ತಂದೆಯ ಹಳೆ ಕಾರನ್ನು ಹೊಸ ರೀತಿಯಲ್ಲಿ ಗಿಫ್ಟ್ ನೀಡಿದ ಮಗ

ಸಾಕಷ್ಟು ಜನರು ತಮ್ಮ ವಾಹನಗಳೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಅದರಲ್ಲೂ ತಮ್ಮ ಜೀವನದಲ್ಲಿ ಖರೀದಿಸಿದ ಮೊದಲ ವಾಹನದ ಜೊತೆಗೆ ಹೆಚ್ಚು ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ.

ತಂದೆಯ ಹಳೆ ಕಾರನ್ನು ಹೊಸ ರೀತಿಯಲ್ಲಿ ಗಿಫ್ಟ್ ನೀಡಿದ ಮಗ

ಎಷ್ಟೋ ವರ್ಷಗಳ ಹಿಂದೆ ಮಾರಾಟವಾದ ತಮ್ಮ ಜೀವನದ ಮೊದಲ ಕಾರನ್ನು ಪಡೆದರೆ ಅದರಿಂದ ಉಂಟಾಗುವ ಖುಷಿಯನ್ನು ಹೇಳಲಾಸಾಧ್ಯ. ಇದೇ ರೀತಿಯ ಘಟನೆಯ ಬಗ್ಗೆ ಈ ಲೇಖನದಲ್ಲಿ ನೋಡೋಣ. ಕೇರಳದ ಕೋಝಿಕೋಡ್‌ನ ಅಬ್ದುಲ್ ನಜೀರ್ ರವರೇ 13 ವರ್ಷಗಳ ಹಿಂದೆ ಮಾರಾಟವಾದ ತಮ್ಮ ಜೀವನದ ಮೊದಲ ಕಾರನ್ನು ಮರಳಿ ಪಡೆದವರು.

ತಂದೆಯ ಹಳೆ ಕಾರನ್ನು ಹೊಸ ರೀತಿಯಲ್ಲಿ ಗಿಫ್ಟ್ ನೀಡಿದ ಮಗ

ಅಬ್ದುಲ್ ನಜೀರ್ 1992ರಲ್ಲಿ ತಮ್ಮ ಮೊದಲ ಕಾರ್ ಆಗಿ ಮಾರುತಿ 800 ಅನ್ನು ಖರೀದಿಸಿದ್ದರು. ಅಂದಿನಿಂದ ಈ ಕಾರು 15 ವರ್ಷಗಳ ಕಾಲ ಕುಟುಂಬದ ಭಾಗವಾಗಿತ್ತು. ಅಬ್ದುಲ್ ನಜೀರ್ ಜೊತೆಗೆ ಅವರ ಮಗ ನಿಯಾಸ್ ಅಹ್ಮದ್ ಕೂಡ ಈ ಕಾರನ್ನು ಪ್ರೀತಿಸುತ್ತಿದ್ದರು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ತಂದೆಯ ಹಳೆ ಕಾರನ್ನು ಹೊಸ ರೀತಿಯಲ್ಲಿ ಗಿಫ್ಟ್ ನೀಡಿದ ಮಗ

ಈ ಕಾರಿನ ಮೂಲಕ ಅಬ್ದುಲ್ ನಜೀರ್ ಕಾರು ಚಾಲನೆಯನ್ನು ತಮ್ಮ ಮಗ ನಿಯಾಸ್‌ಗೆ ಕಲಿಸಿದರು. ಅಬ್ದುಲ್ ನಜೀರ್ ಈ ಕಾರನ್ನು 2007ರಲ್ಲಿ ಕೋಝಿಕೋಡ್‌ನ ವ್ಯಕ್ತಿಯೊಬ್ಬರಿಗೆ ರೂ.42,000ಗಳಿಗೆ ಮಾರಾಟ ಮಾಡಿದರು.

ತಂದೆಯ ಹಳೆ ಕಾರನ್ನು ಹೊಸ ರೀತಿಯಲ್ಲಿ ಗಿಫ್ಟ್ ನೀಡಿದ ಮಗ

ಕಾರನ್ನು ಮಾರಾಟ ಮಾಡಿದ ಕೆಲ ತಿಂಗಳ ನಂತರ ಅವರಿಗೆ ಈ ಕಾರಿನ ನೆನಪು ಕಾಡಲಾರಂಭಿಸಿದೆ. ಕಾರನ್ನು ಮಾರಾಟ ಮಾಡಿದ ಸುಮಾರು ಮೂರು ವರ್ಷಗಳ ನಂತರ ಮಾರಾಟವಾದ ಕಾರನ್ನು ಮರಳಿ ಪಡೆಯಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ತಂದೆಯ ಹಳೆ ಕಾರನ್ನು ಹೊಸ ರೀತಿಯಲ್ಲಿ ಗಿಫ್ಟ್ ನೀಡಿದ ಮಗ

ತಮ್ಮ ತಂದೆಯ ಆಸೆಯನ್ನು ನೆರವೇರಿಸಲು ಮುಂದಾದ ನಿಯಾಸ್ ಮಾರಾಟವಾದ ಮಾರುತಿ 800 ಕಾರ್ ಅನ್ನು ಹುಡುಕಲಾರಂಭಿಸಿದ್ದಾರೆ. ನಿಯಾಸ್, ಕಾರು ಖರೀದಿಸಿದ್ದ ವ್ಯಕ್ತಿಯನ್ನು ಭೇಟಿಯಾದರು. ಆದರೆ ಆ ವ್ಯಕ್ತಿ ಕಾರನ್ನು ಬೇರೊಬ್ಬರಿಗೆ ಮಾರಾಟ ಮಾಡಿದ್ದರು.

ತಂದೆಯ ಹಳೆ ಕಾರನ್ನು ಹೊಸ ರೀತಿಯಲ್ಲಿ ಗಿಫ್ಟ್ ನೀಡಿದ ಮಗ

ಈ ಕಾರನ್ನು ಖರೀದಿಸಿದ್ದವರು ಕೊಟ್ಟಾಯಂನಲ್ಲಿರುವುದಾಗಿ ತಿಳಿದು ಬಂದಿದೆ. ಆದರೆ ಕಾರು ಖರೀದಿಸಿದ್ದವರ ವಿಳಾಸವಾಗಲಿ ಬೇರೆ ಯಾವುದೇ ಮಾಹಿತಿಯಾಗಲಿ ದೊರೆತಿಲ್ಲ. ನಿಯಾಸ್ ತಮ್ಮ ಪ್ರಯತ್ನವನ್ನು ಬಿಡದೇ ಕಾರು ಖರೀದಿಸಿದ್ದವರನ್ನು ಹುಡುಕುತ್ತಲೇ ಇದ್ದರು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ತಂದೆಯ ಹಳೆ ಕಾರನ್ನು ಹೊಸ ರೀತಿಯಲ್ಲಿ ಗಿಫ್ಟ್ ನೀಡಿದ ಮಗ

ಕೊನೆಗೆ 2019ರಲ್ಲಿ ಕಾರು ತಿರುವನಂತಪುರಂನ ಉಮೇಶ್ ಎಂಬುವವರ ಬಳಿ ಇರುವುದು ತಿಳಿಯುತ್ತದೆ. ನಿಯಾಸ್, ಉಮೇಶ್ ಅವರನ್ನು ಖುದ್ದಾಗಿ ಭೇಟಿಯಾಗಿ ಈ ಮಾರುತಿ 800 ಕಾರನ್ನು ಖರೀದಿಸುವುದಾಗಿ ತಿಳಿಸಿದರು.

ತಂದೆಯ ಹಳೆ ಕಾರನ್ನು ಹೊಸ ರೀತಿಯಲ್ಲಿ ಗಿಫ್ಟ್ ನೀಡಿದ ಮಗ

ಆದರೆ ಉಮೇಶ್ ಕಾರನ್ನು ಮಾರಾಟ ಮಾಡಲು ನಿರಾಕರಿಸಿದ್ದಾರೆ. ಆದರೂ ನಿಯಾಸ್, ಉಮೇಶ್ ಅವರೊಂದಿಗೆ ಸಂಪರ್ಕದಲ್ಲಿದ್ದರು. ಆ ಕಾರು ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಎಷ್ಟು ಮುಖ್ಯ ಎಂಬುದನ್ನು ಉಮೇಶ್ ಅವರಿಗೆ ಮನವರಿಕೆ ಮಾಡಿಕೊಟ್ಟರು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ತಂದೆಯ ಹಳೆ ಕಾರನ್ನು ಹೊಸ ರೀತಿಯಲ್ಲಿ ಗಿಫ್ಟ್ ನೀಡಿದ ಮಗ

ಕೊನೆಗೆ ಉಮೇಶ್ ತಮ್ಮ ಬಳಿಯಿದ್ದ ಕಾರನ್ನು ಮಾರಾಟ ಮಾಡಲು ಒಪ್ಪಿಕೊಂಡರು. ಕಳೆದ ತಿಂಗಳು ನಿಯಾಸ್, ಉಮೇಶ್ ರವರಿಗೆ ರೂ.ಒಂದು ಲಕ್ಷ ನೀಡಿ ಕಾರು ಖರೀದಿಸಿದರು. ನಿಯಾಸ್ ಈ ಮಾರುತಿ 800 ಕಾರನ್ನು ತಮ್ಮ ತಂದೆ ಅಬ್ದುಲ್ ನಜೀರ್ ಅವರಿಗೆ ಅವರ 54ನೇ ಹುಟ್ಟುಹಬ್ಬದಂದು ಕಾಣಿಕೆಯಾಗಿ ನೀಡಿದರು. ಈ ಬಗ್ಗೆ ಮಾತೃಭೂಮಿ ವರದಿ ಮಾಡಿದೆ.

Most Read Articles

Kannada
English summary
Son gifts old Maruti 800 car to father which was sold 13 years ago. Read in Kannada.
Story first published: Monday, November 9, 2020, 20:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X