ಅಪ್ಪನ ಫೇವರೆಟ್ ಬೈಕ್ ಗಿಫ್ಟ್ ಕೊಟ್ಟರೂ...ಮಗನ ಕಷ್ಟವನ್ನು ಕಂಡು ಕಣ್ಣೀರಿಟ್ಟ ತಂದೆ

ತಂದೆ ತಾಯಿಯು ಸದಾ ಕಾಲ ಮಕ್ಕಳ ನಗುವಿನಲ್ಲಿಯೇ ಖುಷಿ ಕಾಣುತ್ತಾರೆ. ಅದೇ ರೀತಿ ಮಕ್ಕಳಿಂದ ಸಿಗುವ ಸಣ್ಣ ಖುಷಿಯನ್ನೂ ಬೆಟ್ಟದಷ್ಟು ಅನುಭವಿಸುತ್ತಾರೆ. ಮಕ್ಕಳಿಂದ ಸಿಗುವ ಉಡುಗೊರೆಯು ತಂದೆ ತಾಯಿಗೆ ಹೆಚ್ಚಿನ ಸಂತೋಷವನ್ನು ನೀಡುತ್ತದೆ. ತಂದೆ ತಾಯಿಗೆ ಸರ್ಪ್ರೈಸ್ ಗಿಫ್ಟ್ ನೀಡುವ ಹಲವು ವೀಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತದೆ.

ಇತ್ತೀಚೆಗೆ ಅಪ್ಪನ ಹುಟ್ಟುಹಬ್ಬಕ್ಕೆ ಮಗ ನೀಡಿದ ಉಡುಗೊರೆ ನೋಡಿ ಸಂತಸಪಟ್ಟ ಕ್ಷಣದ ವಿಡಿಯೋ ವೈರಲ್​ ಆಗಿದೆ. ಅಪ್ಪನ ನೆಚ್ಚಿನ ಬೈಕನ್ನು ಸರ್ಪ್ರೈಸ್ ಗಿಫ್ಟ್ ಆಗಿ ನೀಡುವ ವೀಡಿಯೊವನ್ನು ಮಗ ಉಜ್ವಲ್ ಇನ್‌ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಈ ವೀಡಿಯೊ ನೆಟ್ಟಿಗರ ಮನ ಸೆಳೆದಿದೆ. ಈ ಪೋಸ್ಟ್‌ನಲ್ಲಿ, ಆ ವ್ಯಕ್ತಿ ತಾನು ಮತ್ತು ತನ್ನ ತಂದೆ ಬೈಕ್ ಶೋರೂಮ್‌ಗೆ ಹೋದಾಗ, ತನ್ನ ತಂದೆಗೆ ಈ ಬೈಕ್ ಇಷ್ಟವಾಗಿತ್ತು. ಆದರೆ, ಕೈಗೆಟಕುವ ಬೆಲೆ ಇಲ್ಲದ ಕಾರಣ ಅಂದು ಖರೀದಿಸಲು ಸಾಧ್ಯವಾಗಿರಲಿಲ್ಲ.

ಅಪ್ಪನ ಫೇವರೆಟ್ ಬೈಕ್ ಗಿಫ್ಟ್ ಕೊಟ್ಟರೂ...ಮಗನ ಕಷ್ಟವನ್ನು ಕಂಡು ಕಣ್ಣೀರಿಟ್ಟ ತಂದೆ

ಆದ್ದರಿಂದ, ಅವರ ಕನಸನ್ನು ನನಸಾಗಿಸಲು, ಅವರ ಮಗ ಒಂದು ವರ್ಷದ ನಂತರ ಅದೇ ಬೈಕು ಖರೀದಿಸಿದ್ದಾರೆ. ಅವರ ತಂದೆ ಈ ಹಿಂದೆ ಹಳೆಯ ಆವೃತ್ತಿಯ ಜಾವಾ ಬೈಕ್ ಅನ್ನು ಓಡಿಸುತ್ತಿದ್ದರು. ಅದೇ ಜಾವ ಬೈಕಿನ ಹೊಸ ಆವೃತ್ತಿ ಇದು. ಅದ್ದರಿಂದ ಇದಕ್ಕಿಂತ ಉತ್ತಮ ಉಡುಗೊರೆ ನೀಡಲು ಸಾಧ್ಯವಿಲ್ಲ ಎಂದು ಭಾವಿಸಿದೆವು. ಇದು ಅವರಿಗೆ ಸಂತೋಷವನ್ನು ನೀಡುತ್ತದೆ. ಅಲ್ಲದೇ ಅವರ ಕನಸುಗಳನ್ನು ನನಸಾಗಿಸಲು ನನಗೆ ಶಕ್ತಿಯನ್ನು ನೀಡಿದ್ದಕ್ಕಾಗಿ ನಾನು ದೇವರಿಗೆ ಕೃತಜ್ಞನಾಗಿದ್ದೇನೆ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ಈ ವೀಡಿಯೊವನ್ನು ಹಂಚಿಕೊಂಡಾಗಿನಿಂದ 2.4 ಮಿಲಿಯನ್ ವಿಕ್ಷಣೆಯಾಗಿದೆ, ಈ ವೀಡಿಯೊಗೆ ಹಲವಾರು ಹೃದಯಸ್ಪರ್ಶಿ ಪ್ರತಿಕ್ರಿಯೆಗಳನ್ನು ಪಡೆದು ಕೊಂಡಿದೆ, ಇನ್‌ಸ್ಟಾಗ್ರಾಮ್ ಬಳಕೆದಾರರು ಈ ವೀಡಿಯೊ ಪೋಸ್ಟ್'ಗೆ "ದೇವರು ನಿಮ್ಮನ್ನು ಆಶೀರ್ವದಿಸಲಿ, ತಂದೆ ತುಂಬಾ ಸಂತೋಷವಾಗಿದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ."ಅವನ ದೃಷ್ಟಿಯಲ್ಲಿ ಆ ಸಂತೋಷವು ತುಂಬಾ ಅಮೂಲ್ಯವಾಗಿದೆ, ಮನುಷ್ಯ, ದೇವರು ಎಲ್ಲರಿಗೂ ಆಶೀರ್ವದಿಸಲಿ." ಇನ್ನೂ ಹಲವರು ಹೃದಯದ ಎಮೋಜಿಗಳನ್ನು ಬಳಸಿ ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೂಡ ಈ ವೀಡಿಯೊ ಭಾರೀ ವೈರಲ್ ಆಗುತ್ತಿದೆ.

