ಸಮುದ್ರ ಮಾರ್ಗವಾಗಿ 3,000 ದುಬಾರಿ ಕಾರುಗಳನ್ನು ಸಾಗಿಸುತ್ತಿದ್ದ ಹಡಗು ಬೆಂಕಿಗೆ ಆಹುತಿ

ಡಚ್ ಕರಾವಳಿಯಲ್ಲಿ ಸುಮಾರು 3,000 ವಾಹನಗಳಿದ್ದ ಹಡಗಿನಲ್ಲಿ ಬುಧವಾರ ಬೆಂಕಿ ಹೊತ್ತಿಕೊಂಡು ಭಾರತೀಯ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದು, 20 ಮಂದಿ ಗಾಯಗೊಂಡಿದ್ದಾರೆ. ಜರ್ಮನಿಯಿಂದ ಈಜಿಪ್ಟ್‌ಗೆ ತೆರಳುತ್ತಿದ್ದ ಪನಾಮ ನೋಂದಾಯಿತ ಹಡಗಿನ ಫ್ರೀಮ್ಯಾಂಟಲ್ ಹೈವೇನಲ್ಲಿ ಮಂಗಳವಾರ ರಾತ್ರಿ ಈ ಬೆಂಕಿ ಅವಘಡ ಸಂಭವಿಸಿದೆ.

ಸಾವನ್ನಪ್ಪಿದ ಸಿಬ್ಬಂದಿಗಳಲ್ಲಿ ಒಬ್ಬರು ಭಾರತೀಯ ಪ್ರಜೆ ಎಂದು ನೆದರ್ಲ್ಯಾಂಡ್ಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಕಚೇರಿಯು ಮೃತರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ತರಲು ಸಹಾಯ ಮಾಡುತ್ತಿದೆ. ಗಾಯಗೊಂಡಿರುವ ಉಳಿದ 20 ಸಿಬ್ಬಂದಿ ಸುರಕ್ಷಿತವಾಗಿದ್ದು, ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದೆ.

ship-caught-fire-carrying-3000-cars-dutch-sea

ಅಧಿಕಾರಿಗಳು ಸದ್ಯ ಹಡಗು ಮುಳುಗದಂತೆ ತಡೆಯಲು ತಮ್ಮ ಪ್ರಯತ್ನಗಳನ್ನು ಮುಂದುವರೆಸಿದ್ದಾರೆ. ಬೆಂಕಿ ಕಾಣಿಸಿಕೊಂಡಾಗ ಹಡಗು ಉತ್ತರದ ವಾಡೆನ್ ದ್ವೀಪಗಳಲ್ಲಿ ಒಂದಾದ ಅಮೆಲ್ಯಾಂಡ್‌ನ ಉತ್ತರಕ್ಕೆ 27 ಕಿಲೋಮೀಟರ್ (17 ಮೈಲುಗಳು) ನೌಕಾಯಾನ ಮಾಡುತ್ತಿತ್ತು. ಹಡಗು 25 ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ 2,857 ಕಾರುಗಳನ್ನು ಸಾಗಿಸುತ್ತಿತ್ತು. EV ಗಳಲ್ಲಿ ಒಂದಕ್ಕೆ ಬೆಂಕಿ ಬಿದ್ದಿರಬಹುದು ಎಂದು ಊಹಿಸಲಾಗಿದೆ.

ಹಡಗಿನ ರಕ್ಷಣೆಗೆ ಶತಪ್ರಯತ್ನ: ರಕ್ಷಣಾ ಹಡಗುಗಳು ಬೆಂಕಿಯಿಂದ ಉರಿಯುತ್ತಿರುವ ಬೃಹತ್ ಹಡಗನ್ನು ತಣ್ಣಗಾಗಲು ನೀರನ್ನು ಸಿಂಪಡಿಸುತ್ತಿದ್ದು, ಹೆಚ್ಚು ನೀರನ್ನು ಬಳಸುವುದರಿಂದ ಅದು ಮುಳುಗುವ ಅಪಾಯವೂ ಇದೆ. ಹಾಗಾಗಿ ನೀರು ಸಿಂಪಡಿಸುವ ಜೊತೆಜೊತೆಗೆ ಅದನ್ನು ತೇಲುವಂತೆ ಒಂದು ರಕ್ಷಣಾ ನೌಕೆಯನ್ನು ಕೊಂಡಿಯಾಗಿರಿಸಲಾಗಿದೆ ಎಂದು ರಕ್ಷಣಾಪಡೆ ತಿಳಿಸಿದೆ.

