ಮಗ ಕಾರು ಖರೀದಿಸಿದರೆ ಕುಟುಂಬಕ್ಕೆ ಎಲ್ಲಿಲ್ಲದ ಸಂತೋಷ: ಖ್ಯಾತ ಗಾಯಕನ ಹೊಸ BMW

ಜನಪ್ರಿಯ ಗಾಯಕ ಅಖಿಲ್ ಸಚ್ದೇವ ಇತ್ತೀಚೆಗೆ ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 (BMW X7) ಖರೀದಿಸಿ ತಮ್ಮ ಮನೆ ಮಂದಿಯನ್ನು ಅಚ್ಚರಿಗೊಳಿಸಿದ್ದಾರೆ. ಈ ಪ್ರೀಮಿಯಂ BMW X7 ಕಾರು, ಜರ್ಮನ್ ವಾಹನ ತಯಾರಕ ಕಂಪನಿಯ ಪ್ರಮುಖ ಪ್ರೀಮಿಯಂ ಐಷಾರಾಮಿ ಎಸ್‌ಯುವಿಯಾಗಿದೆ. ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 1.27 ಕೋಟಿಯಿಂದ ರೂ. 1.30 ಕೋಟಿಗಳಾಗಿದೆ. ಈ ಕಾರು ಐಷಾರಾಮಿ ಇಂಟೀರಿಯರ್ ಮತ್ತು ಅತ್ಯಾಧುನಿಕ ತಂತ್ರಜ್ಞಾನ, ಅನುಕೂಲತೆ, ಸಂಪರ್ಕ ಮತ್ತು ಸುರಕ್ಷತಾ ಸೌಲಭ್ಯಗಳನ್ನು ಒಳಗೊಂಡಿದೆ.

ನಿಪುಣ ಸಂಗೀತಗಾರ, ಗಾಯಕ ಮತ್ತು ಸಂಗೀತ ಸಂಯೋಜಕರಾಗಿರುವ ಅಖಿಲ್' 2009 ರಲ್ಲಿ ದೆಹಲಿ ಮೂಲದ ಮ್ಯೂಸಿಕ್ ಬ್ಯಾಂಡ್ ಆಗಿರುವ 'ನಶಾ'ದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಕಬೀರ್ ಸಿಂಗ್‌ ಸಿನಿಮಾದಲ್ಲಿ ತೇರಾ ಬಾನ್ ಜೌಂಗಾ ಎಂಬ ಹಾಡಿನ ಮೂಲಕ ಮತ್ತಷ್ಟು ಫೇಮಸ್ ಆದರು. ಬಳಿಕ ವೆಬ್ ಸಿರೀಸ್‌ಗಳಿಗೆ ಕೆಲವು ಹಾಡುಗಳನ್ನು ಹಾಡಿದ್ದಾರೆ.

singer-akhil-sachdeva-buys-bmw-x7-suv

ಕುಟುಂಬದೊಂದಿಗೆ ಕಾರು ಖರೀದಿ: ತಮ್ಮ ಕುಟುಂಬ ಸದಸ್ಯರೊಂದಿಗೆ ಬಿಎಂಡಬ್ಲ್ಯು ಡೀಲರ್ ಶಿಪ್‌ನಲ್ಲಿ ಕಾರು ಖರೀದಿಸಿರುವ ಚಿತ್ರಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಕುಟುಂಬ ಸದಸ್ಯರೊಂದಿಗೆ ಸಾಂಪ್ರದಾಯಿಕ ವಿತರಣಾ ಸಂಪ್ರದಾಯಗಳೊಂದಿಗೆ ಕಾರನ್ನು ಡೆಲಿವರಿ ಪಡೆಯಲಾಯಿತು. ಬಳಿಕ ತಮ್ಮ ಕಾರಿಗೆ ಯಾವುದೇ ದೃಷ್ಟಿ ಬೀಳದಂತೆ ಧಾರ್ಮಿಕ ಪೂಜೆಯನ್ನು ಮಾಡಿಸಿದ್ದಾರೆ.

