ಸಾಲ ತೀರಿಸಲು ಕಾರುಗಳನ್ನು ಮಾರಿದ ತಂದೆ: ವರ್ಷಗಳ ಬಳಿಕ ಅಪ್ಪನ ಖುಷಿಗಾಗಿ ಹೊಸ ಕಾರು ಖರೀದಿಸಿದ ಮಗ

ಹಲವರು ತಮ್ಮ ಒಡಹುಟ್ಟಿದವರಿಗೆ, ಪೋಷಕರು ಅಥವಾ ಸಂಗಾತಿಗೆ ಉಡುಗೊರೆಯಾಗಿ ಕಾರುಗಳು ಮತ್ತು ಬೈಕುಗಳನ್ನು ನೀಡುತ್ತಾರೆ. ಅಂತಹ ಸಾಕಷ್ಟು ವೀಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತದೆ. ಹುಟ್ಟುಹಬ್ಬ ಅಥವಾ ವಾರ್ಷಿಕೋತ್ಸವದಂತಹ ಸಂದರ್ಭಕ್ಕೆ ಕೆಲವರು ಸರ್ಪೈಸ್ ಆಗಿ ಕಾರು ಅಥವಾ ಬೈಕ್ ನೀಡಿ ಅಚ್ಚರಿಪಡಿಸುತ್ತಾರೆ.

ಇದರಲ್ಲಿ ಮಗ ತನ್ನ ಎಲ್ಲಾ ಕಾರುಗಳನ್ನು ವರ್ಷಗಳ ಹಿಂದೆ ಮಾರಾಟ ಮಾಡಿದ ತನ್ನ ತಂದೆಗಾಗಿ ಹೊಚ್ಚ ಹೊಸ ಮಹೀಂದ್ರಾ ಸ್ಕಾರ್ಪಿಯೋ-ಎನ್ ಖರೀದಿಸುತ್ತಾನೆ. ವೃತ್ತಿಪರ ಬಾಣಸಿಗ ಅತುಲ್ ಶೈಲಜನ್ ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ . ಅವರು ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಬರೆದಿದ್ದಾರೆ, "ಹಲವು ವರ್ಷಗಳ ಹಿಂದೆ, ಸಾಲದ ಸಮಸ್ಯೆಗಳಿಂದಾಗಿ ನನ್ನ ತಂದೆ ತನ್ನ ನೆಚ್ಚಿನ ಒಂದೆರಡು ವಾಹನಗಳನ್ನು ಮಾರಾಟ ಮಾಡಬೇಕಾದ ಕಠಿಣ ಸಮಯವನ್ನು ನಾವು ಎದುರಿಸಿದ್ದೇವೆ.

Mahindra Scorpio-N

ವರ್ಷಗಳ ಹಿಂದೆ ಅಪ್ಪ ಹಣದ ಸಮಸ್ಯೆಯಿಂದ ತನ್ನ ಎಲ್ಲಾ ಕಾರುಗಳನ್ನು ಮಾರಾಟ ಮಾಡಿದ್ದರು. ಇದೀಗ ತಂದೆಗಾಗಿ ಮಗ ಹೊಚ್ಚ ಹೊಸ ಮಹೀಂದ್ರಾ ಸ್ಕಾರ್ಪಿಯೊ ಎನ್ ಎಸ್‍ಯುವಿಯನ್ನು ಖರೀದಿಸಿದ್ದಾರೆ. ವೃತ್ತಿಪರ chef ಆಗಿರುವ ಅತುಲ್ ಶೈಲಜನ್ ಅವರು ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊ ಜೊತೆಗೆ ತಮ್ಮ ಕಥೆಯನ್ನು ಬರೆದುಕೊಂಡಿದ್ದಾರೆ.

ನಾನು ಮತ್ತು ನನ್ನ ತಂದೆ ಇಬ್ಬರೂ ಅಳುತ್ತಿದ್ದ ಆ ದಿನ ನನಗೆ ಇನ್ನೂ ನೆನಪಿದೆ. ಆದರೆ ಅವರು ನನ್ನನ್ನು ತಬ್ಬಿಕೊಂಡು ನನಗೆ ಹೇಳಿದರು: "ಒಂದು ದಿನ, ನಾವು ಇದನ್ನೆಲ್ಲ ಮರಳಿ ಪಡೆಯುತ್ತೇವೆ." ನನ್ನ ತಂದೆ ಕಳೆದುಕೊಂಡದ್ದನ್ನು ಮರಳಿ ಪಡೆಯಲು ಸಹಾಯ ಮಾಡಲು ನನಗೆ ಇಂದಿಗೂ ಪ್ರೇರಣೆ ನೀಡಿದ ಆ ಮಾತುಗಳನ್ನು ನಾನು ಇಂದಿಗೂ ನನ್ನ ತಲೆಯ ಹಿಂಭಾಗದಲ್ಲಿ ಕೇಳುತ್ತೇನೆ. ಅಪ್ಪಾ ಇದು ನಿನಗಾಗಿ ಎಂದು ವೀಡಿಯೊ ಜೊತೆ ಬರೆದುಕೊಂಡಿದ್ದಾರೆ.

