2016ರಲ್ಲಿ ಸಾಗರಯಾನವನ್ನು ರಂಜಿಸಲಿರುವ ನೌಕೆಗಳು
ಇತರೆಲ್ಲ ಕ್ಷೇತ್ರದಂತೆ ವಿಹಾರ ನೌಕಾಯಾನದಲ್ಲೂ ಕ್ರಾಂತಿಕಾರಿ ಬದಲಾವಣೆಗಳು ಕಂಡುಬರುತ್ತಿದೆ. ವಿಲಾಸಿ ಜೀವನ ನಡೆಸುವ ಶ್ರೀಮಂತ ವ್ಯಕ್ತಿಗಳು ತಮ್ಮ ಬಿಡುವಿಲ್ಲದ ಜೀವನದ ನಡುವೆ ವಿಶ್ರಾಂತಿ ಜೀವನಕ್ಕಾಗಿ ಕೆಲವು ದಿನಗಳ ಕಾಲ ವಿಹಾರ ನೌಕೆಗಳಲ್ಲಿ ಸಂಚರಿಸುತ್ತಾರೆ.
Also Read: ಜಗತ್ತಿನ ಅತಿ ವೇಗದ 20 ವಿಹಾರ ನೌಕೆಗಳು
ಈ ಮುಖಾಂತರ ಮನಸ್ಸನ್ನು ತಂಪಾಗಿಸುವುದಲ್ಲದೆ ಅತ್ಯಾದ್ಬುತ ಪ್ರವಾಸದ ಅನುಭವವವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಹೀಗೆ 2016ನೇ ಸಾಲಿನಲ್ಲಿ ಆಗಮನವಾಗಲಿರುವ ಶ್ರೇಷ್ಠ ಏಳು ಹಡುಗಗಳ ಬಗ್ಗೆ ಇಲ್ಲಿ ವಿವರಣೆಯನ್ನು ಕೊಡಲಿದ್ದೇವೆ.

ವೈಕಿಂಗ್ ಸೀ
ಏಕ ಕಾಲದಲ್ಲಿ ಸರಿ ಸುಮಾರು 1000 ಯಾತ್ರಿಕರನ್ನು ಹೊತ್ಯೊಯ್ಯಬಲ್ಲ ವೈಕಿಂಗ್ ವಿಶಾಲವಾದ ಪ್ರದೇಶವನ್ನು ಹಡಗಿನಲ್ಲಿ ಪಡೆದುಕೊಂಡಿದೆ. 2016 ಎಪ್ರಿಲ್‌ನಲ್ಲಿ ಸೇವೆ ಆರಂಭಿಸಲಿರುವ ಈ ಹಡಗು ಮೆಡಿಟರೇನಿಯನ್ ಮತ್ತು ಬಾಲ್ಟಿಕ್ ಸಾಗರ ಮಧ್ಯೆ ಸಂಚರಿಸಲಿದೆ.

ವೈಕಿಂಗ್ ಸೀ
ವೈಕಿಂಗ್ ಸ್ಟಾರ್ ಹಾಗೂ ವೈಕಿಂಗ್ ಸ್ಕೈ ಎಂಬ ಎರಡು ಚೆಲುವೆಯರ ನೌಕೆಗಳನ್ನು ಹೊಂದಿರುವ ವೈಕಿಂಗ್ ಸೀ, ಎರಡು ಈಜುಕೊಳ, ಸ್ಪಾ, ಫಿಟ್ನೆಸ್ ಸೆಂಟರ್, ರೆಸ್ಟೋರೆಂಟ್, ವಿಶಾಲವಾದ ವಿಶ್ರಾಂತಿ ಕೊಠಡಿಗಳನ್ನು ಹೊಂದಿದೆ.

ಕೊನಿಂಗ್ಸ್‌ಡ್ಯಾಮ್
ಹೊಲ್ಯಾಂಡ್ ಅಮೆರಿಕ ಲೈನ್ ನಿರ್ಮಿಸುತ್ತಿರುವ ಅತಿ ನೂತನ ವಿಹಾರ ನೌಕೆ ಇದಾಗಿದೆ. ಕಾರ್ನಿವಲ್ ಕಾರ್ಪೋರೇಷನ್ ಭಾಗವಾಗಿರುವ ಹೊಲ್ಯಾಂಡ್ ಅಮೆರಿಕ ಲೈನ್ ನಿರ್ಮಿಸುತ್ತಿರುವ ಅತಿ ದೊಡ್ಡ ನೌಕೆ ಇದಾಗಿದೆ.

ಕೊನಿಂಗ್ಸ್‌ಡ್ಯಾಮ್
ಹೊಲ್ಯಾಂಡ್ ಅಮೆರಿಕ ಲೈನ್ ನಿರ್ಮಿಸುತ್ತಿರುವ ಅತಿ ನೂತನ ವಿಹಾರ ನೌಕೆ ಇದಾಗಿದೆ. ಕಾರ್ನಿವಲ್ ಕಾರ್ಪೋರೇಷನ್ ಭಾಗವಾಗಿರುವ ಹೊಲ್ಯಾಂಡ್ ಅಮೆರಿಕ ಲೈನ್ ನಿರ್ಮಿಸುತ್ತಿರುವ ಅತಿ ದೊಡ್ಡ ನೌಕೆ ಇದಾಗಿದೆ.

ಓವೇಷನ್ ಆಫ್ ದಿ ಸೀಸ್
ಜರ್ಮನಿಯ ರಾಯಲ್ ಕೆರೆಬಿಯನ್ ಇಂಟರ್ ನ್ಯಾಷನಲ್ ನಿರ್ಮಸುತ್ತಿರುವ ಅತಿ ನೂತನ ವಿಹಾರ ನೌಕೆ ಇದಾಗಿದೆ. ಇದು ಕ್ವಾಟಂ ವಿಭಾಗದಲ್ಲಿ ಗುರುತಿಸಿಕೊಂಡಿರುವ ಮೂರನೇ ಹಡಗಾಗಿದೆ.

ಓವೇಷನ್ ಆಫ್ ದಿ ಸೀಸ್ ನಿರ್ಮಾಣ ಕಾರ್ಯ 2011ನೇ ಇಸವಿಯಿಂದಲೇ ಆರಂಭಗೊಂಡಿದ್ದು, ಪ್ರೊಜೆಕ್ಟ್ ಸನ್ ಶೈನ್ ಎಂಬ ಕೋಡ್ ಪಡೆದುಕೊಂಡಿತ್ತು. ಪ್ರಸ್ತುತ ಹಡಗಿನಲ್ಲಿ 5,000ದಷ್ಟು ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಕಾರ್ನಿವಲ್ ವಿಸ್ಟಾ
ಕಾರ್ನಿವಲ್ ಕ್ರೂಸ್ ಲೈನ್‌ಗೆ ಸೇರಿದ ಕಾರ್ನಿವಲ್ ವಿಸ್ಟಾ ಐಷಾರಾಮಿ ಹಡಗು 2016 ವರ್ಷಾರಂಭದಲ್ಲಿ ಸೇವೆಗೆ ಲಭ್ಯವಾಗಿದ್ದು, ಮೇ ತಿಂಗಳಿಂದ ಕಾರ್ಯಾಚರಣೆ ಆರಂಭಿಸಲಿದೆ.

ಕಾರ್ನಿವಲ್ ವಿಸ್ಟಾ
ಸರಿ ಸುಮಾರು 4,000 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಕಾರ್ನಿವಲ್ ವಿಸ್ಟಾ ಹಡಗಿನಲ್ಲಿ ಹೊರಾಂಗಣ ಕ್ರೀಡಾಂಗಣ ಸೇರಿದಂತೆ ಈಜುಕೊಳ ಹಾಗೂ ಸೈರೈಡ್ ಸೇವೆಗಳು ಲಭ್ಯವಾಗಲಿದೆ.

ಹಾರ್ಮನ್ ಆಫ್ ದಿ ಸೀಸ್
ರಾಯಲ್ ಕೆರೆಬಿಯನ್ ಇಂಟರ್ ನ್ಯಾಷನಲ್ ಗೆ ಸೇರಿದ ಹಾರ್ಮನ್ ಆಫ್ ದಿ ಸೀಸ್ ನಿರ್ಮಾಣ ಕಾರ್ಯ ಎಸ್‌ಟಿಎಕ್ಸ್ ಯುರೋಪ್ ಬಂದರಿನಲ್ಲಿ ನಡೆಯಲಿದೆ.

ಹಾರ್ಮನ್ ಆಫ್ ದಿ ಸೀಸ್
ಒಮ್ಮೆ ಲೋಕಾರ್ಪಣೆಯಾದ ಮೇಲೆ ವಿಶ್ವದಲ್ಲೇ ಅತಿ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುವ ವಿಹಾರ ನೌಕೆ ಎಂಬ ಖ್ಯಾತಿಗೆ ಹಾರ್ಮನ್ ಆಫ್ ದಿ ಸೀಸ್ ಪಾತ್ರವಾಗಲಿದೆ. ಇದು ಬಹಮಾಸ್ ಹಡಗು ಪರಂಪರೆಗೆ ಮಗದೊಂದು ಕೋಡು ನೀಡಲಿದೆ.

ಸೆವೆನ್ ಸೀಸ್ ಎಕ್ಸ್ ಪ್ಲೋರರ್
ಬಹಮಾಸ್‌ನ ರೆಜೆಂಟ್ ಸೆವೆನ್ ಸೀಸ್ ಕ್ರೂಸಸ್‌ಗೆ ಸೇರಿದ ಸೆವೆನ್ ಸೀಸ್ ಎಕ್ಸ್ ಪ್ಲೋರರ್ ಹಡಗನ್ನು Fincantieri ಸಂಸ್ಥೆಯು ನಿರ್ಮಿಸಲಿದೆ. ಇದು 2016 ಮಧ್ಯಂತರ ಅವಧಿಯಲ್ಲಿ ಸೇವೆಗೆ ಲಭ್ಯವಾಗಲಿದೆ.

ಸೆವೆನ್ ಸೀಸ್ ಎಕ್ಸ್ ಪ್ಲೋರರ್
750ರಷ್ಟು ಪ್ರಯಾಣಿಕರನ್ನು ಹೊತ್ಯೊಯ್ಯಬಲ್ಲ ಸೆವೆನ್ ಸೀಸ್ ಎಕ್ಸ್ ಪ್ಲೋರರ್ ಹಡಗು ಎಲ್ಲ ಐಷಾರಾಮಿ ಸೌಲಭ್ಯಗಳೊದಿಗೆ ನೀರಿಗಿಳಿಯಲಿದೆ.

ಸೀಬೌರ್ನ್ ಎಂಕೋರ್
ಸೀಬೌರ್ನ್ ಕ್ರೂಸ್ ಲೈನ್‌ಗಾಗಿ ಇಟಲಿಯ Fincantieri ನಿರ್ಮಿಸುತ್ತಿರುವ ಮಗದೊಂದು ವಿಹಾರ ಹಡಗು ಇದಾಗಿದೆ. ಇದು ಓಡಿಸ್ಸಿ ಕ್ಲಾಸ್ ಹಡಗಿಗಿಂತಲೂ ಬೃಹತ್ ಎನಿಸಿಕೊಳ್ಳಲಿದೆ.

604 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಸೀ ಬೌರ್ನ್ ಎಂಕೋರ್ ಹಡಗಿನಲ್ಲಿ ಹೆಚ್ಚುವರಿ ಸಾರ್ವಜನಿಕ ಪ್ರದೇಶಗಳು ಕಂಡುಬರಲಿದೆ. ಅಲ್ಲದೆ ಆತಿಥಿಗಳಿಗಾಗಿ ಔಟ್ ಡೋರ್ ಸೌಕರ್ಯಗಳನ್ನು ನೀಡಲಾಗುತ್ತಿದೆ.

ಮಿಸ್ ಮಾಡದಿರಿ: ಹಡಗಿನ ಆಕಾರದ ಐಷಾರಾಮಿ ಹೋಟೆಲ್


Click it and Unblock the Notifications








