ಎಫ್1 ಚಾಂಪಿಯನ್ ವೆಟಲ್ ಕಸ್ಟಮೈಸ್ಡ್ ಬೈಕ್ ನೋಡಿದ್ರಾ?

By Nagaraja

ಫಾರ್ಮುಲಾ ವನ್ ರೇಸಿಂಗ್ ಟ್ರ್ಯಾಕ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಜರ್ಮನಿಯ ಸೆಬಾಸ್ಟಿಯನ್ ವೆಟಲ್ ಸತತ ನಾಲ್ಕನೇ ಬಾರಿಗೂ ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ.

ಅಂದ ಹಾಗೆ ಈ ಚಾಂಪಿಯನ್ ರೇಸರ್ ಬಳಿ ಕಸ್ಡಮೈಸ್ಡ್ ಬೈಕ್‌ವೊಂದಿದೆ. ಜರ್ಮನಿಯ ವಾಲ್ಜ್ ಹಾರ್ಡ್‌ಕೋರ್ ಸೈಕಲ್ ಕಂಪನಿ ಇದನ್ನು ತಯಾರಿಸಿದೆ.

ಸತತ ಪ್ರಯತ್ನವೇ ಸಾಧನೆಯ ರಹಸ್ಯ ಎಂಬಂತೆ ಪ್ರಸ್ತುತ ವೆಟಲ್ ಮುಟ್ಟಿದ್ದೆಲ್ಲ ಚಿನ್ನವಾಗಿದೆ. ಸದ್ಯ ವಿಶ್ರಾಂತಿಯ ಗುಂಗಿನಲ್ಲಿರುವ ಈ ಚಾಂಪಿಯನ್ ರೇಸರ್‌ನ ಬೈಕ್ ಪ್ರೇಮವನ್ನು ಇಲ್ಲಿ ಬಿಚ್ಚಿಡಲಾಗಿದೆ.

Sebastian Vettel’s Walz Hardcore Cycles Custom Bike

ಮಾರ್ಕಸ್ ವಾಲ್ಜ್ ಎಂಬವರು ಈ ವಿಶೇಷ ಮೋಟಾರ್ ಸೈಕಲ್ ವಿನ್ಯಾಸಗೊಳಿಸಿದ್ದಾರೆ. ಇದು ವಿಶಿಷ್ಟವಾದ ಜರ್ಮನ್ ಲುಕ್ ಪಡೆದುಕೊಂಡಿದೆ.

Sebastian Vettel’s Walz Hardcore Cycles Custom Bike

ಈ ಕಸ್ಟಮೈಸ್ಡ್ ಬೈಕ್ ಅತಿ ಕಡಿಮೆ ಎತ್ತರವನ್ನು ಹೊಂದಿರುತ್ತದೆ. ಇದು ರೈಡರ್‌ಗೆ ಆರಾಮದಾಯಕ ಪಯಣ ಖಾತ್ರಿಪಡಿಸುತ್ತದೆ.

Sebastian Vettel’s Walz Hardcore Cycles Custom Bike

ಪ್ರಸ್ತುತ ವಾಲ್ಜ್ ಬೈಕ್ ಅತಿ ದುಬಾರಿ ಮೋಟಾರ್ ಸೈಕಲ್ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

Sebastian Vettel’s Walz Hardcore Cycles Custom Bike

ಇದರ ಇಂಧನ ಟ್ಯಾಂಕ್‌ನಲ್ಲಿ ರೆಡ್ ಬುಲ್ ರೇಸಿಂಗ್ ಸ್ಟಿಕ್ಕರ್ ಹೆಚ್ಚು ಆಕರ್ಷಕವಾಗಿದೆ. ಹಾಗೆಯೇ ಎರಡು ಚಕ್ರಗಳಲ್ಲಿ ವೆಟಲ್ ಬ್ಯಾಡ್ಜ್ ಲಗತ್ತಿಸಲಾಗಿದೆ.

Sebastian Vettel’s Walz Hardcore Cycles Custom Bike

ಹಾಗೆಯೇ ವೆಟಲ್ ಎಫ್1 ಕಾರಿಗೆ ಸಮಾನವಾದ ನೀಲಿ ಬಣ್ಣವನ್ನು ಇದಕ್ಕೆ ಬಳಿಯಲಾಗಿದೆ.

Sebastian Vettel’s Walz Hardcore Cycles Custom Bike

ಕಡಿಮೆ ಎತ್ತರದ ಸಿಟ್ಟಿಂಗ್ ವ್ಯವಸ್ಥೆ ಹೊಂದಿರುವುದು ಇನ್ನೊಂದು ವೈಶಿಷ್ಟ್ಯವಾಗಿದೆ. ಅಂದರೆ ನೆಲದಿಂದ 470ಎಂಎಂ ಎತ್ತರದಲ್ಲಿ ಸೀಟು ಲಗತ್ತಿಸಲಾಗಿದೆ.

Sebastian Vettel’s Walz Hardcore Cycles Custom Bike

ಅಂದ ಹಾಗೆ 2010ರಲ್ಲಿ ಎಫ್1 ವಿಶ್ವ ಚಾಂಪಿಯನ್‌ಶಿಪ್ ಮೊದಲ ಬಾರಿಗೆ ಗೆದ್ದಾಗ ತಮ್ಮದಾಗಿಸಿಕೊಂಡಿದ್ದರು.

Sebastian Vettel’s Walz Hardcore Cycles Custom Bike

ಇನ್ನೊಂದು ಕುತೂಹಲಕಾರಿ ಅಂಶವೆಂದರೆ ಎಫ್1 ವಿಶ್ವ ಚಾಂಪಿಯನ್ ಗೆದ್ದ ಅತಿ ಕಿರಿಯ ರೇಸರೆಂಬ ಖ್ಯಾತಿಗೆ ಪಾತ್ರವಾಗಿರುವ ವೆಟಲ್ ವಾಲ್ಜ್ ಹಾರ್ಡ್‌ಕೋರ್ ಸೈಕಲ್ ಹೊಂದಿರುವ ಅತಿ ಕಿರಿಯ ವ್ಯಕ್ತಿ ಕೂಡಾ ಆಗಿದ್ದಾರೆ.

More from DriveSpark

Article Published On: Tuesday, November 26, 2013, 7:01 [IST]
English summary
Sebastian Vettel’s Walz Hardcore Cycles Custom Bike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+