ಇನ್ನು ಮಗ ಅಪ್ಪನಿಗೆ ನೀಡಿದ ಬೈಕ್ ಜಾವಾ 42 ಬೈಕ್ ಆಗಿದೆ. ಈ ಬೈಕ್ ಬಗ್ಗೆ ಹೇಳುವುದಾದರೆ, ಜಾವಾ 42 ಬೈಕ್ ಸಿರಿಯಸ್ ವೈಟ್, ಆಲ್-ಸ್ಟಾರ್ ಬ್ಲ್ಯಾಕ್ ಮತ್ತು ಓರಿಯನ್ ರೆಡ್ ಎಂಬ ಬಣ್ಣಗಳ ಆಯ್ಕೆಗಳನ್ನು ಲಭ್ಯವಿದೆ. ಇನ್ನು ಈ ಬೈಕಿನ ಫ್ಯೂಯಲ್ ಟ್ಯಾಂಕ್ ನಲ್ಲಿ '42' ಮತ್ತು 'ಕ್ಲಾಸಿಕ್ ಲೆಜೆಂಡ್ಸ್' ಗ್ರಾಫಿಕ್ಸ್‌ ಎಂಬ ಗ್ರಾಫಿಕ್ಸ್‌ ಅನ್ನು ಒಳಗೊಂಡಿದೆ. ಜಾವಾ 42 ಬೈಕಿನಲ್ಲಿ ಈಗ ಬಾರ್-ಎಂಡ್ ಮೀರರ್, ರೈಡರ್ ಮತ್ತು ಪಿಲಿಯನ್ ಎರಡಕ್ಕೂ ವಿಶಾಲವಾದ ಮತ್ತು ಹೆಚ್ಚು ಆರಾಮದಾಯಕವಾದ ಸೀಟ್ ಹೊಂದಿದೆ.

ಇನ್ನು ಈ ಬೈಕಿನಲ್ಲಿ ಮರುವಿನ್ಯಾಸಗೊಳಿಸಲಾದ ಸೈಡ್ ಸ್ಟ್ಯಾಂಡ್, ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿರುವ ಅಲಾಯ್ ವ್ಹೀಲ್ ಮತ್ತು ಹೆಚ್ಚಿನ ಫೀಚರ್ ಗಳು ಸ್ಟ್ಯಾಂಡರ್ಡ್ ಆಗಿ ನೀಡಿದೆ. ಈ ಬೈಕಿಗೆ ಹೆಡ್‌ಲ್ಯಾಂಪ್ ಗ್ರಿಲ್ ಮತ್ತು ಫ್ಲೈ-ಸ್ಕ್ರೀನ್ ಅನ್ನು ಬಿಡಿಭಾಗಗಳಾಗಿ ನೀಡಲಿವೆ. 2021ರ ಜಾವಾ 42 ಬೈಕಿನಲ್ಲಿ ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ನೀಡಲು ಸಸ್ಪೆಂಕ್ಷನ್ ಸೆಟಪ್ ಅನ್ನು ರಿ-ಟ್ಯೂನ್ ಮಾಡಲಾಗಿದೆ. ಜಾವಾ 42 ಬೈಕಿನಲ್ಲಿ ಅದೇ 293ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ.

ಇದು ಈಗ ಕ್ರಾಸ್-ಪೋರ್ಟ್ ಹರಿವಿನೊಂದಿಗೆ ಬರುತ್ತದೆ, ಇದು ಉತ್ತಮ ಮೈಲೇಜ್, ಬಲವಾದ ಎಕ್ಸ್ ಲೇರಷನ್ ಮತ್ತು ಅದರ ಡ್ಯುಯಲ್ ಪೈಪ್‌ಗಳಿಂದ ಥ್ರೋಟಿಯರ್ ಎಕ್ಸಾಸ್ಟ್ ನೋಟ್ ಅನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಜಾವಾ 42 ಬೈಕಿನಲ್ಲಿ ನವೀಕರಿಸಿದ 293ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿದ್ದು, ಇದು 6800 ಆರ್‌ಪಿಎಂನಲ್ಲಿ 27 ಬಿಹೆಚ್‌ಪಿ ಪವರ್ ಮತ್ತು 5000 ಆರ್‌ಪಿಎಂನಲ್ಲಿ 27 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಈ ಜಾವಾ 42 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಎರಡು ಕಡೆಗಳಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದ್ದು, ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಈ ಬೈಕಿನಲ್ಲಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಜಾವಾ ಬೈಕ್ 2 ಕೆಜಿ ಹಗುರವಾಗಿದೆ. ಇದು ಒಟ್ಟು 172 ಕೆಜೆ ತೂಕವನ್ನು ಹೊಂದಿದೆ. ಅಲ್ಲದೇ ಹೊಸ ಜಾವಾ 42 ಬೈಕಿನಲ್ಲಿ ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸುತ್ತದೆ.

Article Published On: Monday, December 12, 2022, 15:34 [IST]
English summary
Son gifts jawa 42 bike to his father details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+