4 ಕೋಟಿ ದುಬಾರಿ ಬಸ್ ಖರೀಸಿದಿಸಿದ ಕಿಂಗ್ ಖಾನ್
ಬಾಲಿವುಡ್ ಬಾದ್ ಷಾ ಶಾರೂಕ್ ಖಾನ್ ಮಗದೊಂದು ಐಷಾರಾಮಿ ವ್ಯಾನಿಟಿ ಬಸ್ ತಮ್ಮದಾಗಿಸಿಕೊಂಡಿದ್ದಾರೆ. ವಿಶೇಷವೆಂದರೆ ಇದನ್ನು ಕೂಡಾ ದೇಶದ ಖ್ಯಾತ ಕಸ್ಟಮೈಸ್ಡ್ ಸಂಸ್ಥೆಯಾಗಿರುವ ಡಿಸಿ ಡಿಸೈನ್ ವಿನ್ಯಾಸಗೊಳಿಸಿದೆ.
Also Read: ಶಾರೂಕ್ ಅದ್ದೂರಿ ಬಸ್ಸಲ್ಲಿ ಅಂತದ್ದೇನಿದೆ?
ತಮ್ಮ ಶೂಟಿಂಗ್ ಹಾಗೂ ಖಾಸಗಿ ಪಯಣಗಳಿಗಾಗಿ ಶಾರೂಕ್ ಇದೇ ಬಸ್ ಬಳಕೆ ಮಾಡಲಿದ್ದಾರೆ. ಶಾರೂಕ್ ಬಳಿ ಈಗಾಗಲೇ ಡಿಸಿ ಡಿಸೈನ್ ವಿನ್ಯಾಸಿತ ಬಸ್ಸಿದೆ ಎಂಬುದು ಇಲ್ಲಿ ಗಮನಾರ್ಹವೆನಿಸುತ್ತದೆ.

ಎಲ್ಲ ರೀತಿಯ ಆಧುನಿಕ ಸೌಲಭ್ಯಗಳು ಹಾಗೂ ಹೈ ಎಂಡ್ ತಂತ್ರಗಾರಿಕೆಯನ್ನು ಇದರಲ್ಲಿ ಬಳಕೆ ಮಾಡಲಾಗಿದೆ. ಇದಕ್ಕಾಗಿ ತಮ್ಮ ನೆಚ್ಚಿನ ಡಿಸಿ ಡಿಸೈನ್ ಸಂಸ್ಥೆಯ ಮೇಲೆ ಅತೀವ ನಂಬಿಕೆಯನ್ನಿರಿಸಿದ್ದಾರೆ.

ಈ ದುಬಾರಿ ವ್ಯಾನಿಟಿ ಬಸ್ ನಾಲ್ಕು ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸಲಿದೆ. ಡಿಸಿ ಸಂಸ್ಥೆಯು ಇದನ್ನು ವಿನ್ಯಾಸಗೊಳಿಸಲು ಸರಿ ಸುಮಾರು ಎರಡು ತಿಂಗಳುಗಳಷ್ಟು ಸಮಯ ತಗೊಂಡಿದೆ.
ಚಿತ್ರ ಕೃಪೆ: ಎನ್‌ಡಿಟಿವಿ ಆಟೋ

ಡಿಸಿ ಡಿಸೈನ್ ಹೇಳುವ ಪ್ರಕಾರ ಸದ್ಯ ಇದು ದೇಶದಲ್ಲಿರುವ ಅತ್ಯುತ್ತಮ ವ್ಯಾನಿಟಿ ವ್ಯಾನ್ ಗಳಲ್ಲಿ ಒಂದಾಗಿದೆ. ಅಲ್ಲದೆ ಅಷ್ಟೇ ದುಬಾರಿ ಕೂಡಾ ಆಗಿರಲಿದೆ.
ಚಿತ್ರ ಕೃಪೆ: ಎನ್‌ಡಿಟಿವಿ ಆಟೋ

ಬಸ್ಸಿನಲ್ಲಿರುವ ಕೆಲವು ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿ ಇದರ ಒಳಾಂಗಣದಲ್ಲಿ ಗ್ಲಾಸ್ ಬಳಕೆ ಮಾಡಲಾಗಿದ್ದು, ರೂಫ್ ಗಳಲ್ಲಿ ಮರದ ಸ್ಪರ್ಶವನ್ನು ಕಾಣಬಹುದಾಗಿದೆ.
ಚಿತ್ರ ಕೃಪೆ: ಎನ್‌ಡಿಟಿವಿ ಆಟೋ

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಸೆಲೆಬ್ರಿಟಿಗಳು ಹೆಚ್ಚು ಖಾಸಗಿತನವನ್ನು ಬಯಸುತ್ತಾರೆ. ಇಲ್ಲಿ ಬಿ9ಆರ್ ವೋಲ್ವೋ ಬಸ್ ಅನ್ನು ತಮ್ಮ ವೈಯಕ್ತಿಕ ಪಯಣಕ್ಕಾಗಿ ಶಾರೂಕ್ ಅಲಂಕಾರಗೊಳಿಸಿದ್ದಾರೆ.
ಚಿತ್ರ ಕೃಪೆ: ಎನ್‌ಡಿಟಿವಿ ಆಟೋ

ವಿಶೇಷ ಲೈಟಿಂಗ್ಸ್, ಭವಿಷ್ಯತ್ತಿನ ವಿನ್ಯಾಸ ಕೋಣೆಗಳು, ದುಬಾರಿ ಸೋಫಾ ಸೆಟ್ ಗಳು, ಎಲ್ ಸಿಡಿ ಹಾಗೂ ಖಾಸಗಿ ವಿಶ್ರಾಂತಿ ಕೋಣೆಗಳು ಇತ್ಯಾದಿ ವ್ಯವಸ್ಥೆಗಳು ಇದರಲ್ಲಿರಲಿದೆ.
ಚಿತ್ರ ಕೃಪೆ: ಎನ್‌ಡಿಟಿವಿ ಆಟೋ

14 ಮೀಟರ್ ಉದ್ದದ ಈ ಬಸ್ಸನ್ನು ನಾಲ್ಕು ಕೋಣೆಗಳಾಗಿ ವಿಭಜನೆಗೊಳಿಸಲಾಗಿದೆ. ಇದರಲ್ಲಿ ಕಚೇರಿ ಕೊಠಡಿ, ಬೆಡ್ ರೂಂ, ಶೌಚಾಲಯ ಮತ್ತು ಮೇಕಪ್ ಹಾಗೂ ಡ್ರೆಸ್ಸಿಂಗ್ ಕೊಠಡಿಗಳಿರಲಿದೆ.
ಚಿತ್ರ ಕೃಪೆ: ಎನ್‌ಡಿಟಿವಿ ಆಟೋ

ಬಸ್ಸಿನೊಳಗೆ ಅನಿಯಮಿತ ವೈ-ಫೈ ಸೇವೆ, ಎಲ್ಲ ಕೋಣೆಗಳಲ್ಲೂ ಆಪಲ್ ಟಿವಿ , ಸ್ಯಾಟಲೈಟ್ ಟಿವಿ, 4000 ವ್ಯಾಟ್ ವರೆಗಿನ ಸೌಂಡ್ ಸಿಸ್ಟಂಗಳನ್ನು ಆಳವಡಿಸಲಾಗಿದೆ.
ಚಿತ್ರ ಕೃಪೆ: ಎನ್‌ಡಿಟಿವಿ ಆಟೋ

ಇನ್ನು ಎಸಿ ಕೂಲಿಂಗ್ ನೊಂದಿಗೆ ಸಣ್ಣ ಪುಟ್ಟ ಕಿಚನ್ ವ್ಯವಸ್ಥೆಯೂ ಇರಲಿದೆ. ಈ ಎಲ್ಲ ವಿನ್ಯಾಸ ತಂತ್ರಗಾರಿಕೆಯನ್ನು ಡಿಸಿ ಡಿಸೈನ್ ಸಂಸ್ಥೆಯ ಸ್ಥಾಪಕ ದಿಲೀಪ್ ಚಾಬ್ರಿಯಾ ಮುಂದಾಳತ್ವದಲ್ಲಿ ರಚಿಸಲಾಗಿದೆ.
ಚಿತ್ರ ಕೃಪೆ: ಎನ್‌ಡಿಟಿವಿ ಆಟೋ


Click it and Unblock the Notifications








