ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

By Manoj B.k

ಹೊಸ ವಾಹನಗಳ ಖರೀದಿ ನಂತರ ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳು ಎದುರಾಗುವುದು ಕಾಮನ್. ಈ ವೇಳೆ ಬಹುತೇಕ ವಾಹನ ಮಾಲೀಕರು ಗುಣಮಟ್ಟದ ಸರ್ವಿಸ್ ಪಡೆಯುವ ಉದ್ದೇಶದಿಂದ ಹಣದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಅಧಿಕೃತ ಡೀಲರ್ಸ್ ಬಳಿಯೇ ಸೇವೆ ಪಡೆದುಕೊಳ್ಳಲು ಮುಂದಾಗುತ್ತಾರೆ. ಆದ್ರೆ ಇದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲವು ಡೀಲರ್ಸ್‌ಗಳು ವಾಹನ ಮಾಲೀಕರನ್ನು ಹೇಗೆಲ್ಲಾ ಸುಲಿಗೆ ಮಾಡುತ್ತಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.

ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಹೌದು, ಕಾರು ಮಾಲೀಕರೊಬ್ಬರು ರೀಪೆರಿಗೆ ಅಂತಾ ತಮ್ಮ ಸ್ಕೋಡಾ ಲೌರಾ ಐಷಾರಾಮಿ ಸೆಡಾನ್ ಕಾರನ್ನು ಅಧಿಕೃತ ಡೀಲರ್ಸ್ ಬಳಿ ತೆಗೆದುಕೊಂಡು ಹೋಗಿದ್ದರು. ಈ ವೇಳೆ ಕಾರು ರೀಪೆರಿ ಮೊತ್ತವು ಬರೋಬ್ಬರಿ 3 ಲಕ್ಷ ಆಗಬಹುದು ಹೇಳಲಾಗಿತ್ತು. ಆದ್ರೆ ರೀಪೆರಿ ಬಂದಿದ್ದ ಕಾರನ್ನು ಅಧಿಕೃತ ಡೀಲರ್ಸ್ ಬಳಿ ರೀಪೆರಿ ಮಾಡಿಸದೇ ಲೋಕಲ್ ಗ್ಯಾರೇಜ್‌ನಲ್ಲಿ ರೀಪೆರಿ ಮಾಡಿಸಿದಾಗ ಕೇವಲ ರೂ. 1 ಸಾವಿರ ವೆಚ್ಚದಲ್ಲಿ ಫ್ಯೂಲ್ ಟ್ಯಾಂಕ್‌ನಲ್ಲಿ ಉಂಟಾಗಿದ್ದ ಸಮಸ್ಯೆಯು ಬಗೆಹರಿದಿದೆ.

ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಸ್ಕೋಡಾ ಕಾರು ಮಾಲೀಕನಿಗೆ ಲೋಕಲ್ ಗ್ಯಾರೇಜ್ ಸಿಬ್ಬಂದಿಯು ಕೇವಲ 10 ನಿಮಿಷದಲ್ಲಿ ರೂ. 1 ಸಾವಿರ ಬಿಲ್‌ನೊಂದಿಗೆ ಸಮಸ್ಯೆಯನ್ನು ಬಗೆಹರಿಸಿದ್ದು, ಇದೇ ಸಮಸ್ಯೆಯನ್ನು ಮುಂದಿಟ್ಟುಕೊಂಡು ಲಕ್ಷ ಲಕ್ಷ ಬಿಲ್ ಮಾಡಲು ಮುಂದಾಗಿದ್ದ ಅಧಿಕೃತ ಡೀಲರ್ಸ್ ಅಸಲಿಯತ್ತು ಬಯಲಾಗಿದೆ.

ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಮುಂಬೈನಲ್ಲಿ ಈ ಘಟನೆ ನಡೆದಿದ್ದು, ಎಂಜಿನ್ ಸ್ಟಾರ್ಟ್ ಸಮಸ್ಯೆ ಎದುರಿಸುತ್ತಿದ್ದ ಸ್ಕೋಡಾ ಲೌರಾ ಕಾರನ್ನು ಅಧಿಕೃತ ಡೀಲರ್ಸ್ ಬಳಿ ರೀಪೆರಿಗಾಗಿ ತೆಗೆದುಕೊಂಡು ಹೋಗಲಾಗಿತ್ತು. ಈ ವೇಳೆ ಕಾರು ಪರೀಶಿಲಿಸಿದ್ದ ಅಧಿಕೃತ ಡೀಲರ್ಸ್ ಸಿಬ್ಬಂದಿಯು ಸಮಸ್ಯೆಯ ಪರಿಹಾರಕ್ಕಾಗಿ ಕೆಲವು ಬಿಡಿಬಿಭಾಗಗಳನ್ನು ಬದಲಿಸುವ ಅವಶ್ಯಕತೆಯಿದೆ ಇರುವುದಾಗಿ ಮಾಲೀಕನಿಗೆ ಮಾಹಿತಿ ನೀಡಿದ್ದರು.

ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಈ ವೇಳೆ ಬಿಡಿಭಾಗಗಳ ಬದಲಾವಣೆಗೆ ಎಷ್ಟು ಖರ್ಚಾಗಬಹುದು ಎಂದು ಕೇಳಿದ್ದ ಕಾರು ಮಾಲೀಕನಿಗೆ ಅಧಿಕೃತ ಡೀಲರ್ಸ್ ಕಡೆಯಿಂದ ಬಂದ ಉತ್ತರ ಶಾಕ್ ಕೊಟ್ಟಿತ್ತು. ಕೆಲವು ಬಿಡಿಭಾಗಗಳು ಮತ್ತು ಸರ್ವಿಸ್ ಚಾರ್ಜ್ ಸೇರಿ ರೂ. 3 ಲಕ್ಷ ಆಗಬಹುದು ಎಂದಿದ್ದರು.

ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಆದ್ರೆ ಡೀಲರ್ಸ್‌ ಮಾತು ಕಾರು ಮಾಲೀಕನ ಅನುಮಾನಕ್ಕೆ ಕಾರಣವಾಗಿತ್ತು. ಕೇವಲ ಸ್ಟಾರ್ಟ್ ತೊಂದರೆ ಅನುಭವಿಸುತ್ತಿರುವ ಕಾರು ರೀಪೆರಿಗೆ ಬರೋಬ್ಬರಿ ರೂ.3 ಲಕ್ಷ ಬಿಲ್ ಆಗಬಹುದು ಎಂದಾಗ ಲೋಕಲ್ ಗ್ಯಾರೇಜ್‌ನಲ್ಲಿ ಸರ್ವಿಸ್‌ಗೆ ಮುಂದಾಗಿದ್ದಾರೆ.

ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಅಧಿಕೃತ ಡೀಲರ್ಸ್ ಬಳಿ ಇದ್ದ ಕಾರನ್ನು ಲೋಕಲ್ ಗ್ಯಾರೇಜ್‌ಗೆ ತೆಗೆದುಕೊಂಡ ಬಂದ ಮಾಲೀಕನಿಗೆ ಅಚ್ಚರಿ ಎಂಬಂತೆ 10 ನಿಮಿಷದಲ್ಲಿ ಕಾರನ್ನು ರೀಪೆರಿ ಮಾಡಿದ್ದಲ್ಲದೇ ಕೇವಲ ಒಂದು ಸಾವಿರ ಬಿಲ್ ಮಾಡಿದ್ದಾರೆ.

ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಕಾರಿನ ಎಂಜಿನ್ ಸ್ಟಾರ್ಟ್ ಸಮಸ್ಯೆಯನ್ನು ಮುಂದಿಟ್ಟುಕೊಂಡು ಮಾಲೀಕನಿಂದ ಲಕ್ಷ ಲಕ್ಷ ವಸೂಲಿ ಮಾಡಲು ಮುಂದಾಗಿದ್ದ ಅಧಿಕೃತ ಡೀಲರ್ಸ್ ಮಹಾಶಯನು ಚೆನ್ನಾಗಿಯೇ ಕಾರ್ಯನಿರ್ವಹಿಸುತ್ತಿದ್ದ ಫ್ಯೂಲ್ ಟ್ಯಾಂಕ್ ಸಂಪರ್ಕವನ್ನು ಸಂಪೂರ್ಣ ಬದಲಾಯಿಸಲು ಮುಂದಾಗಿದ್ದ ಸತ್ಯವನ್ನು ಲೋಕಲ್ ಗ್ಯಾರೇಜ್ ಸಿಬ್ಬಂದಿ ಮಾಲೀಕನಿಗೆ ಸಾಕ್ಷಿ ಸಮೇತ ತೋರಿಸಿದ್ದ.

MOST READ: ಬಿಡುಗಡೆಗೆ ಸಿದ್ದವಾದ ಹೋಂಡಾದ ಮೊದಲ ಎಲೆಕ್ಟ್ರಿಕ್ ಕಾರು

ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಅಧಿಕೃತ ಡೀಲರ್ಸ್ ಮಾತಿಗೆ ಮರಳಾಗದ ಕಾರು ಮಾಲೀಕನು ಲೋಕಲ್ ಗ್ಯಾರೇಜ್‌ನಲ್ಲಿ ರೀಪೆರಿ ಮಾಡಿಸುವ ಮೂಲಕ ಅಧಿಕೃತ ಡೀಲರ್ಸ್ ಬಂಡವಾಳವನ್ನು ಬಯಲಿಗೆ ಎಳೆದಿದ್ದು, ಪ್ರತಿಯೊಬ್ಬ ಕಾರು ಮಾಲೀಕರು ಸಹ ಇಂತವರ ಬಗ್ಗೆ ಎಚ್ಚರವಾಗಿರುವಂತೆ ಮನವಿ ಮಾಡಿದ್ದಾರೆ.

ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಡೀಲರ್ಸ್ ಮಟ್ಟದಲ್ಲಿ ಗ್ರಾಹಕರಿಗೆ ಮೋಸವಾಗುತ್ತಿರುವುದು ಇದು ಮೊದಲಲ್ಲ. ಈ ಹಿಂದೆಯೂ ಪ್ರತಿಷ್ಠಿತ ಕಾರು ಡೀಲರ್ಸ್‌ಗಳು ಮೋಸದ ವ್ಯವಹಾರದ ಮೂಲಕ ಲಕ್ಷ ಲಕ್ಷ ಬಿಲ್ ಮಾಡಿ ಸಿಕ್ಕಿಬಿದ್ದಿರುವ ಹಲವಾರು ಪ್ರಕರಣಗಳು ಬಯಲಿಗೆ ಬಂದಿದ್ದನ್ನು ಡ್ರೈವ್‌ಸ್ಪಾರ್ಕ್ ವರದಿ ಮಾಡಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಯಾವುದೇ ಕಾರಣಕ್ಕೂ ನೀವು ಕೂಡಾ ಅಧಿಕೃತ ಡೀಲರ್ಸ್ ಬಳಿ ಸರ್ವಿಸ್ ಮಾಡಿಸುವಾಗ ಇಂತಹ ವಿಚಾರಗಳ ಬಗ್ಗೆ ತುಸು ಎಚ್ಚರಿಕೆ ವಹಿಸುವುದು ಒಳಿತು. ಇಲ್ಲವಾದ್ರೆ ಒಂದಕ್ಕೆ ಹತ್ತು ಪಟ್ಟು ಹಣ ತೆರಬೇಕಾದ ಪರಿಸ್ಥಿತಿ ಎದುರಾಗಬಹುದು.

Article Published On: Friday, May 10, 2019, 17:33 [IST]
English summary
Skoda Service Center Quotes Rs 3 Lakh Estimate For Car Repair, But Owner Gets It Just Thousand Rupees in Outside.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+