Shivamogga: ಶಿವಮೊಗ್ಗದಿಂದ ಈ ನಗರಗಳಿಗೆ ವಿಮಾನ ಸಂಚಾರ ಶುರು.. ಪ್ರಯಾಣದ ಅವಧಿ 1.30 ಗಂಟೆ, ಟಿಕೆಟ್ ದರ ಕಡಿಮೆ!

ಮಲೆನಾಡು ಭಾಗದ ಜನರಿಗೆ ಸಿಹಿಸುದ್ದಿಯೊಂದು ಲಭ್ಯವಾಗಿದೆ. ಶಿವಮೊಗ್ಗದಿಂದ ಚೆನ್ನೈ ಹಾಗೂ ಹೈದರಾಬಾದ್‌ ನಗರಗಳಿಗೆ ಗುರುವಾರದಿಂದ ವಿಮಾನ ಸಂಚಾರ ಆರಂಭವಾಗಿದೆ. ಸ್ಪೈಸ್‌ಜೆಟ್ (SpiceJet) ಈ ಸೇವೆ ಒದಗಿಸುತ್ತಿದೆ. ಮಂಗಳವಾರ ಹೊರತುಪಡಿಸಿ, ವಾರದ ಎಲ್ಲ ದಿನಗಳು ಹೊಸ ವಿಮಾನಗಳು ಕಾರ್ಯಾಚರಣೆ ನಡೆಸಲಿವೆ. ಇದರಿಂದ ಪ್ರಯಾಣಿಕರಿಗೂ ದೊಡ್ಡಮಟ್ಟದಲ್ಲಿ ಅನುಕೂಲವಾಗಲಿದೆ. ಈಗಾಗಲೇ, ಶಿವಮೊಗ್ಗದಿಂದ ದೇಶದ ವಿವಿಧ ನಗರಗಳಿಗೆ ವಿಮಾನಗಳು ಓಡಾಡುತ್ತಿವೆ. ಪ್ರಯಾಣ ದರವು ಕೈಗೆಟುಕುವಂತಿದೆ.

ಚೆನ್ನೈನಿಂದ ಬೆಳಗ್ಗೆ 10.40ಕ್ಕೆ ಹೊರಡುವ ಸ್ಪೈಸ್‌ಜೆಟ್ ವಿಮಾನ ಮಧ್ಯಾಹ್ನ 12.10ಕ್ಕೆ ಶಿವಮೊಗ್ಗಕ್ಕೆ ತಲುಪುತ್ತದೆ. ಪ್ರಯಾಣದ ಅವಧಿ 1.30 ಗಂಟೆಯಿದೆ. ಶಿವಮೊಗ್ಗದಿಂದ ಸಂಜೆ 4.25ಕ್ಕೆ ಸಂಚಾರ ಆರಂಭಿಸಿ, 5.55ಕ್ಕೆ ಚೆನ್ನೈಗೆ ಹೋಗುತ್ತದೆ. ಟಿಕೆಟ್‌ವೊಂದಕ್ಕೆ ಸುಮಾರು ರೂ.2,500 ಆಗುತ್ತದೆ. ಶಿವಮೊಗ್ಗದಿಂದ ಚೆನ್ನೈಗೆ ಸಾಮಾನ್ಯ ಬಸ್‌ನಲ್ಲಿ 13 ಗಂಟೆ ಪ್ರಯಾಣಿಸಬೇಕಾಗಿದೆ.

Shivamogga SpiceJet Flights To Chennai Hyderabad Low Cost Ticket

ಮತ್ತೊಂದು ವಿಮಾನ ಶಿವಮೊಗ್ಗದಿಂದ ಮಧ್ಯಾಹ್ನ 12.35ಕ್ಕೆ ಸಂಚಾರ ಶುರು ಮಾಡಲಿದ್ದು, 2.15ಕ್ಕೆ ಹೈದರಾಬಾದ್‌ ತಲುಪುತ್ತದೆ. ಹೈದರಾಬಾದ್‌ನಿಂದ ಮಧ್ಯಾಹ್ನ 2.40ಕ್ಕೆ ಹೊರಟು ಸಂಜೆ 4 ಗಂಟೆಗೆ ಶಿವಮೊಗ್ಗಕ್ಕೆ ಬರುತ್ತದೆ. ಪ್ರಯಾಣದ ಅವಧಿ 1.30 ಗಂಟೆಯಿದ್ದು, ಟಿಕೆಟ್‌ ದರ ಸುಮಾರು ರೂ.2,500 ಇದೆ. ಶಿವಮೊಗ್ಗದಿಂದ ಹೈದರಾಬಾದ್‌ಗೆ ಬಸ್‌ನಲ್ಲಿ ಪ್ರಯಾಣಿಸಲು 11:35 ಗಂಟೆ ಬೇಕಾಗುತ್ತದೆ.

