ಆಗಸ್ಟ್ 1 ರಿಂದ KSRTC ಬಸ್ ದರ ಹೆಚ್ಚಳ: ಬೊಕ್ಕಸ ತುಂಬಿಸಲು ಸಿದ್ದು ಸರ್ಕಾರದ ಮತ್ತೊಂದು ಮಾಸ್ಟರ್ ಪ್ಲಾನ್
ಕರ್ನಾಟಕ ಸರ್ಕಾರದ ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ರಾಜ್ಯ ಸರ್ಕಾರದ ಸಂಚಾರಿ ಇಲಾಖೆಯಲ್ಲಿ ಆಗಾಗ ಬದಲಾವಣೆ ಆಗುತ್ತಲೇ ಇದೆ. ಇತ್ತ ಮಹಿಳೆಯರಿಗೆ ಉಚಿತ ಪ್ರಯಾಣದ ಉಡುಗೊರೆ ನೀಡಿದ ರಾಜ್ಯ ಸರ್ಕಾರ, ಅತ್ತ ಒಂದೊಂದೆ ಕಡೆ ನಿಧಾನವಾಗಿ ಒಂದೊಂದೇ ವಸ್ತುವಿನ ದರ ಹೆಚ್ಚು ಮಾಡುವತ್ತ ಗಮನ ಹರಿಸುತ್ತಿದೆ.
ಇದೀಗ ರಾಜ್ಯ ಸರ್ಕಾರದಿಂದ ಮತ್ತೊಂದು ಹೊಸ ಮಾಹಿತಿಯೊಂದು ಲಭ್ಯವಾಗಿದೆ. ಶಕ್ತಿ ಯೋಜನೆಯ (Shakthi Scheme) ಎಫೆಕ್ಟ್ ಇದಾಗಿದ್ದು, ಇದೀಗ ಆದಾಯದ ಮೂಲ ಹೆಚ್ಚಿಸುವ ಸಲುವಾಗಿ ಇದೀಗ ಹೊಸ ಮಾಸ್ಟರ್ ಪ್ಲಾನ್ ಸಿದ್ದಗೊಳಿಸಿದೆ ಎಂದು ತಿಳಿದು ಬಂದಿದೆ. ದಾಖಲೆಗಳ ಪ್ರಕಾರ ಕೆಎಸ್‌ಆರ್‌ಟಿಸಿ ಬಸ್‌ಗಳ ದರವನ್ನು ಹೆಚ್ಚಿಸುವ ಯೋಜನೆಯಲ್ಲಿದೆ ಎಂದು ತಿಳಿದು ಬಂದಿದೆ.

ಈಗಿರುವ ಬಸ್‌ಗಳ ದರವನ್ನು ಕೆಎಸ್‌ಆರ್‌ಟಿಸಿ ನಿಗಮ ಆದೇಶ ಹೊರಡಿಸಿದೆ. ಇನ್ನು ಇದರಲ್ಲು ಒಂದು ಟ್ವಿಸ್ಟ್ ಇದ್ದು, ಒಪ್ಪಂದದ ಮೇರೆಗೆ ಪ್ರಯಾಣ ಮಾಡುವ ಬಸ್‌ಗಳ ದರವನ್ನು ಏರಿಸಲು ಆದೇಶ ಹೊರಡಿಸಿದ್ದು ಆದಷ್ಟು ಬೇಗ ಇದು ಕಾರ್ಯ ರೂಪಕ್ಕೆ ತರಲಿದೆ ಎಂದು ಮಾಹಿತಿಗಳು ತಿಳಿಸಿದ್ದು, ಕರ್ನಾಟಕ ಸಾರಿಗೆ, ರಾಜಹಂಸ, ಎಕ್ಸಿಕ್ಯೂಟಿವ್, ರಾಜಹಂಸ ಬಸ್‌ಗಳಿಗೆ ದರ ಏರಿಕೆ ಮಾಡಲಿದ್ದಾರೆ.
ರಾಜಹಂಸ ಸೇರಿದಂತೆ ಏಳು ವಿವಿಧ ರೀತಿಯ ಒಪ್ಪಂದದ ಮೇರೆಗೆ ಕಾರ್ಯ ನಿರ್ವಹಿಸುವ ಬಸ್‌ಗಳ ದರವನ್ನು ಏರಿಸಲಾಗುತ್ತಿದ್ದು, ಇದರ ಬಗ್ಗೆ ಜನ ಯಾವ ರೀತಿಯಾಗಿ ಸ್ಪಂದಿಸಲಿದ್ದಾರೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ದೊರಕಿರುವ ಮಾಹಿತಿಗಳ ಪ್ರಕಾರ ಹೊಸ ಪರಿಷ್ಕ್ರತ ದರಗಳು ಮುಂದಿನ ತಿಂಗಳು ಅಂದರೆ ಆಗಸ್ಟ್ ಒಂದನೇ ತಾರೀಖಿನಿಂದ ಜಾರಿಗೆ ಬರಲಿದೆ.

ಇನ್ನು ಇದಕ್ಕೂ ಮೊದಲು ಒಪ್ಪಂದದ ಮೇರೆಗೆ ಬುಕ್ ಮಾಡಿದ ಬಸ್‌ಗಳ ದರ ಇದಕ್ಕೆ ಅನ್ವಯಿಸುವುದಿಲ್ಲ. ಬದಲಾಗಿ ಆ ಒಪ್ಪಂದದ ಪ್ರಯಾಣವು ಹಳೇ ದರಗಳಲ್ಲೇ ಮುಂದುವರೆಯಲಿದ್ದು ಆಗಸ್ಟ್ ಒಂದರ ನಂತರ ಯಾರು ಈ ಬಸ್‌ಗಳನ್ನು ಬುಕ್ ಮಾಡುತ್ತಾರೋ ಅವರಿಗೆ ಹೊಸ ದರವು ಅನ್ವಯವಾಗಲಿದೆ.
ಹೊಸ ಆದೇಶದ ಪ್ರಕಾರ ಇದಕ್ಕೂ ಮುಂಚೆ ಗಂಟೆಗಳ ಲೆಕ್ಕದಲ್ಲಿನ ವಾಹನ ವ್ಯವಸ್ಥೆಯು ಇನ್ನು ಮುಂದೆ ಲಭ್ಯವಿರುವುದಿಲ್ಲ. ಗಂಟೆಗಳ ಲೆಕ್ಕದಲ್ಲಿನ ಒಪ್ಪಂದದ ವ್ಯವಸ್ಥೆಯನ್ನು ಸರ್ಕಾರ ಈ ವೇಳೆ ತೆಗೆದು ಹಾಕಲು ತೀರ್ಮಾನ ಕೈಗೊಂಡಿದೆ. ಈ ಮೂಲಕ ರಾಜ್ಯ ಬೊಕ್ಕಸಕ್ಕೆ ಇನ್ನಷ್ಟು ಆದಾಯವನ್ನು ತರುವ ಮಾಸ್ಟರ್ ಪ್ಲಾನ್ ಅನ್ನು ಸಿದ್ಧಗೊಳಿಸಿದೆ.
ಹೊಸ ದರದ ಪ್ರಕಾರ ಕರ್ನಾಟಕ ಸಾರಿಗೆಯ ಸಾಮಾನ್ಯ ಬಸ್‌ಗಳು ಪ್ರತೀ ಕಿಲೋ ಮೀಟರ್‌ಗೆ ರಾಜ್ಯದಲ್ಲಿ ಸುಮಾರು 47 ರುಪಾಯಿಗಳು ಮತ್ತು ಬೇರೆ ರಾಜ್ಯದಲ್ಲಿ ೫೦ ರೂಪಾಯಿಗಳಿಗೆ ದರಗಳನ್ನು ನಿಗದಿ ಮಾಡಲಾಗಿದ್ದು, ಪ್ರತಿ ಬಸ್‌ನಲ್ಲಿ ಸುಮಾರು 55/57 ಆಸನಗಳು ಇರಲಿದೆ. ಇನ್ನು ಈ ಬಸ್‌ಗಳು ಕನಿಷ್ಟ ಒಂದು ದಿನಕ್ಕೆ ೩೫೦ ಕಿಲೋ ಮೀಟರ್‌ಗಳನ್ನು ನಿಗದಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಕೆಎಸ್‌ಆರ್‌ಟಿಸಿಯ ಮತ್ತೊಂದು ಜನಪ್ರಿಯ ಬಸ್ ಆದ ರಾಜಹಂಸ ಬಸ್‌ಗಳು ಸುಮಾರು ೩೬ ಆಸನಗಳನ್ನು ಹೊಂದಿರಲಿದ್ದು ಈ ಬಸ್‌ಗಳು ಒಪ್ಪಂದದ ಸಮಯದಲ್ಲ ರಾಜ್ಯದಲ್ಲಿ 48 ರುಪಾಯಿಗಳಿಗೂ ಮತ್ತು ಅಂತರ್ ರಾಜ್ಯದಲ್ಲಿ ೫೩ ರೂಪಾಯಿಗಳನ್ನು ಪ್ರತೀ ಕಿಲೋ ಮೀಟರ್‌ಗೆ ನಿಗದಿ ಪಡಿಸಲಾಗಿದೆ. ಈ ದರಗಳು ವಾರದ ಎಲ್ಲಾ ದಿನ ಅನ್ವಯವಾಗಲಿದೆ ಎಂಬುದು ಗಮನಿಸಬೇಕಾದ ಮತ್ತೊಂದು ಸಂಗತಿ.
ಈಗಾಗಲೇ ಸರ್ಕಾರ ಆಗಸ್ಟ್ ಒಂದರಿಂದ ರಾಜ್ಯದಲ್ಲಿ ಕೆಲವೊಂದು ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಜನರು ಈ ಕುರಿತಾಗಿ ಈ ಈಗಾಗಲೇ ತಮ್ಮ ಅಸಮಧಾನವನ್ನು ಹೊರ ಹಾಕುತ್ತಿದ್ದಾರೆ. ಇನ್ನು ಈ ಬಸ್ ದರಗಳೂ ಹೆಚ್ಚಾದರೆ ಸರ್ಕಾರವು ಜನರ ಆಕ್ರೋಶಕ್ಕೆ ಬಲಿಯಾಗಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications