ಮಗುವಿಗೆ ಸ್ತನಪಾನ ಮಾಡುತ್ತಿದ್ದಾಗ ಕಾರನ್ನು ಎಳೆದೊಯ್ದ ಟ್ರಾಫಿಕ್ ಪೊಲೀಸರು..!!
ಮಗುವಿಗೆ ಸ್ತನಪಾನ ಮಾಡುತ್ತಿದ್ದಾಗ ಮಹಿಳೆಯ ಸಮೇತ ಕಾರನ್ನು ಎಳೆದೊಯ್ಯುವ ಮೂಲಕ ಮುಂಬಯಿ ಟ್ರಾಫಿಕ್ ಪೊಲೀಸರು ಅಮಾನವೀಯ ವರ್ತನೆ ತೋರಿರುವ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಮಗುವಿಗೆ ಸ್ತನಪಾನ ಮಾಡುತ್ತಿದ್ದಾಗ ಮಹಿಳೆಯ ಸಮೇತ ಕಾರನ್ನು ಎಳೆದೊಯ್ಯುವ ಮೂಲಕ ಮುಂಬಯಿ ಟ್ರಾಫಿಕ್ ಪೊಲೀಸರು ಅಮಾನವೀಯ ವರ್ತನೆ ತೋರಿರುವ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿತ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ನಗರ ಪ್ರದೇಶಗಳಲ್ಲಿ ಟ್ರಾಫಿಕ್ ಸಮಸ್ಯೆಗಿಂತ ಪಾರ್ಕಿಂಗ್ ಸಮಸ್ಯೆ ಕೂಡಾ ಹೆಚ್ಚಾಗುತ್ತಿದೆ. ಆದ್ರೆ ಕಾನೂನು ಪ್ರಕಾರ ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದ ಕಾರು ಮಾಲೀಕನ ವಿರುದ್ಧ ಶಿಸ್ತುಕ್ರಮ ಜರಗಿಸಬೇಕಿದ್ದ ಟ್ರಾಫಿಕ್ ಪೊಲೀಸರು ದಂಡ ವಿಧಿಸುವ ಭರದಲ್ಲಿ ಮಹಿಳೆಯೊಂದಿಗೆ ಅಮಾನವೀಯ ವರ್ತನೆ ತೋರಿದ್ದಾರೆ.

ಅಂದಹಾಗೆ ಈ ಎಲ್ಲಾ ಘಟನೆ ನಡೆದಿರುವುದು ಮುಂಬೈನಲ್ಲಿ. ಮಗುವಿಗೆ ಹುಷಾರಿಲ್ಲ, ಹಾಲು ಕುಡಿಸುತ್ತಿದ್ದೇನೆ ಎಂದು ಮಹಿಳೆ ಚೀರಿಕೊಂಡರು ಕ್ಯಾರೆ ಎನ್ನದ ಪೊಲೀಸರು ಮಹಿಳೆಯ ಸಮೇತವೇ ಕಾರು ಎಳೆದೊಯ್ದು ದುರ್ವತನೆ ತೋರಿದ್ದಾರೆ.

ಈ ವೇಳೆ ಸ್ಥಳದಲ್ಲಿದ್ದ ಯುವಕನೊಬ್ಬ ಇಡಿ ಘಟನೆಯನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಪೊಲೀಸರು ಕ್ರಮವನ್ನು ಕೂಡಾ ಪ್ರಶ್ನೆ ಮಾಡಿದ್ದಾನೆ. ಆದ್ರೆ ಇದಕ್ಕೆಲ್ಲಾ ಕಿವಿಗೊಡದ ಟ್ರಾಫಿಕ್ ಪೊಲೀಸ್ ಮಾತ್ರ ಕಾರು ಎಳೆದೊಯ್ದುವುದೇ ನಮ್ಮ ಡ್ಯೂಟಿ ಎನ್ನುವಂತೆ ಉದ್ದಟನ ಪ್ರದರ್ಶನ ಮಾಡಿದ್ದಾರೆ.
Recommended Video


ಮಹಿಳೆಯ ಜೊತೆ ಪೊಲೀಸರ ನಡೆದುಕೊಂಡ ವಿಡಿಯೋವನ್ನು ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಸ್ಥಳದಲ್ಲಿದ್ದ ಯುವಕನು ಟ್ರಾಫಿಕ್ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದನು.

