ಸರಿಯಾಗಿ ಸಿಕ್ಕಿಬಿದ್ದ ಸ್ಮಗ್ಲರ್: ಪೊಲೀಸರೆ ಷಾಕ್ ಆಗುವ ರೀತಿಯಲ್ಲಿ ಬೊಲೆರೊ ಮಾಡಿಫೈ!

ಭಾರತದಲ್ಲಿ ಜನರ ಮೇಲೆ ಸಿನಿಮಾಗಳ ಪ್ರಭಾವ ಎಷ್ಟಿರುತ್ತದೆ ಎಂಬುದು ಎಲ್ಲರಿಗು ತಿಳಿದಿರುತ್ತದೆ. ಅದರಲ್ಲೂ ಒಳ್ಳೆಯ ಕೆಲಸಗಳನ್ನು ಪಾಲನೆ ಮಾಡುವವರಿಗಿಂತಲೂ ಅಡ್ಡದಾರಿಯಲ್ಲಿ ನಡೆಯುವ ದೃಶ್ಯಗಳನ್ನೆ ಜನರು ಹೆಚ್ಚಾಗಿ ಪಾಲನೆ ಮಾಡುತ್ತಾರೆ. ಇತ್ತೀಚೆಗೆ ತೆಲುಗಿನಲ್ಲಿ ಬಿಡುಗಡೆಯಾದ ಪುಷ್ಪಾ ಸಿನಿಮಾದಲ್ಲಿ ಸ್ಮಗ್ಲಿಂಗ್ ಮಾಡುವ ದೃಶ್ಯಗಳು ಹೆಚ್ಚಾಗಿರುತ್ತವೆ. ಈ ಸಿನಿಮಾವನ್ನು ಪ್ರೇರಣೆಯಾಗಿ ತೆಗೆದುಕೊಂಡು ಸ್ಮಗ್ಲಿಂಗ್ ಮಾಡಿದ ಹಲವರನ್ನು ಈ ಹಿಂದೆ ಆಂಧ್ರಪ್ರದೇಶದಲ್ಲಿ ಬಂದಿಸಲಾಗಿತ್ತು. ಹಾಗಯೇ ಇತ್ತೀಚೆಗೆ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿಲಾಗಿದೆ. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಕೂಡ ವೈರಲ್ ಆಗಿವೆ.

ಬೊಲೆರೊ ಕಾರು ಭಾರತೀಯ ಆಟೋಮೊಬೈಲ್ ಉದ್ಯಮದ ದೈತ್ಯ ಕಂಪನಿಯಿಂದ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಈ ಬೊಲೆರೊ ಕಾರಿನ ಮೇಲ್ಛಾವಣಿಯಡಿ 800 ಮದ್ಯದ ಬಾಟಲಿಗಳನ್ನು ಸಾಗಿಸುತ್ತಿದ್ದ ಕಳ್ಳ ಸಾಗಾಣಿಕೆದಾರರು ಸಿಕ್ಕಿಬಿದ್ದಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ಜನ ಎಷ್ಟು ಸೃಜನಶೀಲರಾಗಿರುತ್ತಾರೆ ಎಂಬುದನ್ನು ಈ ವಿಡಿಯೋ ತೋರಿಸುತ್ತದೆ.

smuggler-arrested-transporting-illegal-liquor-in-mahindra-bolero

ಈ ಸುದ್ದಿಗೆ ಸಂಬಂಧಿಸಿದ ವಿಡಿಯೋವೊಂದು ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗುತ್ತಿದ್ದು, ಘಟನೆ ಬಿಹಾರದಲ್ಲಿ ನಡೆದಿರುವುದು ತಿಳಿದುಬಂದಿದೆ. ಬಿಹಾರದ ಮದ್ಯ ಮಾಫಿಯಾ ಮೂಲಕ ತ್ವರಿತ ಲಾಭಗಳನ್ನು ಗಳಿಸಲು ಭಾರಿ ಪ್ರಮಾಣದ ಮದ್ಯವನ್ನು ಕಳ್ಳಸಾಗಣೆ ಮಾಡುವುದು ಇಲ್ಲಿ ಸಾಮಾನ್ಯ ಮಾರ್ಗವಾಗಿದೆ. ಇದಕ್ಕಾಗಿ ಹಲವು ರೀತಿಯಲ್ಲಿ ಉಪಾಯಗಳನ್ನು ಹುಡಿಕೊಂಡು ಮದ್ಯವನ್ನು ಸಾಗಿಸಲಾಗುತ್ತದೆ.

ಅಂತೆಯೇ ಮಹೀಂದ್ರಾ ಬೊಲೆರೊದ ಛಾವಣಿಯಡಿ ಮದ್ಯ ತುಂಬಿದ 800 ಟೆಟ್ರಾ ಪ್ಯಾಕೆಟ್‌ಗಳನ್ನು ಸುರಕ್ಷಿತವಾಗಿ ಸಾಗಿಸುವುದು ಉತ್ತಮ ಉಪಾಯವೆಂದು ಕೆಲವರು ಭಾವಿಸಿದ್ದರು. ಅಂತೆಯೇ ಕಾರಿನ ರೂಫ್ ಅನ್ನು ತುಸು ಮಾಡಿಫೈಗೊಳಿಸಿ ಮದ್ಯದ ಪ್ಯಾಕೆಟ್‌ಗಳನ್ನು ತುಂಬಿ ಸಾಗಿಸಿದ್ದಾರೆ. ಇವುಗಳನ್ನು ಪೊಲೀಸ್ ಅಧಿಕಾರಿಗಳ ಕಣ್ಣು ತಪ್ಪಿಸಿ ಸಾಗಿಸುವುದು ಮುಖ್ಯ ಉದ್ದೇಶವಾಗಿತ್ತು.

smuggler-arrested-transporting-illegal-liquor-in-mahindra-bolero

ಆದರೆ, ಈ ಬಗ್ಗೆ ಯಾರೋ ಪೊಲೀಸರಿಗೆ ಮಾಹಿತಿ ನೀಡಿರಬೇಕು. ಕೂಡಲೇ ಎಚ್ಚೆತ್ತ ಪೊಲೀಸರು ಕಾರ್ಯಪ್ರವೃತ್ತರಾಗಿ ಇಡೀ ದಂಧೆಯನ್ನು ಭೇದಿಸಿದ್ದಾರೆ. ಪೊಲೀಸರು ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿ ಕಾರಿನ ಮೇಲ್ಛಾವಣಿಯನ್ನು ಪರಿಶೀಲಿಸಿ ಮದ್ಯವನ್ನು ಹೊರತೆಗೆದಿದ್ದಾರೆ. ವಿಡಿಯೋದಲ್ಲಿ ಮದ್ಯದ ಪ್ಯಾಕೆಟ್‌ಗಳನ್ನು ಎಣಿಸಿ ಹೊರಗೆ ಎಸೆಯುವುದನ್ನು ನಾವು ನೋಡಬಹುದು.

ಅದೇನೇ ಇದ್ದರೂ, ಈ ಕಳ್ಳಸಾಗಣೆದಾರರ ಕಲ್ಪನೆಯನ್ನು ಮತ್ತು ಅವರು ಅಧಿಕಾರಿಗಳನ್ನು ಹೇಗೆ ಕಣ್ಣುತಪ್ಪಿಸಲು ಹಲವು ಉಪಾಯಗಳನ್ನು ಹುಡುಕುತ್ತಾರೆ ಎಂಬುದನ್ನು ನೋಡಲು ಆಕರ್ಷಕವಾಗಿರುತ್ತದೆ. ಆದರೂ ಅಪರಾಧಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಂತಹ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಲೇ ಇರುತ್ತವೆ. ಆದ್ರೆ ಈವರೆಗೆ ಸಂಪೂರ್ಣವಾಗಿ ತಡೆಗಟ್ಟಲು ಆಗಿಲ್ಲ.

ವಾಹನದ ವಿಷಯಕ್ಕೆ ಬಂದರೆ ಬೊಲೆರೊ ಕಾರು ಗ್ರಾಮೀಣ ಭಾರತದ ಹೀರೋ ಆಗಿದ್ದು, ಜನರು ಹೆಚ್ಚಿನ ಲಗೇಜ್, ಆಫ್-ರೋಡಿಂಗ್ ಸೇರಿದಂತೆ ಎಲ್ಲಾ ರೀತಿಯ ಚಟುವಟಿಕೆಗಳಿಗೆ ಇದನ್ನು ಬಳಸುತ್ತಾರೆ. ಇದರ ಒರಟು ಸ್ವಭಾವ ಮತ್ತು ಪ್ರಭಾವಶಾಲಿ ಕಾರ್ಯಕ್ಷಮತೆಯಿಂದ ಹೆಚ್ಚಿನ ಬೇಡಿಕೆಯೊಂದಿಗೆ ಉತ್ತಮ ಮಾರಾಟ ಕಾಣುತ್ತದೆ. ಈ ಕಾರಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, January 6, 2025, 13:52 [IST]
English summary
Smuggler arrested transporting illegal liquor in mahindra bolero
Read more on offbeat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+