ಅಪ್ಪನಿಗೆ ಮೀನು ಮಾರಾಲು ಐಷಾರಾಮಿ ಕಾರು ಗಿಫ್ಟ್: ಹೀಗೊಬ್ಬ ದೇವರು ಕೊಟ್ಟ ಮಗ
ಶಿಪ್ಪಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಗ ತನ್ನ ತಂದೆಗೆ ಮೀನು ಮಾರಾಟ ಮಾಡಲು ಉಡುಗೊರೆಯಾಗಿ ಪ್ರೀಮಿಯಂ ಮಾರುತಿ ಎಕ್ಸ್ ಎಲ್6 (Maruti Xl6) ಕಾರನ್ನು ನೀಡಿದ್ದಾರೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಹಲವರು ಮಗನ ಬಗ್ಗೆ ಮೆಚ್ಚು ವ್ಯಕ್ತಪಡಿಸುತ್ತಿದ್ದಾರೆ.
ಶಿವಾನಂದಂ-ಕಾಳಿಯಮ್ಮಳ್ ದಂಪತಿಗಳು ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಅಚಂತನ್ ವ್ಯಾಲ್ ಪ್ರದೇಶದವರು. ಇವರು ಮೀನು ಮಾರಾಟ ಮಾಡುವ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಒಬ್ಬ ಮಗ ಸುರೇಶ್ ಕಣ್ಣನ್ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಗ ಸುರೇಶ್ ಕಣ್ಣನ್ ಎಂಜಿನಿಯರಿಂಗ್ ಓದಿದ್ದು, ಖಾಸಗಿ ಕಂಪನಿ ಒಡೆತನದ ದೊಡ್ಡ ಶಿಪ್ಪಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ.

ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿದ ಸುರೇಶ್ ಕಣ್ಣನ್ ಈಗ ವಿದ್ಯಾಬ್ಯಾಸ ಮುಗಿಸಿ ತನ್ನ ಕಠಿಣ ಪ್ರಯತ್ನದಿಂದ ಉತ್ತಮ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವ ಸುರೇಶ್ ಕಣ್ಣನ್ ತಿಂಗಳಿಗೆ 2 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದಾರೆ. ಸುರೇಶ್ ಕಣ್ಣನ್ ಅವರು ಕೆಲಸಕ್ಕೆ ಸೇರಿದ ನಂತರ ತನ್ನ ಇಬ್ಬರು ಸಹೋದರಿಯರಿನ್ನು ತನ್ನ ಸ್ವಂತ ಖರ್ಚಿನಲ್ಲಿ ಮದುವೆ ಮಾಡಿಸಿದ್ದಾರೆ.
ಆ ಬಳಿಕ ಪಟ್ಟಣದಲ್ಲಿದ್ದ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದರು. ಮಗ ಉದ್ಯೋಗ ಸೇರಿ ಉತ್ತಮ ಸಂಬಂಳ ಪಡೆಯುವರಿಗೂ ತಂದೆ ಮೀನು ಮಾರಾಟದಿಂದ ಬಂದ ಅದಾಯದಲ್ಲಿ ಜೀವನ ಮಾಡುತ್ತಿದ್ದರು. ಉದ್ಯೋಗ ಸಿಕ್ಕಿ ಒಳ್ಳೆ ಸಂಬಂಳ ಬರುವಾಗ ಸುರೇಶ್ ಕಣ್ಣನ್ ತನ್ನ ತಂದೆಗೆ ಕರೆ ಮಾಡಿ ಇನ್ನು ಮುಂದೆ ಮೀನು ಮಾರಾಟ ಮಾಡುವುದು ಬೇಡ. ನೀವು ಮನೆಯಲ್ಲಿ ಪಡೆಯಿರಿ. ಮನೆಗೆ ಅಗತ್ಯಗಳನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಆದರೆ ಅದಕ್ಕೆ ಕಿವಿಗೊಡದ ತಂದೆ ಶಿವಾನಂದಂ ಬದುಕಿರುವವರೆಗೂ ದುಡಿದು ತಿನ್ನುವ ಆಸೆಯಿತ್ತು. ಹೀಗಾಗಿ ಅವರು ಮೀನುಗಾರಿಕೆ ವ್ಯವಹಾರವನ್ನು ಮುಂದುವರೆಸಿದರು. ಮೀನು ಹಿಡಿದು ಆ ಭಾಗದ ಮೀನು ಅಂಗಡಿಗಳಿಗೆ ತೆರಳಿ ಮೀನು ಮಾರಾಟ ಮಾಡುತ್ತಿದ್ದರು. ತಂದೆಗೆ ಸಹಾಯ ಮಾಡುವ ಸಲುವಾಗಿ ಸುರೇಶ್ ಕಣ್ಣನ್ ರೂ.13.5 ಲಕ್ಷ ಮೌಲ್ಯದ ಮಾರುತಿ ಸುಜುಕಿ ಎಕ್ಸ್‌ಎಲ್6 ಕಾರನ್ನು ಖರೀದಿಸಿ ತಂದೆಗೆ ಉಡುಗೊರೆಯಾಗಿ ನೀಡಿದ್ದಾರೆ.
ಅವರು ಈ ಕಾರನ್ನು ತಮ್ಮ ತಂದೆಯ ಹೆಸರಿನಲ್ಲಿ ಖರೀದಿಸಿದ್ದಾರೆ. ಇದೀಗ ಸುರೇಶ್ ಕಣ್ಣನ್ ಅವರ ತಂದೆ ತಾಯಿ ತಮ್ಮ ಇಷ್ಟದಂತೆ ಮೀನು ಹಿಡಿದು ಮಾರಾಟ ಮಾಡುತ್ತಿದ್ದಾರೆ. ಹಲವು ತಲೆಮಾರುಗಳಿಂದ ಮೀನು ಹಿಡಿಯುವ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ. ನಮ್ಮ ಮಗ ನಮಗೆ ಕಾರು ಖರೀದಿಸಿದ್ದು ಹೆಮ್ಮೆಯ ಸಂಗತಿ.ಮಗನನ್ನು ಓದಿಸಲು ನಾವು ಕಷ್ಟ ಪಟ್ಟಿದ್ದೇವೆ. ಇದೀಗ ನಮಗಾಗಿ ಕಾರು ಖರೀದಿಸಿದ್ದಾನೆ. ಈ ಕಾರಿನಲ್ಲಿ ಮೀನು ಸಾಗಿಸಿ ಮಾರಾಟ ಮಾಡುತ್ತಿದ್ದೇವೆ.

ನಾವು ಕಾರಿನ ಬಗ್ಗೆ ಯೋಚಿಸಲೇ ಇಲ್ಲ. ಇದು ನಮಗೆ ತುಂಬಾ ಹೆಮ್ಮೆ ತರುತ್ತದೆ ಎಂದು ಅವರ ತಂದೆ ಹೇಳಿದ್ದಾರೆ. ಮಾರುತಿ ಸುಜುಕಿ XL6 ಗೆ ಸಂಬಂಧಿಸಿದಂತೆ, ಒಟ್ಟು ಮೂರು ರೂಪಾಂತರಗಳಿವೆ. ಶಿವಾನಂದಮ್ ಅವರ ಖರೀದಿಯು ಅಗ್ರ-ಆಫ್-ಲೈನ್ ಆಲ್ಫಾ + ಆಗಿದೆ. ಕಾರಿನಲ್ಲಿ ಫುಲ್ ಎಲ್ಇಡಿ ಹೆಡ್‌ಲ್ಯಾಂಪ್, 7 ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಸುಜುಕಿ ಕಾರ್ ಕೆನೆಕ್ಟ್ ಮತ್ತು ಟೆಲಿಸ್ಕೋಫಿಕ್ ಅಡ್ಜೆಸ್ಮೆಂಟ್ ಹೊಂದಿದೆ.
ಇದರೊಂದೊಗೆ ಸ್ಟೀರಿಂಗ್ ವ್ಹೀಲ್, ಆ್ಯಂಬಿಯೆಂಟ್ ಲೈಟಿಂಗ್ಸ್, ಹೊಸದಾಗಿ ಫ್ರಂಟ್ ಡೋರ್ ಲ್ಯಾಂಪ್ಸ್, ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟ್, ಆಟೋಮ್ಯಾಟಿಕ್ ಎಸಿ ಮತ್ತು ಮುಂಭಾಗದಲ್ಲಿ ವೆಂಟಿಲೆಟೆಡ್ ಸೀಟ್ ಹೊಂದಿದೆ. ಈ ಕಾರಿನಲ್ಲಿ ಸ್ಟ್ಯಾಂಡರ್ಡ್ ಆಗಿ ಏರ್‌ಬ್ಯಾಗ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಇಎಸ್‌ಪಿ ಮತ್ತು ಹಿಲ್ ಹೋಲ್ಡ್ ಅಸಿಸ್ಟ್, 360 ಡಿಗ್ರಿ ವ್ಯೂ ಕ್ಯಾಮೆರಾ ಸೇರಿದಂತೆ ಪ್ರಮುಖ ಸುರಕ್ಷಾ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ.


Click it and Unblock the Notifications