ಇನ್ನು ಒಂದು ವರ್ಷ ವಾಹನ ಚಲಾಯಿಸುವಂತಿಲ್ಲ ಶೇನ್ ವಾರ್ನ್..!

ಅತೀವೇಗದಿಂದ ವಾಹನ ಚಲಾಯಿಸಿದ ಕಾರಣಕ್ಕೆ ಕ್ರಿಕೆಟ್ ದಿಗ್ಗಜ ಹಾಗೂ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರಿಗೆ ಒಂದು ವರ್ಷ ಕಾಲ ಡ್ರೈವಿಂಗ್ ಮಾಡದಂತೆ ನಿಷೇಧ ಹೇರಲಾಗಿದೆ. ಇದರ ಜೊತೆಗೆ ಇಂಗ್ಲೆಂಡ್‍‍ನ ನ್ಯಾಯಾಲಯವು ದುಬಾರಿ ಮೊತ್ತದ ದಂಡವನ್ನೂ ಸಹ ವಿಧಿಸಿದೆ.

ಇನ್ನು ಒಂದು ವರ್ಷ ವಾಹನ ಚಲಾಯಿಸುವಂತಿಲ್ಲ ಶೇನ್ ವಾರ್ನ್..!

ನ್ಯಾಯಾಲಯದ ಮುಂದೆ ಹಾಜರಾಗಿದ್ದ 51 ವರ್ಷದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್​ ವಾರ್ನ್​, ತಾವು ಅತಿವೇಗದಿಂದ ಚಾಲನೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಕಳೆದ ಆಗಸ್ಟ್​ ತಿಂಗಳಿನಲ್ಲಿ ಕಿಂಗ್​​ಸ್ಟನ್​ನಲ್ಲಿ ತಮ್ಮ ಜಾಗ್ವಾರ್​ ಕಾರಿನಲ್ಲಿ ತೆರಳುತ್ತಿದ್ದ ಶೇನ್​ ವಾರ್ನ್​, ಗಂಟೆಗೆ 40 ಎಂ‍‍ಪಿಎಚ್ ವೇಗದಲ್ಲಿ ಚಾಲನೆ ಮಾಡಬೇಕಾದ ರಸ್ತೆಯಲ್ಲಿ ಗಂಟೆಗೆ 47 ಎಂಪಿಎಚ್ ವೇಗದಲ್ಲಿ ಚಾಲನೆ ಮಾಡುವ ಮೂಲಕ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ.

ಇನ್ನು ಒಂದು ವರ್ಷ ವಾಹನ ಚಲಾಯಿಸುವಂತಿಲ್ಲ ಶೇನ್ ವಾರ್ನ್..!

ಶೇನ್ ವಾರ್ನ್ ಅವರ ಮೇಲೆ 2016 ಏಪ್ರೀಲ್ ತಿಂಗಳನಿಂದ ಇಲ್ಲಿಯವರೆಗೆ ಬರೊಬ್ಬರಿ ಐದು ಬಾರಿ ಅತೀವೇಗವಾಗಿ ವಾಹನ ಚಲಾಯಿಸಿದ ಪ್ರಕರಣಗಳು ದಾಖಲಾಗಿವೆ. ಇದಕ್ಕಾಗಿ 15 ಪೆನಾಲ್ಟಿ ಪಾಯಿಂಟ್ ಅನ್ನು ಹೊಂದಿದ್ದರು, ಆದರೆ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿರಲಿಲ್ಲ.

ಇನ್ನು ಒಂದು ವರ್ಷ ವಾಹನ ಚಲಾಯಿಸುವಂತಿಲ್ಲ ಶೇನ್ ವಾರ್ನ್..!

