ಅಪರೂಪದ ವಿಶ್ವ ದಾಖಲೆ ನಿರ್ಮಿಸಿದ ಏಳು ವರ್ಷದ ಬಾಲಕ

ತಮ್ಮ ಅತ್ಯದ್ಭುತ ನೆನಪಿನ ಶಕ್ತಿಯೊಂದಿಗೆ ಹಲವಾರು ಸಾಧನೆಗಳನ್ನು ಮಾಡಿದ ಪ್ರತಿಭೆಗಳಿದ್ದಾರೆ. ಅದರಲ್ಲೂ ಚಿಕ್ಕ ಮಕ್ಕಳಂತೂ ದೊಡ್ಡವರು ನಾಚುವಂತಹ ಸಾಧನೆಗಳನ್ನು ಮಾಡುತ್ತಾರೆ. ತಮ್ಮ ಅಸಾಧಾರಣ ಪ್ರತಿಭೆಯಿಂದಾಗಿ ದಾಖಲೆಗಳನ್ನು ನಿರ್ಮಿಸುತ್ತಾರೆ.

ಅಪರೂಪದ ವಿಶ್ವ ದಾಖಲೆ ನಿರ್ಮಿಸಿದ ಏಳು ವರ್ಷದ ಬಾಲಕ

ಚೆನ್ನೈನ 7 ವರ್ಷದ ಬಾಲಕ ಕೆವಿನ್ ರಾಹುಲ್ ಅಂತಹ ಅಸಾಧಾರಣ ಪ್ರತಿಭೆಗಳಲ್ಲಿ ಒಬ್ಬ. ಕೆವಿನ್ ರಾಹುಲ್ ಚೆನ್ನೈನ ಡೌಟನ್ ಓಕ್ಲೆ ನರ್ಸರಿ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿದ್ದಾನೆ. ಈತ ತನ್ನ ಅತ್ಯದ್ಭುತ ನೆನಪಿನ ಶಕ್ತಿಯೊಂದಿಗೆ ಎಲ್ಲರನ್ನೂ ಚಕಿತಗೊಳಿಸುವುದರ ಜೊತೆಗೆ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾನೆ. ಇದರ ಜೊತೆಗೆ ಹತ್ತು ಹಲವು ದಾಖಲೆಗಳನ್ನು ನಿರ್ಮಿಸಿದ್ದಾನೆ.

ಅಪರೂಪದ ವಿಶ್ವ ದಾಖಲೆ ನಿರ್ಮಿಸಿದ ಏಳು ವರ್ಷದ ಬಾಲಕ

ಕೆವಿನ್ ಓದುವುದರಲ್ಲಿ ಸದಾ ಮುಂದು. ಜೊತೆಗೆ ಸಾಮಾನ್ಯ ಜ್ಞಾನವನ್ನು ಸಹ ಚೆನ್ನಾಗಿ ಬಲ್ಲವನಾಗಿದ್ದಾನೆ. ವಿಶೇಷವಾಗಿ ಕೆವಿನ್ ಕಾರುಗಳ ಬಗ್ಗೆ ಹೆಚ್ಚು ಆಸಕ್ತಿಯನ್ನು ಹೊಂದಿದ್ದಾನೆ. ಕೆವಿನ್ ಇತ್ತೀಚೆಗೆ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾನೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಅಪರೂಪದ ವಿಶ್ವ ದಾಖಲೆ ನಿರ್ಮಿಸಿದ ಏಳು ವರ್ಷದ ಬಾಲಕ

ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೆವಿನ್ ಈ ದಾಖಲೆ ನಿರ್ಮಿಸಿ, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಸೇರ್ಪಡೆಯಾಗಿದ್ದಾನೆ. ಕೆವಿನ್ ಕೇವಲ ಒಂದು ನಿಮಿಷದಲ್ಲಿ 150 ವಿವಿಧ ಕಾರುಗಳ ಲೋಗೊಗಳನ್ನು ಗುರುತಿಸಿ, ಎಲ್ಲರನ್ನು ಚಕಿತಗೊಳಿಸಿದ್ದಾನೆ.

ಅಪರೂಪದ ವಿಶ್ವ ದಾಖಲೆ ನಿರ್ಮಿಸಿದ ಏಳು ವರ್ಷದ ಬಾಲಕ

ಯಾವುದೇ ಸುಳಿವುಗಳನ್ನು ಪಡೆಯದೇ 150 ಕಾರುಗಳ ಲೋಗೊಗಳನ್ನು ಗುರುತಿಸಿ ಈ ದಾಖಲೆ ನಿರ್ಮಿಸಿದ್ದಾನೆ. ಯಾರೇ ಆಗಲಿ ಜನಪ್ರಿಯ ಕಾರುಗಳ ಲೋಗೊಗಳನ್ನು ಸುಲಭವಾಗಿ ಗುರುತಿಸಬಹುದು. ಆದರೆ ಕೆವಿನ್ ಮಾರುಕಟ್ಟೆಯಲ್ಲಿ ಇಲ್ಲದೇ ಇರುವ ಕಣ್ಮರೆಯಾಗಿರುವ ಕಾರುಗಳ ಲೋಗೊಗಳನ್ನು ಸಹ ಸರಾಗವಾಗಿ ಗುರುತಿಸಿದ್ದಾನೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಅಪರೂಪದ ವಿಶ್ವ ದಾಖಲೆ ನಿರ್ಮಿಸಿದ ಏಳು ವರ್ಷದ ಬಾಲಕ

ಕೇವಲ ಒಂದು ನಿಮಿಷದಲ್ಲಿ 150 ವಿವಿಧ ಕಾರುಗಳ ಲೋಗೊಗಳನ್ನು ಗುರುತಿಸಿರುವುದು ಹೊಸ ವಿಶ್ವ ದಾಖಲೆಯಾಗಿದೆ. ಕೆವಿನ್ ರಾಹುಲ್ ನ ಈ ಸಾಧನೆಗೆ ಹಲವಾರು ಜನರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಕೆವಿನ್ ರಾಹುಲ್ ರವರ ತಂದೆ ರಾಜು ಹಾಗೂ ತಾಯಿ ಶಕೀಲಾ ಕೂಡ ತಮ್ಮ ಮಗನ ಸಾಧನೆ ಬಗ್ಗೆ ಹೆಮ್ಮೆ ಪಡುತ್ತಾರೆ.

ಅಪರೂಪದ ವಿಶ್ವ ದಾಖಲೆ ನಿರ್ಮಿಸಿದ ಏಳು ವರ್ಷದ ಬಾಲಕ

ಚಿಕ್ಕ ವಯಸ್ಸಿನಲ್ಲಿಯೇ ಅದ್ಭುತ ಸಾಧನೆ ತೋರಿರುವ ಕೆವಿನ್ ರಾಹುಲ್ ಅಭಿನಂದನಾರ್ಹ. ಕೆವಿನ್ ರಾಹುಲ್ ನಿಂದ ಇನ್ನೂ ಹೆಚ್ಚಿನ ಸಾಧನೆಗಳು ಹೊರ ಬರಲಿ ಎಂದು ಆಶಿಸೋಣ.

Most Read Articles

Kannada
English summary
Seven year old boy from Chennai creates new world record. Read in Kannada.
Story first published: Saturday, August 15, 2020, 20:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X