ನ.10ರಂದು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಮುಂಬೈ ಟ್ರಾಫಿಕ್ ಪೊಲೀಸರ ಕ್ರಮವನ್ನು ಪ್ರಶ್ನಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಟ್ರಾಫಿಕ್ ಪೊಲೀಸ್ ವಿರುದ್ಧ ಕ್ರಮ
ಸ್ತನ ಪಾನ ಮಾಡಿಸುತ್ತಿದ್ದ ವೇಳೆ ಮಹಿಳೆಯೋರ್ವಳು ಕುಳಿತಿದ್ದ ಕಾರನ್ನು ಎಳೆದೊಯ್ದ ಸಂಚಾರಿ ಪೊಲೀಸರ ಕ್ರಮಕ್ಕೆ ಸೂಕ್ತ ಕ್ರಮ ಕೈಗೊಂಡಿರುವ ಹಿರಿಯ ಅಧಿಕಾರಿಗಳು, ಟೋಯಿಂಗ್ ವಾಹನದಲ್ಲಿದ್ದ ಪೇದೆಯನ್ನು ಅಮಾನತುಗೊಳಿಸಿ ಆದೇಶ ಹೊರಡಿದ್ದಾರೆ.
ತಪ್ಪದೇ ಓದಿ....
ರಾಯಲ್ ಎನ್‌ಫೀಲ್ಡ್ ಸವಾರರೇ ಹುಷಾರ್- ಈ ತಪ್ಪು ಮಾಡಿದ್ರೆ ನಿಮ್ಮ ಬೈಕಿಗೂ ಇದೆ ಗತಿ..!!
ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಮಹಿಳೆಯಿರುವ ಕಾರನ್ನು ಪೊಲೀಸರು ಎಳೆದೊಯ್ಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಂಚಾರಿ ಪೊಲೀಸ್ ಆಯುಕ್ತರು ಕಾರಣಕರ್ತರಾದ ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಿರುವುದಲ್ಲದೆ, ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

ಜ್ಯೋತಿ ಮಲೆ ಎಂಬಾಕೆ ಅನಾರೋಗ್ಯ ಪೀಡೆತೆಯಾಗಿದ್ದಳು ಮತ್ತು ತನ್ನ ಮಗುವಿಗೆ ಹಾಲೂಡಿಸುತ್ತಿದ್ದಳು. ಈ ಸಂದರ್ಭದಲ್ಲಿ ಆಕೆ ತನ್ನ ಪರಿಸ್ಥಿತಿಯನ್ನು ವಿವರಿಸಿದರೂ ಪೊಲೀಸರು ಕಿವಿಗೊಡಲಿಲ್ಲ ಎನ್ನಲಾಗಿದೆ.
ಟ್ರಾಫಿಕ್ ಪೊಲೀಸರು ಮಹಿಳೆಯಿದ್ದ ಕಾರನ್ನು ಎಳೆದೊಯ್ದುತ್ತಿರುವ ವಿಡಿಯೋ ಇಲ್ಲಿದೆ ನೋಡಿ.
Trending On DriveSpark Kannada:
ಸ್ಪ್ಲೆಂಡರ್ ಪ್ಲಸ್ ಬೈಕಿಗೆ 10,800 ರೂ ದಂಡ ಹಾಕಿದ್ರು !! ನಗರದಲ್ಲಿ ನಡೀತಿದೆ 'ಆಪರೇಷನ್ ಚೀತಾ'
ರಸ್ತೆ ಬದಿ ಇದ್ದ ಹೆಲ್ಮೆಟ್‌ಗಳನ್ನು ಟ್ರಾಫಿಕ್ ಪೊಲೀಸರು ಒಡೆದು ಹಾಕಿದ್ದೇಕೆ?
ನಿಮ್ಮ ಕಾರಿನ ಮೈಲೇಜ್ ಹೆಚ್ಚಳವಾಗಬೇಕೇ? ಈ ಕೆಳಗಿನ ವಿಧಾನಗಳನ್ನು ತಪ್ಪದೇ ಪಾಲಿಸಿ..


Click it and Unblock the Notifications