ಶೇನ್ ವಾರ್ನ್ ಅವರು ವಿಂಬಲ್ಡನ್​ನ ಮ್ಯಾಜಿಸ್ಟ್ರೇಟ್​ ನ್ಯಾಯಾಲಯದ ಮುಂದೆ ಹಾಜರಾದ ವೇಳೆ ಈ ಎಲ್ಲಾ ಪ್ರಕರಣಗಳನ್ನು ನ್ಯಾಯಾಲಯ ಪರಿಗಣಿಸಿದೆ. ಈ ಎಲ್ಲಾ ಪ್ರಕರಣಗಳನ್ನು ಸೇರಿಸಿ 1,845 ಪೌಂಡ್​ ದಂಡವನ್ನು ನ್ಯಾಯಾಲಯಕ್ಕೆ ಪಾವತಿಸುವಂತೆ ಕೋರ್ಟ್​ ಆದೇಶ ನೀಡಿದೆ.

ಇನ್ನು ಒಂದು ವರ್ಷ ವಾಹನ ಚಲಾಯಿಸುವಂತಿಲ್ಲ ಶೇನ್ ವಾರ್ನ್..!

ಭಾರತೀಯ ರೂಪಾಯಿ ಮೌಲ್ಯದಲ್ಲಿ ಸರಿ ಸುಮಾರು ರೂ.1.6 ಲಕ್ಷ ದಂಡ ವಿಧಿಸಿದೆ. ದಂಡದೊಂದಿಗೆ 12 ತಿಂಗಳು ಡ್ರೈವಿಂಗ್​ ಮಾಡುವುದನ್ನು ಬ್ಯಾನ್​ ಮಾಡಿದೆ. ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಆಡ್ರನ್ ಟರ್ನರ್ ಅವರು ಮಾತನಾಡಿ, ಕಾನೂನು ಮೀರಿದಾಗ ಅದನ್ನು ಶಿಕ್ಷಿಸುವುದು ಮತ್ತು ಸಾರ್ವಜನಿಕರನ್ನು ರಕ್ಷಿಸುವುದು ನ್ಯಾಯಾಲಯದ ಉದ್ದೇಶ. ಅವರ ಮೇಲೆ 15 ಪೆನಾಲ್ಟಿ ಪಾಯಿಂಟ್‍ಗಳಿದ್ದವು.

ಇನ್ನು ಒಂದು ವರ್ಷ ವಾಹನ ಚಲಾಯಿಸುವಂತಿಲ್ಲ ಶೇನ್ ವಾರ್ನ್..!

ಗಂಭಿರ ಪ್ರಕರಣವಾಗಿಲ್ಲವಾದರೂ ಪದೇ ಪದೇ ಇವರು ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡುವುದಕ್ಕಾಗಿ 12 ತಿಂಗಳ ಕಾಲ ಡ್ರೈವಿಂಗ್ ಬ್ಯಾನ್ ಮಾಡಲಾಗಿದೆ ಎಂದು ಹೇಳಿದರು. ಶೇನ್ ವಾರ್ನ್ ಕ್ರಿಕೆಟ್‍‍ನಲ್ಲಿ ಸಾಲುಗಟ್ಟಲೇ ದಾಖಲೇ ಮಾಡಿದವರು. ತಮ್ಮ ವ್ಯಯಕ್ತಿಕ ಬದುಕಿನಲ್ಲಿ ವಿವಾದಗಳಿಂದಲೇ ಸದಾ ಸುದ್ದಿ ಮಾಡುತ್ತಿದ್ದಾರೆ.

ಇನ್ನು ಒಂದು ವರ್ಷ ವಾಹನ ಚಲಾಯಿಸುವಂತಿಲ್ಲ ಶೇನ್ ವಾರ್ನ್..!

ಕ್ರಿಕೆಟ್ ಅನ್ನು ಜಂಟಲ್ ಮ್ಯಾನ್ ಆಟ ಎಂದು ಕರೆಯುತ್ತಾರೆ, ಅಂತಹ ಕ್ರಿಕೆತ್ ದಿಗ್ಗಜ ಈ ರೀತಿ ಮಾಡುತ್ತಿರುವುದು ಅವರಿಗೆ ಮತ್ತು ಅವರು ಮಾಡಿದ ಸಾಧನೆಗೆ ಶೋಭೆತರುವಂಹದಲ್ಲ. ಮುಂದುವರೆದ ರಾಷ್ಟ್ರಗಳಾದ ಅಮೇರಿಕಾ ಮತ್ತು ಇಂಗ್ಲೆಂಡ್ ರಾಷ್ಟ್ರಗಳಲ್ಲಿ ನಿಗದಿಪಡಿಸಿದ ವೇಗವನ್ನು ಮೀರಿ ವಾಹನ ಚಲಿಸುವುದು ಒಂದು ಅಪರಾಧವಾಗಿದೆ.

