71ರ ಹರೆಯದ ತಾತನ ಕಿತಾಪತಿ ನೋಡಿ; ಸೂಪರ್ ಕಾರು ಪುಡಿಪುಡಿ
ಜರ್ಮನಿಯ ಹೆಸರಾಂತ ಆಟೋಬಾನ್ ಹೈವೇಯಲ್ಲಿ [ಸ್ಪೀಡ್ ಲಿಮಿಟ್ ರಹಿತ ಜಗತ್ತಿನ ಹೈಸ್ಪೀಡ್ ಹೆದ್ದಾರಿ ಆಟೋಬಾನ್] ನಡೆದ ಘಟನೆಯಿದು. ಅಮಿತ ವೇಗದಲ್ಲಿ ಸೂಪರ್ ಕಾರನ್ನು ಚಾಲನೆ ಮಾಡಿರುವ 71ರ ಹರೆಯ ತಾತ ನಿಯಂತ್ರಣ ತಪ್ಪಿದ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿದೆ.
ಈ ಬಗ್ಗೆ ಜರ್ಮನ್ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಅಪಘಾತ ಹಿಂದಿರುವ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಅಪಘಾತದ ಸಂಪೂರ್ಣ ಮಾಹಿತಿಗಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ.

ಪೊಲೀಸ್ ವರದಿಯ ಪ್ರಕಾರ 71ರ ಹರೆಯದ ತಾತ ತಮ್ಮ ಮೆಕ್ ಲ್ಯಾರೆನ್ 12ಸಿ ಸೂಪರ್ ಕಾರಿನಲ್ಲಿ ಗಂಟೆಗೆ 240 ಕೀ.ಮೀ. ವೇಗದಲ್ಲಿ ಸಂಚರಿಸುತ್ತಿದ್ದರು.

ಆದರೆ ಸ್ವಲ್ಪ ದೂರ ತಲುಪಿದ ಬಳಿಕ ತಮ್ಮ ಕಾರಿನ ನಿಯಂತ್ರಣವನ್ನು ಕಳೆದುಕೊಂಡಿದ್ದರು. ಇದರಿಂದಾಗಿ ಭಾರಿ ಅಪಘಾತ ಘಟಿಸಿದೆ.

ಅಪಘಾತದಲ್ಲಿ ಮೆಕ್ ಲ್ಯಾರೆನ್ 12ಸಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜುಗೊಂಡಿದೆ.

ಆದರೆ ಅದೃಷ್ಟವಶಾತ್ ತಾತ ಅಪಘಾತದಿಂದ ಪಾರಾಗಿರುವುದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.

ಒಟ್ಟಿನಲ್ಲಿ ಅಪಘಾತದ ಬಳಿಕ ಮೆಕ್ ಲ್ಯಾರೆನ್ ಕಾರು ಹೇಗೆ ಕಾಣಿಸಲಿದೆ ಎಂಬ ಪ್ರಶ್ನೆಗೆ ಇಲ್ಲಿ ಉತ್ತರ ದೊರಕಿದಂತಾಗಿದೆ.

ಆಪ್ತಮಿತ್ರರ ಹೈವೇ ಪಯಣ - ಈ ಬಗ್ಗೆ ಎಚ್ಚರ ವಹಿಸಿ


Click it and Unblock the Notifications








