4 ಕೋಟಿಯ ಐಷಾರಾಮಿ ಕಾರನ್ನು ಖರೀದಿಸಿದ ಶಿಖರ್ ಧವನ್: ಮಾಮೂಲಿ ರೇಂಜ್ ರೋವರ್ ಅಲ್ಲ ಕಣ್ರೀ!
ಭಾರತ ಕ್ರಿಕೆಟ್ ತಂಡ ಕಂಡ ಅತ್ಯುನ್ನತ ಓಪನಿಂಗ್ ಬ್ಯಾಟ್ಸ್‌ಮೆನ್ ಆದಂತಹ ಶಿಖರ್ ಧವನ್ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿರುತ್ತಾರೆ. ರೀಲ್ಸ್ ಅಥವಾ ಇನ್ಯಾವುದೋ ಫನ್ನೀ ವಿಡಿಯೋಗಳನ್ನು ಶೇರ್ ಮಾಡಿ ಸುದ್ದಿಯಲ್ಲಿರುವ ಶಿಖರ್ ಧವನ್ ಇದೀಗ ಹೊಸ ಲಕ್ಷುರಿ ಕಾರನ್ನು ಖರೀದಿಸಿ ಸುದ್ದಿಯಲ್ಲಿದ್ದಾರೆ.
ಈಗಾಗಲೇ ಹಲವಾರು ಲಕ್ಷುರಿ ಕಾರುಗಳನ್ನು ತಮ್ಮ ಗ್ಯಾರೇಜ್‌ನಲ್ಲಿ ಹೊಂದಿರುವ ಶಿಖರ್ ಧವನ್ ಈಗ ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಫಿ (Range Rover) ಲಕ್ಷುರಿ ಎಸ್‌ಯುವಿಯನ್ನು ಖರೀದಿದ್ದಾರೆ. ಸುಮಾರು ನಾಲ್ಕೂ ಕೋಟಿ ರೂಪಾಯಿಗಳು ಬೆಲೆ ಬಾಳುವ ಈ ಕಾರು ರೇಂಜ್ ರೋವರ್‌ನ ಫ್ಲ್ಯಾಗ್‌ಶಿಪ್ ಕಾರುಗಳಲ್ಲಿ ಒಂದು.

ಇನ್ನು ಶಿಖರ್ ಧವನ್ ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಶೇರ್ ಮಾಡುವ ಮೂಲಕ ಈ ಕಾರನ್ನು ಖರೀದಿಸಿರುವ ಖುಷಿಯನ್ನು ಹಂಚಿಕೊಂಡಿದ್ದಾರೆ. ಪಂಜಾಬಿ ಹಾಡೊಂದಕ್ಕೆ ಈ ಲ್ಯಾಂಡ್ ರೋವರ್ ರೇಂಜ್ ರೋವರ್ ಆಟೋಬಯೋಗ್ರಫಿ ಕಾರಿನ ಜೊತೆ ರೀಲ್ಸ್ ಮಾಡಿದ್ದು ನೀಲಿ ಬಣ್ಣದ ಶರ್ಟ್‌ನಲ್ಲಿ ಶೀಖರ್ ಮಿಂಚುತ್ತಿದ್ದಾರೆ.
ಇದು ಇತ್ತೀಚಿನ ಜನರೇಷನ್ ನ ರೇಂಜ್ ರೋವರ್ ಆಟೋಬಯೋಗ್ರಫಿ ಎಸ್‌ಯುವಿಯಾಗಿದ್ದು ಸದ್ಯಕ್ಕೆ ಇದರ ಬಗ್ಗೆ ಬಾಲಿವುಡ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಒಲವು ತೋರಿಸುತ್ತಿದ್ದಾರೆ. ಆದರೆ ಶಿಖರ್ ಧವನ್ ಇದರ ಯಾವ ಮಾಡೆಲ್ ತೆಗೆದುಕೊಂಡಿದ್ದಾರೆ ಎಂದು ನಿರ್ಧಿಷ್ಟವಾಗಿ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿಲ್ಲ.
ಇನ್ನು ಈ ರೇಂಜ್ ರೋವರ್ ಆಟೋ ಬಯೋಗ್ರಫಿ ಕಾರಿನ ಆರಂಭಿಕ ಬೆಲೆ 3.5 ಕೋಟಿಯಾಗಿದ್ದು ಇದರ ಟಾಪ್ ವೇರಿಯಂಟ್ 4 ಕೋಟಿಯವರೆಗೂ ಬೆಲೆ ಬಾಳುಯತ್ತದೆ. ರೇಂಜ್ ರೋವರ್ ಕಾರುಗಳಲ್ಲೇ ಇದು ಮುಂಚೂಣಿಯಲ್ಲಿದ್ದು ಹಲವು ಸೆಲೆಬ್ರಿಟಿಗಳು ಇತ್ತೀಚೆಗೆ ಈ ಕಾರನ್ನು ತೆಗೆದುಕೊಳ್ಳುವುತ್ತಿರುವುದನ್ನು ನಾವು ಸೋಷಿಯಲ್ ಮೀಡಿಯಾಗಳಲ್ಲಿ ಕಾಣಬಹುದು.
ಈ ರೇಂಜ್ ರೋವರ್ ಆಟೋಬಯೋಗ್ರಫಿ ಕಾರು ಆಕರ್ಷಕ ಲುಕ್ ಮತ್ತು ರಗಡ್ ಪರ್ಫಾಮೆನ್ಸ್‌ಗೆ ಹೆಸರುವಾಸಿಯಾಗಿದೆ. ಇದರಲ್ಲಿ ಎಲ್‌ಇಡಿ ಇಂಡಿಕೇಟರ್ಸ್ ಮತ್ತು ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್ ಗಳಿದೆ. ಇದರಲ್ಲಿ ರೀ ಡಿಸೈನ್ಡ್ ಬಂಪರ್‌ಗಳನ್ನು ಸೇರಿಸಲಾಗಿದ್ದು ಇದರಿಂದ ಈ ಕಾರಿಗೆ ಪ್ರೀಮಿಯಂ ಟಚ್ ನೀಡುತ್ತದೆ.

ಇನ್ನು ಈ ಕಾರಿನಲ್ಲಿ ಹೆಚ್ಚು ಆಕರ್ಷಕವಾಗಿರುವುದೆಂದರೆ ಇದರ ವಿಶಾಲವಾದ ಲಕ್ಷುರಿಯಸ್ ಕ್ಯಾಬಿನ್. ಹೊಸ ಮಾದರಿಯ ಕಾರಾಗಿರುವುದರಿಂದ ಇದರಲ್ಲಿ ಹತ್ತು ಹಲವಾರು ಪ್ರೀಮಿಯಂ ಫೀಚರ್‌ಗಳನ್ನು ಕಾಣಬಹುದು. ಇದರಲ್ಲಿ ಮುಖ್ಯವಾಗಿರುವುದೆಂದರೆ ಸುಮಾರು 35 ಸ್ಪೀಕರ್‌ಗಳ ಆಕ್ಟೀವ್ ನಾಯ್ಸ್ ಕ್ಯಾನ್ಸಲೇಷನ್ ಟೆಕ್ನಾಲಜಿಯಿರುವ ಮೆರಿಡಿಯನ್‌ನ ಸೌಂಡ್ ಸಿಸ್ಟಂ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications