ಮಂಗಳಮುಖಿಯರ ಸೀಟು ಬೆಲ್ಟ್ ಪಾಠ ವೀಕ್ಷಿಸಲು ಮರೆತು ಬಿಟ್ರಾ?
ಸಮಾಜದಲ್ಲಿ ತಾರತಮ್ಯಕ್ಕೆ ಒಳಗಾಗಿರುವ ಮಂಗಳಮುಖಿಯರು ಟ್ರಾಫಿಕ್ ಸಿಗ್ನಲ್ ಅಥವಾ ರೈಲುಗಳಲ್ಲಿ ಅಡ್ಡ ಗಟ್ಟಿ ಹಣ ವಸೂಲಿ ಮಾಡುವವನ್ನು ನಾವು ದಿನದಿತ್ಯ ಕಾಣುತ್ತಿರುತ್ತೇವೆ. ಸಮಾಜದಲ್ಲಿ ಸೂಕ್ತ ಸ್ಥಾನಮಾನ ದೊರಕದಿರುವುದು ಹಾಗೂ ಕಳಂಕದಿಂದ ಕಾಣುತ್ತಿರುವುದಿರಿಂದಲೇ ಹಿಜ್ರಾಗಳು ಇಂತಹದೊಂದು ಅವಗಣನೆಗೆ ಒಳಗಾಗುತ್ತಾರೆ.
ಆಗಿನ ಕಾಲದಲ್ಲಿ ಇವರಿಗೆ ಗೌರವ ಹಾಗೂ ಸಾಮಾಜಿಕ ಸ್ಥಾನಮಾನಗಳಿದ್ದವು. ಇದೇ ಕಾರಣಕ್ಕಾಗಿ ಇವರನ್ನು ಮಂಗಳಮುಖಿಗಳು ಎಂದು ಕರೆಯಲಾಗುತ್ತದೆ. ಇಂತಹ ಮಂಗಳಮುಖಿಯರಿಂದ ಸಾಮಾಜಕ್ಕೆ ನಾನಾ ರೀತಿಯ ಅನುಕೂಲಗಳಿವೆ ಎಂಬುದನ್ನು ಮನಗಾಣಬೇಕು. ಇಂತಹದೊಂದು ಪ್ರಯತ್ನಕ್ಕೆ ಮುಂದಾಗಿರುವ ಸೀಟ್ ಬೆಲ್ಟ್ ಕ್ರ್ಯೂ ಸಂಸ್ಥೆಯು ಮಂಗಳಮುಖಿಯರನ್ನು ಸೇರಿಕೊಂಡು ಅತ್ಯಂತ ವಿಶಿಷ್ಟ ಶೈಲಿಯಲ್ಲಿ ರಸ್ತೆ ಸುರಕ್ಷತೆಯ ಮೂಲತತ್ವದ ಮಹತ್ವವನ್ನು ಸಾರ್ವಜನಿಕರಿಗೆ ಸಾರುವಲ್ಲಿ ಯಶ ಕಂಡಿದೆ.

ನಿಮ್ಮ ದೈನಂದಿನ ಚಟುವೆಟಿಕೆಗಳಲ್ಲಿ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಹಣ ವಸೂಲಿ ಮಾಡುವ ಹಿಜ್ರಾಗಳನ್ನು ನೋಡಿರಬಹುದು. ಆದರೆ ಇವೆಲ್ಲದಕ್ಕಿಂತಲೂ ವಿಭಿನ್ನವಾಗಿರುವ ಈ ಮಂಗಳಮುಖಿಯರ ತಂಡ ಚಾಲಕ ಹಾಗೂ ಪ್ರಯಾಣಿಕರಲ್ಲಿ ರಸ್ತೆ ಸುರಕ್ಷತೆಯ ಜಾಗ್ರತೆ ಮೂಡಿಸುವಲ್ಲಿ ಅಕ್ಷರಶ: ಯಶ ಕಂಡಿದ್ದಾರೆ.

ಪ್ರಸ್ತುತ ವೀಡಿಯೋ ಯೂಟ್ಯೂಬ್‌ನಲ್ಲಿ (ಅಂತಿಮ ಸ್ಲೈಡರ್‌ನಲ್ಲಿ ವೀಕ್ಷಿಸಿ) ವೈರಲ್ ಆಗಿ ಪಸರಿಸುತ್ತಿದ್ದು, ಈಗಾಗಲೇ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.

ಸಾರ್ವಜನಿಕರು ಕೆಲವೊಮ್ಮೆ ಸೀಟು ಬೆಲ್ಟ್ ಧರಿಸುವಂತಹ ಮೂಲಭೂತ ರಸ್ತೆ ನಿಯಮಗಳನ್ನು ಉಲ್ಲಂಘಿಸುತ್ತಾರೆ. ಈ ನಿಟ್ಟಿನಲ್ಲಿ ಎಚ್ಚರಿಕೆ ಮೂಡಿಸುವಲ್ಲಿ ಮಂಗಳಮುಖಿಯರು ಯಶಸ್ವಿಯಾಗಿದ್ದಾರೆ.

