ನಂಬಿದ್ರೆ ನಂಬಿ 'ಶಕುಂತಲಾ ಎಕ್ಸ್‌ಪ್ರೆಸ್' ಭಾರತೀಯ ರೈಲ್ವೆಯ ಭಾಗವಲ್ಲ!
ಇಡೀ ದೇಶದ ಸಂಚಾರ ಜೀವನಾಡಿ ಎಂದೇ ವಿಶ್ಲೇಷಿಸಬಹುದಾದ 'ಭಾರತೀಯ ರೈಲ್ವೆ' ದೇಶದ ಮೂಲೆ ಮೂಲೆಗೂ ಸಂಪರ್ಕ ಜಾಲವನ್ನು ವ್ಯಾಪಿಸಿದೆ. ದೈನಂದಿನ ಲಕ್ಷಾಂತರ ಮಂದಿ ಭಾರತೀಯ ರೈಲ್ವೆಯನ್ನು ಆಶ್ರಯಿಸುತ್ತಿದ್ದು, ಇದರ ಹೊರತಾಗಿ ಭಾರಿ ಗಾತ್ರದ ಸರಕುಗಳನ್ನು ರವಾನಿಸಲಾಗುತ್ತದೆ.
ಭಾರತೀಯ ರೈಲ್ವೆಯ ಕುರಿತಾಗಿ ನಿಮಗೆ ಗೊತ್ತಿರದ 40 ಆಸಕ್ತಿದಾಯಕ ಅಂಶಗಳು
1853 ಬ್ರಿಟನ್ ಆಡಳಿತ ಕಾಲಘಟ್ಟದಲ್ಲಿ ಆರಂಭವಾದ ಭಾರತೀಯ ರೈಲ್ವೆಯನ್ನು ಸ್ವಾತಂತ್ರ್ಯ ನಂತರ 1951ನೇ ಇಸವಿಯಲ್ಲಿ ರಾಷ್ಟ್ರೀಕೃತಗೊಳಿಸಲಾಗಿತ್ತು. ಆದರೆ ರೈಲ್ವೆಯ ಒಂದು ವಿಭಾಗ ಈಗಲೂ ಖಾಸಗಿತನದ ಅಧೀನತೆಯಲ್ಲಿದೆ ಅಂದರೆ ನಿಮ್ಮಿಂದ ನಂಬಲು ಸಾಧ್ಯವೇ? ಹೌದು, ನೀವು ನಂಬಿದ್ರೆ ನಂಬಿ, ಅಂದಿನಿಂದಲೂ ಇಂದಿನವರೆಗೂ 'ಶಕುಂತಲಾ ರೈಲ್ವೇಸ್' ಭಾರತೀಯ ರೈಲ್ವೆಯ ಭಾಗವಲ್ಲ. ಇನ್ನೇನಿದು? ಇದರ ಹಿಂದಿರುವ ರಹಸ್ಯವೇನು ಬಲ್ಲೀರಾ? ಬನ್ನಿ ನೋಡೋಣ...

ಶಕುಂತಲಾ ಎಕ್ಸ್ ಪ್ರೆಸ್ ಭಾರತದಲ್ಲಿ ಈಗಲೂ ಸೇವೆಯಲ್ಲಿರುವ ಏಕ ಮಾತ್ರ ಖಾಸಗಿ ರೈಲ್ವೆ ಜಾಲವಾಗಿದೆ. ಈಗಲೂ ಇದರ ಮಾಲಿಕತ್ವವನ್ನು ಬ್ರಿಟನ್ ಸಂಸ್ಥೆ ಉಳಿಸಿಕೊಂಡು ಬಂದಿರುವುದು ಗಮನಾರ್ಹ.

1951ರಲ್ಲಿ ಭಾರತೀಯ ರೈಲ್ವೆಯನ್ನು ರಾಷ್ಟ್ರೀಕೃತಗೊಳಿಸಿದಾಗ ಶಕುಂತಲಾ ಎಕ್ಸ್ ಪ್ರೆಸ್ ಜಾಲ ಒಳಪಟ್ಟಿರಲಿಲ್ಲ. ಅಲ್ಲಿಂದ ಬಳಿಕ ಇಂದಿನ ವರೆಗೂ ಶಕುಂತಲಾ ಎಕ್ಸ್ ಪ್ರೆಸ್ ಏತಕ್ಕಾಗಿ ಖಾಸಗೀಕರಣದಿಂದ ಮುಕ್ತಗೊಳಿಸಲಾಗಿಲ್ಲ ಎಂಬ ಪ್ರಶ್ನೆಗೆ ಅಧಿಕೃತರ ಬಳಿ ಉತ್ತರವಿಲ್ಲ.

