ವಿಶೇಷ ಚೇತನರಿಗೆ ಹೀರೋ ಸ್ಕೂಟರ್ ವಿತರಿಸಿದ ಸಂಸದ ರಾಘವೇಂದ್ರ
ಶಿವಮೊಗ್ಗ (Shivamogga) ಸಂಸದ ಬಿ.ವೈ.ರಾಘವೇಂದ್ರ (B.Y.Raghavendra) ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣ ಸ್ಥಾಪಿಸುವಲ್ಲಿಯೂ ಮಹತ್ತರವಾದ ಪಾತ್ರವಹಿಸಿದ್ದರು. 2.25 ಕಿಲೋಮೀಟರ್ ಉದ್ದದ ಸಿಗಂದೂರು ಸೇತುವೆ (Sigandur Bridge) ನಿರ್ಮಾಣಕ್ಕೂ ಸಾಕಷ್ಟು ಶ್ರಮಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸಂಸದರ ನಿಧಿಯಿಂದ ವಿಶೇಷ ಚೇತನ ಫಲಾನುಭವಿಗಳಿಗೆ ಹೀರೋ ಸ್ಕೂಟರ್‌ಗಳನ್ನು ವಿತರಣೆ ಮಾಡಿದ್ದಾರೆ.
ಈ ಕುರಿತಂತೆ ಸ್ವತಃ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಂಸದ ಬಿ.ವೈ.ರಾಘವೇಂದ್ರ ಅವರು, ವಿಶೇಷ ಚೇತನ ಫಲಾನುಭವಿಗಳಿಗೆ ಹೀರೋ ಸ್ಕೂಟರ್‌ಗಳನ್ನು ವಿತರಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನೊಂದಿಗೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಯೋಜನೆಯಡಿ ಅನುಮೋದಿಸಿದ ಒಟ್ಟು 7 ತ್ರಿಚಕ್ರ ವಾಹನವನ್ನು ಅರ್ಹ ಫಲಾನುಭವಿಗಳಿಗೆ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ವಿತರಿಸಲಾಯಿತು ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಸಂಸದ ಬಿ.ವೈ.ರಾಘವೇಂದ್ರ ಅವರು, ವಿಶೇಷ ಚೇತನ ಫಲಾನುಭವಿಗಳಿಗೆ ತ್ರಿಚಕ್ರವಾಗಿ ಪರಿವರ್ತಿಸಿದ ಹೀರೋದ 'ಪ್ಲೆಷರ್ ಪ್ಲಸ್' ಸ್ಕೂಟರ್‌ಗಳನ್ನು ಹಸ್ತಾಂತಾರ ಮಾಡಿದ್ದಾರೆ. ದೇಶೀಯ ಮಾರುಕಟ್ಟೆಯಲ್ಲಿ ಈ ಸ್ಕೂಟರ್‌ಗಳು ರೂ.72,163 ರಿಂದ ರೂ.83,918 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತವೆ. ಪರ್ಲ್ ಸಿಲ್ವರ್ ವೈಟ್, ಮ್ಯಾಟ್ ವರ್ನಿಯರ್ ಗ್ರೇ, ಪೋಲೆಸ್ಟಾರ್ ಬ್ಲೂ & ಸ್ಪೋರ್ಟ್ ರೆಡ್ ಸೇರಿದಂತೆ ವಿವಿಧ ಬಣ್ಣಗಳ (ಕಲರ್) ಆಯ್ಕೆಯನ್ನು ಹೊಂದಿವೆ.
ಈ ಹೀರೋ ಪ್ಲೆಷರ್ ಪ್ಲಸ್ (Hero Pleasure Plus) ಸ್ಕೂಟರ್‌ಗಳು 110.9 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 8.15 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 8.70 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತವೆ. 50 ಕೆಎಂಪಿಎಲ್‌ವರೆಗೆ ಮೈಲೇಜ್ ಸಹ ನೀಡಬಲ್ಲವು.

ನೂತನ ಸ್ಕೂಟರ್‌ಗಳು ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಕ್ರೋಮ್ ರೇರ್ ವ್ಯೂ ಮಿರರ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿವೆ. ಬರೋಬ್ಬರಿ 104 ಕೆಜಿ ತೂಕವಿರುವ ಈ ಸ್ಕೂಟರ್‌ಗಳು, 4.8 ಲೀಟರ್‌ನ ಫ್ಯುಯೆಲ್ (ಇಂಧನ) ಟ್ಯಾಂಕ್‌ನ್ನು ಒಳಗೊಂಡಿವೆ.
ಹೊಸ ಹೀರೋ ಪ್ಲೆಷರ್ ಪ್ಲಸ್ ಸ್ಕೂಟರ್‌ಗಳು, ಸವಾರರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) ಹಾಗೂ ಹಿಂಭಾಗ (ರೇರ್) 130 ಎಂಎಂ ಡ್ರಮ್ ಬ್ರೇಕ್‌ಗಳನ್ನು ಹೊಂದಿವೆ. 10-ಇಂಚಿನ ಸ್ಟೀಲ್ ವೀಲ್‌ಗಳು, 90/100-10 ಅಳತೆಯ ಟ್ಯೂಬ್‌ಲೆಸ್ ಟೈಯರ್‌ಗಳನ್ನು ಒಳಗೊಂಡಿದ್ದು, 155 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದಿವೆ.
ಈ ಹೀರೋ ಪ್ಲೆಷರ್ ಪ್ಲಸ್ ಸ್ಕೂಟರ್‌ಗಳಿಗೆ ಟಿವಿಎಸ್ ಸ್ಕೂಟಿ ಜೆಸ್ಟ್ (TVS Scooty Zest) ಹಾಗೂ ಹೋಂಡಾ ಡಿಯೋ (Honda Dio) ಸ್ಕೂಟರ್‌ಗಳು ಪ್ರಬಲವಾದ ಎದುರಾಳಿಯಾಗಿವೆ. ಟಿವಿಎಸ್ ಸ್ಕೂಟಿ ಜೆಸ್ಟ್ ಸ್ಕೂಟರ್ ರೂ.72,614 ರಿಂದ ರೂ.73,417 ಹಾಗೂ ಹೋಂಡಾ ಡಿಯೋ 110 ಸ್ಕೂಟರ್ ರೂ.75,630 ರಿಂದ ರೂ.82,580 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, 50 ಕೆಎಂಪಿಎಲ್‌ವರೆಗೆ ಮೈಲೇಜ್‌ನ್ನು ಕೊಡುತ್ತವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications