ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರು ಅಡ್ಡಹಾಕಿ ಮನೆಯ ಪಾರ್ಕಿಂಗ್ ಸಮಸ್ಯೆ ಬಗೆಹರಿಸುವಂತೆ ವ್ಯಕ್ತಿಯ ಹೈ ಡ್ರಾಮ
ಹಲವು ಬಾರಿ ಪ್ರಜೆಗಳು ತಮ್ಮ ಸಮಸ್ಯೆಗಳನ್ನು ನಾನಾ ರೀತಿಯಲ್ಲಿ ಜನಪ್ರತಿನಿಧಿಗಳ ಮುಂದೆ ತೋಡಿಕೊಳ್ಳುತ್ತಾರೆ. ಅದರಲ್ಲಿ ಕೆಲವರು ಗಂಟೆಗಟ್ಟಲೆ ರಾಜಕೀಯ ನಾಯಕರ ಮನೆಯ ಮುಂದೆ ಕಾದು ನಿಂತು ತಮ್ಮ ಸಮಸ್ಯೆಗಳನ್ನು ತೋಡಿಕೊಂಡರೆ ಇನ್ನು ಕೆಲವರು ಬಲವಂತವಾಗಿ ರಾಜಕೀಯ ನಾಯಕರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ.
ಇದೇ ರೀತಿಯ ಘಟನೆಯೊಂದು ಇದೀಗ ಕರ್ನಾಟಕದಲ್ಲಿ ನಡೆದಿದೆ. ಹೌದು, ವ್ಯಕ್ತಿಯೊಬ್ಬ ತನ್ನ ಸಮಸ್ಯೆಯನ್ನು ಹೇಳಿಕೊಳ್ಳುವುದಕ್ಕಾಗಿ ಮುಖ್ಯಮಂತ್ರಿಯ ವಾಹನವನ್ನೇ ಅಡ್ಡ ಹಾಕಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದ್ದು ಎಲ್ಲರೂ ಆಶ್ಚರ್ಯದಿಂದ ಮೂಗಿನ ಮೇಲೆ ಬೆರಳಿಡುವಂತಾಗಿದೆ. ನಂಬಲು ಕಷ್ಟವಾದರೂ ಈ ರೀತಿಯ ಘಟನೆ ನಡೆದಿರುವುದಂತೂ ನೂರಕ್ಕೆ ನೂರರಷ್ಟು ಸತ್ಯ.

ಈ ಘಟನೆ ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಗಳೂರಿನ ನಿವಾಸವಿರುವ ಕುಮಾರ ಕೃಪಾ ರೋಡ್‌ನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಮುಖ್ಯಮಂತ್ರಿ (CM Siddarmaiah) ನಿವಾಸದ ಮುಂದೆ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ಮುಖ್ಯಮಂತ್ರಿ ಮನೆಯಿಂದ ಹೊರಗೆ ಬರುವ ವೇಳೆ ಅವರ ಕಾರನ್ನು ಅಡ್ಡಗಟ್ಟಿ ತನ್ನ ಸಮ್ಯೆಯನ್ನು ಬಗೆಹರಿಸುವಂತೆ ಹೈ ಡ್ರಾಮಾ ಮಾಡಿದ್ದಾನೆ. ಈ ವೇಳೆ ಕೂಡಲೇ ಅಲ್ಲಿ ಜನರು ಸೇರಿದ್ದಾರೆ ಎಂದು ತಿಳಿದು ಬಂದಿದೆ.
