ಒಂದೇ ಬೈಕ್‌ನಲ್ಲಿ 7 ಜನ ಮಕ್ಕಳನ್ನು ಕೊಂಡೊಯ್ದ ಭೂಪ: ಬೆನ್ನಟ್ಟಿ ಪತ್ತೆಹಚ್ಚಿದ ಪೊಲೀಸ್‌ ಮಾಡಿದ್ದೇನು ಗೊತ್ತಾ?

ಭಾರತದಲ್ಲಿ ಟ್ರಾಫಿಕ್‌ ನಿಯಮಗಳನ್ನು ಉಲ್ಲಂಘಿಸುವುದಕ್ಕೆ ಯಾವುದೇ ಕಡಿಮೆಯಿಲ್ಲ. ಪ್ರತಿದಿನ ಲಕ್ಷಾಂತರ ಮಂದಿ ದೇಶದಾದ್ಯಂತ ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಲೇ ಇರುತ್ತಾರೆ. ಕೆಲವೊಮ್ಮೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಿಧಾನ ಅತಿರೇಕಕ್ಕೆ ಹೋಗುವುದನ್ನು ನಾವು ನಾನಾ ಕಡೆ, ಸಾಮಾಜಿಕ ಜಾಲತಾಣಗಳಲ್ಲಿ ಹಲವು ಉದಾಹರಣೆ ಸಹಿತ ಕಂಡಿದ್ದೇವೆ.

ಈಗ ಇದೇ ರೀತಿಯ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡುತ್ತಿದೆ. ಭೂಪನೊಬ್ಬ ಸ್ಕೂಟರ್‌ ಒಂದರಲ್ಲಿ 7 ಜನ ಮಕ್ಕಳನ್ನು ಹಿಂಬದಿ ಸವಾರರಾಗಿ (Bike Ride) ಕೂರಿಸಿಕೊಂಡು ಹೆದ್ದಾರಿಯಲ್ಲಿ ಹೋಗುವ ಮೂಲಕ ವೈರಲ್‌ ಆಗಿದ್ದಾನೆ. ಹಿಂಬದಿ ಬರುತ್ತಿದ್ದ ಬೇರೊಂದು ವಾಹನದ ಪ್ರಯಾಣಿಕರೊಬ್ಬರು ಈ ವಿಡಿಯೋವನ್ನು ರೆಕಾರ್ಡ್‌ ಮಾಡಿದ್ದಾರೆ.

7 Children As Pillion On Bike Ride

ಮುಂಬೈನಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಕಂಡ ಪೊಲೀಸರು ಸ್ವಯಂಪ್ರೇರಿತರಾಗಿ ಈತನ ಮೇಲೆ ಕೇಸ್ ದಾಖಲಿಸಿಕೊಂಡಿದ್ದು ಘಟನೆ ಕಳೆದು ಐದು ದಿನಗಳ ಬಳಿಕ ಮುಂಬೈ ಪೊಲೀಸ್‌ ಈ ಕೃತ್ಯವೆಸಗಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಇನ್ನು ಬೈಕ್‌ನಲ್ಲಿದ್ದ ಏಳೂ ಮಂದಿಗಳಲ್ಲಿ ಒಬ್ಬರೂ ಸಹ ಹೆಲ್ಮೆಟ್‌ ಧರಿಸದೇ ಇರುವುದು ಮತ್ತೊಂದು ಅಪರಾಧವಾಗಿದೆ.

ಈ ಘಟನೆಯ ಕುರಿತಾಗಿ ಪ್ರತಿಕ್ರಿಯಿಸಿರುವ ಮುಂಬೈ ಪೊಲೀಸ್‌, ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯಾದ ಬೇಜವಾಬ್ದಾರಿತನದ ವರ್ತನೆಗಳನ್ನು ಖಂಡಿತಾ ಕ್ಷಮಿಸಲು ಸಾಧ್ಯವಿಲ್ಲ. ಆ ಬೈಕ್‌ ಚಲಾಯಿಸುತ್ತಿದ್ದ ವ್ಯಕ್ತಿ ಏಳೂ ಜನ ಮಕ್ಕಳ ಪ್ರಾಣವನ್ನು ಅಪಾಯಕ್ಕಿಟ್ಟದ್ದು ಅಲ್ಲದೇ ಸಾರ್ವಜನಿಕರ ಪ್ರಾಣವನ್ನೂ ಅಪಾಯಕ್ಕೆ ದೂಡುವಂತೆ ವರ್ತಿಸಿದ್ದಾನೆ.

