ಮುದ್ದು ಕಂದನ ತಪ್ಪಿಗೆ ಭಾರೀ ಬೆಲೆ ತೆತ್ತ ಪೋಷಕರು

ಪುಟ್ಟ ಮಕ್ಕಳು ಏನೇ ತುಂಟಾಟ ಮಾಡಿದ್ರು ಪೋಷಕರ ಮುಖದಲ್ಲಿ ಮಂದಹಾಸವನ್ನು ಮೂಡಿಸದೆ ಇರಲಾರದು. ಆದರೆ ಕೆಲವೊಮ್ಮೆ ಮಕ್ಕಳು ಮಾಡುವ ತುಂಟ ಕೆಲಸದಿಂದಾಗಿ ಪೋಷಕರು ಭಾರೀ ಬೆಲೆಯನ್ನು ತೆರಬೇಕಾದ ಪರಿಸ್ಥಿತಿ ಎದುರಾಗುತ್ತದೆ.

ಮುದ್ದು ಕಂದನ ತಪ್ಪಿಗೆ ಭಾರೀ ಬೆಲೆ ತೆತ್ತ ಪೋಷಕರು

ಚೀನಾದ ಗುಯಿಲಿನ್ ನಗರದಲ್ಲಿ ನಡೆದಿರುವ ಘಟನೆಯಲ್ಲಿ ಮೂರು ವರ್ಷದ ಬಾಲಕಿಯ ಕೆಲಸಕ್ಕೆ ಆಕೆಯ ಪೋಷಕರು ಸುಮಾರು 29 ಸಾವಿರ ಡಾಲರ್ ಅಂದರೆ ಸುಮಾರು ರೂ.22 ಲಕ್ಷ ಪರಿಹಾರನೀಡಬೇಕಾದ ಪರಿಸ್ಥಿತಿ ಎದುರಾಗಿದೆ. ದಂಪತಿಗಳು ತಮ್ಮ ಹೆಣ್ಣು ಮಗುವಿನೊಂದಿಗೆ ಆಡಿ ಶೋರೂಂಗೆ ಭೇಟಿ ನೀಡಿದ್ದಾರೆ.

ಮುದ್ದು ಕಂದನ ತಪ್ಪಿಗೆ ಭಾರೀ ಬೆಲೆ ತೆತ್ತ ಪೋಷಕರು

ತಮ್ಮ ಮೂರು ವರ್ಷದ ಬಾಲಕಿಯನ್ನು ಶೋರೂಂನಲ್ಲಿ ಬಿಟ್ಟ ದಂಪತಿಗಳು ಕಾರುಗಳ ಬಗ್ಗೆ ಮಾಹಿತಿ ಪಡೆಯಲು ಶೋರೂಂನಲ್ಲಿ ಸುತ್ತಾಡಿದ್ದಾರೆ. ಈ ವೇಳೆ ಬಾಲಕಿಯೂ ಸಹ ಶೋರೂಂ ತುಂಬೆಲ್ಲಾ ಓಡಾಡಿದ್ದಾಳೆ. ಮಗಳು ಕಾರುಗಳನ್ನು ನೋಡುತ್ತಿರಬಹುದೆಂದು ಪೋಷಕರು ಆಕೆಯ ಕಡೆಗೆ ಹೆಚ್ಚು ಗಮನ ನೀಡಿಲ್ಲ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಮುದ್ದು ಕಂದನ ತಪ್ಪಿಗೆ ಭಾರೀ ಬೆಲೆ ತೆತ್ತ ಪೋಷಕರು

ಆದರೆ ಶೋರೂಂನಲ್ಲಿದ್ದ ಪುಟ್ಟ ಬಾಲಕಿ ತನ್ನ ಕೈಯಲ್ಲಿ ಸಣ್ಣ ಕಲ್ಲನ್ನು ಹೊಂದಿದ್ದಾಳೆ ಎಂದು ಆಕೆಯ ಪೋಷಕರಿಗೆ ತಿಳಿದಿರಲಿಲ್ಲ. ಶೋರೂಂನಲ್ಲೆಲ್ಲಾ ಓಡಾಡಿದ ಆ ಬಾಲಕಿ ಶೋರೂಂನಲ್ಲಿದ್ದ ಆಡಿ ಕಂಪನಿಯ ಹೊಚ್ಚ ಹೊಸ ಕಾರುಗಳನ್ನು ತನ್ನ ಕೈನಲ್ಲಿದ್ದ ಕಲ್ಲಿನಿಂದ ಗೀಚಿದ್ದಾಳೆ.

ಮುದ್ದು ಕಂದನ ತಪ್ಪಿಗೆ ಭಾರೀ ಬೆಲೆ ತೆತ್ತ ಪೋಷಕರು

ಹೀಗೆ ಆ ಬಾಲಕಿ ಶೋರೂಂನಲ್ಲಿದ್ದ 10 ಕಾರುಗಳ ಮೇಲೆ ಕಲ್ಲಿನಿಂದ ಗೀಚಿ ಅವುಗಳನ್ನು ಹಾನಿಪಡಿಸಿದ್ದಾಳೆ. ಆದರೆ ಇದನ್ನು ಆ ಬಾಲಕಿಯ ಪೋಷಕರು ಗಮನಿಸಿಲ್ಲ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಮುದ್ದು ಕಂದನ ತಪ್ಪಿಗೆ ಭಾರೀ ಬೆಲೆ ತೆತ್ತ ಪೋಷಕರು

ಬಾಲಕಿಯ ಪೋಷಕರು ಈ ಘಟನೆ ಬಗ್ಗೆ ಏನನ್ನೂ ಹೇಳಿಲ್ಲ. ಘಟನೆಯ ಬಗ್ಗೆ ತಿಳಿದ ಶೋರೂಂ ಮಾಲೀಕರು ಬಾಲಕಿಯ ಪೋಷಕರಿಂದ 2 ಲಕ್ಷ ಯುವಾನ್ ಪರಿಹಾರ ಕೋರಿದ್ದಾರೆ. ಅಂದರೆ ಸುಮಾರು 29 ಸಾವಿರ ಡಾಲರ್‌ಗಳನ್ನು ಪರಿಹಾರವಾಗಿ ಕೋರಿದ್ದಾರೆ.

ಮುದ್ದು ಕಂದನ ತಪ್ಪಿಗೆ ಭಾರೀ ಬೆಲೆ ತೆತ್ತ ಪೋಷಕರು

ಬಾಲಕಿಯ ಪೋಷಕರು ಇಷ್ಟೊಂದು ಮೊತ್ತವನ್ನು ನೀಡಲು ಸಾಧ್ಯವಿಲ್ಲವೆಂದು ತಿಳಿಸಿದ್ದಾರೆ. ಶೋರೂಂ ಮಾಲೀಕರು ಪರಿಹಾರದ ಮೊತ್ತವನ್ನು ಪಡೆಯಲು ಕಾನೂನಿನ ಮೊರೆ ಹೋಗಿದ್ದು, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೂಲ: ಸಿಂಚೆವ್ ಡೈಲಿ

Article Published On: Tuesday, June 16, 2020, 18:30 [IST]
English summary
Showroom demands parents to pay 29 thousand dollar after their 3 year old girl scratches 10 brand new Audi cars. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+