ಮಾಹಿತಿಗಳ ಪ್ರಕಾರ ಮುಖ್ಯಮಂತ್ರಿಗಳ ಮನೆಯ ಎದುರುಗಡೆ ವಾಸಿಸುತ್ತಿದ್ದ ಹಿರಿಯ ನಾಗರೀಕರೊಬ್ಬರು ಮುಖ್ಯ ಮಂತ್ರಿಯವರ ಕಾರನ್ನು ಅಡ್ಡ ಹಾಕಿದ್ದೆಂದು ತಿಳಿದು ಬಂದಿದೆ. ತನ್ನ ಮನೆಯ ಪಾರ್ಕಿಂಗ್ ಸಮಸ್ಯೆಯನ್ನು ಬಗೆ ಹರಿಸುವಂತೆ ಈತ ಮುಖ್ಯಮಂತ್ರಿಗಳ ಬಳಿ ಕೇಳಿಕೊಂಡಿದ್ದು ಇದಕ್ಕಾಗಿ ಆತ ಈ ರೀತಿ ನಡೆದುಕೊಂಡಿದ್ದಾನೆ ಎನ್ನಲಾಗಿದೆ. ಆದರೆ ಇದಕ್ಕೆ ಕಾರಣ ಸಹ ಮುಖ್ಯ ಮತ್ರಿಯೇ, ಅವರಿಂದಾಗಿ ನಾನು ಪಾರ್ಕಿಂಗ್ ಸಮಸ್ಯೆಯನ್ನು ಎದುರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಇನ್ನು ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಆ ಹಿರಿಯ ನಾಗರೀಕ, ನಾನು ಮುಖ್ಯ ಮಂತ್ರಿ ನಿವಾಸದ ಎದುರುಗಡೆ ವಾಸ ಮಾಡುತ್ತಿದ್ದು, ಮುಖ್ಯಮಂತ್ರಿಗಳಿಂದ ನನಗೆ ಪಾರ್ಕಿಂಗ್ ಸಮಸ್ಯೆ ಎದುರಾಗುತ್ತಿದೆ. ಪ್ರತಿನಿತ್ಯ ಮುಖ್ಯಮಂತ್ರಿಗಳನ್ನು ನೋಡಲು ಅನೇಕ ಜನರು ಇಲ್ಲಿಗೆ ಆಗಮಿಸುತ್ತಿದ್ದು ಇವರು ಎಲ್ಲಿ ಬೇಕೆಂದರೆ ಅಲ್ಲಿ ತಮ್ಮ ವಾಹನಗಳನ್ನು ಪಾರ್ಕ್ ಮಾಡುತ್ತಿದ್ದಾರೆ. ಈ ಕುರಿತಾಗಿ ಹಲವು ಬಾರಿ ಸಂಭಂಧ ಪಟ್ಟವರ ಗಮನಕ್ಕೆ ತಂದಿದ್ದು, ಇದರಿಂದ ಯಾವುದೇ ಪ್ರಯೋಜನವಾಗಿಲ್ಲ.
ಇವರ ವಾಹನಗಳು ನನ್ನ ಮನೆಯ ಗೇಟ್ ಮುಂದೆ ಅಡ್ಡವಾಗಿ ಪಾರ್ಕ್ ಮಾಡುವುದರಿಂದ ನನಗೆ ಮತ್ತು ನನ್ನ ಮನೆಯವರಿಗೆ ವಾಹನಗಳನ್ನು ಹೊರ ತರಲು ಸಾಧ್ಯವಾಗುತ್ತಿಲ್ಲ. ಇದು ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು ಇದದಿಂದ ಬೇಸತ್ತ ನಾನು ಇವತ್ತು ಮುಖ್ಯಮಂತ್ರಿಗಳ ಕಾರು ಅಡ್ಡಹಾಕಿ ಕೂಡಲೇ ನನ್ನ ಸಮಸ್ಯೆಯನ್ನು ಬಗೆಹರಿಸುವಂತೆ ಕೇಳಿಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ. ಈ ರೀತಿ ಇಷ್ಟೊಂದು ರಿಸ್ಕ್ ತೆಗೆದುಕೊಂಡು ಕೊನೆಗೂ ಆ ವ್ಯಕ್ತಿ ತನ್ನ ಸಮಸ್ಯೆಯನ್ನು ಮುಖ್ಯಮಂತ್ರಿಗಳ ಬಳಿ ಹೇಳಿಕೊಂಡಿದ್ದಾರೆ.
ಇನ್ನು ಈ ವ್ಯಕ್ತಿ ಇದಕ್ಕೂ ಹಿಂದೆ ಹಲವು ಬಾರಿ ಅಲ್ಲಿನ ಜನ ಮತ್ತು ಸಂಭಂಧ ಪಟ್ಟ ಅಧಿಕಾರಿಗಳ ಬಳಿ ತನ್ನ ಮನೆಯ ಮುಂದೆ ವಾಹನಗಳನ್ನು ನಿಲ್ಲಿಸದಂತೆ ತಾಳ್ಮೆಯಿಂದ ಕೇಳಿಕೊಮಡಿದ್ದಾರೆ. ಆದರೆ ಸಂಭಂಧಪಟ್ಟ ವ್ಯಕ್ತಿಗಳು ಇದನ್ನು ಕಿವಿಗೆ ಹಾಕಿಕೊಳ್ಳದೇ ಇದ್ದುದರಿಂದ ಬೇರೆ ದಾರಿ ಕಾಣದೆ ಆ ಹಿರಿಯ ನಾಗರೀಕ ತಮ್ಮ ಸಮಸ್ಯೆಯನ್ನು ಈ ಒಂದು ಮಾರ್ಗದ ಮೂಲಕವೇ ಮುಖ್ಯಮಂತ್ರಿಗಳ ಗಮನಕ್ಕೆ ತರಲು ಸಾಧ್ಯ ಎಂದು ಮುಖ್ಯಮಂತ್ರಿಗಳ ಕಾರನ್ನು ಅಡ್ಡ ಹಾಕಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications