ಮಗನಿಗಾಗಿ ಸರ್ವಸ್ವ ತ್ಯಜಿಸಿದ ಹೆತ್ತವರಿಗೆ ಕನಸಿನ ಕಾರು ಉಡುಗೊರೆ! ಕಣ್ಣೀರಿಟ್ಟ ತಾಯಿ
ಯುವಕನೊಬ್ಬ ತನ್ನ ಹೆತ್ತವರಿಗೆ ಹೊಚ್ಚ ಹೊಸ ಹ್ಯುಂಡೈ ಕ್ರೆಟಾ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿ ಪೋಷಕರನ್ನು ಅಚ್ಚರಿಗೊಳಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೊಸ ಕಾರಿನ ಡೆಲಿವರಿ ಪಡೆಯುವ ವೀಡಿಯೊದಲ್ಲಿ ಪೋಷಕರು ಅಳುವುದನ್ನು ಕಾಣಬಹುದು. ತಾಯಿಯ ಕಣ್ಣುಗಳಿಗೆ ಬಟ್ಟೆ ಕಟ್ಟಿ ಶೋರೂಂಗೆ ಕರೆತಂದು, ಡೆಲಿವರಿ ನೀಡುವ ಕಾರಿಗೆ ಬಟ್ಟೆಯಿಂದ ಮುಚ್ಚಲಾಗಿತ್ತು. ನಂತರ ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ತೆಗೆದು ತಮ್ಮ ಹೊಸ ಕಾರನ್ನು ಬಹಿರಂಗಪಡಿಸಿದ್ದೇ ತಡ ತಾಯಿಯ ಕಣ್ಣಲ್ಲಿ ನೀರು ತುಂಬಿಕೊಂಡಿತ್ತು. ತಾಯಿ ಭಾವುಕರಾಗುವ ಈ ದೃಷ್ಯಗಳು ನೆಟ್ಟಿಗರ ಮನಗೆದ್ದಿದೆ.
ಹೆರಿಗೆಯ ಸಮಯದಲ್ಲಿ ಇಂತಹದೊಂದು ದಿನ ಬರುತ್ತದೆ ಎಂದು ಭಾವಿಸಿರಲಿಲ್ಲವೆಂದು ತಾಯಿ ಮಗನನ್ನು ಬಿಗಿಯಾಗಿ ತಬ್ಬಿಕೊಳ್ಳುವುದನ್ನು ಕಾಣಬಹುದು. ಇದು ಯುವಕನನ್ನು ಮತ್ತಷ್ಟು ಭಾವುಕನನ್ನಾಗಿ ಮಾಡಿದೆ, ತನ್ನ ಹೆತ್ತವರ ಸಂತೋಷವನ್ನು ನೋಡಿ ಮಗ ಕೂಡ ಕಣ್ಣೀರಿಟ್ಟಿದ್ದಾನೆ. ಹಾಗೆಯೇ ಪೋಷಕರಿಗೆ ಈ ದುಬಾರಿ ಉಡುಗೊರೆ ಕೊಟ್ಟಿರುವುದರ ಹಿಂದಿನ ಕಾರಣವನ್ನು ಕೂಡ ಮಗ ವಿವರಿಸಿದ್ದಾನೆ.

ಭಾರತದಲ್ಲಿ ಮಧ್ಯಮ ವರ್ಗದವರಿಗೆ ಶಿಕ್ಷಣವು ಅಷ್ಟು ಸುಲಭವಲ್ಲ, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸಾಕಷ್ಟು ಹಣ ವೆಚ್ಚಿಸಬೇಕಾಗುತ್ತದೆ. ನನ್ನ ಪೋಷಕರು ತಮ್ಮ ಸಂಪೂರ್ಣ ಜೀವನದ ಉಳಿತಾಯವನ್ನು ನನ್ನ ಶಿಕ್ಷಣಕ್ಕಾಗಿ ಖರ್ಚು ಮಾಡಿದ್ದಾರೆ. ಅದಕ್ಕೆ ತಕ್ಕಂತೆಯೇ ನಾನು ಉತ್ತಮ ಶಿಕ್ಷಣ ಪಡೆದು ಬೆಂಗಳೂರಿನಲ್ಲಿ ಉತ್ತಮ ಕೆಲಸದಲ್ಲಿದ್ದೇನೆ. ಸದ್ಯ ಎಲ್ಲರೂ ಬೆಂಗಳೂರಿನಲ್ಲಿದ್ದೇವೆ.
