ಭೀಕರ ಅಪಘಾತದಲ್ಲಿ ನಟನ ಜೀವ ಉಳಿಸಿದ ಟಾಟಾ ಕಾರು: ಮತ್ತೊಂದು ಟಾಟಾ ಕಾರು ಖರೀದಿ

ಭಾರತೀಯ ಮಾರುಕಟ್ಟೆಯಲ್ಲಿ ಕೆಲವು ವರ್ಷದಿಂದ ಟಾಟಾ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಟಾಟಾ ಕಾರುಗಳು ಹೆಚ್ಚಿನ ಸುರಕ್ಷತೆಗೆ ಜನಪ್ರಿಯವಾಗಿದ್ದು, ಇದರ ನಿರ್ಮಾಣ ಗುಣಮಟ್ಟ ಅತ್ತ್ಯುತ್ತಮವಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ, ಟಾಟಾ ಕಾರುಗಳಿನಲ್ಲಿ ಅಪಘಾತಗೊಂಡಾಗ ಮೃತಪಟ್ಟವರ ಸಂಖ್ಯೆಯು ವಿರಳ.

ಭೀಕರ ಅಪಘಾತದಲ್ಲಿ ನಟನ ಜೀವ ಉಳಿಸಿದ ಟಾಟಾ ಕಾರು: ಮತ್ತೊಂದು ಟಾಟಾ ಕಾರು ಖರೀದಿ

ಟಾಟಾ ಮೋಟಾರ್ಸ್‌ನ ಕಾರುಗಳು ಮತ್ತು ಎಸ್‌ಯುವಿಗಳು ಅದರ ನಿರ್ಮಾಣ ಗುಣಮಟ್ಟಕ್ಕಾಗಿ ಖರೀದಿದಾರರಲ್ಲಿ ಜನಪ್ರಿಯವಾಗಿವೆ. ಅವರು ಪ್ರಸ್ತುತ ಭಾರತದ ಪ್ರಮುಖ ಕಾರು ತಯಾರಕರಲ್ಲಿ ಒಬ್ಬರು. ಟಾಟಾ ತಮ್ಮ ಸಾಲಿನಲ್ಲಿ ಎಸ್‌ಯುವಿಗಳು ಸೇರಿದಂತೆ ವಿವಿಧ ಮಾದರಿಗಳನ್ನು ಹೊಂದಿದೆ. ಟಾಟಾ ಮೋಟಾರ್ಸ್ ನಿರ್ಮಿಸಿದ ಕಾರುಗಳು ಎಷ್ಟು ಗಟ್ಟಿಮುಟ್ಟಾದವು ಎಂಬುದನ್ನು ಸಾಬೀತುಪಡಿಸುವ ಹಲವಾರು ಘಟನೆಗಳನ್ನು ನಾವು ನೋಡಿದ್ದೇವೆ. ಟಾಟಾದ ನಿರ್ಮಾಣ ಗುಣಮಟ್ಟದಿಂದಾಗಿ ಗಂಭೀರ ಅಪಘಾತಗಳಿಂದ ಪಾರಾದ ಅನೇಕ ಗ್ರಾಹಕರು ಇದ್ದಾರೆ.

ಭೀಕರ ಅಪಘಾತದಲ್ಲಿ ನಟನ ಜೀವ ಉಳಿಸಿದ ಟಾಟಾ ಕಾರು: ಮತ್ತೊಂದು ಟಾಟಾ ಕಾರು ಖರೀದಿ

ನಟ ಟಾಟಾ ನೆಕ್ಸಾನ್ ಭಿಕರ ಅಪಘಾತವದರೂ ಬದುಕುಳಿದ್ದರು ಮತ್ತು ಇದೀಗ ಅವರು ಟಾಟಾ ಹ್ಯಾರಿಯರ್ ಅನ್ನು ಖರೀದಿಸಿದರು. ವಿಡಿಯೋವನ್ನು ನಿಖಿಲ್ ರಾಣಾ ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವೀಡಿಯೊದಲ್ಲಿ, ವ್ಲಾಗರ್ ತನ್ನ ನೆಕ್ಸಾನ್‌ನಲ್ಲಿ ಅಪಘಾತದಿಂದ ಪಾರಾದ ನಂತರ ನಟ ಟಾಟಾ ಹ್ಯಾರಿಯರ್ ಖರೀದಿಸಲು ಹೇಗೆ ನಿರ್ಧರಿಸಿದರು ಎಂಬುದರ ಕುರಿತು ಮಾತನಾಡಿದ್ದಾರೆ.