BMW X7 ವಿಶೇಷತೆಗಳು: ಜರ್ಮನ್ ಕಾರು ತಯಾರಕರ ಪ್ರಮುಖ ಪ್ರೀಮಿಯಂ ಐಷಾರಾಮಿ ಎಸ್‌ಯುವಿಯಲ್ಲಿ ಬಿಎಂಡಬ್ಲ್ಯು ಆಪರೇಟಿಂಗ್ ಸಿಸ್ಟಮ್ 8.5, ಬಿಎಂಡಬ್ಲ್ಯು ಗೆಸ್ಚರ್ ಕಂಟ್ರೋಲ್, ಡಿಜಿಟಲ್ ಕೀ ಪ್ಲಸ್, ಕರ್ವ್‌ಡ್ ಡಿಸ್ಪ್ಲೇ, ಬಿಎಂಡಬ್ಲ್ಯು ಇಂಡಿವಿಜುಯಲ್ 'ಮೆರಿನೊ' ಅಪ್ಹೋಲ್ಸ್ಟರಿ, ಐಡ್ರೈವ್ ಕಂಟ್ರೋಲರ್, 5-ಝೋನ್ ಆಟೋಮ್ಯಾಟಿಕ್ ಎಸಿ, ಹರ್ಮನ್ ಕಾರ್ಡನ್ ಸರೌಂಡ್ ಸೌಂಡ್ ಸಿಸ್ಟಮ್, 6 ಸೀಟ್ ಸೆಟಪ್, ಬಿಎಂಡಬ್ಲ್ಯು ಹೆಡ್-ಅಪ್ ಡಿಸ್ಪ್ಲೇನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

singer-akhil-sachdeva-buys-bmw-x7-suv

ಎಂಜಿನ್ ವಿಶೇಷತೆಗಳು: ಈ ಎಸ್‌ಯುವಿ 3.0-ಲೀಟರ್ 6-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಹಾಗೂ 3.0-ಲೀಟರ್ 6-ಸಿಲಿಂಡರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ. ಅಖಿಲ್ ಸಚ್ದೇವ್ ಎರಡು ಆಯ್ಕೆಯಲ್ಲಿ ನಿಖರವಾಗಿ ಯಾವುದನ್ನು ಖರೀದಿಸಿದ್ದಾರೆ ಎಂಬುದು ತಿಳಿದುಬಂದಿಲ್ಲ. 3.0-ಲೀಟರ್ ಪೆಟ್ರೋಲ್ ಎಂಜಿನ್ 381 ಬಿಹೆಚ್‌ಪಿ ಪವರ್ ಮತ್ತು 520 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಹಾಗೆಯೇ 3.0 ಲೀಟರ್ ಡೀಸೆಲ್ ಎಂಜಿನ್ 340 ಬಿಹೆಚ್‌ಪಿ ಪವರ್ ಮತ್ತು 700 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ಗಳು 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‌ನೊಂದಿಗೆ ಜೋಡಿಸಲ್ಪಟ್ಟಿವೆ. ಕೇವಲ 5.8 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿವೆ.

singer-akhil-sachdeva-buys-bmw-x7-suv

ಈ ಮಟ್ಟದ ಪವರ್‌ಗೆ ಎಕ್ಸ್ ಡ್ರೈವ್ ಆಲ್-ವೀಲ್ ಡ್ರೈವ್ ಕಾನ್ಫಿಗರೇಶನ್ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಏರ್ ಸಸ್ಪೆಂಷನ್ ಪ್ರಯಾಣಿಕರಿಗೆ ಐಷಾರಾಮಿ ಹಡಗಿನಲ್ಲಿ ಪ್ರಯಾಣಿಸುವ ಭಾವನೆಯನ್ನು ನೀಡುತ್ತದೆ. ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 1.27 ಕೋಟಿಯಿಂದ ರೂ. 1.30 ಕೋಟಿಗಳಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, July 10, 2024, 17:41 [IST]
English summary
Singer akhil sachdeva buys bmw x7 suv
Read more on celebrity car india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+