36 ಕಾರುಗಳಡಿಯಲ್ಲಿ ಸ್ಕೇಟಿಂಗ್; ಬೆಂಗಳೂರಿನ 6ರ ಬಾಲಕನಿಂದ ಗಿನ್ನೆಸ್ ದಾಖಲೆ

By Nagaraja

ಹಳ್ಳಿಯ ಮಕ್ಕಳಿಗೆ ಸ್ಕೇಟಿಂಗ್ ಕ್ರೀಡೆಯ ಬಗ್ಗೆ ಪರಿಜ್ಞಾನವೇ ಇರುವುದಿಲ್ಲ. ಅದರ ಅಗತ್ಯವೂ ಇರುವುದಿಲ್ಲ. ಅತ್ತ ನಗರ ಪ್ರದೇಶಗಳಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಮಕ್ಕಳ ವಿನೋದಕ್ಕಾಗಿ ಸ್ಕೇಟಿಂಗ್ ನಂತಹ ಕ್ರೀಡೆಯ ಮೊರೆ ಹೋಗಬೇಕಾಗುತ್ತದೆ. ಆಧುನಿಕ ಜಗತ್ತಿನಲ್ಲಿ ಸ್ಕೇಟಿಂಗ್ ಎಂಬ ಕ್ರೀಡೆ ಕೇವಲ ಮೋಜಿಗಷ್ಟೇ ಸೀಮಿತವಲ್ಲ. ಅನೇಕ ನೂತನ ದಾಖಲೆಗಳು ಸ್ಕೇಟಿಂಗ್ ನಲ್ಲಿ ಸೃಷ್ಟಿಯಾಗುತ್ತಲೇ ಇದೆ.

ವಿದೇಶಗಳಿಗೆ ಹೋಲಿಸಿದಾಗ ಭಾರತದಲ್ಲಿ ನಿಧಾನವಾಗಿ ಸ್ಕೇಟಿಂಗ್ ಕಲೆ ಜನಪ್ರಿಯವಾಗತೊಡಗಿದೆ. ಇತ್ತ 6ರ ಹರೆಯದ ನಮ್ಮ ಬೆಂಗಳೂರಿನ ಹುಡುಗ ಓಂ ಸ್ವರೂಪ್ ಗೌಡ ಸ್ಕೇಟಿಂಗ್ ನಲ್ಲಿ ನೂತನ ಗಿನ್ನೆಸ್ ವಿಶ್ವದಾಖಲೆ ಬರೆಯುವ ಮೂಲಕ ದೇಶಕ್ಕೆ ಹೆಮ್ಮೆಯಾಗಿ ಹೊರಹೊಮ್ಮಿದ್ದಾರೆ. [ಕೊನೆಯಲ್ಲಿ ಕೊಡಲಾಗಿರುವ ವಿಡಿಯೋ ವೀಕ್ಷಿಸಲು ಮರೆಯದಿರಿ.]

36 ಕಾರುಗಳಡಿಯಲ್ಲಿ ಸ್ಕೇಟಿಂಗ್; ಬೆಂಗಳೂರಿನ 6ರ ಬಾಲಕನಿಂದ ಗಿನ್ನೆಸ್ ದಾಖಲೆ

ಸಾಲಾಗಿ ನಿಂತಿರುವ ಕಾರುಗಳ ಅಡಿಯಲ್ಲಿ ತನ್ನ ದೇಹವನ್ನು ಸಮಾನಾಂತರವಾಗಿ ಬಾಗಿಸಿ ಉಸಿರು ಬಿಗಿ ಹಿಡಿಯುವ ಮೂಲಕ ಸ್ಕೇಟಿಂಗ್ ನಡೆಸಿರುವ ಓಂ ಸ್ವರೂಪ್ ಗೌಡ ನೂತನ ದಾಖಲೆ ಬರೆದಿದ್ದಾರೆ.

36 ಕಾರುಗಳಡಿಯಲ್ಲಿ ಸ್ಕೇಟಿಂಗ್; ಬೆಂಗಳೂರಿನ 6ರ ಬಾಲಕನಿಂದ ಗಿನ್ನೆಸ್ ದಾಖಲೆ

ಸಾಲಾಗಿ ನಿಲ್ಲಿಸಲಾಗಿರುವ 36 ಟಾಟಾ ಸುಮೋ ಕಾರುಗಳ ಅಡಿಯಿಂದ 65.28 ಮೀಟರ್ ದೂರವನ್ನು ಕ್ರಮಿಸಿರುವ ಓಂ ಸ್ವರೂಪ್ ಗೌಡ ಗಿನ್ನೆಸ್ ದಾಖಲೆ ಪುಟಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ.

36 ಕಾರುಗಳಡಿಯಲ್ಲಿ ಸ್ಕೇಟಿಂಗ್; ಬೆಂಗಳೂರಿನ 6ರ ಬಾಲಕನಿಂದ ಗಿನ್ನೆಸ್ ದಾಖಲೆ

ನಗರದ ಹೃದಯ ಭಾಗದಲ್ಲಿರುವ ಹೆಸರಾಂತ ಓರಾಯನ್ ಮಾಲ್ ನಲ್ಲಿ ಏರ್ಪಡಿಸಲಾಗಿದ್ದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಓಂ ಸ್ವರೂಪ್ ಗೌಡ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.