ಭೀಕರ ಅಪಘಾತದಲ್ಲಿ ನಟನ ಜೀವ ಉಳಿಸಿದ ಟಾಟಾ ಕಾರು: ಮತ್ತೊಂದು ಟಾಟಾ ಕಾರು ಖರೀದಿ

ಹಲವು ಮಲಯಾಳಂ ಕಿರುಚಿತ್ರಗಳಲ್ಲಿ ನಟಿಸಿರುವ ವಿಶಾಕ್ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಚಿತ್ರೀಕರಣ ಮುಗಿಸಿಕೊಂಡು ಹಿಂತಿರುಗುತ್ತಿದ್ದರು. ಇದು ಗುಡ್ಡಗಾಡು ಪ್ರದೇಶವಾಗಿದ್ದು, ಕೆಲವು ತಿಂಗಳ ಹಿಂದೆ ಅಪಘಾತ ಸಂಭವಿಸಿತ್ತು. ವಿಶಾಕ್ ತಮ್ಮ ಟಾಟಾ ನೆಕ್ಸಾನ್‌ನಲ್ಲಿ ಚಿತ್ರೀಕರಣ ಮುಗಿಸಿ ಇಡುಕ್ಕಿಗೆ ಹೋಗುತ್ತಿದ್ದರು.

ಭೀಕರ ಅಪಘಾತದಲ್ಲಿ ನಟನ ಜೀವ ಉಳಿಸಿದ ಟಾಟಾ ಕಾರು: ಮತ್ತೊಂದು ಟಾಟಾ ಕಾರು ಖರೀದಿ

ಕಾರಿನಲ್ಲಿ ಅವರ ಜೊತೆ ಅವರ ಗೆಳೆಯರೂ ಇದ್ದರು. ಇಡುಕ್ಕಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಜನರು ಜಾಗರೂಕರಾಗಿರಬೇಕು ಎಂದು ಸರ್ಕಾರ ತಿಳಿಸಿದ್ದರು. ಈ ವೇಳೆ ಭಾರೀ ಮಳೆಯಿಂದ ಕೇರಳ ಸರ್ಕಾರವು ರಾಜ್ಯದ್ಯಾಂತ ಆರೆಂಜ್ ಅಲರ್ಟ್ ಅನ್ನು ಘೋಷಿಸಲಾಗಿತ್ತು. ಭಾರೀ ಮಳೆಯ ನಡುವೆ ಗೋಚರತೆ ಕಡಿಮೆಯಾದಾಗ, ನೆಕ್ಸಾನ್ ಚಾಲಕ ರಸ್ತೆಯ ಸಣ್ನ ಚರಂಡಿ ಬೀಳುವುದನ್ನು ತಪ್ಪಿಸಲು ಹೋಗಿ ಸುಮಾರು 20-30 ಅಡಿಗಳಷ್ಟು ಆಳದಲ್ಲಿ ಕಾರು ಉರುಳಿ ಬಿದ್ದಿದೆ.

