ಮಹೀಂದ್ರಾ ಮೇಜರ್ ಕಾರನ್ನು ಕೆಸರಿನಿಂದ ಹೊರಗೆಳೆದ ಆರು ಚಕ್ರಗಳ ಮಹೀಂದ್ರಾ ಬೊಲೆರೊ

ಮಹೀಂದ್ರಾ ಕಂಪನಿಯ ಬೊಲೆರೊ, ಆಫ್-ರೋಡ್ ಕಾರು ಪ್ರಿಯರ ನೆಚ್ಚಿನ ವಾಹನಗಳಲ್ಲಿ ಒಂದಾಗಿದೆ. ಈ ಕಾರನ್ನು ಸುಲಭವಾಗಿ ಮಾರ್ಪಡಿಸಬಹುದು ಎಂಬುದು ಇದರ ಜನಪ್ರಿಯತೆಗೆ ಕಾರಣ. ಇದರ ಜೊತೆಗೆ ಈ ಕಾರು ಎಲ್ಲಾ ರೀತಿಯ ರಸ್ತೆಗಳಲ್ಲೂ ಸುಲಭವಾಗಿ ಸಂಚರಿಸುತ್ತದೆ.

ಮಹೀಂದ್ರಾ ಮೇಜರ್ ಕಾರನ್ನು ಕೆಸರಿನಿಂದ ಹೊರಗೆಳೆದ ಆರು ಚಕ್ರಗಳ ಮಹೀಂದ್ರಾ ಬೊಲೆರೊ

ಈ ಕಾರು ಆಫ್-ರೋಡ್ ಪ್ರಯಾಣಕ್ಕೆ ಸೂಕ್ತವಾದ ವಾಹನವಾಗಿದೆ. ತನ್ನ ಮೂಲ ಸ್ವರೂಪವನ್ನು ಬದಲಿಸಿಕೊಂಡು ಮಾಡಿಫೈಗೊಂಡ ಮಹೀಂದ್ರಾ ಬೊಲೆರೊ, ಕೆಸರಿನಲ್ಲಿ ಹೂತಿ ಕೊಂಡಿದ್ದ ಮಹೀಂದ್ರಾ ಜೀಪ್ ಹೊರ ಬರಲು ನೆರವಾಗಿದೆ. ಜನಜೀವನವು ಕರೋನಾ ವೈರಸ್‌ನಿಂದ ನಿಧಾನವಾಗಿ ಸಹಜ ಸ್ಥಿತಿಯತ್ತ ಮರಳುತ್ತಿದೆ.

ಮಹೀಂದ್ರಾ ಮೇಜರ್ ಕಾರನ್ನು ಕೆಸರಿನಿಂದ ಹೊರಗೆಳೆದ ಆರು ಚಕ್ರಗಳ ಮಹೀಂದ್ರಾ ಬೊಲೆರೊ

ಕರೋನಾ ವೈರಸ್ ಅಟ್ಟಹಾಸ ಇನ್ನೂ ಕಡಿಮೆಯಾಗಿಲ್ಲವಾದರೂ ಜನರು ಜೀವನ ನಿರ್ವಹಣೆಗಾಗಿ ಮನೆಗಳಿಂದ ಹೊರಬರುತ್ತಿದ್ದಾರೆ. ಲಾಕ್ ಡೌನ್ ನಿಂದಾಗಿ ಮನೆಯಲ್ಲಿಯೇ ಬಂಧಿಯಾಗಿದ್ದ ಜನರು ರಿಫ್ರೆಶ್ ಆಗಲು ಸಿದ್ಧರಾಗಿದ್ದಾರೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಮಹೀಂದ್ರಾ ಮೇಜರ್ ಕಾರನ್ನು ಕೆಸರಿನಿಂದ ಹೊರಗೆಳೆದ ಆರು ಚಕ್ರಗಳ ಮಹೀಂದ್ರಾ ಬೊಲೆರೊ

ಈ ರೀತಿ ರಿಫ್ರೆಶ್ ಆಗಲು ಹೊರಟ ಕೆಲವು ಸ್ನೇಹಿತರು ಎರಡು ಕಾರುಗಳಲ್ಲಿ ಮಣ್ಣಿನಿಂದ ತುಂಬಿದ ರಸ್ತೆಯಲ್ಲಿ ಸಾಗಿದ್ದಾರೆ. ಹೀಗೆ ಸಾಗುವಾಗ ಅವರಿದ್ದ ಜೀಪ್ ಆಕಾರದ ಮಹೀಂದ್ರಾ ಮೇಜರ್ ಕಾರು ಕೆಸರಿನಲ್ಲಿ ಹೂತು ಹೋಗಿದೆ.

