ಕೊರೆಯುವ ಚಳಿಗೆ ಉತ್ತರ ಭಾರತ ಗಡಗಡ

By Nagaraja

ಈ ಬಾರಿ ಉತ್ತರ ಭಾರತದಲ್ಲಿ ಅತಿ ಹೆಚ್ಚಿನ ಪ್ರಮಾಣದ ಚಳಿಯ ಅನುಭವವುಂಟಾಗುತ್ತಿದೆ. ಒಂದೆಡೆ ಕೊರೆಯುವ ಚಳಿ ಇನ್ನೊಂದೆಡೆ ಹಿಮಪಾತವು ಜನ ಸಾಮಾನ್ಯರ ದಿನನಿತ್ಯ ಚಟುವಟಿಕೆಗಳಿಗೆ ಮಾರಕವಾಗಿ ಪರಿಣಮಿಸಿದೆ.

ಇವನ್ನೂ ಓದಿ: ಚಳಿಗಾಲದಲ್ಲಿ ಕಾರ್ ಕೇರ್ ಗಾಗಿ 6 ಟಿಪ್ಸ್

ದಕ್ಷಿಣ ಭಾರತಕ್ಕೆ ಹೋಲಿಸಿದಾಗ ಉತ್ತರ ಭಾರತದಲ್ಲಿ ಅತಿ ಹೆಚ್ಚಿನ ಶೈತ್ಯ ಹವೆ ದಾಖಲಾಗುತ್ತಿದೆ. ಇನ್ನೊಂದೆಡೆ ವಾಹನ ಸವಾರಿಯಂತೂ ದುಸ್ತರವಾಗಿಬಟ್ಟಿದೆ. ಅಷ್ಟಕ್ಕೂ ಚಳಿಗಾಲದಲ್ಲಿ ಹಿಮಪಾತದ ಸುಂದರ ದೃಶ್ಯಗಳನ್ನು ನೋಡಲು ನೀಡುವ ವಿದೇಶಗಳಿಗೆ ತೆರಳುವ ಅಗತ್ಯವಿರುವುದಿಲ್ಲ. ಇಂದಿನ ಈ ಲೇಖನದಲ್ಲಿ ಇತ್ತೀಚಿನ ಸಮಯದಲ್ಲಿ ಉತ್ತರ ಭಾರತದಲ್ಲಿ ಉಂಟಾಗಿರುವ ವಿಪರೀತ ಹಿಮಪಾತಕ್ಕೆ ವಾಹನಗಳು ಹೇಗೆ ಸಿಲುಕಿ ಹಾಕಿಕೊಂಡಿತ್ತು ಹಾಗೂ ಇಂತಹ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ ಎಂಬುದಕ್ಕೆ ಸಂಬಂಧಿಸಿದಂತೆ ಕೆಲವೊಂದು ಉಪಯುಕ್ತ ಸಲಹೆಗಳನ್ನು ಹೇಳಿಕೊಡುವ ಪ್ರಯತ್ನ ಮಾಡಲಿದ್ದೇವೆ.

ಕೊರೆಯುವ ಚಳಿಗೆ ಉತ್ತರ ಭಾರತ ಗಡಗಡ

ವಿಪರೀತ ಹಿಮಪಾತದಿಂದಾಗಿ ಶಿಮ್ಲಾ ಹಾಗೂ ಮನಲಿ ಪ್ರವಾಸಿ ತಾಣಗಳು ಬಹುತೇಕ ಮಚ್ಚಲ್ಪಟ್ಟಿದೆ. ಇಲ್ಲಿನ ಪ್ರದೇಶದಲ್ಲಿ ಕನಿಷ್ಠ ಉಷ್ಣಾಂಶವು 1 ಡಿಗ್ರಿಯ ವರೆಗೆ ಬಂದು ತಲುಪಿದೆ ಎಂದು ಹವಮಾನ ಇಲಾಖೆ ವರದಿ ಮಾಡಿದೆ.

ಕೊರೆಯುವ ಚಳಿಗೆ ಉತ್ತರ ಭಾರತ ಗಡಗಡ

ಇನ್ನು ವಾಹನ ಸವಾರರಿಗೆ ಅತಿ ಹೆಚ್ಚಿನ ದುಸ್ತರ ಪರಿಸ್ಥಿತಿ ಎದುರಾಗಿದೆ. ಮನೆಯ ಹೊರಗಡೆ ಪಾರ್ಕ್ ಮಾಡಿದ ವಾಹನಗಳು ಬೆಳಗ್ಗೆ ಎದ್ದು ನೋಡಿದಾಗ ಸಂಪೂರ್ಣವಾಗಿ ಹಿಮವೃತವಾಗಿರುವಂತಹ ಪರಿಸ್ಥಿತಿ ಹಲೆವೆಡೆ ಕಾಣಿಸಿಕ್ಕಿದೆ. ಇನ್ನು ಭಾರಿ ಹಿಮಪಾತದಿಂದಾಗಿ ವಾಹನಗಳು ಜಖಂಗೊಂಡಿರುವ ಪ್ರಸಂಗಗಳು ಎದುರಾಗಿದ್ದವು.

ಕೊರೆಯುವ ಚಳಿಗೆ ಉತ್ತರ ಭಾರತ ಗಡಗಡ

ಹಿಮಪಾತದ ವೇಳೆ ವಾಹನ ಸಂಚಾರ ತುಂಬಾನೇ ಕಠಿಣವೆನಿಸುತ್ತದೆ. ಯಾಕೆಂದರೆ ರಸ್ತೆಯುದ್ಧಕ್ಕೂ ಹಿಮ ಬಿದ್ದಿರುವುದರಿಂದ ಚಕ್ರಗಳು ಜಾರುವ ಸಂದರ್ಭ ಎದುರಾಗುತ್ತದೆ.

ಕೊರೆಯುವ ಚಳಿಗೆ ಉತ್ತರ ಭಾರತ ಗಡಗಡ

ಹಾಗಾಗಿ ನಿಧಾನವೇ ಪ್ರಧಾನ ಎಂಬ ವಾಕ್ಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಾಧ್ಯವಾದಷ್ಟು ನಿಧಾನವಾಗಿ ಸಂಚರಿಸಿ.

ಕೊರೆಯುವ ಚಳಿಗೆ ಉತ್ತರ ಭಾರತ ಗಡಗಡ

ನಿಮ್ಮ ಕಾರಿನಲ್ಲಿ ಆ್ಯಂಟಿ ಬ್ರೇಕ್ ಸಿಸ್ಟಂ ಮುಂತಾದ ಆಧುನಿಕ ಸುರಕ್ಷಾ ವೈಶಿಷ್ಟ್ಯಗಳಿದ್ದರೆ ಚಳಿಗಾಲದ ಪರಿಸ್ಥಿತಿಯನ್ನು ಎದುರಿಸಲು ಸುಲಭವಾಗುವುದು ಎಂದು ಆಟೋ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

ಕೊರೆಯುವ ಚಳಿಗೆ ಉತ್ತರ ಭಾರತ ಗಡಗಡ

ನಿಮ್ಮ ಸಂಚಾರಕ್ಕೂ ಮುನ್ನ ವಿಂಡ್ ಶೀಲ್ಡ್ ವೈಪರ್ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ಗಮನಲ್ಲಿಟ್ಟುಕೊಳ್ಳುವುದು ಒಳ್ಳೆಯದು. ಏಕೆಂದರೆ ಹಿಮಪಾತದ ಜೊತೆಗೆ ಭಾರಿ ಮಳೆಯಾಗುವ ಸಾಧ್ಯತೆಯು ಹೆಚ್ಚಿರುತ್ತದೆ.

ಕೊರೆಯುವ ಚಳಿಗೆ ಉತ್ತರ ಭಾರತ ಗಡಗಡ

ಅದೇ ರೀತಿ ನಿಮ್ಮ ಕಾರುಗಳ ಬ್ಯಾಟರಿ ನಿರ್ವಹಣೆ ಬಗ್ಗೆಯೂ ಎಚ್ಚರಿಕೆ ವಹಿಸುವುದು ಉತ್ತಮ. ಹಾಗೆಯೇ ಎಂಜಿನ್ ಆಯಿಲ್ ಮಟ್ಟವನ್ನು ಪರಿಶೀಲಿಸಿರಿ.

ಕೊರೆಯುವ ಚಳಿಗೆ ಉತ್ತರ ಭಾರತ ಗಡಗಡ

ಚಳಿಗಾಲದಲ್ಲಿ ಫಾಗ್ ಲ್ಯಾಂಪ್ ಇನ್ನೊಂದು ಪ್ರಮುಖ ಘಟಕವಾಗಿರುತ್ತದೆ. ಬಹುತೇಕ ಮಂಜು ಮುಸುಕಿದ ವಾತಾವರಣ ಆವರಿಸುವುದರಿಂದ ನಿಮ್ಮ ಸುರಕ್ಷಿತ ಚಾಲನೆಯಲ್ಲಿ ಫಾಗ್ ಲ್ಯಾಂಪ್ ಬಹು ಮುಖ್ಯ ಪಾತ್ರವಹಿಸಲಿದೆ.

ಕೊರೆಯುವ ಚಳಿಗೆ ಉತ್ತರ ಭಾರತ ಗಡಗಡ

ಆಟೋ ಸಲಹೆಗಾರರ ಪ್ರಕಾರ ವಿಪರೀತ ಮಂಜು ಮುಸುಕಿದ ವಾತಾವರಣದಲ್ಲಿ ಚಾಲನೆ ಸಾಧ್ಯವಾದಷ್ಟು ತಪ್ಪಿಸಿದರೆ ಒಳಿತು. ಇದರಿಂದ ಅಪಘಾತ ಪರಿಸ್ಥಿತಿಯನ್ನು ತಪ್ಪಿಸಬಹುದಾಗಿದೆ.

ಕೊರೆಯುವ ಚಳಿಗೆ ಉತ್ತರ ಭಾರತ ಗಡಗಡ

ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ರೈಲ್ವೇ ಹಳಿಯಲ್ಲಿ ಸಂಭವಿಸಿರುವ ಭಾರಿ ಹಿಮಪಾತದಿಂದಾಗಿ ರೈಲು ಸಂಚಾರ ಸ್ಥಗಿತ

ಕೊರೆಯುವ ಚಳಿಗೆ ಉತ್ತರ ಭಾರತ ಗಡಗಡ

ಅನಂತ್‌ನಾಗ್ ರಸ್ತೆ ಹಿಮಾವೃತ - ತೆರವು ಕಾರ್ಯಾಚರಣೆಯಲ್ಲಿ ಮಗ್ನವಾಗಿರುವ ಸಿಬ್ಬಂದಿಗಳು.

More from DriveSpark

Article Published On: Monday, January 19, 2015, 12:17 [IST]
English summary
North Indian high-altitude states hit by snow. Parts of the capital woke up to a dense fog while snowfall covered Kullu, Uttarkashi and Shimla. Take a look at the recent snowfall photos form these places.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+