ಯುವಕರ ನಿದ್ದೆಗೆಡಿಸಿ ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಿರುವ ಬ್ಯೂಟಿ!
ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ನಟಿಯರಿದ್ದರೂ, ಶ್ರದ್ಧಾ ಕಪೂರ್ (Shraddha Kapoor) ಅವರನ್ನು ಮಾತ್ರ ಯುವಕರು ಪ್ರೀತಿ ಮತ್ತು ಗೌರವದಿಂದ ಕಾಣುತ್ತಾರೆ. ಇತರ ನಟಿಯರಂತಲ್ಲದೆ ವಿನಮ್ರತೆ ಹಾಗೂ ಪಕ್ಕದ ಮನೆಯ ಸುಂದರ ಹುಡುಗಿಯಂಥಾ ಭಾವನೆ ಬರುತ್ತದೆ ಎಂದು ಹಲವರು ಶ್ರದ್ಧಾ ಕಪೂರ್ ಅವರನ್ನು ಹೊಗಳಿರುವ ಉದಾಹರಣೆಗಳು ಕೂಡ ಇವೆ. ಇವರ ಸೌಂದರ್ಯದಂತೆಯೇ ಮನಸ್ಸು ಕೂಡ ತುಂಬಾ ಸುಂದರವಾದದ್ದು, ಇಲ್ಲಿಯವರೆಗೆ ಯಾರಿಂದಲೂ ಟೀಕೆಗೆ ಗುರಿಯಾಗಿಲ್ಲ. ಇವರ ಬಳಿ ಕೋಟ್ಯಾಂತರ ಹಣವಿದ್ದರೂ ಸಿಂಪಲ್ ಮಾರುತಿ ಕಾರುಗಳು ಹಾಗೂ ಅವರಿಗಿರುವ ಕಾರು ಕ್ರೇಜ್‌ನಿಂದ ಲ್ಯಾಂಬೊರ್ಘಿಯಂತಹ ಸೂಪರ್ ಕಾರುಗಳನ್ನು ಸಹ ಹೊಂದಿದ್ದಾರೆ. ಇವರ ಕಾರು ಸಂಗ್ರಹವನ್ನು ಇಲ್ಲಿ ನೋಡೋಣ.
ಲ್ಯಾಂಬೊರ್ಘಿನಿ ಹುರಾಕನ್ ಟೆಕ್ನಿಕಾ: ಶ್ರದ್ಧಾ ಕಪೂರ್ ಇತ್ತೀಚೆಗೆ ಲ್ಯಾಂಬೊರ್ಘಿನಿಯನ್ನು ಖರೀದಿಸಿದ್ದರು. ಅವರ ಗ್ಯಾರೇಜ್‌ನಲ್ಲಿ ಅತ್ಯಂತ ದುಬಾರಿ ಕಾರು ಇದಾಗಿದೆ. ಇತರ ನಟಿಯರಂತೆ, ಅವರು ಸೆಡಾನ್‌ಗಳ ಮೇಲೆ ಹೆಚ್ಚು ಆಸಕ್ತಿ ಹೊಂದಿಲ್ಲ. ಎಸ್‌ಯುವಿಗಳೆಂದರೆ ಇಷ್ಟಪಡುತ್ತಾರೆ. ಹಾಗೆಯೇ ಸೂಪರ್ ಕಾರುಗಳನ್ನು ಸಹ ಇಷ್ಟಪಡುತ್ತಾರೆ, ಇದೇ ಕಾರಣಕ್ಕೆ ಲ್ಯಾಂಬೊರ್ಗಿನಿ ಖರೀದಿಸಿರಬಹುದು.

ಶ್ರದ್ಧಾ ಕಳೆದ ವರ್ಷ ಈ ಲ್ಯಾಂಬೊರ್ಘಿನಿ ಹುರಾಕನ್ ಟೆಕ್ನಿಕಾವನ್ನು ಖರೀದಿಸಿದ್ದರು. ಇದು 5.2 ಲೀಟರ್‌ನ ವಿ10 ಎಂಜಿನ್ 640 ಬಿಹೆಚ್ ಪವರ್ ಹಾಗೂ 565 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಲ್ಯಾಂಬೊರ್ಗಿನಿ ಹುರಾಕನ್ ಟೆಕ್ನಿಕಾದ ಭಾರತದ ಎಕ್ಸ್ ಶೋರೂಂ ದರವು ರೂ.4.5 ಕೋಟಿಗಳಾಗಿದೆ. ಶ್ರದ್ಧಾ ಕಪೂರ್ ಭಾರತದಲ್ಲಿ ಲ್ಯಾಂಬೊರ್ಘಿನಿ ಕಾರನ್ನು ಹೊಂದಿರುವ ಬಾಲಿವುಡ್‌ನ ಏಕೈಕ ನಟಿ.