1910ನೇ ಇಸವಿಯಲ್ಲಿ ಶಕುಂತಲಾ ಎಕ್ಸ್ ಪ್ರೆಸ್ ಅಥವಾ ಕೇಂದ್ರ ಪ್ರಾಂತ್ಯ ರೈಲ್ವೆ ಸಂಸ್ಥೆಯ (ಸಿಪಿಆರ್ ಸಿ) ಉಗಮವಾಗಿತ್ತು. 'ಕಿಲ್ಲಿಕ್ ನಿಕ್ಸನ್' ಎಂಬ ಬ್ರಿಟನ್ ಸಂಸ್ಥೆಯು ಇದನ್ನು ಸ್ಥಾಪಿಸಿತ್ತು.

ಸಾಮ್ರಾಜ್ಯಶಾಹಿ ಬ್ರಿಟನ್ ಆಡಳಿತ ಕಾಲಘಟ್ಟದಲ್ಲಿ ಬಹುತೇಕ ರೈಲ್ವೆ ಜಾಲವನ್ನು ವೈಯಕ್ತಿಕ ಸಂಸ್ಥೆಗಳ ಮಾಲಿಕತ್ವದಲ್ಲಿ ನಿರ್ವಹಿಸಲಾಗುತ್ತಿದ್ದವು. ಶಕುಂತಲಾ ಎಕ್ಸ್ ಪ್ರೆಸ್ ಜಾಲವನ್ನು ಪ್ರಮುಖವಾಗಿಯೂ ಹತ್ತಿ ಬೆಳೆಯನ್ನು ವಿದರ್ಭಕ್ಕೆ ರವಾನಿಸಲು ಬಳಕೆ ಮಾಡಲಾಗುತ್ತಿತ್ತು. ಅಲ್ಲಿಂದ ಬಳಿಕ ಅದನ್ನು ಇಂಗ್ಲೆಂಡ್ ಗೆ ರಫ್ತು ಮಾಡಲಾಗುತ್ತಿದ್ದವು.

ಆಗಿನ ಕಾಲದಲ್ಲಿ ಕೇಂದ್ರ ಪ್ರಾಂತ್ಯ ರೈಲ್ವೆ ಸಂಸ್ಥೆ ಮತ್ತು ಗ್ರೇಟ್ ಇಂಡಿಯನ್ ಪೆನಿನ್ಸುಲರ್ ರೈಲ್ವೆ (ಜಿಪಿಆರ್ ಪಿ) ನಡುವೆ ಒಪ್ಪಂದ ಏರ್ಪಟ್ಟಿತ್ತು. ಬಳಿಕ ಜಿಐಪಿಆರ್ ಭಾರತೀಯ ಕೇಂದ್ರ ರೈಲ್ವೆಗೆ ವಿಲೀನಗೊಂಡರೂ ಶಕುಂತಲಾ ಎಕ್ಸ್ ಪ್ರೆಸ್ ಮಾತ್ರ ಬೇರ್ಪಟ್ಟು ನಿಂತಿದ್ದು, ಒಪ್ಪಂದ ಈಗಲೂ ಅಸ್ತಿತ್ವದಲ್ಲಿದೆ.

ಬಳಿಕ ನಿಧಾನವಾಗಿ ಪ್ರಯಾಣಿಕರನ್ನು ಸಾಗಿಸಲು ಶಕುಂತಲಾ ಎಕ್ಸ್ ಪ್ರೆಸ್ ಸೇವೆಯನ್ನು ಬಳಕೆ ಮಾಡಲಾಯಿತು. ತನ್ನ ರೈಲುಗಳನ್ನು ಓಡಿಸಲು ಶಕುಂತಲಾ ಎಕ್ಸ್ ಪ್ರೆಸ್ ಜಾಲವನ್ನು ಬಳಕೆ ಮಾಡಲು ಆರಂಭಿಸಿದ ಜಿಐಪಿಆರ್ ಇದಕ್ಕಾಗಿ ತೆರಿಗೆ ಪಾವತಿಸುತ್ತಿತ್ತು. ಈಗಲೂ ಭಾರತೀಯ ರೈಲ್ವೆಯು ಪರಿಹಾರ ಮೊತ್ತವನ್ನು ನೀಡುತ್ತಿದೆ. ಆದರೆ ಇತ್ತೀಚೆಗಿನ ಕಾಲಘಟ್ಟದಲ್ಲಿ ಈ ವಾಡಿಕೆಗೆ ಭಾರತೀಯ ರೈಲ್ವೆ ಬ್ರೇಕ್ ಹಾಕಿದ್ದು, ತೆರಿಗೆ ನೀಡುವ ಮೊತ್ತವನ್ನು ರೈಲ್ವೆಯ ರಿಪೇರಿ ಮತ್ತು ನಿರ್ವಹಣಾ ಕೆಲಸ ಕಾರ್ಯಗಳಿಗಾಗಿ ನೋಡಿಕೊಳ್ಳುತ್ತಿದೆ.

