ಡ್ರೈವಿಂಗ್ ಬಗ್ಗೆ ಚಾಲಕರು ತಿಳಿದಿರಬೇಕಾದ 7 ಸ್ವಾರಸ್ಯಕರ ಅಂಶಗಳು

By Nagaraja

ಆಟೋಮೊಬೈಲ್ ಇಲ್ಲದ ಜಗತ್ತನ್ನು ಊಹಿಸಲು ಸಾಧ್ಯವಿಲ್ಲ. ವರ್ಷಗಳು ಉರುಳಿದಂತೆ ವಾಹನ ಕ್ಷೇತ್ರದಲ್ಲಿ ಹಲವಾರು ಕ್ರಾಂತಿಕಾರಿ ಬದಲಾವಣೆಗಳು ಕಂಡುಬಂದಿದ್ದು, ಹೊಸ ಹೊಸ ತಂತ್ರಜ್ಞಾನಗಳ ಅವಿಷ್ಕಾರವಾಗಿದೆ.

ವಾಹನ ಲೋಕದ 25 ಸತ್ಯಾಸತ್ಯತೆಗಳ ಬಗ್ಗೆ ಅರಿಯಿರಿ

ವಾಹನಗಳ ಬಗ್ಗೆ ತಿಳಿದುಕೊಳ್ಳುವ ವಿಚಾರಗಳು ಹಲವು. ಇದೊಂದು ಪದಕೋಶದ ಭಂಡಾರವಿದ್ದಂತೆ. ಒಳಗಡೆ ತೆರಳಿದಂತೆ ಮತ್ತಷ್ಟು ಸ್ವಾರಸ್ಯಕರ ವಿಚಾರಗಳು ಬಯಲಾಗುತ್ತಿದೆ. ಪ್ರಸ್ತುತ ಲೇಖನದಲ್ಲಿ ಪ್ರತಿಯೊಬ್ಬ ಚಾಲಕನೂ ತಿಳಿದಿರಬೇಕಾದ ಕೆಲವು ವಿಚಾರಗಳನ್ನು ಬಯಲುಗೊಳಿಸಲಿದ್ದೇವೆ.

ವೃತ್ತಾಕಾರದ ಜಂಕ್ಷನ್

ವೃತ್ತಾಕಾರದ ಜಂಕ್ಷನ್

ನಾಲ್ಕು ರಸ್ತೆಗಳು ಸೇರುವ ವೃತ್ತಾಕಾರದ ಜಂಕ್ಷನ್ ಗಳನ್ನು ಎಲ್ಲರೂ ನೋಡಿರುತ್ತೀರಾ! ಆದರೆ ನಿಮಗಿದು ಗೊತ್ತೇ? ವಿಶ್ವದಲ್ಲಿರುವ ಒಟ್ಟು ವೃತ್ತಾಕಾರಾದ ಜಂಕ್ಷನ್ ಗಳ ಪೈಕಿ ಅರ್ಧದಷ್ಟು ಫ್ರಾನ್ಸ್ ನಲ್ಲಿದೆ.

ಬಲ ಬದಿಯಲ್ಲಿ ಚಲಿಸಿ

ಬಲ ಬದಿಯಲ್ಲಿ ಚಲಿಸಿ

1752ನೇ ಇಸವಿಯಲ್ಲಿ ರಷ್ಯಾ ಸಾಮ್ರಾಜ್ಞಿ ಎಲಿಜಬೆತ್, ಬಲಬದಿಯಲ್ಲಿ ವಾಹನ ಚಾಲನೆ ಮಾಡುವುದಕ್ಕೆ ಸಂಬಂಧಪಟ್ಟಂತೆ ಮೊದಲ ಬಾರಿಗೆ ನಿಯಮ ರೂಪಿಸಿದ್ದರು. ರಷ್ಯಾದಲ್ಲಿ ಸಂಚರಿಸುವ ವಾಹನವೆಲ್ಲ ಬಲಬದಿಯಲ್ಲಿ ಚಲಿಸುವಂತೆ ಈಕೆ ಆಜ್ಞಾಪಿಸಿದ್ದರು. ನೆಪೊಲಿಯನ್ ಬೊನಪಾರ್ಟ್ ಆಡಳಿತದ ವರೆಗೂ ಯುರೋಪ್ ನ ಬಹುತೇಕ ಸ್ಥಳಗಳಲ್ಲಿ ಇದೇ ನಿಮಯವನ್ನು ಪಾಲಿಸಿಕೊಂಡು ಬರಲಾಗಿದೆ. ಈಗ 165 ರಾಷ್ಟ್ರಗಳು ಬಲಬದಿಯ ಮತ್ತು ಭಾರತ ಸೇರಿದ 75 ರಾಷ್ಟ್ರಗಳು ಎಡಬದಿಯ ವಾಹನ ಚಾಲನೆಯನ್ನು ಪಾಲಿಸುತ್ತಿದೆ.

03. ಓವರ್ ಸ್ಪೀಡ್ ದಂಡ

03. ಓವರ್ ಸ್ಪೀಡ್ ದಂಡ

2003ರಲ್ಲಿ ಓವರ್ ಸ್ಪೀಡ್ ಗಾಗಿ ಅತಿ ಹೆಚ್ಚು ದಂಡವನ್ನು ಜೂಸಿ ಸಲೊನೊಜಾ ಎಂಬವರ ಮೇಲೆ ವಿಧಿಸಲಾಗಿತ್ತು. 40 ಕೀ.ಮೀ. ವೇಗಮಿತಿಯ ಪ್ರದೇಶದಲ್ಲಿ 80 ಕೀ.ಮೀ. ವೇಗದಲ್ಲಿ ಸಂಚರಿಸಿದ ಅಪರಾಧಕ್ಕಾಗಿ ಜೂಸಿ ಅವರ ಮೇಲೆ 1.7 ಲಕ್ಷ ಯುರೋ ದಂಡ (1.3 ಕೋಟಿ ರು.) ವಿಧಿಸಲಾಗಿತ್ತು. ವಿಶೇಷವೆಂದರೆ ಫಿನ್ ಲ್ಯಾಂಡ್ ನಲ್ಲಿ ಸವಾರನ ಆದಾಯ, ಆಸ್ತಿ ಇತ್ಯಾದಿ ವಿಚಾರಗಳನ್ನು ಗಮನಕ್ಕೆ ತೆಗೆದುಕೊಂಡು ದಂಡ ವಿಧಿಸಲಾಗುತ್ತಿದೆ.

04. ಅಪಘಾತಕ್ಕೆ ಮೊದಲ ಮರಣ

04. ಅಪಘಾತಕ್ಕೆ ಮೊದಲ ಮರಣ

1869ನೇ ಇಸವಿಯಲ್ಲಿ ಸಂಭವಿಸಿದ ಸ್ಟೀಮ್ ನಿಯಂತ್ರಿತ ವಾಹನ ಅವಘಡದಲ್ಲಿ ಮೇರಿ ವಾರ್ಡ್ ಮೃತಪಟ್ಟಿದ್ದರು. ಇದುವೇ ವಾಹನ ಅಪಘಾತದಲ್ಲಿ ಸಂಭವಿಸಿದ ಮೊದಲ ಮರಣವಾಗಿದೆ. ತದಾ ಬಳಿಕ ವಿಶ್ವದ್ಯಾಂತ ಸಾವಿರಾರು ಅಪಘಾತಗಳು ಘಟಿಸಿ ಹೋಗಿದೆ. ವಾರ್ಷಿಕವಾಗಿ 1.27 ಮಿಲಿಯನ್ ಜನರು ಅಪಘಾತಕ್ಕೆ ಶರಣಾಗುತ್ತಿರುವುದು ಖೇದಕರ ಸಂಗತಿ.

05. ಕೆಟ್ಟ ಚಾಲನೆ ಅನುವಂಶಿಕವೇ?

05. ಕೆಟ್ಟ ಚಾಲನೆ ಅನುವಂಶಿಕವೇ?

ಅಧ್ಯಯನ ವರದಿಗಳ ಪ್ರಕಾರ ಕೆಟ್ಟ ಡ್ರೈವಿಂಗ್ ಅನುವಂಶಿಕ ಎಂಬ ಬಗ್ಗೆ ಉಲ್ಲೇಖಗಳಿವೆ. ಶೇಕಡಾ 30ರಷ್ಟು ಚಾಲಕರು ವಂಶವಾಹಿಗಳಾಗಿದ್ದು, ಜ್ಞಾಪಕಕ್ಕೆ ಸಂಬಂಧಿಸಿದ ವಿಶೇಷ ಪ್ರೊಟೀನ್ ತೊಂದರೆ ಕಾಡುತ್ತದೆ. ಇದು ರಸ್ತೆಯಲ್ಲಿ ಮತ್ತೆ ಮತ್ತೆ ಎಡವಟ್ಟು ಮಾಡಲು ಪ್ರೇರೇಪಿಸುತ್ತದೆ.

06. ಭೂಮಿಯಿಂದ ಚಂದ್ರನೆಡೆಗೆ

06. ಭೂಮಿಯಿಂದ ಚಂದ್ರನೆಡೆಗೆ

ಭೂಮಿಯಿಂದ ಚಂದ್ರನಲ್ಲಿಗೆ ಸರಾಸರಿ 384,403 ಕೀ.ಮೀ. ದೂರವಿದೆ. ಚಾಲಕನೊಬ್ಬನಿಗೆ ಗಂಟೆಗೆ 97 ಕೀ.ಮೀ. ವೇಗದಲ್ಲಿ ನಾನ್ ಸ್ಟಾಪ್ ಆಗಿ ಚಲಿಸಿದ್ದಲ್ಲಿ ಮಾತ್ರ ಭೂಮಿಯಿಂದ ಚಂದ್ರನಲ್ಲಿಗೆ ತಲುಪಲು 157 ದಿನಗಳು ಬೇಕಾಗುವುದು.

07. ನಗ್ನ ಚಾಲನೆ

07. ನಗ್ನ ಚಾಲನೆ

ಅಧ್ಯಯನ ವರದಿಯೊಂದರ ಪ್ರಕಾರ ಶೇಕಡಾ 9ರಷ್ಟು ಚಾಲಕರು ಯಾರು ನೋಡುತ್ತಿಲ್ಲ ಅಂದ ಮೇಲೆ ನಗ್ನ ಚಾಲನೆಯನ್ನು ಇಷ್ಟಪಡುತ್ತಾರೆ. ಅದೇ ಹೊತ್ತಿಗೆ ಶೇಕಡಾ 54ರಷ್ಟು ಮಂದಿ ಹಾಡು ಹಾಡಿಕೊಂಡು ಡ್ರೈವಿಂಗ್ ಮಾಡಲು ಬಯಸುತ್ತಾರೆ.

ಇವನ್ನೂ ಓದಿ

ಕಾರ್ಲ್ ಬೆಂಝ್ - ದಿ ಗಾಡ್ ಆಫ್ ಆಟೋಮೊಬೈಲ್ಸ್

ಇವನ್ನೂ ಓದಿ

ಮೊದಲ ಟ್ರಾಫಿಕ್ ದೀಪ - ಕೇಳರಿಯದ ಸತ್ಯಗಳು

More from DriveSpark

Article Published On: Wednesday, May 4, 2016, 10:10 [IST]
English summary
7 Car And Driving Facts We Bet You Don’t Know
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+