ಚೀನಾ ಮಿಸೈಲ್ ಪರೀಕ್ಷೆ; ಭಾರತದಲ್ಲೂ ಮಡುಗಟ್ಟಿದ ಆತಂಕ

By Nagaraja

ನೆರೆಯ ಚೀನಾದ ದೇಶಯು ಅತ್ಯಂತ ಶಕ್ತಿಶಾಲಿ ಹೈಪರ್ ಸೋನಿಕ್ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗವನ್ನು ನಡೆಸಿದೆ. ಇದರೊಂದಿಗೆ ಭಾರತದಲ್ಲೂ ಆತಂಕ ಮಡುಗಟ್ಟಿದೆ. ಪ್ರಮುಖವಾಗಿಯೂ ಅಮೆರಿಕದಂತಹ ಅಶ್ವಶಕ್ತಿಯನ್ನು ಎದುರಿಸುವಷ್ಟು ಶಕ್ತವಾದ ಮಿಸೈಲ್ ಪರೀಕ್ಷೆಯನ್ನು ಚೀನಾ ನಡೆಸಿದೆ. ಆದರೆ ಇದರಿಂದ ಬೆಳೆದು ಬರುತ್ತಿರುವ ಭಾರತಕ್ಕೂ ಅಪಾಯ ಕಾದಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

Also Read: ಕಲಾಂಗೆ ಸಲಾಂ: ಕ್ಷಿಪಣಿಗಳ ಜನಕ ವಿಜ್ಞಾನಿಯೊಬ್ಬ ರಾಷ್ಟ್ರಪತಿಯಾಗಿ ..!

ಚೀನಾ ಪರೀಕ್ಷೆ ಮಾಡಿರುವ ಡಿಎಫ್-ಝಡ್‌ಎಫ್ ಹೈಪರ್ ಸೋನಿಕ್ ಕ್ಷಿಪಣಿಯು ಒಂದು ಹೈ ಸ್ಪೀಡ್ ಮಿಸೈಲ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ವಿಶ್ವದ ಯಾವುದೇ ಕೋನವನ್ನು ಹೊಡೆದುರಳಿಸುವ ಸಾಮರ್ಥ್ಯವನ್ನು ಹೊಂದಿದೆ. ಶಬ್ದಕ್ಕಿಂತಲೂ ಐದು ಪಟ್ಟು ವೇಗದಲ್ಲಿ ಸಂಚರಿಸಬಲ್ಲ ಸಾಮರ್ಥ್ಯದ ಈ ಖಂಡಾಂತರ ಕ್ಷಿಪಣಿಯು ಗಂಟೆಗೆ 6173 ಕೀ.ಮೀ. ವೇಗದಲ್ಲಿ ಜಿಗಿಯಲಿದೆ.

ಭಾರತದ 'ಶೌರ್ಯ' ಪ್ರದರ್ಶನ

ಚೀನಾ ನೂತನ ಕ್ಷಿಪಣಿ ಪರೀಕ್ಷೆಯು ಭಾರತಕ್ಕೆ ನೀಡಿರುವ ಪರೋಕ್ಷ ಸಂದೇಶ ಕೂಡಾ ಆಗಿದೆ. ಈ ಹಿಂದೆ 2008ರಲ್ಲಿ ಭಾರತ ಸಹ ಹೈಪರ್ ಸೋನಿಕ್ ಸಾಮರ್ಥ್ಯದ ಶೌರ್ಯ ಕ್ಷಿಪಣಿ ಪರೀಕ್ಷೆ ಮಾಡಿರುವುದನ್ನು ನೆನಪಿಸಿಕೊಳ್ಳಬಹುದು.

ಭಾರತದ 'ಶೌರ್ಯ' ಪ್ರದರ್ಶನ

ಭಾರತ ಹಿಂದೊಮ್ಮೆ ನಡೆಸಿರುವ ಶೌರ್ಯ ಕ್ಷಿಪಣಿಯು ಚೀನಾದ ಅತ್ಯಾಧುನಿಕ ಹೈಪರ್ ಸೋನಿಕ್ ಮಿಸೈಲ್ ಗೆ ಸಮವಾಗಲಿದೆಯೇ ಎಂಬುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ಭಾರತದ 'ಶೌರ್ಯ' ಪ್ರದರ್ಶನ

ಭಾರತೀಯ ಸೇನಾಪಡೆಯ ನೇತೃತ್ವದಲ್ಲಿ ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ ಶೌರ್ಯ ಮೇಲ್ಮೈಯಿಂದ ಮೇಲ್ಮೈಗೆ ದಾಳಿಯಿಡಬಹುದಾದ ಹೈಪರ್ ಸೋನಿಕ್ ಯುದ್ಧ ಕ್ಷಿಪಣಿಯಾಗಿದೆ.