ಆಯ್ದ ಭಾಗ ಇಲ್ಲಿದೆ...
"ನಿಮ್ಮ ಗಮನ ಈ ಕಡೆಯಿರಲಿ, ನೀವು ಪೈಲಟ್ ತರಹನೇ ಚಾಲನೆ ಮಾಡಲು ಬಯಸಿದ್ದಲ್ಲಿ ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳಬೇಕಾಗುತ್ತದೆ".

"ನಿಮ್ಮ ಕಾರಿನಲ್ಲಿ ಓಕ್ಸಿಜನ್ ಮಾಸ್ಕ್ ಇರುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ನಿಮ್ಮ ಸೀಟುಗಳ ಕೆಳಗಡೆ ಲೈಫ್ ಜಾಕೆಟ್ ಕೂಡಾ ಇರಲ್ಲ ಎಂಬುದನ್ನು ಅರಿಯಿರಿ".

"ಹಾಗಿದ್ದರೂ ನಿಮ್ಮ ಬಳಿ ಸೀಟು ಬೆಲ್ಟ್ ಇಲ್ಲವೇ? ಮತ್ಯಾಕೆ ಧರಿಸುತ್ತಿಲ್ಲ ಪ್ರಿಯೆ? ನಿಮಗೆ ನಾನು ಕಲಿಸಲು ಬಯಸುವೀರಾ?"

ಹೀಗೆ ಆರಂಭವಾಗುವ ಸಂಭಾಷಣೆ ಬಳಿಕ ಹೇಗೆ ಸೀಟು ಬೆಲ್ಟ್ ಧರಿಸಬೇಕು ಎಂಬುದನ್ನು ಹೇಳಿಕೊಡುತ್ತದೆ. ಈ ಭಾಗವನ್ನು ನೀವೇ ಕಣ್ಣಾರೆ ನೋಡಿ ಮಾಹಿತಿ ಪಡೆದುಕೊಳ್ಳುವುದು ಉತ್ತಮವಾದಿತು. (ವೀಡಿಯೋಗಾಗಿ ಅಂತಿಮ ಸ್ಲೈಡರ್‌ನತ್ತ ಭೇಟಿ ಕೊಡಿರಿ)

ನಿಮ್ಮ ಮುದ್ದಾದ ಮುಖ ಅಪಘಾತ ಬಳಿಕ ನೋಡಲು ಚೆನ್ನಾಗಿರಲ್ಲ ಎಂಬುದನ್ನು ಇಲ್ಲಿ ಮಂಗಳಮುಖಿಯರು ಎಚ್ಚರಿಸುತ್ತಾರೆ.

ಈ ನಡುವೆ ಹುಡುಗಿಯೊಬ್ಬರಲ್ಲಿ, "ಹೇ ತುಂಟಾದ ಹುಡುಗಿ, ನಿನ್ನ ಬಾಯ್‌ಫ್ರೆಂಡ್‌ನಲ್ಲಿ ಹೇಳು ಸೀಟು ಬೆಲ್ಟ್ ಧರಿಸಲು" ಎಂಬ ಸಂಭಾಷಣೆ ನಿಜಕ್ಕೂ ಅರ್ಥಪೂರ್ಣವೆನಿಸಿದೆ.

ಈ ವೇಳೆ ವೀಡಿಯೋ ಚಿತ್ರಿಕರಿಸಲು ಪ್ರಯತ್ನಿಸುವ ವ್ಯಕ್ತಿಯೊಬ್ಬರಲ್ಲಿ, "ಹೇ ಸೆಕ್ಸಿ ಹುಡುಗ, ನನ್ನ ಬಳಿ ನಗುವುದನ್ನು ನಿಲ್ಲಿಸು; ಮೊದಲು ಸೀಟು ಬೆಲ್ಟ್ ಧರಿಸು" ಎಂಬುದಾಗಿ ಆಜ್ಞೆ ಕೊಡುತ್ತಾರೆ.

"ಅಂತಿಮವಾಗಿ ನೀವೆಲ್ಲರೂ ಸೀಟು ಬೆಲ್ಟ್ ಧರಿಸಿದ್ದಲ್ಲಿ ನಮ್ಮ ಆಶೀರ್ವಾದ ಇರಲಿದೆ" ಎಂಬ ಸಂದೇಶವನ್ನು ಮಂಗಳಮುಖಿಯರು ಸಾರುತ್ತಾರೆ.

ನಿಜಕ್ಕೂ ಸಾರ್ವಜನಿಕ ಸಾರಿಗೆಯ ಬಗ್ಗೆ ಎಚ್ಚರ ಮೂಡಿಸುವಲ್ಲಿ ಈ ವೀಡಿಯೋ ಯಶಸ್ವಿಯಾಗಿದೆ. ಇದಕ್ಕಾಗಿ ನಾವು ಮಂಗಳಮುಖಿಯರಿಗೆ ಹಾಟ್ಸಪ್ ಹೇಳಲೇ ಬೇಕು.
ಆಕರ್ಷಕ ವೀಡಿಯೋ ವೀಕ್ಷಿಸಿ...


Click it and Unblock the Notifications