ಮರ್ಸಿಡಿಸ್ ಬೆಂಝ್ ಎಂಎಲ್250: ಶ್ರದ್ಧಾ ಬಾಲಿವುಡ್‌ನಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದಾಗ ಮರ್ಸಿಡಿಸ್ ಬೆಂಝ್ ಎಂಎಲ್ 250 ಸಿಡಿಐ ಐಷಾರಾಮಿ ಎಸ್‌ಯುವಿ ಖರೀದಿಸಿದ್ದರು. ಇದು ನಟಿಯ ಒಡೆತನದ ಮೊದಲ ಎಸ್‌ಯುವಿ, ಈ ಕಾರು 2.2-ಲೀಟರ್ ಡೀಸೆಲ್ ಎಂಜಿನ್ ಅನ್ನು ಒಳಗೊಂಡಿದ್ದು, 203 ಪಿಎಸ್ ಪವರ್ ಮತ್ತು 500 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಮಾರುತಿ ವಿಟಾರಾ ಬ್ರೆಝಾ: ಶ್ರದ್ಧಾ ಅವರ ಸಂಗ್ರಹದಲ್ಲಿ ಮಾರುತಿ ಬ್ರೆಝಾ ಕಾರಿದ್ದು, ಇದನ್ನು ತಮ್ಮ ಸ್ಥಳೀಯ ಪ್ರಯಾಣಕ್ಕಾಗಿ ಬಳಸುತ್ತಾರೆ. ಅವರು ಖರೀದಿಸಿದ್ದಾಗ ಡೀಸೆಲ್ ಎಂಜಿನ್‌ನೊಂದಿಗೆ ಖರೀದಿಸಿದ್ದರು. ಆಗ 1.3-ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿತ್ತು.
ಟೊಯೊಟಾ ಫಾರ್ಚೂನರ್: ಶ್ರದ್ಧಾ ಕಪೂರ್ ಅವರು ಪ್ರಿಫೇಸ್ ಲಿಫ್ಟ್ ಟೊಯೊಟಾ ಫಾರ್ಚೂನರ್ ಹೊಂದಿದ್ದಾರೆ. ತಮ್ಮ ಕಪ್ಪು ಫಾರ್ಚೂನರ್ ಕಾರಿನಲ್ಲಿ ಹಲವಾರು ನಿರ್ಮಾಣ ಸಂಸ್ಥೆಗಳ ಕಚೇರಿಗಳಿಗೆ ಭೇಟಿ ನೀಡುವಾಗ ಕಾಣಿಸಿಕೊಂಡಿದ್ದರು. ಅವರು ಯಾವ ವೇರಿಯೆಂಟ್ ಹೊಂದಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಇದು 2.8 ಲೀಟರ್ ಟರ್ಬೋಚಾರ್ಜ್ಡ್ ಎಂಜಿನ್ 205 ಬಿಹೆಚ್ ಪವರ್ ಹಾಗೂ 500 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಮಾರುತಿ ಸ್ವಿಫ್ಟ್: ಶ್ರದ್ಧಾ ಅವರ ಗ್ಯಾರೇಜ್‌ನಲ್ಲಿನ ಅತ್ಯಂತ ಕಡಿಮೆ ಬೆಲೆಯ ಕಾರು, ಸ್ವಿಫ್ಟ್ ಆಗಿದೆ. ಹಳೆಯ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್ ಅನ್ನು ಹೊಂದಿದ್ದಾರೆ. ಪ್ರಸ್ತುತ ತಲೆಮಾರಿನ ಸ್ವಿಫ್ಟ್ ಗಿಂತ ಭಿನ್ನವಾಗಿ, ಈ ಆವೃತ್ತಿಯು 4-ಸಿಲಿಂಡರ್, 1.2 ಲೀಟರ್ ಎಂಜಿನ್ ನೊಂದಿಗೆ ಲಭ್ಯವಿತ್ತು. ಈ ಕಾರನ್ನು ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ನೀಡಲಾಯಿತು. ಇದನ್ನು ಕೂಡ ಸ್ಥಳೀಯವಾಗಿ ಓಡಾಡಲು ಬಳಸುತ್ತಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








