ರೋಡ್ ಟೆಸ್ಟಿಂಗ್ ವೇಳೆ ಮಹಿಳೆಗೆ ಗುದ್ದಿದ್ದ ಡ್ರೈವರ್‍‍ಲೆಸ್ ಬಸ್

ಡ್ರೈವರ್‍‍ಲೆಸ್ ಬಸ್‍‍ವೊಂದು ಆಸ್ಟ್ರಿಯಾದಲ್ಲಿ ಅಪಘಾತಕ್ಕೆ ಒಳಗಾಗಿದೆ. ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದಲ್ಲಿ ಎರಡು ನಾವ್ಯ ಡ್ರೈವರ್‍‍ಲೆಸ್ ಬಸ್‍‍ಗಳನ್ನು ಸಾರ್ವಜನಿಕ ಸಾರಿಗೆಗಾಗಿ ಪರೀಕ್ಷಿಸಲಾಗುತ್ತಿದೆ. ಅದರಲ್ಲಿ ಈ ಬಸ್ ಕೂಡ ಒಂದು. ಈ ಬಸ್ ಪಾದಚಾರಿಗಳಿಗೆ ಗುದ್ದಿದೆ. ಇದರಿಂದಾಗಿ ಅಧಿಕಾರಿಗಳು ಪರೀಕ್ಷೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ತನಿಖೆ ನಡೆಸುತ್ತಿದ್ದಾರೆ.

ರೋಡ್ ಟೆಸ್ಟಿಂಗ್ ವೇಳೆ ಮಹಿಳೆಗೆ ಗುದ್ದಿದ್ದ ಡ್ರೈವರ್‍‍ಲೆಸ್ ಬಸ್

ಹಲವು ವರ್ಷಗಳಿಂದ ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳು ಹಾಗೂ ಡ್ರೈವರ್‍‍ಲೆಸ್ ವಾಹನಗಳು ಬರಲಿವೆ ಎಂಬುದನ್ನು ಕೇಳುತ್ತಲೇ ಇದ್ದೇವೆ. ಈ ವಾಹನಗಳು ಈಗಾಗಲೇ ಮಾರುಕಟ್ಟೆಗೆ ಬಂದಾಗಿದೆ. ಪ್ರಪಂಚದ ಅನೇಕ ದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಶುರುಮಾಡಲಾಗಿದೆ.

ರೋಡ್ ಟೆಸ್ಟಿಂಗ್ ವೇಳೆ ಮಹಿಳೆಗೆ ಗುದ್ದಿದ್ದ ಡ್ರೈವರ್‍‍ಲೆಸ್ ಬಸ್

ಡ್ರೈವರ್‍‍ಲೆಸ್ ವಾಹನಗಳು ಅಭಿವೃದ್ಧಿಯ ಕೊನೆಯ ಹಂತದಲ್ಲಿವೆ. ಲೆವೆಲ್ 3 ಡ್ರೈವರ್‍‍ಲೆಸ್ ವಾಹನಗಳು ಮುಂದುವರೆದೆ ದೇಶಗಳಲ್ಲಿ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆಯಲ್ಲಿವೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಈ ವಾಹನಗಳ ಬಗ್ಗೆ ಸಾಕಷ್ಟು ಆಸಕ್ತಿಯನ್ನು ಹೊಂದಿವೆ.

ರೋಡ್ ಟೆಸ್ಟಿಂಗ್ ವೇಳೆ ಮಹಿಳೆಗೆ ಗುದ್ದಿದ್ದ ಡ್ರೈವರ್‍‍ಲೆಸ್ ಬಸ್

ಲೆವೆಲ್ 3 ಡ್ರೈವರ್‍‍ಲೆಸ್ ವಾಹನಗಳು ಸಾಮಾನ್ಯ ವಾಹನಗಳಂತೆ ಕಾಣುತ್ತವೆ. ಈ ವಾಹನಗಳು, ಸ್ಟೀಯರಿಂಗ್ ವ್ಹೀಲ್ ಹಾಗೂ ಚಾಲಕರು ವಾಹನಗಳ ಮೇಲೆ ಹಿಡಿತ ಸಾಧಿಸಲು ಪೆಡಲ್‌ಗಳನ್ನು ಹೊಂದಿವೆ. ನಿರ್ಜನ ಪ್ರದೇಶ ಹಾಗೂ ಎಕ್ಸ್‌ಪ್ರೆಸ್‌ವೇಗಳಲ್ಲಿ ಮಾತ್ರ ವಾಹನವು ತನ್ನನ್ನು ತಾನೇ ಓಡಿಸಲು ಸಾಧ್ಯವಾಗುತ್ತದೆ.

