ಪೋಷಕರ ವಿವಾಹ ವಾರ್ಷಿಕೋತ್ಸವಕ್ಕೆ ಮರೆಯಾಲಾಗದ ಉಡುಗೊರೆ ನೀಡಿದ ಮಗ

ಪೋಷಕರ ಮತ್ತು ಮಕ್ಕಳ ನಡುವಿನ ನಂಟನ್ನು ಯಾರಿಂದಲೂ ವಿವರಿಸಲು ಸಾಧ್ಯವಿಲ್ಲ. ಅದರಲ್ಲೂ ಕೆಲ ಗಂಡು ಮಕ್ಕಳಿಗೆ ತಮ್ಮ ತಾಯಿಯ ಮುಖದಲ್ಲಿ ನಗುವನ್ನು ಕಾಣಲು ಏನನ್ನಾದರೂ ಮಾಡಬಲ್ಲರೆಂದು ಈಗಾಗಲೇ ಅದೆಷ್ಟೊ ಉದಾಹರಣೆಗಳನ್ನು ನಾವು ಕಂಡಿದ್ದೇವೆ ಹಾಗೆಯೆ ಕೆಲ ಹೆಣ್ಣು ಮಕ್ಕಳು ಸಹ ತನ್ನ ತಂದೆಗಾಗಿ ಏನನ್ನಾದರೂ ಮಾಡಬಲ್ಲರೆಂಬ ಉದಾರಣೇಗಳನ್ನು ಕಂಡಿದ್ದೇವೆ. ಇಲ್ಲೂ ಕೂಡಾ ಅಂತದ್ದೊಂದು ಇಂಟ್ರಸ್ಟಿಂಗ್ ಸ್ಟೋರಿ ಇದೆ ನೋಡಿ.

ತಂದೆ-ತಾಯಿಯ ಮದುವೆ ವಾರ್ಷಿಕೋತ್ಸವಕ್ಕೆ ಮರೆಯಾಲಾಗದ ಉಡುಗೊರೆ ನೀಡಿದ ಮಗ

ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಬದುಕಿನ ನಗುವನ್ನು ಮತ್ತು ಇನ್ನಿತರೆ ಸಂತೋಷದ ಕ್ಷಣಗಳನ್ನು ತ್ಯಾಗ ಮಾಡಿತ್ತಾರೆ. ಯಾಕೆಂದ್ರೆ ಅವರಿಗೆ ತಮ್ಮ ಮಕ್ಕಳೇ ಭವಿಷ್ಯವಾಗಿತ್ತೆ. ಹಾಗೆಯೇ ಮಕ್ಕಳಿಗೂ ಸಹ ತಾವು ಜೀವನದಲ್ಲಿ ನೊಂದಿದ್ದರೆ ತಾಯಿಯ ಮಡಿಲಲ್ಲಿ ತಲೆಯಿಟ್ಟು ಸ್ವಲ್ಪ ಹೊತ್ತು ಕಣ್ಣು ಮುಚ್ಚಿಕೊಂಡರೆ ತಮಗಿರುವ ನೋವು ಮಾಯವಾಗುತ್ತದೆ ಎಂಬ ಭಾವನೆಯು ಹಲವರಿಗಿದೆ.

ತಂದೆ-ತಾಯಿಯ ಮದುವೆ ವಾರ್ಷಿಕೋತ್ಸವಕ್ಕೆ ಮರೆಯಾಲಾಗದ ಉಡುಗೊರೆ ನೀಡಿದ ಮಗ

ಇಂತಹ ಅದೆಷ್ಟೊ ನಮ್ಮ ನೋವುಗಳನ್ನು ತನ್ನದೆಂದು ಭಾವಿಸಿ ಕಷ್ಟ ಪಡುವ ತಂದೆ-ತಾಯಿಗೆ ನಾವು ಏನು ನೀಡಿದರು ಎಷ್ಟು ನೀಡಿದರೂ ಕಡಿಮೆ ಅಂತಾನೆ ಹೇಳಬಹುದು. ಆದರೆ ಈ ಯುವಕನೊರ್ವ ಸ್ವತಃ ತಾನು ದುಡಿದ ಹಣದಿಂದ ತನ್ನ ತಂದೆ-ತಾಯಿಯ ಮದುವೆ ವಾರ್ಷಿಕೋತ್ಸವಕ್ಕೆ ಹೊಸ ಕಾರನ್ನು ಸರ್ಫೈಸ್‌ ಆಗಿ ನೀಡಿ ಕೊಂಡಾಡಿದ್ದಾನೆ.

ತಂದೆ-ತಾಯಿಯ ಮದುವೆ ವಾರ್ಷಿಕೋತ್ಸವಕ್ಕೆ ಮರೆಯಾಲಾಗದ ಉಡುಗೊರೆ ನೀಡಿದ ಮಗ

ತನ್ನ ತಂದೆ-ತಾಯಿಯ ಮದುವೆಯ ವಾರ್ಷಿಕೋತ್ಸವಕ್ಕೆ ಪಕ್ಕಾ ಪ್ಲಾನ್ ಮಾಡಿ ಹೊಸ ಕಾರನ್ನು ಸರ್ಪ್ರೈಸ್ ನೀಡಲು ಈತ ಮುಂದಾಗುತ್ತಾನೆ. ಮೊದಲಿಗೆ ತನ್ನ ತಂದೆಯಿಯನ್ನು ಬೆಳಗಿನ ತಿಂಡಿಗಾಗಿ ಒಂದು ಹೊಟೆಲ್‍ಗೆ ಟ್ಯಾಕ್ಸಿಯಲ್ಲಿ ಕರೆದೊಯ್ದು, ಅಲ್ಲಿ ಕೇಕ್ ಕಟ್ ಮಾಡಿಸ ಹೊರ ಬಂದಾಗ ಅಲ್ಲಿ ಸರ್ಪ್ರೈಸ್‍ ಆಗಿ ನೀಡಬೇಕಾದ ಟಾಟಾ ಹ್ಯಾರಿಯರ್ ಕಾರು ಈಗಾಗಲೇ ಬಂದಿಳಿದಿತ್ತು.

ತಂದೆ-ತಾಯಿಯ ಮದುವೆ ವಾರ್ಷಿಕೋತ್ಸವಕ್ಕೆ ಮರೆಯಾಲಾಗದ ಉಡುಗೊರೆ ನೀಡಿದ ಮಗ

ಮಗ ತಮ್ಮ ಮದುವೇ ವಾರ್ಷೀಕೋತ್ಸವಕ್ಕೆ ನೀಡಿದ ಬಿಳಿ ಬಣ್ಣದ ಟಾಟಾ ಹ್ಯಾರಿಯರ್ ಕಾರನ್ನು ಕಂಡು ಭಾವುಕರಾಗಿ, ಮಗನಿಗೆ ಅಪ್ಪುಗೆಯನ್ನು ನೀಡಿದರು. ಬೆಳಿಗ್ಗೆ ಎಲ್ಲರೂ ಟಾಟಾ ಇಂಡಿಕಾ ಟ್ಯಾಕ್ಸಿಯಲ್ಲಿ ಬಂದರೂ ಸಹ ಹೋಗುವಾಗ ಮಾತ್ರ ತಂದೆ ತಾಯಿ ತನ್ನ ಮಗ ಉಡುಗೊರೆಯಾಗಿ ನೀಡಿದ ಟಾಟಾ ಹ್ಯಾರಿಯರ್ ಕಾರಿನಲ್ಲಿಯೆ ತೆರಳಿದರು.

ಇನ್ನು ಟಾಟಾ ಹ್ಯಾರಿಯರ್ ಕಾರಿನ ಬಗ್ಗೆ ಹೇಳುವುದಾದರೆ ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹ್ಯಾರಿಯರ್ ಕಾರುಗಳನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ಕಾರಿನ ವಿನ್ಯಾಸಕ್ಕೆ ಮೆರಗು ತಂದಿವೆ.

ತಂದೆ-ತಾಯಿಯ ಮದುವೆ ವಾರ್ಷಿಕೋತ್ಸವಕ್ಕೆ ಮರೆಯಾಲಾಗದ ಉಡುಗೊರೆ ನೀಡಿದ ಮಗ

ಇಲ್ಲಿ ಇನ್ನೊಂದು ವಿಶೇಷ ಅಂದ್ರೆ, ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಜೊತೆ ಕೈಜೋಡಿಸಿರುವ ಜೆಎಲ್ಆರ್ ಕೂಡಾ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್" ಆರ್ಕಿಟೆಕ್ಚರ್ ತಂತ್ರವನ್ನೇ ಬಳಕೆ ಮಾಡುತ್ತಿದ್ದು, ಇದೇ ಕಾರಣಕ್ಕೆ ಟಾಟಾ ಕಾರುಗಳಲ್ಲೂ ಜೆಎಲ್ಆರ್ ಹೊಸ ಪ್ರಯೋಗ ಮಾಡಿರುವುದು ಹ್ಯಾರಿಯರ್ ವಿನ್ಯಾಸಕ್ಕೆ ಐಷಾರಾಮಿ ಕಳೆ ಬಂದಿದೆ.

ತಂದೆ-ತಾಯಿಯ ಮದುವೆ ವಾರ್ಷಿಕೋತ್ಸವಕ್ಕೆ ಮರೆಯಾಲಾಗದ ಉಡುಗೊರೆ ನೀಡಿದ ಮಗ

ಹೊಸ ಡಿಸೈನ್ ತಂತ್ರಜ್ಞಾನದಿಂದಾಗಿ ಕಾರು ಸಾಕಷ್ಟು ಸ್ಟೈಲಿಷ್ ಆಗಿ ಕಾಣುವಂತಾಗಿದ್ದು, ಕಾರಿನ ಮುಂಭಾಗದಲ್ಲಿ ಹನಿಕೊಂಬ್ ಗ್ರೀಲ್ ಮತ್ತು ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಪಾಲಿಜೊನಲ್ ಮಾದರಿಯ ಎಲ್‌ಇಡಿ ಲೈಟ್ಸ್ ಮಾದರಿಯು ಕಾರಿಗೆ ಸ್ಪೋರ್ಟಿ ಲುಕ್ ನೀಡಿವೆ.

MOST READ: ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿಯೊಂದಿಗೆ ಮಾರಾಟದಲ್ಲಿ ಮಿಂಚುತ್ತಿದೆ ಮಾರುತಿ ಬಲೆನೊ

ತಂದೆ-ತಾಯಿಯ ಮದುವೆ ವಾರ್ಷಿಕೋತ್ಸವಕ್ಕೆ ಮರೆಯಾಲಾಗದ ಉಡುಗೊರೆ ನೀಡಿದ ಮಗ

ಸದ್ಯ ಟಾಟಾ ಹ್ಯಾರಿಯರ್ ಕಾರುಗಳು ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ವೇರಿಯೆಂಟ್‍ಗಳಿಗೆ ಅನುಗುಣವಾಗಿ ಕಾರಿನ ಬೆಲೆಗಳು ಆರಂಭಿಕವಾಗಿ ರೂ.12.69 ಲಕ್ಷಕ್ಕೆ ಮತ್ತು ಹೈ ಎಂಡ್ ಮಾದರಿಯ ಬೆಲೆಯನ್ನು ರೂ.16.25 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

ತಂದೆ-ತಾಯಿಯ ಮದುವೆ ವಾರ್ಷಿಕೋತ್ಸವಕ್ಕೆ ಮರೆಯಾಲಾಗದ ಉಡುಗೊರೆ ನೀಡಿದ ಮಗ

ಎಂಜಿನ್ ಸಾಮರ್ಥ್ಯ

ಹ್ಯಾರಿಯರ್ ಎಸ್‌ಯುವಿ ಕಾರು 2-ಲೀಟರ್(2 ಸಾವಿರ ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ 140-ಬಿಹೆಚ್‍ಪಿ, 350-ಎನ್ಎಂ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯೊಂದಿಗೆ ಪರ್ಫಾಮೆನ್ಸ್ ಪ್ರಿಯರ ಗಮನಸೆಳೆಯುತ್ತವೆ.