ಭಾರತದ 'ಶೌರ್ಯ' ಪ್ರದರ್ಶನ

ಶೌರ್ಯ ಯುದ್ಧ ಕ್ಷಿಪಣಿಯು 750 ಕೀ.ಮೀ. ಗಳಿಂದ ಗರಿಷ್ಠ 1900 ಕೀ.ಮೀ. ದೂರದ ವ್ಯಾಪ್ತಿಯ ವರೆಗೆ ದಾಳಿಯಿಡುವ ಸಾಮರ್ಥ್ಯ ಹೊಂದಿದ್ದು, ಒಂದು ಟನ್ ವರೆಗೆ ಸಾಂಪ್ರದಾಯಿಕ ಹಾಗೂ ಅಣ್ವಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

ಭಾರತದ 'ಶೌರ್ಯ' ಪ್ರದರ್ಶನ

ಶತ್ರು ಪಾಳೇಯದಿಂದ ಸುಲಭವಾಗಿ ನೆಲದಡಿಯಲ್ಲಿ ಬಚ್ಚಿಡಬಹುದಾದ ಶೌರ್ಯ ಮಿಸೈಲ್‌ನಲ್ಲಿ ಎರಡು ಹಂತದ ಸಾಲಿಡ್ ಫ್ಯೂಯಲ್ಡ್ ರಾಕೆಟ್ ಮೋಟಾರುಗಳನ್ನು ಆಳವಡಿಸಲಾಗಿದೆ. ತಜ್ಞರ ಪ್ರಕಾರ ಸ್ಯಾಟಲೈಟ್ ಗಳ ಕಣ್ಗಾವಲಿಂದಲೂ ಇದನ್ನು ಬಚ್ಚಿಡಬಹುದಾಗಿದೆ.

ಭಾರತದ 'ಶೌರ್ಯ' ಪ್ರದರ್ಶನ

2011ರಲ್ಲಿ ಚಂಡೀಪುರದ ಟೆಸ್ಟ್ ರೇಂಜ್‌ನಲ್ಲಿ ಮೂರನೇ ಬಾರಿಯೂ ಯಶಸ್ವಿ ಪರೀಕ್ಷೆಗೊಳಪಟ್ಟಿರುವ ಶೌರ್ಯ, ಮ್ಯಾಕ್ 7.5 ವೇಗದಲ್ಲಿ ಸಂಚರಿಸಿತ್ತು. ಇದಾದ ಬಳಿಕ ಭಾರತೀಯ ನೌಕಾದಳದ ಸೇವೆಗೂ ಮುಕ್ತವಾಗಿತ್ತು. ನೌಕಾ ದಳದಲ್ಲಿದ್ದು 'ಸಾಗರಿಕಟ ಎಂಬ ಹೆಸರಿನಿಂದ ಸಂಬೋಧಿಸಲ್ಪಡುತ್ತಿದೆ.

ಭಾರತದ 'ಶೌರ್ಯ' ಪ್ರದರ್ಶನ

ನಿಮ್ಮ ಮಾಹಿತಿಗಾಗಿ, ಮ್ಯಾಕ್ 5 ಶಬ್ದ ವೇಗಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಚಲಿಸುವ ವಾಹನಗಳಿಗೆ ಹೈಪರ್ ಸೋನಿಕ್ ಸ್ಪೀಡ್ ಎಂದು ಕರೆಯಲಾಗುತ್ತದೆ. ಅಂದರೆ ಸಹಜವಾಗಿಯೇ ಸೂಪರ್ ಸೋನಿಕ್ ಗಿಂತಲೂ ಹಲವಾರು ಪಟ್ಟು ಹೆಚ್ಚು ವೇಗದಲ್ಲಿ ಚಲಿಸುತ್ತದೆ.

ಭಾರತದ 'ಶೌರ್ಯ' ಪ್ರದರ್ಶನ

ಒಟ್ಟಿನಲ್ಲಿ ಶೌರ್ಯ ಕ್ಷಿಪಣಿಯಿಂದ ಸ್ಪೂರ್ತಿ ಪಡೆದುಕೊಂಡು ಮತ್ತಷ್ಟು ದೂರ ವ್ಯಾಪ್ತಿಯ ಪ್ರಬಲ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ಭಾರತೀಯ ರಕ್ಷಣಾ ಪಡೆಯ ವಿಜ್ಞಾನಿಗಳು ಕಾರ್ಯ ಮಗ್ನವಾಗಿದ್ದಾರೆ.

ಭಾರತದ 'ಶೌರ್ಯ' ಪ್ರದರ್ಶನ

ಅಗ್ನಿ ಕ್ಷಿಪಣಿ: ಪ್ರತಿಯೊಬ್ಬ ಭಾರತೀಯನೂ ತಿಳಿದಿರಬೇಕಾದ ಅಂಶಗಳು

More from DriveSpark

Article Published On: Tuesday, December 1, 2015, 15:17 [IST]
English summary
'Shaurya' hypersonic surface-to-surface tactical missile
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+