ಭಾರತೀಯ ರೈಲ್ವೆಯ ಇತರೆಲ್ಲ ರೈಲುಗಿಂತಲೂ ವಿಭಿನ್ನವಾಗಿರುವ ಶಕುಂತಲಾ ಎಕ್ಸ್ ಪ್ರೆಸ್, ಈಗಲೂ ಅಗಲ ಕಿರಿದಾದ ರೈಲು ಹಳಿಗಳ ಸೇವೆಯನ್ನು ಬಳಸಿಕೊಳ್ಳುತ್ತಿದೆ. ಅಲ್ಲದೆ ತನ್ನದೇ ಹಳಿಯಲ್ಲಿ ರೈಲು ಚಾಲನೆ ಮಾಡುವುದಕ್ಕಾಗಿ ಈ ಬ್ರಿಟಿಷ್ ಸಂಸ್ಥೆಯು ಭಾರತೀಯ ರೈಲ್ವೆಯಿಂದ ಒಂದು ಕೋಟಿ ರುಪಾಯಿಗಿಂತಲೂ ಹೆಚ್ಚು ಮೊತ್ತವನ್ನು ಸಂಪಾದಿಸುತ್ತಿದೆ.

ಒಂದು ಪ್ರಯಾಣಿಕ ರೈಲು ಆಗಿರುವ ಶಕುಂತಲಾ ರೈಲ್ವೆ ಮಹಾರಾಷ್ಟ್ರದ ಯವತ್ಮಾಲ್ ನಿಂದ ಮುರ್ತಿಜಪುರ ಪ್ರದೇಶವನ್ನು ಬಂಧಿಸುತ್ತದೆ. ಇದು ಸುಂದರವಾದ ಹತ್ತಿ ಬೆಳೆ ಪ್ರದೇಶವಾಗಿದ್ದು, ಯಾವತ್ತಾದರೂ ಈ ರೈಲಿನಲ್ಲಿ ಸಂಚರಿಸುವುದಾದ್ದಲ್ಲಿ ನಿಮ್ಮನ್ನು 19ನೇ ಶತಮಾನದತ್ತ ಕೊಂಡೊಯ್ಯಲಿದೆ.

ಈಗಲೂ 190 ಕೀ.ಮೀ. ದೂರವನ್ನು ನಾಲ್ಕು ತಾಸಿನಲ್ಲಿ ಕ್ರಮಿಸುವ ಶಕುಂತಲಾ ರೈಲ್ವೆ, ನೂರಾರು ಮಂದಿಗೆ ಕಡಿಮೆ ವೆಚ್ಚದಲ್ಲಿ ದೈನಿಕ ಸಂಚಾರ ತೊಡಕುಗಳನ್ನು ನಿವಾರಿಸುತ್ತದೆ. ಅಲ್ಲದೆ ಈಗಲೂ ಸ್ಟೀಮ್ ಎಂಜಿನ್ ನಿಂದ ಓಡಾಡುತ್ತಿದ್ದು, ಬ್ರಿಟಿಷ್ ಕಾಲದಂತೆ ಮಾನವ ಸಹಾಯದಿಂದ ಮ್ಯಾನುವಲ್ ಆಗಿ ಸಿಗ್ನಲ್ ಮತ್ತು ಟ್ರ್ಯಾಕ್ ಗಳ ನಿರ್ವಹಣೆಯನ್ನು ನೋಡಿಕೊಳ್ಳಲಾಗುತ್ತಿದೆ.

ಬದಲಾವಣೆಯ ಪರ್ವದಲ್ಲಿ ಭಾರತ; ರೈಲಲ್ಲಿ ವಿಮಾನದಂತಹ ಐಷಾರಾಮಿ ಸೌಲಭ್ಯ

ಸಾಗರದಾಳದಲ್ಲಿ ಸಂಚರಿಸಲಿರುವ ದೇಶದ ಚೊಚ್ಚಲ ಬುಲೆಟ್ ರೈಲು


Click it and Unblock the Notifications