MOST READ: ರಾಜ್ಯದೆಲ್ಲೆಡೆ ಎಂಬತ್ತೊಂಬತ್ತು ಸಾವಿರಕ್ಕು ಹೆಚ್ಚಿನ ಡ್ರೈವಿಂಗ್ ಲೈಸೆನ್ಸ್ ರದ್ದು

ತಂದೆ-ತಾಯಿಯ ಮದುವೆ ವಾರ್ಷಿಕೋತ್ಸವಕ್ಕೆ ಮರೆಯಾಲಾಗದ ಉಡುಗೊರೆ ನೀಡಿದ ಮಗ

ಜೆನಾನ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಫ್ರಂಟ್ ಫಾಗ್ ಲ್ಯಾಂಪ್ಸ್ ಮತ್ತು ಕಾರ್ನರಿಂಗ್ ಲೈಟ್ಸ್, ಶಾರ್ಕ್ ಫಿನ್ ಆ್ಯಂಟೆನಾ, 7 ಇಂಚಿನ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, 8.8 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, 9 ಜೆಬಿಎಲ್ ಸ್ಪೀಕರ್ಸ್‍, 60:40 ವಿಭಜಿತ ಸೀಟ್‍ಗಳು ಮತ್ತು ನಾರ್ಮಲ್, ವೆಟ್ ಮತ್ತು ರಫ್ ಎಂಬ ಮೂರು ಟೆರೈನ್ ರೆಸ್ಪಾನ್ಸ್ ಮೊಡ್ಸ್ ಸೌಲಭ್ಯವಿದೆ.

ತಂದೆ-ತಾಯಿಯ ಮದುವೆ ವಾರ್ಷಿಕೋತ್ಸವಕ್ಕೆ ಮರೆಯಾಲಾಗದ ಉಡುಗೊರೆ ನೀಡಿದ ಮಗ

ಹಾಗೆಯೇ ಸುರಕ್ಷತೆಗಾಗಿ ಹೆಚ್ಚಿನ ಆಯ್ಕೆಗಳಿದ್ದು, ಆರು ಏರ್‍‍ಬ್ಯಾಗ್‍ಗಳು, ಇಎಸ್‍ಪಿ ಮತ್ತು ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸ್ಸಿಸ್ಟ್ ಪಡೆದುಕೊಂಡಿದೆ.

MOST READ: ಶೀಘ್ರವೇ ಬ್ಯಾನ್ ಆಗಲಿವೆ 150ಸಿಸಿಗಿಂತಲೂ ಕಡಿಮೆ ಸಾಮರ್ಥ್ಯದ ವಾಹನಗಳು

ತಂದೆ-ತಾಯಿಯ ಮದುವೆ ವಾರ್ಷಿಕೋತ್ಸವಕ್ಕೆ ಮರೆಯಾಲಾಗದ ಉಡುಗೊರೆ ನೀಡಿದ ಮಗ

ಒಟ್ಟಿನಲ್ಲಿ ಪ್ರೀಮಿಯಂ ಕಂಪ್ಯಾಕ್ಟ್ ಎಸ್‍ಯುವಿ ಕಾರುಗಳ ಸರಣಿಯಲ್ಲಿ ಟಾಟಾ ಹ್ಯಾರಿಯರ್ ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ನೀರಿಕ್ಷೆಯಲ್ಲಿರುವ ಪೆಟ್ರೋಲ್ ವರ್ಷನ್ ಒಂದು ಬಂದಲ್ಲಿ ಮತ್ತಷ್ಟು ಬೇಡಿಕೆಯೊಂದಿಗೆ ಜೀಪ್ ಕಂಪಾಸ್, ಹ್ಯುಂಡೈ ಕ್ರೆಟಾ ಮತ್ತು ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳಿಗೂ ಸಾಕಷ್ಟು ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Source: Jabroo

More from DriveSpark

Article Published On: Friday, May 31, 2019, 11:28 [IST]
English summary
Son Gifts His Parents New Tata Harrier On Their Wedding Anniversary. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+