Mahindra Scorpio-N

ಅತುಲ್ ಆನ್‌ಲೈನ್‌ನಲ್ಲಿ ಹಂಚಿಕೊಂಡಿರುವ ಈ ಸಣ್ಣ ಇನ್‌ಸ್ಟಾಗ್ರಾಮ್ ರೀಲ್ಸ್ ವೀಡಿಯೊದಲ್ಲಿ, ಅವನು ತಮ್ಮ ಹೆತ್ತವರೊಂದಿಗೆ ಕೇರಳದ ಮಹೀಂದ್ರಾ ಡೀಲರ್‌ಶಿಪ್‌ಗೆ ಹೋಗುತ್ತಿರುವುದನ್ನು ಕಾಣಬಹುದು. ಅವರ ತಂದೆ ಮತ್ತು ತಾಯಿ ಇಬ್ಬರೂ ಹೊಸ ಕಾರು ಖರೀದಿಯ ಬಗ್ಗೆ ಉತ್ಸುಕರಾಗಿದ್ದಾರೆ. ಈ ಡೀಲರ್‌ಶಿಪ್‌ಗೆ ಪ್ರವೇಶಿಸಿದ ನಂತರ, ತಂದೆ ಮತ್ತು ಮಗ ಇಬ್ಬರೂ ಪ್ರದರ್ಶನದಲ್ಲಿರುವ ಸ್ಕಾರ್ಪಿಯೋ ಎನ್ ಅನ್ನು ಪರಿಶೀಲಿಸಲು ಪ್ರಾರಂಭಿಸಿದರು ಮತ್ತು ಡೀಲರ್‌ಶಿಪ್ ಸಿಬ್ಬಂದಿಯೊಂದಿಗೆ ಮಾತನಾಡಿದರು.

ನಂತರ ಈ ಹೊಸ ಮಹೀಂದ್ರಾ ಸ್ಕಾರ್ಪಿಯೊ ಎನ್ ಎಸ್‍ಯುವಿಯ ವಿತರಣೆಯನ್ನು ಪಡೆದುಕೊಂಡರು. ಅತುಲ್ ಅವರ ತಂದೆಯ ಮುಖದಲ್ಲಿನ ಸಂತೋಷವು ವೀಡಿಯೊದಲ್ಲಿ ಸಾಕಷ್ಟು ಸ್ಪಷ್ಟವಾಗಿದೆ ಮತ್ತು ಕಾರನ್ನು ಪರಿಶೀಲಿಸಿದ ನಂತರ, ಅತುಲ್ ತನ್ನ ತಂದೆ ಮತ್ತು ತಾಯಿಯನ್ನು ಕೂರಿಸಿ ಡ್ರೈವ್ ಕಾರು ಡ್ರೈವ್ ಮಾಡುತ್ತಾರೆ, ಇಡೀ ಕುಟುಂಬವು ಅವರ ಹೊಸ ಖರೀದಿಯಿಂದ ಸಂತೋಷವಾಗಿದೆ, ಅವರ ಮುಖದಿಂದ ಸ್ಪಷ್ಟವಾಗಿದೆ.

ಈ ಸ್ಕಾರ್ಪಿಯೋ-ಎನ್ ಮಾದರಿಯು ಸಂಪೂರ್ಣವಾಗಿ ಹೊಸ ಮಾದರಿಯಾಗಿದೆ. ಮಹೀಂದ್ರಾ ಸ್ಕಾರ್ಪಿಯೊ ಎನ್ ಎಸ್‍ಯುವಿಯಲ್ಲಿ ಎಂಜಿನ್ ಸೆಟಪ್ 2.0-ಲೀಟರ್, ಟರ್ಬೊ-ಪೆಟ್ರೋಲ್ ಮತ್ತು 2.2L mHawk ಡೀಸೆಲ್ ಅನ್ನು ಒಳಗೊಂಡಿದೆ. ಪೆಟ್ರೋಲ್ ಮೋಟರ್ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 203 ಬಿಹೆಚ್‍ಪಿ ಪವರ್ ಮತು 370 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 10 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಪೆಟ್ರೋಲ್ ಆಟೋಮ್ಯಾಟಿಕ್ ಸಂಯೋಜನೆಯು Z4, Z8 ಮತ್ತು Z8L ರೂಪಾಂತರಗಳಲ್ಲಿ ಲಭ್ಯವಿದೆ. ಎಲ್ಲಾ ಪೆಟ್ರೋಲ್ ರೂಪಾಂತರಗಳು 2WD ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತವೆ. ಇನ್ನು 2-ಲೀಟರ್, mHawk ಡೀಸೆಲ್ ಯುನಿಟ್ ಅನ್ನು ಹೊಂದಿದೆ.

Article Published On: Sunday, April 2, 2023, 12:00 [IST]
English summary
Son buys mahindra scorpio n suv for his dad details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+