ರೋಡ್ ಟೆಸ್ಟಿಂಗ್ ವೇಳೆ ಮಹಿಳೆಗೆ ಗುದ್ದಿದ್ದ ಡ್ರೈವರ್‍‍ಲೆಸ್ ಬಸ್

ಈ ವಾಹನವು ಡ್ರೈವರ್‍‍ಲೆಸ್ ಮೋಡ್‌ನಲ್ಲಿ ಚಾಲನೆ ಮಾಡಲು ಲಿಡಾರ್ ಹಾಗೂ ಇತರ ಸೆನ್ಸಾರ್‍ ತಂತ್ರಜ್ಞಾನಗಳನ್ನು ಅವಲಂಬಿಸಿದೆ. ಆದರೂ, ಯಾವುದೇ ಕ್ಷಣದಲ್ಲಿ ವಾಹನದ ನಿಯಂತ್ರಣವನ್ನು ತೆಗೆದುಕೊಳ್ಳಲು ಚಾಲಕನು ಸಿದ್ಧನಾಗಿರಬೇಕು. ಆದ ಕಾರಣ ಕಂಪನಿಗಳು, ಚಾಲಕನ ಅವಶ್ಯಕತೆಯಿಲ್ಲದ ಲೆವೆಲ್ 5 ಡ್ರೈವರ್‍‍ಲೆಸ್ ವಾಹನಗಳನ್ನು ಅಭಿವೃದ್ಧಿ ಪಡಿಸುತ್ತಿವೆ.

ರೋಡ್ ಟೆಸ್ಟಿಂಗ್ ವೇಳೆ ಮಹಿಳೆಗೆ ಗುದ್ದಿದ್ದ ಡ್ರೈವರ್‍‍ಲೆಸ್ ಬಸ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಹಲವು ಕಂಪನಿಗಳು ಲೆವೆಲ್ 5 ಡ್ರೈವರ್‍‍ಲೆಸ್ ವಾಹನಗಳನ್ನು ಪರೀಕ್ಷಿಸುತ್ತಿವೆ. ನಾವ್ಯ ಎಸ್ಎಎಸ್ ಬಸ್ ಸಹ ಅಂತಹ ಒಂದು ಸ್ವಾಯತ್ತ ವಾಹನವಾಗಿದ್ದು ಅದನ್ನು ಪರೀಕ್ಷಿಸಲಾಗುತ್ತಿದೆ. ವಿಯೆನ್ನಾದಲ್ಲಿ ಕಳೆದ ತಿಂಗಳಿನಿಂದ ಆಸ್ಟ್ರಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಸೀಮನ್ಸ್ ಮೊಬಿಲಿಟಿಗಳ ಜೊತೆ ಸೇರಿ ಈ ಚಾಲಕರಹಿತ ಬಸ್ಸುಗಳನ್ನು ಪರೀಕ್ಷಿಸಲಾಗುತ್ತಿದೆ.

ರೋಡ್ ಟೆಸ್ಟಿಂಗ್ ವೇಳೆ ಮಹಿಳೆಗೆ ಗುದ್ದಿದ್ದ ಡ್ರೈವರ್‍‍ಲೆಸ್ ಬಸ್

ಈ ಅಪಘಾತ ನಡೆದ ಸಂದರ್ಭದಲ್ಲಿ ಬಸ್‌ ಅನ್ನು ವಿಶ್ವಾಸಾರ್ಹತೆ ಹಾಗೂ ಅಪಘಾತ ಮುಕ್ತ ಡ್ರೈವಿಂಗ್ ಸಾಬೀತುಪಡಿಸಲು ಪರೀಕ್ಷಿಸಲಾಗುತ್ತಿತ್ತು. ವಾಹನವು 30 ವರ್ಷದ ಮಹಿಳೆಗೆ ಗುದ್ದಿದ ಸಂದರ್ಭದಲ್ಲಿ ಗಂಟೆಗೆ 12 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು ಎಂದು ವರದಿಗಳು ತಿಳಿಸಿವೆ.

ರೋಡ್ ಟೆಸ್ಟಿಂಗ್ ವೇಳೆ ಮಹಿಳೆಗೆ ಗುದ್ದಿದ್ದ ಡ್ರೈವರ್‍‍ಲೆಸ್ ಬಸ್

ಈ ಅಪಘಾತವು ನಡೆದಾಗ ಬಸ್ ಕಡಿಮೆ ವೇಗದಲ್ಲಿದ್ದ ಕಾರಣ, ಮಹಿಳೆಗೆ ದೊಡ್ಡ ಪ್ರಮಾಣದ ಗಾಯಗಳಾಗಿಲ್ಲ. ಆದರೆ ವಿಯೆನ್ನಾದ ಅಧಿಕಾರಿಗಳು ತಾತ್ಕಾಲಿಕವಾಗಿ ಪರೀಕ್ಷೆಯನ್ನು ಸ್ಥಗಿತಗೊಳಿಸಿದ್ದಾರೆ. ಡ್ರೈವರ್‍‍ಲೆಸ್ ಬಸ್ ನ್ಯಾವಿಗೇಷನ್ ಹಾಗೂ ಸುರಕ್ಷ ಫೀಚರ್‍‍‍ಗಳನ್ನು ಉತ್ತಮಗೊಳಿಸುತ್ತದೆ ಎಂದು ನಾವ್ಯ ಹೇಳಿಕೆಯಲ್ಲಿ ತಿಳಿಸಿದೆ.

ರೋಡ್ ಟೆಸ್ಟಿಂಗ್ ವೇಳೆ ಮಹಿಳೆಗೆ ಗುದ್ದಿದ್ದ ಡ್ರೈವರ್‍‍ಲೆಸ್ ಬಸ್

ಸ್ಟೀಯರಿಂಗ್ ವ್ಹೀಲ್ ಅಥವಾ ಪೆಡಲ್‍‍ಗಳಿಲ್ಲದ, ಡ್ರೈವರ್‍‍ಲೆಸ್ ಬಸ್ ವಿವಿಧ ರೀತಿಯ ಸುಧಾರಿತ ಟೆಕ್ನಾಲಜಿಗಳನ್ನು ಕೂಡಿಸಿ ಪರಿಣಾಮಕಾರಿ ಮಾರ್ಗದರ್ಶನ ಹಾಗೂ ಪತ್ತೆ ಸಿಸ್ಟಂ ಬಳಸುತ್ತದೆ. ಲಿಡಾರ್ ಸೆನ್ಸಾರ್, ಕ್ಯಾಮೆರಾ, ಜಿಪಿಎಸ್ ಆರ್‍‍ಟಿಕೆ, ಐಎಂಯು ಹಾಗೂ ಓಡೋಮೆಟ್ರಿಯ ಡೇಟಾವನ್ನು ಒಟ್ಟಿಗೆ ವಿಲೀನಗೊಳಿಸಲಾಗುತ್ತದೆ.

ರೋಡ್ ಟೆಸ್ಟಿಂಗ್ ವೇಳೆ ಮಹಿಳೆಗೆ ಗುದ್ದಿದ್ದ ಡ್ರೈವರ್‍‍ಲೆಸ್ ಬಸ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಡ್ರೈವರ್‍‍ಲೆಸ್ ವಾಹನಗಳು ಈಗಾಗಲೇ ಬಿಡುಗಡೆಯಾಗಿವೆ. ಇವುಗಳು ದಿನ ನಿತ್ಯದ ಬಳಕೆಗೆ ಬರುವುದಕ್ಕೆ ಇನ್ನೂ ಹೆಚ್ಚಿನ ಸಮಯ ಬೇಕಾಗುತ್ತದೆ. ಈ ಘಟನೆ ನಡೆದಾಗ ಬಸ್ ಕಡಿಮೆ ವೇಗದಲ್ಲಿದ್ದ ಕಾರಣ ಹೆಚ್ಚಿನ ಹಾನಿಯಾಗಿಲ್ಲ. ಬಸ್ ಹೆಚ್ಚಿನ ವೇಗದಲ್ಲಿದ್ದರೆ ಇನ್ನೂ ಹೆಚ್ಚಿನ ಹಾನಿಯಾಗುತ್ತಿತ್ತು.

Article Published On: Thursday, July 25, 2019, 11:32 [IST]
English summary
Self-Driving Bus Crashes Into Woman — Are We Ready For Autonomous Vehicles? - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+