ಗೂಗಲ್‌ ಮ್ಯಾಪ್‌ ಮಾಡಿದ ಅವಾಂತರಕ್ಕೆ ಸಿನಿಮಾ ನಟಿ ಸುಸ್ತು: ಕೊಂಚ ಎಡವಿದ್ದರೂ ಕೇಸ್‌ ದಾಖಲು!

ಇತ್ತೀಚಿನ ದಿನಗಳಲ್ಲಿ ಗೊತ್ತಿಲ್ಲದೇ ಇರುವ ಜಾಗಗಳಿಗೆ ಹೋಗುವವರ ಜೀವನದ ಅವಿಭಾಜ್ಯ ಅಂಗ ಈ ಗೂಗಲ್‌ ಮ್ಯಾಪ್‌. ನಮ್ಮಲ್ಲಿ ಬಹುತೇಕ ಎಲ್ಲರೂ ಸಹ ಜೀವನದಲ್ಲಿ ಒಮ್ಮೆಯಾದರೂ ಗೂಗಲ್‌ ಮ್ಯಾಪ್‌ ಅನ್ನು ಉಪಯೋಗಿಸಿಯೇ ಇರುತ್ತೇವೆ. ಹಲವು ಬಾರಿ ನಾವು ಹೋಗಬೇಕಾದ ಜಾಗಕ್ಕೆ ಕರೆದುಕೊಂಡು ಹೋಗದೇ, ಬೇರೆಯೇ ಜಾಗಕ್ಕೆ ಕರೆದುಕೊಂಡು ಹೋಗಿ ಬಿಟ್ಟಿದ್ದೂ ಇದೆ ಈ ಗೂಗಲ್ ಮ್ಯಾಪ್‌. ಈ ಅನುಭವ ಕೇವಲ ನಮ್ಮಂತ ಸಮಾನ್ಯರಿಗೆ ಮಾತ್ರವಲ್ಲದೇ ಸೆಲೆಬ್ರಿಟಿಗಳಿಗೂ ಸಹ ಅನುಭವವಾಗಿದೆ. ಅದೇ ರೀತಿ ಇದೀಗ ಮತ್ತೊಂದು ಘಟನೆ ಸಂಭವಿಸಿದ್ದು ಇಲ್ಲೊಬ್ಬರು ತಾವು ಹೋಗಬೇಕಿದ್ದ ಸ್ಥಳಕ್ಕೆ ತಡವಾಗಿ ಬಂದಿರುವ ಘಟನೆ ಸಂಭವಿಸಿದೆ.

ಈ ಬಾರಿ ಗೂಗಲ್‌ ಮ್ಯಾಪ್‌ನ ಈ ರಂಪಾಟಕ್ಕೆ ಬೇಸತ್ತಿರುವುದು ಬಾಲಿವುಡ್‌ ಬೆಡಗಿ ಶಿಲ್ಪಾ ಶೆಟ್ಟಿ. ಹೌದು, ಶಿಲ್ಪಾ ಶೆಟ್ಟಿ ತಾವು ತೆರಳಬೇಕಿದ್ದ ಜಾಗದ ಮ್ಯಾಪ್‌ ಹಾಕಿ ಮತ್ತ ಐಷಾರಾಮಿ ಬೆಂಟ್ಲಿ ಫ್ಲೈಯಿಂಗ್‌ ಸ್ಪರ್‌ ಕಾರಿನಲ್ಲಿ ಪ್ರಯಾಣ ಆರಂಭಿಸಿದ ಮೇಲೆ ಗೂಗಲ್‌ ಮ್ಯಾಪ್ ಇವರನ್ನು ನೋ ಎಂಟ್ರೀ ಝೋನ್‌ಗಳು, ಒನ್‌ ವೇ ರಸ್ತೆಗಳಲ್ಲಿ ಕರೆದುಕೊಂಡು ಹೋಗಿದೆ. ಈ ಕಾರಣ ಸಮಾರಂಭಕ್ಕೆ ಶಿಲ್ಪಾ ಶೆಟ್ಟಿ ತಡವಾಗಿ ಆಗಮಿಸಿರುವ ಘಟನೆಯೊಂದಕ್ಕೆ ವರದಿಯಾಗಿದೆ.