ಭೀಕರ ಅಪಘಾತದಲ್ಲಿ ನಟನ ಜೀವ ಉಳಿಸಿದ ಟಾಟಾ ಕಾರು: ಮತ್ತೊಂದು ಟಾಟಾ ಕಾರು ಖರೀದಿ

ಈ ಕಾರು ಪಲ್ಟಿಯಾಗಿ ನೆಲಕ್ಕೆ ಅಪ್ಪಳಿಸಿದೆ. ಮಗುಚಿ ಬಿದ್ದ ಕಾರು ನಜ್ಜುಗುಜ್ಜಾಗಿದೆ. ನಂತರ ಕಾರಿನ ಪ್ರಯಾಣಿಕರು ಜೀವಂತವಾಗಿದ್ದಾರೆ ಎಂದು ಭಾವಿಸಿರಲಿಲ್ಲ ಎಂದು ಅಲ್ಲಿಯ ಸ್ಥಳೀಯರು ಹೇಳಿದ್ದರು. ಅಲ್ಲದೇ ಕಾರಿನ ಪ್ರಯಾಣಿಕರು ಕೂಡ ನಾವು ಬದುಕುವುದಿಲ್ಲವೆಂದು ಭಾವಿಸಿದರು.

ಭೀಕರ ಅಪಘಾತದಲ್ಲಿ ನಟನ ಜೀವ ಉಳಿಸಿದ ಟಾಟಾ ಕಾರು: ಮತ್ತೊಂದು ಟಾಟಾ ಕಾರು ಖರೀದಿ

ಒಳಗಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದರು. ಆದರೆ ಒಬ್ಬ ವ್ಯಕ್ತಿಗೆ ಬೆನ್ನಿಗೆ ಗಾಯಗಳಾಗಿವೆ. ಇದನ್ನು ಹೊರತುಪಡಿಸಿ ಉಳಿದವರೆಲ್ಲರೂ ಕಾರಿನಲ್ಲಿ ಸುರಕ್ಷಿತವಾಗಿದ್ದರು. ಕಾರಣ ಟಾಟಾದ 5 ಸ್ಟಾರ್ ಸೇಫ್ಟಿ ಕಾರು ಇದಾಗಿದೆ. ಗರಿಷ್ಠ ಸುರಕ್ಷತೆಯ ಕಾರಾಗಿರುವ ಕಾರಣ ಪ್ರಯಾಣಿಕರು ಸೇಫ್ ಆಗಿದ್ದಾರೆ.

ಭೀಕರ ಅಪಘಾತದಲ್ಲಿ ನಟನ ಜೀವ ಉಳಿಸಿದ ಟಾಟಾ ಕಾರು: ಮತ್ತೊಂದು ಟಾಟಾ ಕಾರು ಖರೀದಿ

ಈ ಟಾಟಾ ನೆಕ್ಸಾನ್(Tata Nexon) ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ. ಟಾಟಾ ಮೋಟಾರ್ಸ್ ಹಲವಾರು ಕಾರಣಗಳಿಂದಾಗಿ ನೆಕ್ಸಾನ್ ಅನ್ನು ದೀರ್ಘಕಾಲದಿಂದಲೂ ಹೆಚ್ಚು ಮಾರಾಟವಾಗುತ್ತಿರುವ ಮಾದರಿಗಳಲ್ಲಿ ಒಂದಾಗಿದೆ. ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್ ನಲ್ಲಿ ಐದು ಸ್ಟಾರ್ ರೇಟಿಂಗ್ ಅನ್ನು ಪಡೆದ ಮಾದರಿಯಾಗಿದೆ. 2017ರ ಕೊನೆಯಲ್ಲಿ ಬಿಡುಗಡೆಯಾದ ನಂತರ ಸಬ್-ಫೋರ್-ಮೀಟರ್ ಎಸ್‍ಯುವಿಯು ಗ್ರಾಹಕರ ಗಮನ ಸೆಳೆಯಿತು.

