊಳಿಸಿದೆ.

ಮತ್ತೆ ಪುನರಾರಂಭಗೊಳ್ಳಲಿದೆ ನಿರ್ವಹಣೆಯ ಕಾರಣಕ್ಕೆ ಸ್ಥಗಿತಗೊಂಡಿದ್ದ ಸೀಪ್ಲೇನ್ ಸೇವೆ

ಈ ಸೀಪ್ಲೇನ್ ಹಾರಾಟಕ್ಕೆ ಅಗತ್ಯವಿರುವ ಎಲ್ಲಾ ನಿಯಮ ಹಾಗೂ ಅಗತ್ಯ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತದೆ. ಈ ವಿಮಾನವನ್ನು ರೆಗ್ಯುಲರ್ ಮೆಂಟೆನೆನ್ಸ್, ಕೂಲಂಕುಷವಾದ ಪರೀಕ್ಷೆ, ಹೊಸ ಸೀಟುಗಳು ಹಾಗೂ ಏರ್ ವರ್ತಿನೆಸ್ ಸರ್ಟಿಫಿಕೇಟ್'ನೊಂದಿಗೆ ಪರಿಚಯಿಸಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮತ್ತೆ ಪುನರಾರಂಭಗೊಳ್ಳಲಿದೆ ನಿರ್ವಹಣೆಯ ಕಾರಣಕ್ಕೆ ಸ್ಥಗಿತಗೊಂಡಿದ್ದ ಸೀಪ್ಲೇನ್ ಸೇವೆ

ಇನ್ನು ಈ ಸೀಪ್ಲೇನ್ ಅಪಘಾತ ಮುಕ್ತ ಇತಿಹಾಸಕ್ಕಾಗಿ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ಇದನ್ನು ಭಾರತದಲ್ಲಿ ಪರಿಚಯಿಸುವ ಬಗ್ಗೆ ಹಲವು ದಿನಗಳಿಂದ ಮಾತುಕತೆಗಳು ನಡೆಯುತ್ತಿದ್ದವು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ಸೀಪ್ಲೇನ್ ಅನ್ನು ಸಬರಮತಿ ನದಿಯ ಮುಂಭಾಗದಲ್ಲಿ ಬಳಸುತ್ತಿದ್ದರು.

ಮತ್ತೆ ಪುನರಾರಂಭಗೊಳ್ಳಲಿದೆ ನಿರ್ವಹಣೆಯ ಕಾರಣಕ್ಕೆ ಸ್ಥಗಿತಗೊಂಡಿದ್ದ ಸೀಪ್ಲೇನ್ ಸೇವೆ

ಈಗ ಇದರ ಸೇವೆಯನ್ನು ಜನ ಸಾಮಾನ್ಯರಿಗಾಗಿ ಪರಿಚಯಿಸಲಾಗಿದೆ. ಈ ಸೀಪ್ಲೇನ್'ನ ಟೇಕ್‌ಆಫ್ ಹಾಗೂ ಲ್ಯಾಂಡಿಂಗ್ ಸುಲಭವಾಗಿದ್ದು, ಲ್ಯಾಂಡಿಂಗ್ ಸ್ಟ್ರಿಪ್ ಅಥವಾ ರನ್‌ವೇ ಇಲ್ಲದ ಪ್ರದೇಶದಲ್ಲಿ ಇದನ್ನು ಬಳಸಬಹುದು. ಸೀಪ್ಲೇನ್ ಕಡಿಮೆ ವೆಚ್ಚದ ಸಾರಿಗೆ ವಾಹನವಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮತ್ತೆ ಪುನರಾರಂಭಗೊಳ್ಳಲಿದೆ ನಿರ್ವಹಣೆಯ ಕಾರಣಕ್ಕೆ ಸ್ಥಗಿತಗೊಂಡಿದ್ದ ಸೀಪ್ಲೇನ್ ಸೇವೆ

ಸೀಪ್ಲೇನ್ ತನ್ನ ವಿನ್ಯಾಸ, ಪೇಲೋಡ್ ಸಾಮರ್ಥ್ಯ, ಶಾರ್ಟ್ ಟೇಕ್ ಆಫ್‌ಗೆ ಹೆಸರುವಾಸಿಯಾದ ಸುರಕ್ಷಿತ ವಿಮಾನವಾಗಿದೆ. ಫ್ಲೈಟ್ ಸ್ಕೀಮ್ ಅಡಿಯಲ್ಲಿ ಸ್ಪೈಸ್ ಜೆಟ್ 18 ಸೀಪ್ಲೇನ್ ಮಾರ್ಗಗಳನ್ನು ನಿಗದಿಪಡಿಸಿದೆ. ಸೀಪ್ಲೇನ್ ಅನ್ನು ಲಾಸ್ಟ್ ಮೈಲಿ ಕನೆಕ್ಟಿವಿಟಿಯ ಮತ್ತೊಂದು ಹೆಜ್ಜೆಯಾಗಿ ಪರಿಗಣಿಸಲಾಗಿದೆ.

ಮತ್ತೆ ಪುನರಾರಂಭಗೊಳ್ಳಲಿದೆ ನಿರ್ವಹಣೆಯ ಕಾರಣಕ್ಕೆ ಸ್ಥಗಿತಗೊಂಡಿದ್ದ ಸೀಪ್ಲೇನ್ ಸೇವೆ

ಮುಂಬರುವ ದಿನಗಳಲ್ಲಿ ಈ ಸೀಪ್ಲೇನ್ ಅನ್ನು ಈಶಾನ್ಯ ಭಾರತ, ಉತ್ತರಾಖಂಡ, ಉತ್ತರ ಪ್ರದೇಶ, ಆಂಧ್ರಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಅಂಡಮಾನ್, ಲಕ್ಷದ್ವೀಪ ಹಾಗೂ ದೇಶದ ಇತರ ಕರಾವಳಿ ಪ್ರದೇಶಗಳಲ್ಲಿ ಬಳಸಲಾಗುವುದು. ಸದ್ಯಕ್ಕೆ ಈ ಸೀಪ್ಲೇನ್'ಗೆ ಅಹಮದಾಬಾದ್‌ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Most Read Articles

Kannada
English summary
Seaplane services to resume soon in Ahmedabad. Read in Kannada.
Story first published: Monday, December 21, 2020, 9:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X