ಇನ್ನು ಒಂದು ವರ್ಷ ವಾಹನ ಚಲಾಯಿಸುವಂತಿಲ್ಲ ಶೇನ್ ವಾರ್ನ್..!

ರಸ್ತೆಗಳಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವುದು ಅಥವಾ ಪದೇ ಪದೇ ಅಪರಾಧವನ್ನು ಮಾಡಿದರೆ ಅವರ ಪೆನಾಲ್ಟಿ ಪಾಯಿಂಟ್‍ಗಳನ್ನು ಹೆಚ್ಚಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಅವರ ಚಾಲನಾ ಪರವಾನಗಿಯನ್ನು ವಶಪಡಿಸಿಕೊಳ್ಳಲಾಗುತ್ತದೆ, ಜೊತೆಗೆ ವಾಹನ ಚಲಾಯಿಸದಂತೆ ನಿಷೇಧ ಹೇರಲಾಗುತ್ತದೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಇನ್ನು ಒಂದು ವರ್ಷ ವಾಹನ ಚಲಾಯಿಸುವಂತಿಲ್ಲ ಶೇನ್ ವಾರ್ನ್..!

ಇಂತಹ ಕಟ್ಟುನಿಟ್ಟಾದ ಕಾನೂನುಗಳಿಂದ ಆ ದೇಶದಲ್ಲಿ ಸಂಚಾರಿ ನಿಯಮವನ್ನು ಸರಿಯಾಗಿ ಪಾಲಿಸುತ್ತಾರೆ ಮತ್ತು ಅಪಘಾತಗಳ ಸಂಖ್ಯೆಯು ವಿರಳ. ಇಂತಹ ದುಬಾರಿ ದಂಡವಿರುವುದರಿಂದ ಸಂಚಾರಿ ನಿಯಮ ಉಲ್ಲಂಘನೆ ಮಾಡುವುದಕ್ಕೆ ಹಿಂದೇಟು ಹಾಕುತ್ತಾರೆ. ಭಾರತದಲ್ಲೂ ಸಂಚಾರಿ ನಿಯಮವನ್ನು ಬಲ ಪಡಿಸಲು ಹೊಸ ಸಂಚಾರಿ ನಿಯಮವನ್ನು ಜಾರಿಗೊಳಿಸಲಾಗಿತ್ತು.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಇನ್ನು ಒಂದು ವರ್ಷ ವಾಹನ ಚಲಾಯಿಸುವಂತಿಲ್ಲ ಶೇನ್ ವಾರ್ನ್..!

ಹೊಸ ಸಂಚಾರಿ ನಿಯಮ ಜಾರಿಯಾದ ನಂತರ ಭಾರತದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ಸಂಖ್ಯೆಯು ಕಡಿಮೆಯಾಗಿತ್ತು. ಆದರೆ ಕೆಲವು ಕಡೆಗಳಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ದ ಅಕ್ರೋಶ ವ್ಯಕ್ತಪಡಿಸಿಲಾದ ಕಾರಣದಿಂದ ಹೊಸ ಸಂಚಾರಿ ನಿಯಮಕ್ಕೆ ಹಲವು ರಾಜ್ಯಗಳು ತಿದ್ದುಪಡಿ ತಂದವು. ಕಾನೂನುನನ್ನು ಜನರ ಸುರಕ್ಷತೆಗಾಗಿ ಜಾರಿಗೊಳಿಸಿರುವುದು ಎಂಬುವುದನ್ನು ಜನರು ಅರಿತುಕೊಳ್ಳಬೇಕು.

More from DriveSpark

Article Published On: Tuesday, September 24, 2019, 15:27 [IST]
English summary
Shane Warne BANNED from driving for 1 year & fined Rs. 1.2 lakh: Here’s why - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+