‘ಪಠಾಣ್’ ಅಬ್ಬರದ ಬಳಿಕ 10 ಕೋಟಿ ರೂ. ಮೌಲ್ಯದ ಕಾರು ಖರೀದಿಸಿದ ಶಾರುಖ್ ಖಾನ್
ಬಾಲಿವುಡ್ ಕಿಂಗ್ ಖಾನ್, ಶಾರುಖ್ ಖಾನ್ (Shah Rukh Khan) ನಟನೆಯ ಪಠಾಣ್' (Pathaan) ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿದೆ. ಈ ಪಠಾಣ್' ಚಿತ ಬಿಡುಗಡೆಯಾದ ಮೊದಲ ದಿನವೇ ವಿಶ್ವದಾದ್ಯಂತ 106 ಕೋಟಿ ರೂಪಾಯಿ (ಗ್ರಾಸ್ ಕಲೆಕ್ಷನ್) ಅನ್ನು ಮಾಡಿಕೊಂಡಿತು.
'ಪಠಾಣ್'ಚಿತ್ರ ಯಶ್ವಸ್ಸಿನ ಬಳಿಕ ಶಾರುಖ್ ಖಾನ್ ಅವರು ಹೊಚ್ಚ ಹೊಸ ಐಷಾರಾಮಿ ಎಸ್‌ಯುವಿಯನ್ನು ಖರೀದಿಸಿದ್ದಾರೆ. ಬಾಲಿವುಡ್ ಸೂಪರ್‌ಸ್ಟಾರ್ ರೋಲ್ಸ್ ರಾಯ್ಸ್ ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್ ಅನ್ನು ಖರೀದಿಸಿದ್ದಾರೆ. ವರದಿಗಳ ಪ್ರಕಾರ, ಈ ಕಾರು ಸದ್ಯಕ್ಕೆ ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯಂತ ದುಬಾರಿ ಎಸ್‍ಯುವಿಯಾಗಿದೆ. ಈ ಐಷಾರಾಮಿ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.8.2 ಕೋಟಿಯಾಗಿದೆ.

ಕಂಪನಿಯು ಕಸ್ಟಮೈಸ್ ಆಯ್ಕೆಗಳನ್ನು ನೀಡುತ್ತದೆ. ಕಸ್ಟಮೈಸ್ ನಂತರ ಈ ಕಾರಿನ ಬೆಲೆಯು ರೂ,10 ಕೋಟಿಗಿಂತ ಹೆಚ್ಚು ಬೆಲೆಯನ್ನು ಹೊಂದಿದೆ. ಕಿಂಗ್ ಖಾನ್ ಆರ್ಕ್ಟಿಕ್ ವೈಟ್‌ನ ಕ್ಲಾಸಿ ಬಣ್ಣದ ರೋಲ್ಸ್ ರಾಯ್ಸ್ ಕುಲ್ಲಿನನ್ ಕಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಕಾರಿನ ಇಂಟೀರಿಯರ್‌ಗಾಗಿ ಕೋಬಾಲ್ಟೊ ನೀಲಿ ಬಣ್ಣದೊಂದಿಗೆ ಬೆರಗುಗೊಳಿಸುವ ಸಂಪೂರ್ಣ ಬಿಳಿ ಲೆದರ್ ಒಳಾಂಗಣವನ್ನು ಅವರು ಆಯ್ಕೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ರೋಲ್ಸ್ ರಾಯ್ಸ್ ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್ ಕಾರಿನಲ್ಲಿ ಅದೇ 6.75-ಲೀಟರ್ ಟ್ವಿನ್-ಟರ್ಬೊ V12 ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 600 ಬಿಹೆಚ್‍ಪಿ ಪವರ್ ಮತ್ತು 900 ಎನೆಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಪವರ್ ಅಂಕಿಅಂಶಗಳನ್ನು ಸಾಮಾನ್ಯ ಕುಲ್ಲಿನಾನ್‌ಗೆ ಹೋಲಿಸಿದರೆ, 29 ಬಿಹೆಚ್‍ಪಿ ಪವರ್ ಮತ್ತು 50 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇದು ಎಲ್ಲಾ ನಾಲ್ಕು ವ್ಹೀಲ್ ಗಳಿಗೆ ಪವರ್ ಕಳುಹಿಸುತ್ತದೆ. ಈ ಎಂಜಿನ್ ಅನ್ನು 8-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇನ್ನು ಇದು ದೇಶದಲ್ಲಿ ವಿತರಿಸಲಾದ ಮೂರನೇ ರೋಲ್ಸ್ ರಾಯ್ಸ್ ಕಲಿನನ್ ಬ್ಲ್ಯಾಕ್ ಬ್ಯಾಡ್ಜ್ ಆಗಿದೆ, ಮೊದಲನೆಯದನ್ನು ಹೈದರಾಬಾದ್‌ನಲ್ಲಿರುವ ನಾಸೀರ್ ಖಾನ್‌ಗೆ ಮತ್ತು ಎರಡನೆಯದನ್ನು ಒರಿಸ್ಸಾದ ಭುವನೇಶ್ವರಕ್ಕೆ ವಿತರಿಸಲಾಯಿತು.