ಮಹೀಂದ್ರಾ ಮೇಜರ್ ಕಾರನ್ನು ಕೆಸರಿನಿಂದ ಹೊರಗೆಳೆದ ಆರು ಚಕ್ರಗಳ ಮಹೀಂದ್ರಾ ಬೊಲೆರೊ

ಕೆಸರಿನಲ್ಲಿ ಹೂತಿ ಕೊಂಡಿದ್ದ ಮಹೀಂದ್ರಾ ಮೇಜರ್ ಕಾರನ್ನು ಹೊರ ತರಲು ಆರು ವ್ಹೀಲ್ ಗಳನ್ನು ಹೊಂದಿದ್ದ ದೈತ್ಯಾಕಾರದ ಮಹೀಂದ್ರಾ ಬೊಲೆರೊ ಕಾರು ನೆರವಾಗಿದೆ. ಈ ವಿಡಿಯೋವನ್ನು ವೈಯುವಿಲಾಗ್ಸ್ ಎಂಬ ಯೂಟ್ಯೂಬ್ ಚಾನೆಲ್ ಅಪ್ ಲೋಡ್ ಮಾಡಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಮಹೀಂದ್ರಾ ಮೇಜರ್ ಕಾರನ್ನು ಕೆಸರಿನಿಂದ ಹೊರಗೆಳೆದ ಆರು ಚಕ್ರಗಳ ಮಹೀಂದ್ರಾ ಬೊಲೆರೊ

ಈ ವೀಡಿಯೊದಲ್ಲಿ ಮಹೀಂದ್ರಾ ಬೊಲೆರೊ, ಮಹೀಂದ್ರಾ ಮೇಜರ್ ಕಾರುಗಳನ್ನು ಮಾತ್ರವಲ್ಲದೆ ಮಾರುತಿ ಜಿಪ್ಸಿ ಕಾರುಗಳನ್ನೂ ಸಹ ಕಾಣಬಹುದು. ಎಲ್ಲಾ ಕಾರುಗಳು ಆರಂಭದಲ್ಲಿ ಯಾವುದೇ ತೊಂದರೆಗಳಿಲ್ಲದೆ ಸುರಕ್ಷಿತವಾಗಿ ಚಲಿಸುತ್ತವೆ. ಆದರೆ ಕೆಲವು ಮೀಟರ್ ಸಾಗಿದ ನಂತರ ಪರಿಸ್ಥಿತಿ ಬದಲಾಗುತ್ತದೆ.

ಮಹೀಂದ್ರಾ ಮೇಜರ್ ಕಾರನ್ನು ಕೆಸರಿನಿಂದ ಹೊರಗೆಳೆದ ಆರು ಚಕ್ರಗಳ ಮಹೀಂದ್ರಾ ಬೊಲೆರೊ

ಮಹೀಂದ್ರಾ ಮೇಜರ್ ಕಾರು ಈ ಕೆಸರುಮಯ ಸ್ಥಳದಲ್ಲಿ ಸಿಲುಕಿಕೊಳ್ಳುತ್ತದೆ. ಆ ಕಾರಿನ ಟಯರ್‌ಗಳಲ್ಲಿ ಸರಿಯಾದ ಗ್ರಿಪ್ ಇಲ್ಲದ ಕಾರಣ ಕಾರು ಹೊರ ಬರಲು ಸಾಧ್ಯವಾಗಿಲ್ಲ. ಎಲ್ಲಾ ಪ್ರಯತ್ನಗಳು ವಿಫಲವಾದ ನಂತರ ಮಹೀಂದ್ರಾ ಬೊಲೆರೊ ಕಾರು, ಮಹೀಂದ್ರಾ ಮೇಜರ್ ಕಾರು ಹೊರಬರಲು ನೆರವಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಮಹೀಂದ್ರಾ ಮೇಜರ್ ಕಾರನ್ನು ಕೆಸರಿನಿಂದ ಹೊರಗೆಳೆದ ಆರು ಚಕ್ರಗಳ ಮಹೀಂದ್ರಾ ಬೊಲೆರೊ

ಮಾಡಿಫೈಗೊಂಡ ಮಹೀಂದ್ರಾ ಬೊಲೆರೊದ ಹೆಚ್ಚು ಗ್ರಿಪ್ ಹೊಂದಿರುವ ಟಯರ್‌ಗಳು ಹಾಗೂ ಈ ಕಾರಿನಲ್ಲಿರುವ 6X4 ಸಿಸ್ಟಂ ಕೆಸರಿನಲ್ಲಿ ಸಿಲುಕಿದ್ದ ಮಹೀಂದ್ರಾ ಮೇಜರ್ ಕಾರನ್ನು ಹೊರ ತರಲು ನೆರವಾಗಿವೆ.