Shilpa Shetty arrived late to an event in her Bentley Flying Spur due to a Google Maps error

ಹೌದು, ಇನ್ಟ್ಸಾಂಟ್‌ ನೂಡಲ್‌ ಕಂಪನಿಯ ಲಾಂಚ್‌ ಸಮಾರಂಭವೊಂದಕ್ಕೆ ಶಿಲ್ಪಾ ಶೆಟ್ಟಿ ಆಗಮಿಸಬೇಕಿತ್ತು. ಆದರೆ ಗೂಗಲ್‌ ಮ್ಯಾಪ್‌ ಕೈಕೊಟ್ಟ ಕಾರಣ ಶಿಲ್ಪಾ ಶೆಟ್ಟಿಯವರು ಸಮಾರಂಭಕ್ಕೆ ತಡವಾಗಿ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ. ಗೂಗಲ್‌ ಮ್ಯಾಪ್‌ ಮಾಡಿದ ಅವಾಂತರದಿಂದ ಒನ್‌ವೇ ರಸ್ತೆಗಳಲ್ಲಿ ಮಾರ್ಗವನ್ನು ತೋರಿಸುತ್ತಿತ್ತು ಎಂದಿದ್ದಾರೆ.

ಇದು ಮಾತ್ರವಲ್ಲದೇ ಈ ರೀತಿಯ ಸಾಕಷ್ಟು ಉದಾಹರಣೆಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ನೋಡಬಹುದಾಗಿದೆ. ಹಲವು ಬಾರಿ ಗೂಗಲ್‌ ಮ್ಯಾಪ್‌ ಅನ್ನು ನೋಡಿಕೊಂಡು ಚಿಕ್ಕ ಚಿಕ್ಕ ರಸ್ತೆಗಳಲ್ಲಿ ಸಿಲುಕಿ ಹಾಕಿಕೊಂಡು ಪೇಚಾಡಿಕೊಳ್ಳುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ನಾವು ಕಾಣಬಹುದಾಗಿದೆ.

Shilpa Shetty arrived late to an event in her Bentley Flying Spur due to a Google Maps error

ಇನ್ನು ಶಿಲ್ಪಾ ಶೆಟ್ಟಿ ಸಮಾರಂಭಕ್ಕೆ ಆಗಮಿಸಿದ ಬೆಂಟ್ಲಿ ಫ್ಲೈಯಿಂಗ್‌ ಸ್ಪರ್‌ (Bentley Flying Spur) ಕಾರಿನ ಬಗ್ಗೆ ನೋಡುವುದಾದರೆ, 2022ರ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ನೂತನ ಫೀಚರ್ಸ್ ಗಳನ್ನು ಮತ್ತು ತಂತ್ರಜ್ಞಾನದೊಂದಿಗೆ ನವೀಕರಿಸಿದೆ. ಇದರೊಂದಿಗೆ ಹೊಸ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿದೆ. ನವೀಕರಿಸಿದ ಫ್ಲೈಯಿಂಗ್ ಸ್ಪರ್‌ನಲ್ಲಿನ ಹೊಸ ಗುಣಮಟ್ಟದ ಪೀಚರ್ಸ್ ಗಳನ್ನು ಒಳಗೊಂಡಿವೆ.

ಈ ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಕಾರಿನಲ್ಲಿ 6.0-ಲೀಟರ್ ಟ್ವಿನ್-ಟರ್ಬೊ ಡಬ್ಲ್ಯು 12 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 617 ಬಿಹೆಚ್‌ಪಿ ಪವರ್ ಮತ್ತು 900 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ, ಈ ಎಂಜಿನ್ ನೊಂದಿಗೆ 8-ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಇದರೊಂದಿಗೆ 4.0-ಲೀಟರ್ ವಿ 8 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 535 ಬಿಹೆಚ್‌ಪಿ ಪವರ್ ಮತ್ತು 770 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ವಿ8ಡಬ್ಲ್ಯು12 ಗೆ ಹೋಲಿಸಿದರೆ ಫ್ಲೈಯಿಂಗ್ ಸ್ಪರ್ ಸುಮಾರು 100 ಕೆಜಿ ಹಗುರವಾಗಿದೆ.

ಇನ್ನು ಐಷಾರಾಮಿ ವಾಹನ ತಯಾರಕ ಕಂಪನಿಯಾದ ಬೆಂಟ್ಲಿ ತನ್ನ ಫ್ಲೈಯಿಂಗ್ ಸ್ಪರ್ ಕಾರಿನ 40,000 ಯುನಿಟ್‍‍ಗಳ ಉತ್ಪಾದನೆಯನ್ನು ಪೂರ್ಣಗೊಳಿಸಿ ಕಳೆದ ವರ್ಷ ಹೊಸ ಮೈಲುಗಲ್ಲು ಸೃಷ್ಟಿಸಿದೆ. ಬೆಂಟ್ಲಿ ಕಂಪನಿಯು 15 ವರ್ಷಗಳಿಂದ ಫ್ಲೈಯಿಂಗ್ ಸ್ಪರ್ ಕಾರನ್ನು ಉತ್ಪಾದಿಸುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, May 29, 2024, 14:12 [IST]
English summary
Shilpa shetty arrived late to an event in her bentley flying spur due to a google maps error
Read more on celebrity car india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+