ಶಿವಮೊಗ್ಗ ವಿಮಾನ ನಿಲ್ದಾಣದಿಂದ (Shivamogga Airport) ಬೆಂಗಳೂರು, ಹೈದರಾಬಾದ್, ತಿರುಪತಿ ಹಾಗೂ ಗೋವಾ ಸೇರಿದಂತೆ ಹಲವು ನಗರಗಳಿಗೂ ವಿಮಾನಗಳು ಸಂಚಾರ ನಡೆಸುತ್ತವೆ. ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಶಿವಮೊಗ್ಗ ಸಮೀಪದ ಸೋಗಾನೆಯಲ್ಲಿ ಬರೋಬ್ಬರಿ ರೂ.450 ಕೋಟಿ ವ್ಯಯಿಸಿ 662.38 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಸೌಕರ್ಯ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ.

ಶಿವಮೊಗ್ಗ ವಿಮಾನ ನಿಲ್ದಾಣದ ಪ್ಯಾಸೆಂಜರ್ ರ್ಟರ್ಮಿನಲ್ ಕಟ್ಟಡ ಬಗಳಷ್ಟು ಸುಸಜ್ಜಿತವಾಗಿದೆ. ಇಲ್ಲಿನ ಸಿಬ್ಬಂದಿಗಳು ಗಂಟೆಯೊಂದಕ್ಕೆ 300 ಪ್ರಯಾಣಿಕರನ್ನು ನಿಭಾಯಿಸಬಹುದು. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಂತರ, ರಾಜ್ಯದಲ್ಲಿ ಅತಿ ಉದ್ದದ ರನ್ ವೇ ಹೊಂದಿರುವ ಎರಡನೇ ವಿಮಾನ ನಿಲ್ದಾಣವೆಂಬ ಕೀರ್ತಿಗೂ ಶಿವಮೊಗ್ಗ ಏರ್‌ಪೋರ್ಟ್‌ ಪಾತ್ರವಾಗಿದೆ.

ದೇಶದಲ್ಲಿಯೇ 148ನೇ ವಿಮಾನ ನಿಲ್ದಾಣವಾಗಿ ಸೇರ್ಪಡೆಗೊಂಡ ಶಿವಮೊಗ್ಗ ವಿಮಾನ ನಿಲ್ದಾಣವನ್ನು 2023ರ ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. ಈ ವಿಮಾನ ನಿಲ್ದಾಣದಲ್ಲಿ ಬೋಯಿಂಗ್ 737 ಮತ್ತು ಏರ್‌ಬಸ್ ಎ320ನಂತಹ ದೊಡ್ಡ ಗಾತ್ರದ ವಿಮಾನಗಳನ್ನು ಸುಲಭವಾಗಿ ಲ್ಯಾಂಡಿಂಗ್ ಮಾಡಬಹುದು.

ಇನ್ನು, ಶಿವಮೊಗ್ಗದಿಂದ ಚೆನ್ನೈ ಹಾಗೂ ಹೈದರಾಬಾದ್‌ ನಗರಗಳಿಗೆ ಸ್ಪೈಸ್‌ಜೆಟ್ ವಿಮಾನ ಸಂಚಾರ ಆರಂಭಿಸಿರುವುದರಿಂದ ಉತ್ತರ ಕನ್ನಡ, ಚಿತ್ರದುರ್ಗ, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಜನರಿಗೂ ಹೆಚ್ಚಿನ ಅನುಕೂಲವಾಗುತ್ತದೆ. ಶಿಕ್ಷಣ ಹಾಗೂ ವ್ಯಾಪಾರ ಕ್ಷೇತ್ರದಲ್ಲಿ ಪ್ರಗತಿಯಾಗುವುದರೊಂದಿಗೆ ಮಲೆನಾಡು ಭಾಗದ ಪ್ರವಾಸೋದ್ಯಮವು ದೊಡ್ಡಮಟ್ಟದಲ್ಲಿ ವೃದ್ಧಿಯಾಗಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, October 11, 2024, 18:33 [IST]
English summary
Shivamogga spicejet flights to chennai hyderabad low cost ticket
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+