ಮಹೀಂದ್ರಾ ಮೇಜರ್ ಕಾರನ್ನು ಕೆಸರಿನಿಂದ ಹೊರಗೆಳೆದ ಆರು ಚಕ್ರಗಳ ಮಹೀಂದ್ರಾ ಬೊಲೆರೊ

ಮಹೀಂದ್ರಾ ಮೇಜರ್ ಕಾರಿನ ಟಯರ್‌ಗಳು ಕೆಸರಿನಿಂದ ತುಂಬಿಕೊಂಡಿರುವುದನ್ನು ಕಾಣಬಹುದು. ಮಹೀಂದ್ರಾ ಮೇಜರ್ ಕಾರು ಮುಂದೆ ಸಾಗದೇ ಇರಲು ಇದು ಸಹ ಮುಖ್ಯ ಕಾರಣವಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಮಹೀಂದ್ರಾ ಮೇಜರ್ ಕಾರನ್ನು ಕೆಸರಿನಿಂದ ಹೊರಗೆಳೆದ ಆರು ಚಕ್ರಗಳ ಮಹೀಂದ್ರಾ ಬೊಲೆರೊ

ಈ ವೀಡಿಯೊದಲ್ಲಿರುವ ಮಹೀಂದ್ರಾ ಬೊಲೆರೊ ಆಫ್ ರೋಡ್ ಪ್ರಯಾಣಕ್ಕೆ ಅಗತ್ಯವಿರುವ ಹಲವು ಹೆಚ್ಚುವರಿ ಫೀಚರ್ ಗಳನ್ನು ಹೊಂದಿದೆ. ಮಹೀಂದ್ರಾ ಬೊಲೆರೊ ಸಾಮಾನ್ಯವಾಗಿ ಎರಡು ಆಕ್ಸಲ್ ಗಳನ್ನು ಹೊಂದಿರುತ್ತದೆ. ಆದರೆ ಈ ಕಾರಿನಲ್ಲಿ ಹೆಚ್ಚಿನ ಪರ್ಫಾಮೆನ್ಸ್ ಗಾಗಿ ಹೆಚ್ಚುವರಿ ಆಕ್ಸಲ್ ಅಳವಡಿಸಲಾಗಿದೆ.

ಈ ಕಾರಿನಲ್ಲಿ ಆರು ವ್ಹೀಲ್ ಗಳಿವೆ. ಈ ಕಾರಿನ ಎಂಜಿನ್ ಅನ್ನು ಸಹ ಬದಲಿಸಿ, ಸ್ಕಾರ್ಪಿಯೋದಲ್ಲಿರುವ 2.6 ಲೀಟರಿನ ಟರ್ಬೊ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಇದರ ಜೊತೆಗೆ ಮಾರುತಿ ಸುಜುಕಿ ಜಿಪ್ಸಿ ಕಾರಿನಲ್ಲಿರುವ ಕೆಲವು ತಾಂತ್ರಿಕ ಸಾಧನಗಳನ್ನು ಅಳವಡಿಸಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಮಹೀಂದ್ರಾ ಮೇಜರ್ ಕಾರನ್ನು ಕೆಸರಿನಿಂದ ಹೊರಗೆಳೆದ ಆರು ಚಕ್ರಗಳ ಮಹೀಂದ್ರಾ ಬೊಲೆರೊ

ಈ ಎಲ್ಲಾ ಕಾರಣಗಳಿಗಾಗಿ ಮಹೀಂದ್ರಾ ಬೊಲೆರೊ ದೈತ್ಯನಂತೆ ಕಾಣುತ್ತದೆ. ಈ ಒಟ್ಟಾರೆ ಬದಲಾವಣೆಗಾಗಿ ರೂ.5.5 ಲಕ್ಷ ವೆಚ್ಚ ಮಾಡಲಾಗಿದೆ. ಈ ವೆಚ್ಚವು ಹೆಚ್ಚಾದಂತೆ ಕಾಣುತ್ತದೆಯಾದರೂ ಹೊಸ ತಂತ್ರಜ್ಞಾನಗಳನ್ನು ಈ ಕಾರಿನಲ್ಲಿ ಅಳವಡಿಸಲಾಗಿದೆ.

Most Read Articles

Kannada
English summary
Six wheel Mahindra Bolero rescues Mahindra Major from mud. Read in Kannada.
Story first published: Tuesday, September 15, 2020, 12:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X