ship-caught-fire-carrying-3000-cars-dutch-sea

ಇದು ಬೃಹತ್ ಬೆಂಕಿ ಅವಘಡವಾಗಿದ್ದು, ಕಾರುಗಳ ರಕ್ಷಣೆ ಕಷ್ಟವಾಗಲಿದೆ. ಬೆಂಕಿ ಹಲವಾರು ದಿನಗಳವರೆಗೆ ಇರುತ್ತದೆ ಎಂದು ಡಚ್ ಸುದ್ದಿ ಸಂಸ್ಥೆ ANP ವರದಿ ಮಾಡಿದೆ. ಉತ್ತರ ಡಚ್ ದ್ವೀಪವಾದ ಅಮೆಲ್ಯಾಂಡ್ ಬಳಿ ಹಡಗಿನಿಂದ ಹೊಗೆ ಬರುತ್ತಲೇ ಇದ್ದು, ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಬಹುಶಃ ಹಡಗು ಸಾಗಿಸುತ್ತಿದ್ದ ಸರಕುಗಳ ಕಾರಣದಿಂದಾಗಿ ನಂದಿಸಲು ಇದು ತುಂಬಾ ಕಠಿಣವಾಗುತ್ತಿರಬಹುದು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಹೆಲಿಕಾಪ್ಟರ್ ಏರ್ಲಿಫ್ಟ್: ಬೆಂಕಿ ಹೊತ್ತಿಕೊಂಡಾಗ ಹಡಗು ಅಮೆಲ್ಯಾಂಡ್‌ನ ಉತ್ತರಕ್ಕೆ 27 ಕಿ.ಮೀ (17 ಮೈಲುಗಳು) ದೂರದಲ್ಲಿತ್ತು. ಬಹಳಷ್ಟು ಹೊಗೆ ಆವರಿಸಿ ನಿರೀಕ್ಷೆಗಿಂತ ವೇಗವಾಗಿ ಬೆಂಕಿ ತ್ವರಿತವಾಗಿ ಹರಡಿತು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ಇನ್ನು ಉರಿಯುತ್ತಿರುವ ಹಡಗಿನಿಂದ ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮೂಲಕ ಏರ್‌ಲಿಫ್ಟ್ ಮಾಡಲಾಗಿದೆ.

ಬೆಂಕಿಯ ಕಾರಣ ತಿಳಿದಿಲ್ಲ ಎಂದು ಕೋಸ್ಟ್‌ಗಾರ್ಡ್ ತನ್ನ ವೆಬ್‌ಸೈಟ್‌ನಲ್ಲಿ ಹೇಳಿದೆ, ಆದರೆ ಕೋಸ್ಟ್‌ಗಾರ್ಡ್ ವಕ್ತಾರರ ಪ್ರಕಾರ ಇದು ಎಲೆಕ್ಟ್ರಿಕ್ ಕಾರಿನಿಂದ ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಮೊದಲೇ ಹೇಳಿದಂತೆ ಹಡಗಿನಲ್ಲಿದ್ದ 2,857 ವಾಹನಗಳಲ್ಲಿ ಸುಮಾರು 25 ಎಲೆಕ್ಟ್ರಿಕ್ ಕಾರುಗಳಿದ್ದವು. ಈ ನಿಟ್ಟಿನಲ್ಲಿ ಎಲೆಕ್ಟ್ರಿಕ್ ಕಾರುಗಳಿಂದಲೇ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ.

ಇಂಟರ್ನ್ಯಾಷನಲ್ ಮ್ಯಾರಿಟೈಮ್ ಆರ್ಗನೈಸೇಶನ್, ಮುಂದಿನ ವರ್ಷ ಎಲೆಕ್ಟ್ರಿಕ್ ವಾಹನಗಳನ್ನು ಸಾಗಿಸುವ ಹಡಗುಗಳಿಗೆ ಹೊಸ ಕ್ರಮಗಳನ್ನು ಮೌಲ್ಯಮಾಪನ ಮಾಡಲು ಯೋಜಿಸಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಎಲಿಕ್ಟ್ರಿಕ್ ಕಾರಿನ ಬ್ಯಾಟರಿಗಳು ಅತಿಯಾಗಿ ಬಿಸಿಯಾದಾಗ 'ಥರ್ಮಲ್ ರನ್‌ಅವೇ' ಸಂಭವಿಸಿದರೆ ಅದು ತುಂಬಾ ಅಪಾಯಕಾರಿ ಎಂದು ತಜ್ಞರು ಹೇಳಿದ್ದಾರೆ.

ಈ ಘಟನೆಯು ಕಳೆದ ವರ್ಷ ಕಡಲ ದುರಂತವನ್ನು ನೆನಪಿಸಿದೆ, ಅಟ್ಲಾಂಟಿಕ್‌ನಲ್ಲಿ ಸುಮಾರು 4,000 ವೋಕ್ಸ್‌ವ್ಯಾಗನ್ ವಾಹನಗಳನ್ನು ಯುಎಸ್‌ಗೆ ಸಾಗಿಸುತ್ತಿದ್ದ ಹಡಗಿನಲ್ಲಿ ಬೆಂಕಿ ಹೊತ್ತಿಕೊಂಡು ಒಂದು ವಾರಕ್ಕೂ ಹೆಚ್ಚು ಕಾಲ ಸುಟ್ಟುಹೋದ ನಂತರ ಅದನ್ನು ಸುರಕ್ಷಿತವಾಗಿ ಹೊರತರುವ ಪ್ರಯತ್ನಗಳ ನಡುವೆಯೂ ಸಮುದ್ರದಲ್ಲಿ ಮುಳುಗಿತ್ತು.

ಸುಮಾರು 200 ಮೀಟರ್ (656 ಅಡಿ) ಉದ್ದದ 10-ವರ್ಷ-ಹಳೆಯ ಹಡಗು, 4,000 ಕಾರುಗಳನ್ನು ಸಾಗಿಸಬಲ್ಲ ಹಡಗು ಸಮುದ್ರ ಪಾಲಾಗಿತ್ತು. ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಪೇಜ್‌ಗಳನ್ನು ಫಾಲೋ ಮಾಡಿ.

Article Published On: Thursday, July 27, 2023, 12:09 [IST]
English summary
Ship caught fire carrying 3000 cars dutch sea
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+