ರೋಲ್ಸ್ ರಾಯ್ಸ್ ಬ್ಲ್ಯಾಕ್ ಬ್ಯಾಡ್ಜ್ ಕುಟುಂಬವು ಪ್ರಸ್ತುತ ಘೋಸ್ಟ್, ವ್ರೈತ್ ಮತ್ತು ಡಾನ್ ಮತ್ತು ಕಲ್ಲಿನನ್ ಬ್ಲ್ಯಾಕ್ ಬ್ಯಾಡ್ಜ್‌ನ ಮಾರ್ಪಾಡುಗಳನ್ನು ಒಳಗೊಂಡಿದೆ. ಸ್ಟ್ಯಾಂಡರ್ಡ್ ಕಲ್ಲಿನನ್‌ನ ಮೇಲೆ, ಬ್ಲ್ಯಾಕ್ ಬ್ಯಾಡ್ಜ್ ಮಾದರಿಯು ಸ್ಪಿರಿಟ್ ಆಫ್ ಎಕ್ಸ್‌ಟಸಿಯಲ್ಲಿ ಡಾರ್ಕ್ ಕ್ರೋಮ್ ಅಂಶಗಳನ್ನು ಒಳಗೊಂಡಿದೆ ಮತ್ತು "ಡಬಲ್ ಆರ್" ಬ್ಯಾಡ್ಜ್ ಸಿಲ್ವರ್-ಆನ್-ಕಪ್ಪು, ಇದು ವಾಹನದ ಮುಂಭಾಗ, ಬದಿ ಮತ್ತು ಹಿಂಭಾಗದಲ್ಲಿದೆ.
ಈ ಐಷಾರಾಮಿ ಕಾರಿನ ಮುಂಭಾಗದ ಗ್ರಿಲ್ ಸರೌಂಡ್, ಸೈಡ್ ಫ್ರೇಮ್ ಫಿನಿಶರ್‌ಗಳು, ಬೂಟ್ ಹ್ಯಾಂಡಲ್, ಬೂಟ್ ಟ್ರಿಮ್, ಲೋವರ್ ಏರ್ ಇನ್‌ಟೇಕ್ ಫಿನಿಶರ್ ಮತ್ತು ಎಕ್ಸಾಸ್ಟ್ ಪೈಪ್‌ಗಳಲ್ಲಿ ಡಾರ್ಕನ್ಡ್ ಕ್ರೋಮ್ ಅನ್ನು ಬಳಸಲಾಗುತ್ತದೆ. ಈ ದುಬಾರಿ ಐಷಾರಾಮಿ ಕಾರಿನಲ್ಲಿ 22-ಇಂಚಿನ ಅಲಾಯ್ ವ್ಹೀಲ್ ಮತ್ತು ಕಾಂಟ್ರಾಸ್ಟ್ ರೆಡ್ ಬ್ರೇಕ್ ಕ್ಯಾಲಿಪರ್‌ಗಳನ್ನು ಹೊಂದಿದೆ. ಕಳೆದ ಬಾರಿ ಶಾರುಖ್ ಖಾನ್ ತಮ್ಮ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ (Mercedes-Benz S-Class) ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ.
ಇದು ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಎಸ್350ಡಿ 4ಮ್ಯಾಟಿಕ್ ರೂಪಾಂತರವಾಗಿದೆ. ಈ ಐಷಾರಾಮಿ ಸಲೂನ್ ಅನ್ನು ಶಾರುಖ್ ಖಾನ್ ಅವರ ಹೆಸರಿಗೆ ನೋಂದಾಯಿಸಲಾಗಿದೆ ಮತ್ತು ಅವರು ಬಿಳಿ ಬಣ್ಣದ ಮಾದರಿಯನ್ನು ಆರಿಸಿಕೊಂಡರು. ಈ ಮರ್ಸಿಡಿಸ್ ಬೆಂಝ್ ಎಸ್-ಕ್ಲಾಸ್ ಕಾರು S450 4MATIC ಎಂದು ಕರೆಯಲ್ಪಡುವ ಎಸ್-ಕ್ಲಾಸ್‌ನ ಮತ್ತೊಂದು ರೂಪಾಂತರವನ್ನು ಸಹ ಮಾರಾಟ ಮಾಡುತ್ತದೆ. ಅವರು ಹೆಚ್ಚಾಗಿ ಬಿಳಿ ಬಣ್ಣದ ಲ್ಯಾಂಡ್ ರೋವರ್ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯಲ್ಲಿ ಕಾಣಿಸಿಕೊಳ್ಳುತ್ತಾರೆ.


Click it and Unblock the Notifications