ನಮ್ಮ ತಂದೆ 2014 ರಲ್ಲಿ 2 ಲಕ್ಷ ರೂ.ಗೆ ಹ್ಯುಂಡೈ ಇಯಾನ್ ಹ್ಯಾಚ್‌ಬ್ಯಾಕ್ ಖರೀದಿಸಿದ್ದರು. ಈ ಕಾರು ಯಾವುದೇ ಸಮಸ್ಯೆಗಳಿಲ್ಲದೆ ಇಂದಿಗೂ ತನಗೆ ಮತ್ತು ಕುಟುಂಬಕ್ಕೆ ಸೇವೆ ಸಲ್ಲಿಸುತ್ತಿದೆ. ಇದನ್ನು ಹೆಚ್ಚಾಗಿ ನಾನೇ ಬಳಸುತ್ತೇನೆ, ಆದರೆ ನನಗೆ ಇತ್ತೀಚೆಗೆ ತಿಳಿದ ವಿಷಯವೇನೆಂದತೆ ಪೋಷಕರು ನನಗಿಂತ ಕಾರನ್ನು ಹೆಚ್ಚು ಬಳಸುತ್ತಾರೆ. ಆದ್ದರಿಂದ, ಉಪಕಾರವನ್ನು ಹಿಂದಿರುಗಿಸಲು ಈಗ ಹ್ಯುಂಡೈ ಕ್ರೆಟಾವನ್ನು ಉಡುಗೊರೆ ನೀಡಿರುವುದಾಗಿ ಹೇಳಿದ್ದಾನೆ.

ಹೊಸ ಕಾರನ್ನು ಉಡುಗೊರೆಯಾಗಿ ನೀಡಲು ಈ ವರ್ಷದ ಏಪ್ರಿಲ್‌ನಲ್ಲಿ ಅಂದುಕೊಂಡಿದ್ದನಂತೆ. ಈ ಕನಸನ್ನು ನನಸಾಗಿಸಲು ತನ್ನ ಸಂಬಳವನ್ನು ಬಳಸಬಾರದು ಎಂದು ತನಗೆ ತಾವೇ ಷರತ್ತು ಇಟ್ಟುಕೊಂಡಿದ್ದನಂತೆ. ಇದನ್ನು ಸಾಧಿಸುವ ಸಲುವಾಗಿ, ವಾರದ ಏಳು ದಿನಗಳಲ್ಲಿಯೂ ಕೆಲಸ ಮಾಡಲು ಪ್ರಾರಂಭಿಸಿದ್ದ. ಹಣ ಗಳಿಸುವ ವಿವಿಧ ಮಾರ್ಗಗಳನ್ನು ಕೂಡ ಹುಡುಕಿದ್ದ.
ಮೊದಲು ಯೂಟ್ಯೂಬ್ ಪ್ರಾರಂಭಿಸಿದನಾದರೂ, ಆರಂಭದಲ್ಲಿ ನಿರೀಕ್ಷಿಸಿದ ಹಣ ಬಂದಿರಲಿಲ್ಲ. ನಂತರ ಫ್ರೀಲಾನ್ಸಿಂಗ್ ಪ್ರಾರಂಭಿಸಿ ಮ್ಯಾರಿಯಟ್‌ನಲ್ಲಿ ಪಾಡ್ಕಾಸ್ಟ್ ಅನ್ನು 50,000 ರೂ.ಗೆ ಚಿತ್ರೀಕರಿಸುವಲ್ಲಿ ಯಶಸ್ವಿಯಾಗಿದ್ದ. ಇದರ ನಂತರ, ತನ್ನದೇ ಆದ ಚಾನೆಲ್‌ಗಾಗಿ ವೀಡಿಯೊಗಳನ್ನು ರಚಿಸಲು ಎಐ ಉಪಕರಣಗಳೊಂದಿಗೆ ಟಿಂಕರಿಂಗ್ ಮಾಡಲು ಪ್ರಾರಂಭಿಸಿದ, ಇದು ಪ್ಲಾಟ್‌ಫಾರ್ಮ್‌ನಿಂದ ಹೆಚ್ಚಿನ ಹಣವನ್ನು ಗಳಿಸಲು ಸಹಾಯ ಮಾಡಿತು.
ಅಂತಿಮವಾಗಿ ಸಾಕಷ್ಟು ಕಠಿಣ ಪರಿಶ್ರಮದ ನಂತರ, ಯುವಕ ತನ್ನ ಕೆಲಸದಿಂದ ಬಂದ ಸಂಬಳವನ್ನು ಬಳಸದೆ ಹೆಚ್ಚುವರಿ ಕೆಲಸಗಳಿಂದ ಬಂದ ಹಣ್ಣದಲ್ಲಿಯೇ ತನ್ನ ಹೆತ್ತವರಿಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದಾನೆ. ಕೊನೆಗೂ ಹೆತ್ತವರ ಕನಸಿನ ಕಾರನ್ನು ಕೊಟ್ಟು ಸೋಷಿಯಲ್ ಮೀಡಿಯಾದಲ್ಲಿ ಹೀರೋ ಎನ್ನಿಸಿಕೊಂಡಿದ್ದಾನೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications