ಮೊದಲ ವೈಯಕ್ತಿಕ ಹಾರುವ ಯಂತ್ರ ನಿರ್ಮಿಸಿದ ಸಿಂಗಾಪುರ ವಿದ್ಯಾರ್ಥಿಗಳು
ನಿಮ್ಮ ಸಮೀಪದ ಪ್ರದೇಶಗಳಿಗೆ ತೆರಳಲು ಮನೆಯ ಮಹಡಿಯಲ್ಲೇ ಹಾರುವ ಯಂತ್ರ ರೆಡಿಯಿದ್ದಲ್ಲಿ ಹೇಗಿರಬಹುದು? ಹೌದು, ಇಂತಹದೊಂದು ಕನಸು ನನಸಾಗುವ ಕಾಲ ಹತ್ತಿರ ಬಂದಿದ್ದು, ಸಿಂಗಾಪುರದ ರಾಷ್ಟ್ರೀಯ ವಿದ್ಯಾನಿಲಯದ (ಎನ್‌ಯುಎಸ್) ಎಂಜಿನಿಯರಿಂಗ್ ವಿದ್ಯಾರ್ಥಿಗಳು ಒಟ್ಟು ಸೇರಿ ವೈಯಕ್ತಿಕ ಹಾರುವ ಯಂತ್ರವನ್ನು ನಿರ್ಮಿಸಿದ್ದಾರೆ.
Also Read: 360 ಕೀ.ಮೀ. ಮೈಲೇಜ್ ಸ್ಕೂಟರ್ ನಿರ್ಮಿಸಿದ ಕನ್ನಡಿಗ - ಸುದ್ದಿ ಓದಲು ಕ್ಲಿಕ್ಲಿಸಿ
ಈಗ ಪ್ರಾಥಮಿಕ ಹಂತದಲ್ಲಿರುವ ಹಾರುವ ಯಂತ್ರವನ್ನು ಆಧಾರವಾಗಿಟ್ಟುಕೊಂಡು ಮತ್ತಷ್ಟು ಹೆಚ್ಚು ಶಕ್ತಿಶಾಲಿ ಹಾರುವ ಯಂತ್ರಗಳನ್ನು ನಿರ್ಮಿಸುವ ಇರಾದೆಯನ್ನು ಇಲ್ಲಿನ ವಿದ್ಯಾರ್ಥಿಗಳು ಹೊಂದಿದ್ದಾರೆ.

ಸ್ನೊಸ್ಟ್ರೋಮ್ (Snowstorm) ಎಂಬ ಹೆಸರನ್ನು ಪಡೆದಿರುವ ಈ ಹಾರುವ ಯಂತ್ರ 70 ಕೆ.ಜಿ ಭಾರವನ್ನು ಹೊರುವ ಸಾಮರ್ಥ್ಯ ಹೊಂದಿದ್ದು, ಆಗಸದಲ್ಲಿ ಐದು ನಿಮಿಷಗಳ ವರೆಗೆ ಸುತ್ತಾಡಬಹುದಾಗಿದೆ.

ಓರ್ವ ವ್ಯಕ್ತಿಯಿಂದಲೇ ನಿಯಂತ್ರಿಸಬಹುದಾದ ಈ ಹಾರುವ ಯಂತ್ರ ಷಡ್ಭುಜಾಕೃತಿಯ ಚೌಕಟ್ಟಿನ್ನು ಹೊಂದಿದ್ದು, ಎಲೆಕ್ಟ್ರಿಕ್ ಮೋಟಾರಿನ ಬೆಂಬಲದಿಂದ ಹಾರಾಡಲಿದೆ.

ಪ್ರತಿಯೊಬ್ಬ ವ್ಯಕ್ತಿಯೂ ಆಕಾಶದಲ್ಲಿ ಹಾರಾಡಬೇಕೆಂಬ ಕನಸನ್ನು ಹೊಂದಿರುತ್ತಾನೆ. ಸ್ವಚ್ಛಂದವಾಗಿ ವಿಹರಿಸಬೇಕೆಂಬ ಅಂತವರ ಕನನಸ್ನು ಹಾರುವ ಯಂತ್ರ ನನಸಾಗಿಸಲಿದೆ.

ಪ್ರಸ್ತುತ ಯಂತ್ರವು ಸಿಂಗಾಪುರ ಮೊದಲ ವೈಯಕ್ತಿಕ ಹಾರುವ ಯಂತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಎಂಟು ವಿದ್ಯಾರ್ಥಿಗಳು ಒಂದು ವರ್ಷಗಳಷ್ಟು ಕಾಲ ನಡೆಸಿರುವ ನಿರಂತರ ಪ್ರಯತ್ನದ ಬಳಿಕ ಇಂತಹದೊಂದು ಕನಸು ನನಸಾಗಿದೆ.

ಇದಕ್ಕಾಗಿ ಎಂಜಿನಿಯರಿಂಗ್ ಡಿಸೈನ್ ಸೆಂಟ್ರಿಸ್ ಪ್ರೋಗ್ರಾಂ (ಡಿಸಿಪಿ) ಮತ್ತು ಯುನಿವರ್ಸಿಟಿ ಸ್ಕಾಲರ್ಸ್ ಪ್ರೋಗ್ರಾಂ (ಯುಎಸ್‌ಪಿ) ನೆರವನ್ನು ಪಡೆಯಲಾಗಿತ್ತು. ಅಲ್ಲದೆ ಹಸಿರು ಕ್ರಾಂತಿಗೆ ಹೆಚ್ಚಿನ ಒತ್ತು ಕೊಡಲಾಗಿದೆ.

ಪ್ರಸ್ತುತ ಹಾರುವ ಯಂತ್ರವು 76 ಸೆಂಟಿಮೀಟರ್ ವ್ಯಾಸದ 2.2 ಕೆಡಬ್ಲ್ಯು ಪವರ್ ಉತ್ಪಾದಿಸುವ 24 ಮೋಟಾರುಗಳನ್ನು ಹೊಂದಿದೆ. ಅಲ್ಲದೆ ರಿಚಾರ್ಜ್ ಮಾಡಬಹುದಾದ ಲಿಥಿಯಂ ಬ್ಯಾಟರಿಗಳು ಒಟ್ಟು 52.8 ಕೆಡಬ್ಲ್ಯು ಚೈತನ್ಯ ಉತ್ಪಾದಿಸಲು ನೆರವಾಗುತ್ತದೆ.

ಅಲ್ಯೂಮಿನಿಯಂ ಬೀಮ್, ಕಾರ್ಬನ್ ಫೈಬರ್ ಪ್ಲೇಟ್, ಟ್ಯೂಬ್ ಜೊತೆ ಕೆಲ್ವಾರ್ ಹಗ್ಗ ಇತರ ಘಟಕಗಳಾಗಿದ್ದು, ಪೈಲಟ್ ಆಸನವನ್ನು ಕೇಂದ್ರದಲ್ಲಿ ಆಳವಡಿಸಲಾಗಿದೆ. ಅಲ್ಲದೆ ಪೈಲಟ್‌ಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಲಾಗಿದೆ.

ವೈಯಕ್ತಿಕ ಹಾರುವ ಯಂತ್ರ ಕಂಡುಹಿಡಿದ ಸಿಂಗಾಪುರ ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕೆಳಗಡೆ ಕೊಟ್ಟಿರುವ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಉಲ್ಲೇಖಿಸಿರಿ.


Click it and Unblock the Notifications