7 Children As Pillion On Bike Ride

ಹಾಗಾಗಿ ನಾವು ಇದನ್ನು ಒಂದು ಗಂಭೀರ ಪ್ರಕರಣವಾಗಿ ಪರಿಗಣಿಸಿದ್ದು ಈತನ ಮೇಲೆ ಐಪಿಸಿ ಸೆಕ್ಷನ್‌ 308 ರಂತೆ ಪ್ರಕರಣವನ್ನು ದಾಖಲಿಸಿದ್ದು ಈತನಿಗೆ ತಕ್ಕ ಶಿಕ್ಷೆಯಾಗುವಂತೆ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ. ಇನ್ನು ಮಹಾರಾಷ್ಟ್ರದಲ್ಲಿ ಹೆಲ್ಮೆಟ್‌ ಇಲ್ಲದೇ ಬೈಕ್‌ ಚಲಾಯಿಸುವುದು ಹೆಚ್ಚಾಗಿದ್ದು ಕಳೆದ ಒಂದು ವರ್ಷವೇ ಹೆಲ್ಮೆಟ್‌ ಇಲ್ಲದೇ ಪ್ರಾಣಬಿಟ್ಟವರ ಸಂಖ್ಯೆ 7700 ಕ್ಕೂ ದಾಟಿದೆ.

ವರದಿಗಳ ಪ್ರಕಾರ ಮಹಾರಾಷ್ಟ್ರ ರಾಜ್ಯದಲ್ಲಿ ಕಳೆದ ವರ್ಷ 15000 ಪ್ರಾಣಗಳು ರಸ್ತೆ ಅಪಾಯದಲ್ಲಿ ಹಾರಿ ಹೋಗಿದ್ದು, ಇದರಲ್ಲಿ ಅರ್ಧದಷ್ಟು ಬೈಕ್ ಸವಾರರೇ ಎಂಬುದು ನಿಜಕ್ಕೂ ಚಿಂತಾಜನಕವಾದ ವಿಷಯ. ಇದರಲ್ಲಿ ಬಹುತೇಕ ಮಂದಿ ಬೈಕ್‌ ಚಲಾಯಿಸುವಾಗ ಹೆಲ್ಮೆಟ್‌ ಧರಿಸದೇ ಅಪಘಾತವಾಗುವ ಸಂಧರ್ಭದಲ್ಲಿ ತಲೆಗೆ ಏಟು ಬಿದ್ದು ಪ್ರಾಣಪಕ್ಷಿ ಹಾರಿ ಹೋಗಿದ್ದೇ ಹೆಚ್ಚು.

ಇನ್ನು ಹೆಲ್ಮೆಟ್‌ ಇಲ್ಲದೇ ಬೈಕ್‌ ಚಲಾಯಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದರೂ ಇದನ್ನು ಪಾಳಿಸುವವರ ಸಂಕ್ಯೆ ಮಹಾರಾಷ್ಟ್ರದಲ್ಲಿ ಕಡಿಮೆಯೇ. ಮುಂಬೈನಂತಹ ಮಹಾ ನಗರಗಳಲ್ಲೇ ಈ ರೀತಿಯ ಘಟನೆ ಸಂಭವಿಸುತ್ತಿದ್ದು, ನಾವು ಇನ್ನು ಗ್ರಾಮೀಣ ಭಾಗದ ಜನರ ಬಗ್ಗೆ ಯೋಚಿಸುವುದೂ ಸಹ ಕಷ್ಟವೇ ಸರಿ ಎನ್ನಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, June 26, 2023, 18:44 [IST]
English summary
Seven childrens in bike mumbai police arrested details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+