ಭೀಕರ ಅಪಘಾತದಲ್ಲಿ ನಟನ ಜೀವ ಉಳಿಸಿದ ಟಾಟಾ ಕಾರು: ಮತ್ತೊಂದು ಟಾಟಾ ಕಾರು ಖರೀದಿ

2020ರ ಆರಂಭದಲ್ಲಿ ಫೇಸ್ ಲಿಫ್ಟ್ ನೆಕ್ಸಾನ್ ಆಗಮನವು ಮಾರಾಟವನ್ನು ಮತ್ತಷ್ಟು ಹೆಚ್ಚಿಸಿತು. ಟಾಟಾ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿಯ ಬೇಡಿಕೆಯು ಹೆಚ್ಚಾಗುತ್ತಿದೆ. ಈ ಕಾಂಪ್ಯಾಕ್ಟ್ ಎಸ್‍ಯುವಿ ಮಾದರಿಗೆ ಭಾರತೀಯ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಸ್ವದೇಶಿ ಕಾರು ತಯಾರಕರಾದ ಟಾಟಾ ಮೋಟಾರ್ಸ್ ಈ ಕಾರನ್ನು ಹೆಚ್ಚು ಪೈಪೋಟಿ ಇರುವ ಕಾಂಪ್ಯಾಕ್ಟ್ ಎಸ್‍ಯುವಿ ವಿಭಾಗದಲ್ಲಿ ಬಿಡುಗಡೆಗೊಳಿಸಲಾಗಿತ್ತು. ಟಾಟಾ ನೆಕ್ಸಾನ್ ಅಟ್ಲಾಸ್ ಬ್ಲ್ಯಾಕ್, ಪೊಲಿಜ್ ಗ್ರೀನ್, ಕ್ಯಾಲ್ಗರಿ ವೈಟ್, ಫ್ಲೇಮ್ ರೆಡ್ ಮತ್ತು ಡೇಟೋನಾ ಗ್ರೇ ಎಂಬ ಐದು ಬಣ್ಣಗಳಲ್ಲಿ ಲಭ್ಯವಿರಲಿದೆ.

ಇನ್ನು ಅಪಘಾತದಲ್ಲಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ವಾಹನ ಸಂಪೂರ್ಣ ನಷ್ಟವಾಗಿದೆ. ಅದೃಷ್ಟವಶಾತ್, ಕಾರು ಮನೆಯ ಮೇಲೆ ಬೀಳಲಿಲ್ಲ, ಟಾಟಾ ನೆಕ್ಸಾನ್‌ನ ನಿರ್ಮಾಣ ಗುಣಮಟ್ಟದಿಂದ ವಿಶಾಕ್ ತುಂಬಾ ಪ್ರಭಾವಿತರಾಗಿದ್ದರು. . ಅವರು ಎಷ್ಟು ಪ್ರಭಾವಿತರಾದರು ಎಂದರೆ ಗಾಯಗಳಿಂದ ಚೇತರಿಸಿಕೊಂಡ ನಂತರ ಅವರು ಮತ್ತೊಂದು ಟಾಟಾ ಉತ್ಪನ್ನವನ್ನು ಖರೀದಿಸಲು ನಿರ್ಧರಿಸಿದರು.

ಭೀಕರ ಅಪಘಾತದಲ್ಲಿ ನಟನ ಜೀವ ಉಳಿಸಿದ ಟಾಟಾ ಕಾರು: ಮತ್ತೊಂದು ಟಾಟಾ ಕಾರು ಖರೀದಿ

ಈ ಬಾರಿ ನೆಕ್ಸಾನ್‌ಗೆ ಹೋಗದೆ, ಮುಂದೆ ಹೋಗಿ ಟಾಟಾ ಹ್ಯಾರಿಯರ್ ಎಸ್‌ಯುವಿ ಖರೀದಿಸಿದರು. ನೆಕ್ಸಾನ್ ಮಾಲೀಕತ್ವದ ವಿಶಾಕ್ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇನ್ನು ಟಾಟಾ ಹ್ಯಾರಿಯರ್ ಮಾದರಿ ನಾಲ್ಕು ಆಟೋಮ್ಯಾಟಿಕ್ ರೂಪಾಂತರಗಳನ್ನು ಒಳಗೊಂಡಿದೆ, ಅವುಗಳೆಂದರೆ ಎಕ್ಸ್ಎಂಎ, ಎಕ್ಸ್ಎಂಎ ಪ್ಲಸ್, ಎಕ್ಸ್'ಝಡ್ಎ ಪ್ಲಸ್ ಆಗಿದೆ.

ಭೀಕರ ಅಪಘಾತದಲ್ಲಿ ನಟನ ಜೀವ ಉಳಿಸಿದ ಟಾಟಾ ಕಾರು: ಮತ್ತೊಂದು ಟಾಟಾ ಕಾರು ಖರೀದಿ

ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮತ್ತು ಪನರೋಮಿಕ್ ಸನ್‌ರೂಫ್ ಅನ್ನು ಹೊಂದಿರುವ ಹೊಸ ಮಿಡ್-ಸ್ಪೆಲ್ ಎಕ್ಸ್‌ಟಿಎ ಮತ್ತು ಎಕ್ಸ್‌ಟಿಎ ಪ್ಲಸ್ ಆಟೋಮ್ಯಾಟಿಕ್ ರೂಪಾಂತರಗಳನ್ನು ಸುಲುಭವಾಗಿ ಕೈಗೆಟುಕುವ ಬೆಲೆಯಲ್ಲಿ ಪಡೆಯುತ್ತಾರೆ. ಪ್ರಸ್ತುತವಾಗಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮತ್ತು ಪನರೋಮಿಕ್ ಸನ್‌ರೂಫ್ ಕೇವಲ ಟಾಪ್-ಸ್ಪೆಕ್ ರೂಪಾಂತರಗಳಲ್ಲಿ ಮಾತ್ರ ಲಭ್ಯವಿದೆ,

ಭೀಕರ ಅಪಘಾತದಲ್ಲಿ ನಟನ ಜೀವ ಉಳಿಸಿದ ಟಾಟಾ ಕಾರು: ಮತ್ತೊಂದು ಟಾಟಾ ಕಾರು ಖರೀದಿ

ಹೊಸ ರೂಪಾಂತರಗಳು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್, ಪ್ರೀಮಿಯಂ ಸೌಂಡ್ ಸಿಸ್ಟಂ, ಪನೋರಮಿಕ್ ಸನ್ ರೂಫ್, ಸೆಮಿ-ಡಿಜಿಟಲ್ ಇನ್ಸ್ ಟ್ರೂಮಂಟ್ ಕ್ಲಸ್ಟರ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕೀಲೆಸ್ ಎಂಟ್ರಿ, ಪುಶ್-ಬಟನ್ ಸ್ಟಾರ್ಟ್-ಸ್ಟಾಪ್, ಡ್ರೈವ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಮೋಡ್‌ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಿರುತ್ತದೆ. ಇನ್ನು ಟಾಟಾ ಹ್ಯಾರಿಯರ್ ಎಸ್‍ಯುವಿಯು ಒಮೆಗಾ (ಆಪ್ಟಿಮಲ್ ಮಾಡ್ಯುಲರ್ ಎಫಿಶಿಯಂಟ್ ಗ್ಲೋಬಲ್ ಅಡ್ವಾನ್ಸ್ಡ್) ಪ್ಲಾಟ್‌ಫಾರ್ಮ್‌ನಿಂದ ಅಭಿವೃದ್ದಿ ಪಡಿಸಲಾಗಿದೆ.

ಭೀಕರ ಅಪಘಾತದಲ್ಲಿ ನಟನ ಜೀವ ಉಳಿಸಿದ ಟಾಟಾ ಕಾರು: ಮತ್ತೊಂದು ಟಾಟಾ ಕಾರು ಖರೀದಿ

ಈ ಟಾಟಾ ಹ್ಯಾರಿಯರ್ ಮಿಡ್ ಎಸ್‍ಯುವಿಯಲ್ಲಿ 2.0 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 170 ಬಿಹೆಚ್‍ಪಿ ಮತ್ತು 350 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಈ ಹ್ಯಾರಿಯರ್ ಎಸ್‍ಯುವಿಯಲ್ಲಿ ಹೊಸದಾಗಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಕೂಡ ನೀಡಲಾಗಿದೆ. ಈ ಟಾಟಾ ಹ್ಯಾರಿಯರ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಎಕ್ಸ್‌ಯುವಿ 500, ಎಂಜಿ ಹೆಕ್ಟರ್, ಹ್ಯುಂಡೈ ಕ್ರೆಟಾ ಮತ್ತು ಜೀಪ್ ಕಂಪಾಸ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Short film actor buys tata harrier suv here is reason details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X