36 ಕಾರುಗಳಡಿಯಲ್ಲಿ ಸ್ಕೇಟಿಂಗ್; ಬೆಂಗಳೂರಿನ 6ರ ಬಾಲಕನಿಂದ ಗಿನ್ನೆಸ್ ದಾಖಲೆ

ಈ ರೋಚಕ ಕ್ಷಣಕ್ಕೆ ಗಿನ್ನೆಸ್ ದಾಖಲೆಯ ಅಧಿಕೃತ ತೀರ್ಪುಗಾರ ರಿಷಿ ನಾಥ್ ಸಾಕ್ಷಿಯಾಗಿದ್ದರು. ಅಲ್ಲದೆ ಹೆತ್ತವರ ಜೊತೆಗೆ ನೆರೆದಿದ್ದ ಪ್ರೇಕ್ಷಕ್ಷರು ಕೈಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದರು.

36 ಕಾರುಗಳಡಿಯಲ್ಲಿ ಸ್ಕೇಟಿಂಗ್; ಬೆಂಗಳೂರಿನ 6ರ ಬಾಲಕನಿಂದ ಗಿನ್ನೆಸ್ ದಾಖಲೆ

ಇದಕ್ಕಾಗಿ ವಿಶಿಷ್ಟ ನಿಯಾಮಾವಳಿಗಳನ್ನು ಅನುಸರಿಸಲಾಗಿತ್ತು. ಕಾರುಗಳ ನಡುವಣ ಪಾರ್ಕಿಂಗ್ 20 ಸೆಂಟಿಮೀಟರ್ ದಾಟಬಾರದಿತ್ತು. ಹಾಗೆಯೇ ನೆಲದಿಂದ ಕಾರುಗಳ ನಡುವಣ ಅಂತರ 35 ಸೆಂಟಿಮೀಟರ್ ಮೀರಬಾರದಿತ್ತು.

36 ಕಾರುಗಳಡಿಯಲ್ಲಿ ಸ್ಕೇಟಿಂಗ್; ಬೆಂಗಳೂರಿನ 6ರ ಬಾಲಕನಿಂದ ಗಿನ್ನೆಸ್ ದಾಖಲೆ

ಲಿಂಬೊ ಸ್ಕೇಟಿಂಗ್ ನಿಯಮದ ಪ್ರಕಾರ ಸ್ಪರ್ಧಾಳು ತನ್ನ ದೇಹ ಅಥವಾ ಕೈಯನ್ನಾಗಲಿ ನೆಲವನ್ನು ಸ್ಪರ್ಶಿಸುವಂತಿಲ್ಲ.

36 ಕಾರುಗಳಡಿಯಲ್ಲಿ ಸ್ಕೇಟಿಂಗ್; ಬೆಂಗಳೂರಿನ 6ರ ಬಾಲಕನಿಂದ ಗಿನ್ನೆಸ್ ದಾಖಲೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ಓಂ ಸ್ವರೂಪ್ ಗೌಡ ತರಬೇತುದಾರನಾಗಿರುವ ಆರ್ ವಿ ಸ್ಕೇಟಿಂಗ್ ಆಂಡ್ ಸ್ಪೋರ್ಟ್ಸ್ ಕ್ಲಬ್‌ನ ರಾಘವೇಂದ್ರ ಕೆ, "ಅತೀವ ಸಂತೋಷವನ್ನು ವ್ಯಕ್ತಪಡಿಸಿದ್ದು, ಮಕ್ಕಳ ಸಾಧನೆಯಿಂದ ಹೆಮ್ಮೆಪಡುವಂತಾಗಿದೆ" ಎಂದಿದ್ದಾರೆ.

36 ಕಾರುಗಳಡಿಯಲ್ಲಿ ಸ್ಕೇಟಿಂಗ್; ಬೆಂಗಳೂರಿನ 6ರ ಬಾಲಕನಿಂದ ಗಿನ್ನೆಸ್ ದಾಖಲೆ

ಇದಕ್ಕೂ ಮೊದಲು 2012ನೇ ಇಸವಿಯಲ್ಲಿ ಓಂ ಸ್ವರೂಪ್ ಗೌಡ್ ಲಿಂಬೊ ಸ್ಕೇಟಿಂಗ್ ನಲ್ಲಿ 48.21 ಮೀಟರ್ ದೂರವನ್ನು ತೆವಳಿದ್ದರು. ಈಗ ತನ್ನದೇ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

36 ಕಾರುಗಳಡಿಯಲ್ಲಿ ಸ್ಕೇಟಿಂಗ್; ಬೆಂಗಳೂರಿನ 6ರ ಬಾಲಕನಿಂದ ಗಿನ್ನೆಸ್ ದಾಖಲೆ

ಸ್ಕೇಟಿಂಗ್ ಅಪಾಯಕಾರಿ ಕ್ರೀಡೆಯಾಗಿದ್ದು, ಚಿಕ್ಕವನಿಂದಲೇ ನುರಿತ ತರಬೇತಿಯ ಅಗತ್ಯವಿರುತ್ತದೆ. ಓಂ ಸ್ವರೂಪ್ ಗೌಡ ಚಿಕ್ಕವನಿಂದಲೇ ಸ್ಕೇಟಿಂಗ್ ಮೇಲೆ ಅತೀವ ಆಸಕ್ತಿಯನ್ನು ತೋರಿದ್ದರು.

ವಿಡಿಯೋ ವೀಕ್ಷಿಸಿ

More from DriveSpark

Article Published On: Thursday, August 4, 2016, 11:42 [IST]
English summary
Six-year-old Indian boy skates under 36 cars to set new world record
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+